ಟ್ರಂಪ್​ ವೈಮನಸ್ಸು; ವಿಶ್ವ ಆರೋಗ್ಯ ಸಂಸ್ಥೆಯಿಂದ ಔಪಚಾರಿಕವಾಗಿ ಹೊರ ಬಂದ ಅಮೆರಿಕ

ಮಲೇರಿಯಾ, ದಡಾರ, ಮಾನಸಿಕ ಆರೋಗ್ಯ ಸೇರಿ ಎಲ್ಲಾ ಜಾಗತಿಕ ರೋಗಗಳ ವಿರುದ್ಧ WHO ಹೋರಾಟ ನಡೆಸುತ್ತದೆ. WHOಗೆ ಅತಿ ಹೆಚ್ಚು ಧನಸಹಾಯ ಮಾಡುವ ದೇಶ ಅಮೆರಿಕವೇ ಆಗಿತ್ತು. ಆದರೆ, ಈಗ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಹೊರ ಬರುತ್ತಿದೆ.

ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್

 • Share this:
  ವಾಷಿಂಗ್ಟನ್ (ಜು.8): ಕೊರೋನಾ ವೈರಸ್​ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಚೀನಾವನ್ನು ಬೆಂಬಲಿಸುತ್ತಿದೆ ಎನ್ನುವ ಆರೋಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮಾಡಿದ್ದರು. ಈ ಬೆನ್ನಲ್ಲೇ WHOನಿಂದ ಅಮೆರಿಕ ಔಪಚಾರಿಕವಾಗಿ ಹೊರ ನಡೆದಿದೆ.

  ಮಲೇರಿಯಾ, ದಡಾರ, ಮಾನಸಿಕ ಆರೋಗ್ಯ ಸೇರಿ ಎಲ್ಲಾ ಜಾಗತಿಕ ರೋಗಗಳ ವಿರುದ್ಧ WHO ಹೋರಾಟ ನಡೆಸುತ್ತದೆ. WHOಗೆ ಅತಿ ಹೆಚ್ಚು ಧನಸಹಾಯ ಮಾಡುವ ದೇಶ ಅಮೆರಿಕವೇ ಆಗಿತ್ತು. ಆದರೆ, ಈಗ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಹೊರ ಬರುತ್ತಿದೆ.

  ವಿಶ್ವಸಂಸ್ಥೆಗೆ ಅಮೆರಿಕ ನೀಡುವ 2,993 ಕೋಟಿ ರೂಪಾಯಿ ಧನಸಹಾಯವನ್ನು ನಿಲ್ಲಿಸುವುದಾಗಿ ಟ್ರಂಪ್​ ಹೇಳೀದ್ದರು. ಇದಾದ ಬೆನ್ನಲ್ಲೇ ಟ್ರಂಪ್ ವಿಶ್ವಸಂಸ್ಥೆ ಮುಖ್ಯ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್​ಗೆ ಕರೆ ಮಾಡಿ ಅಮೆರಿಕ  WHOನಿಂದ ಹೊರ ಬರುತ್ತಿರುವ ವಿಚಾರ ತಿಳಿಸಿದ್ದಾರೆ.

  ಈ ಪ್ರಕ್ರಿಯೆ ಜು.7 2021ರಿಂದ ಜಾರಿಗೆ ಬರಲಿದೆ. ನವೆಂಬರ್ ತಿಂಗಳಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್​ ಪ್ರತಿಸ್ಪರ್ಧಿ ಜೋ ಬಿಡನ್​ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರ ನಡೆಯಬಾರದು ಎನ್ನುವ ಅಭಿಪ್ರಾಯ ಹೊರ ಹಾಕಿದ್ದಾರೆ.

  ಕೊರೋನಾ ವೈರಸ್​ ಭೀಕರವಾಗಿ ಹರಡಲು WHO ಕಾರಣ. ಆರಂಭದಲ್ಲಿ ಕೊರೋನಾ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎನ್ನುವುದನ್ನು ಕಂಡು ಹಿಡಿಯಲು WHO ವಿಫಲವಾಗಿತ್ತು. ಅಲ್ಲದೆ, WHO ಚೀನಾ ಪರವಾಗಿ ನಿಂತಿತ್ತು ಎನ್ನುವುದು ಟ್ರಂಪ್​ ಆರೋಪವಾಗಿದೆ.

   
  Published by:Rajesh Duggumane
  First published: