Haj Yatra: ಎರಡು ವರ್ಷಗಳ ಬಳಿಕ ಹಜ್​ ಯಾತ್ರೆ ಆರಂಭ; 80 ಸಾವಿರ ಯಾತ್ರಾರ್ಥಿಗಳಿಂದ ಪ್ರವಾಸ

ಪ್ರವಾಸ ನಡೆಸಲಿರುವ ಯಾತ್ರಾರ್ಥಿಗಳು ಭಾರತ ಮತ್ತು ಸೌದಿ ಅರೇಬಿಯಾ ಸರ್ಕಾರ ನಿಗದಿಪಡಿಸಿರುವ ಕೋವಿಡ್ ಮಾರ್ಗ ಸೂಚಿಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೋವಿಡ್​ ಸೋಂಕಿನಿಂದಾಗಿ (Covid) ಕಳೆದೆರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಹಜ್​ ಯಾತ್ರೆ ಈ ವರ್ಷ ನಡೆಯಲಿದೆ. ಈಗಾಗಲೇ ಹಜ್ ಯಾತ್ರೆ (Haj yatra) ಕೈಗೊಳ್ಳುವವರಿಗೆ ಅರ್ಜಿ ಕರೆದಿದ್ದ ಸರ್ಕಾರ ಅವರನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಿದ್ದು, ಇದೇ ಜುಲೈನಿಂದ ಈ ಯಾತ್ರೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯದಲ್ಲಿ ಆರಂಭವಾಗಲಿದೆ. ಇನ್ನು ಮೇ, ಜುಲೈನಿಂದ ಪ್ರಾರಂಭವಾಗುವ ಹಜ್ -2022 ತೀರ್ಥಯಾತ್ರೆಯನ್ನು ನಿರ್ವಹಿಸಲು ಭಾರತೀಯ ಮುಸ್ಲಿಮರು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿ ಅಲ್ಲಿ ವ್ಯವಸ್ಥೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಈ ಬಾರಿ ಹಜ್ ಯಾತ್ರೆಗೆ ಹಜ್ ಗ್ರೂಪ್ ಆರ್ಗನೈಸರ್‌ಗಳ ಮೂಲಕ ಮತ್ತು ಹಜ್ ಕಮಿಟಿ ಆಫ್ ಇಂಡಿಯಾ ಮೂಲಕ 56,601 ಆನ್‌ಲೈನ್ ಸೇರಿದಂತೆ ಇತರೆ ಕಡೆಯಿಂದ ಒಟ್ಟು 83,140 ಅರ್ಜಿಗಳಲ್ಲಿ ಬಂದಿವೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

  ಈ ಬಾರಿ 1,800 ಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರು 2022 ರ ಹಜ್‌ಗೆ “ಮೆಹ್ರಮ್” (45 ವರ್ಷ ಮೇಲ್ಪಟ್ಟ ಮಹಿಳೆಯರು ಪುರಷರ ಜೊತೆ ಇಲ್ಲದೇ ಕೈಗೊಳ್ಳುವ ಯಾತ್ರೆ)  ಜೊತೆಗೆ ಲಾಟರಿ ವ್ಯವಸ್ಥೆ ಇಲ್ಲದೆ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

  ಅಧಿಕಾರಿಗಳಿಂದ ಈಗಾಗಲೇ ಸಿದ್ದತೆ

  ಹಜ್, ವಸತಿ, ಸಾರಿಗೆ, ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದ ಪ್ರಕ್ರಿಯೆಗಳೊಂದಿಗೆ ಮಕ್ಕಾ-ಮದೀನಾದಲ್ಲಿ ಭಾರತೀಯ ಹಜ್ ಯಾತ್ರಾರ್ಥಿಗಳಿಗೆ ಸಹಾಯ ಮಾಡುವ 12 ಮಹಿಳೆಯರು ಸೇರಿದಂತೆ 400 ‘ಖಾದಿಮ್-ಉಲ್-ಹುಜ್ಜಾಜ್’ ಗಾಗಿ ಎರಡು ದಿನಗಳ ತರಬೇತಿ ಶಿಬಿರವನ್ನು ನಖ್ವಿ ಉದ್ಘಾಟಿಸಿದರು. ಅವರಿಗೆ ಎಚ್‌ಸಿಐ, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್, ವಿಪತ್ತು ನಿರ್ವಹಣಾ ಏಜೆನ್ಸಿಗಳು, ವೈದ್ಯರು, ವಿಮಾನಯಾನ ಸಂಸ್ಥೆಗಳು, ಕಸ್ಟಮ್ಸ್ ಮತ್ತು ವಲಸೆ ವೃತ್ತಿಪರರಿಂದ ತರಬೇತಿ ನೀಡಲಾಗುತ್ತದೆ.

  ಇದನ್ನು ಓದಿ: ಹನುಮಾನ್ ಹಬ್ಬಕ್ಕೆ ಒಳ್ಳೆಯದಾಗಲಿ ಎಂದ ಸಿದ್ದರಾಮಯ್ಯ

  ಭಾರತೀಯರ ಸುರಕ್ಷತೆ ಒತ್ತು

  ಹಜ್ ಯಾತ್ರಿಕರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡುವ ಮಹತ್ವದ ಸುಧಾರಣೆಗಳೊಂದಿಗೆ ಹಜ್ ನಡೆಯುತ್ತಿದೆ. ವಯಸ್ಸು, ಆರೋಗ್ಯ ಇತ್ಯಾದಿ ಮಾನದಂಡಗಳ ಆಧಾರದ ಮೇಲೆ ಭಾರತ ಮತ್ತು ಸೌದಿ ಅರೇಬಿಯಾ ಸರ್ಕಾರಗಳು ಎಲ್ಲಾ ಪ್ರಕ್ರಿಯೆಗಳನ್ನು ಜಂಟಿಯಾಗಿ ರೂಪಿಸಿವೆ ಎಂದು ಸಚಿವರು ಹೇಳಿದರು.

  “ಯಾವುದೇ ಸಬ್ಸಿಡಿ ಇಲ್ಲದೆ ಹಜ್ ಯಾತ್ರೆ ಕೈಗೊಳ್ಳುವುದರಿಂದ ಯಾತ್ರಾರ್ಥಿಗಳ ಮೇಲೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗದಂತೆ ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಸೌದಿ ಅರೇಬಿಯಾದಲ್ಲಿ ವಸತಿ, ಸಾರಿಗೆ ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ಕೈಗೆಟುಕುವ ಬೆಲೆಯಲ್ಲಿ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ನಖ್ವಿ ಹೇಳಿದರು.

  ವಿವಿಧ ರಾಜ್ಯಗಳಿಂದ ಪ್ರವಾಸ ನಡೆಸಲಿರುವ ಯಾತ್ರಾರ್ಥಿಗಳು

  ಒಟ್ಟು 8,701 ಯಾತ್ರಾರ್ಥಿಗಳೊಂದಿಗೆ ಉತ್ತರ ಪ್ರದೇಶ ಮುಂದಿದ್ದು, ಪಶ್ಚಿಮ ಬಂಗಾಳದಲ್ಲಿ 5,911, ಜಮ್ಮು ಮತ್ತು ಕಾಶ್ಮೀರ 5,281, ಕೇರಳ 5,274, ಮಹಾರಾಷ್ಟ್ರ 4,874, ಅಸ್ಸಾಂ 3,544, ಕರ್ನಾಟಕ 2,764, ಗುಜರಾತ್ 2,533 ಬಿಹಾರ 2,210, ರಾಜಸ್ಥಾನ 2,072, ತೆಲಂಗಾಣ 1,822, ಮಧ್ಯಪ್ರದೇಶ 1,780, ಜಾರ್ಖಂಡ್ 1,559, ತಮಿಳುನಾಡು 1,498, ಆಂಧ್ರಪ್ರದೇಶದಿಂದ 1,201 ಮಂದಿ ಸೇರಿದಂತೆ ವಿವಿಧ ರಾಜ್ಯಗಳಿಂದ ಯಾತ್ರಗಳು ಪ್ರವಾಸ ನಡೆಸಲಿದ್ದಾರೆ.

  ಇದನ್ನು ಓದಿ: ರೈಲುಗಳ ಎಸಿ ಕೋಚ್, ಜನರಲ್ ಬೋಗಿಗಳು ಅಲ್ಲಲ್ಲೇ ಇರೋದೇಕೆ? ರೈಲುಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿ ಇದು!

  ಅಹಮದಾಬಾದ್, ಬೆಂಗಳೂರು, ಕೊಚ್ಚಿನ್, ದೆಹಲಿ, ಗುವಾಹಟಿ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಶ್ರೀನಗರ ಮೂಲಕ ಹೋಗುವ ಹಜ್ 2022 ಯಾತ್ರಾರ್ಥಿಗಳಿಗಾಗಿ ಸರ್ಕಾರವು 10 ವಿಮಾನ ಪ್ರಯಾಣ ನಡೆಸುವ  ವ್ಯವಸ್ಥೆ ಮಾಡಿದೆ ಎಂದು ನಖ್ವಿ ಹೇಳಿದರು.

  ಇನ್ನು ಪ್ರವಾಸ ನಡೆಸಲಿರುವ ಯಾತ್ರಾರ್ಥಿಗಳು ಭಾರತ ಮತ್ತು ಸೌದಿ ಅರೇಬಿಯಾ ಸರ್ಕಾರ ನಿಗದಿಪಡಿಸಿರುವ ಕೋವಿಡ್ ಮಾರ್ಗ ಸೂಚಿಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಿದೆ
  Published by:Seema R
  First published: