Golden VISA: ಹೆಚ್ಚಿನ ಭಾರತೀಯರು ಈಗ UAEನಲ್ಲಿ ಮನೆ ಖರೀದಿಸಲು ಮುಂದಾಗುತ್ತಿದ್ದಾರಂತೆ, ಕಾರಣ ಇಷ್ಟೇ

ಇತ್ತೀಚಿಗಷ್ಟೇ ಯುಎಇ ಒಕ್ಕೂಟವು ತನ್ನ ಗೋಲ್ಡನ್ ವಿಸಾ ನಿಯಮಗಳನ್ನು ಸಡಿಲಗೊಳಿಸಿದೆ. ಇದರ ಪರಿಣಾಮ ಈಗ ಹೆಚ್ಚು ಹೆಚ್ಚು ಭಾರತೀಯರು ದುಬೈ ಮತ್ತು ಇತರೆ ಯುಎಇ ಸಂಸ್ಥಾನಗಳಲ್ಲಿ ಎರಡನೇ ಮನೆ ಸೌಲಭ್ಯ ಹೊಂದುವಂತೆ ಪ್ರೇರಣೆ ನೀಡಿದ್ದು ಪ್ರಸ್ತುತ ಇಲ್ಲಿ ಲಕ್ಸುರಿ ಮನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ರಿಯಲ್ ಎಸ್ಟೇಟ್ ಸಲಹೆಗಾರರು ಹೇಳಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇತ್ತೀಚಿಗಷ್ಟೇ ಯುಎಇ (UAE) ಒಕ್ಕೂಟವು ತನ್ನ ಗೋಲ್ಡನ್ ವಿಸಾ ನಿಯಮಗಳನ್ನು ಸಡಿಲಗೊಳಿಸಿದೆ. ಇದರ ಪರಿಣಾಮ ಈಗ ಹೆಚ್ಚು ಹೆಚ್ಚು ಭಾರತೀಯರು (Indians) ದುಬೈ (Dubai) ಮತ್ತು ಇತರೆ ಯುಎಇ ಸಂಸ್ಥಾನಗಳಲ್ಲಿ ಎರಡನೇ ಮನೆ ಸೌಲಭ್ಯ ಹೊಂದುವಂತೆ ಪ್ರೇರಣೆ ನೀಡಿದ್ದು ಪ್ರಸ್ತುತ ಇಲ್ಲಿ ಲಕ್ಸುರಿ (Luxury) ಮನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ರಿಯಲ್ ಎಸ್ಟೇಟ್ ಸಲಹೆಗಾರರು (Real Estate Consultants) ಹೇಳಿದ್ದಾರೆ. ಸಾಮಾನ್ಯವಾಗಿ ಸದಾ ಖರೀದಿದಾರರಿಂದ ಆಕರ್ಷಿಸಲ್ಪಡುವ ದುಬೈ ಸ್ಥಿತ ಹಲವು ಡೆವೆಲಪರ್ ಗಳು ಈಗ ಭಾರತದಲ್ಲಿ ತಮ್ಮ ಪ್ರಾಪರ್ಟಿ ಖರೀದಿಸಲು ಖರೀದಿದಾರರನ್ನು ಇನ್ನಷ್ಟು ಆಕರ್ಷಿಸಲು ಪ್ರಾಪರ್ಟಿ ಎಕ್ಸ್ ಪೋ ಆಯೋಜಿಸುತ್ತಿದ್ದಾರೆ. ಈ ಮೂಲಕ ಅವರು ಇಲ್ಲಿನ ಖರೀದಿದಾರರಿಗೆ (Buyers) ತಮ್ಮ ನಿಯಮಗಳು ಹಾಗೂ ಖರೀದಿಯ ಲಾಭಗಳು ಅರಿವಾಗುವಂತೆ ಪ್ರಯತ್ನಿಸುತ್ತಿದ್ದಾರೆನ್ನಲಾಗಿದೆ.

ಮನೆ ಖರೀದಿ ಚಟುವಟಿಕೆ ಖರೀದಿ ಹಾಗೂ ಹೂಡಿಕೆದಾರರಿಗೆ ಆಕರ್ಷಕ ಅವಕಾಶ
"ಮನೆ ಖರೀದಿ ಮಾಡುವುದು ಹೂಡಿಕೆ ಮತ್ತು ಗೋಲ್ಡನ್ ವಿಸಾ ದೊರೆಯುವುದನ್ನು ಖಾತರಿಪಡಿಸುವ ಅತಿ ಸರಳ ಮಾರ್ಗವಾಗಿದೆ. ಅಲ್ಲದೆ ದುಬೈನಲ್ಲಿ ಕ್ಯಾಪಿಟಲ್ ಗೈನ್ಸ್ ಮೇಲೆ ತೆರಿಗೆ ಸಹ ಇಲ್ಲ, ಹಾಗಾಗಿ ಈ ಒಂದು ಮನೆ ಖರೀದಿ ಚಟುವಟಿಕೆಯು ಖರೀದಿ ಹಾಗೂ ಹೂಡಿಕೆದಾರರಿಗೆ ಒಂದು ಆಕರ್ಷಕ ಅವಕಾಶವಾಗಿ ಗಮನಸೆಳೆಯುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ" ಎಂಬ ಅಭಿಪ್ರಾಯವನ್ನು ಭಾರತದ ಸೊದೆಬಿ ಇಂಟರ್ನ್ಯಾಷನಲ್ ರಿಯಾಲಿಟಿಯ ನಿರ್ದೇಶಕರಾದ ಆಕಾಶ್ ಪುರಿ ವ್ಯಕ್ತಪಡಿಸುತ್ತಾರೆ.

ಏನಿದು ಗೋಲ್ಡನ್ ವಿಸಾ ನಿಯಮ
ಇತ್ತೀಚಿಗಷ್ಟೇ ಯುಎಇ ತನ್ನ ಗೋಲ್ಡನ್ ವಿಸಾ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಇದು ಹೆಚ್ಚು ಉಪಯುಕ್ತತೆಯನ್ನು ಹೊಂದಿದ್ದು ಭಾರತದಲ್ಲಿರುವ ಸಿರಿವಂತರು ದುಬೈನಂತಹ ಸ್ಥಳಗಳಲ್ಲಿ ದೀರ್ಘಾವಧಿಯ ಹೂಡಿಕೆ ಮಾಡಲು ಪ್ರೇರೇಪಿಸುವಂತಿದೆ. ಈ ಮುಂಚೆ ಯುಎಇ ತನ್ನ ಗೋಲ್ಡನ್ ವಿಸಾ ಪಡೆಯಲು ಸರಳವಾಗಿ ಅರ್ಹನಾಗಬೇಕಾದ ಅಂಶಕ್ಕೆ ಸಂಬಂಧಿಸಿದಂತೆ ತನ್ನಲ್ಲಿ ಕನಿಷ್ಠ ಐದು ಮಿಲಿಯನ್ ಎಇಡಿ (ಹತ್ತು ಕೋಟಿ ರೂಪಾಯಿಗೂ ಅಧಿಕ) ಮಾಡಬೇಕೆಂದು ನಿಯಮ ಹೊಂದಿತ್ತು.

ಇದನ್ನೂ ಓದಿ: Vishwanath Karthikeya: 13 ವರ್ಷದ ಬಾಲಕನಿಂದ ಪರ್ವತಾರೋಹಣದಲ್ಲಿ ವಿಶ್ವದಾಖಲೆ!

ಇತ್ತೀಚಿಗಷ್ಟೆ ಅಲ್ಲಿನ ಆಡಳಿತವು ಈ ನಿಯಮವನ್ನು ಸಡಿಲಗೊಳಿಸಿ ಈಗ ಆ ಮೊತ್ತವನ್ನು ಕನಿಷ್ಠ ಎರಡು ಮಿಲಿಯನ್ ಎಇಡಿ (ನಾಲ್ಕು ಕೋಟಿಗೂ ಅಧಿಕ) ಮಾಡಿದೆ. ಅಷ್ಟೆ ಅಲ್ಲದೆ ಈ ಹಿಂದೆ ಗೋಲ್ಡನ್ ವಿಸಾ ಅವಧಿಯು ಐದು ವರ್ಷಗಳಾಗಿತ್ತು, ಅದನ್ನೀಗ ಹತ್ತು ವರ್ಷಗಳಿಗೆ ವಿಸ್ತರಿಸಲಾಗಿದೆ. ಇದರಿಂದಾಗಿಯೇ ಹಲವು ಭಾರತೀಯರು ಈಗ ಈ ವಿಸಾ ಪಡೆಯಲು ಮತ್ತು ಯುಎಇನಲ್ಲಿ ಆಸ್ತಿ ಹೊಂದಲು ಆಕರ್ಷಿತರಾಗುತ್ತಿದ್ದಾರೆ ಎನ್ನಲಾಗಿದೆ.

60 ಪ್ರತಿಶದಷ್ಟು ಏರಿದ ಆಸ್ತಿ ಮಾರಾಟ
DXBInternet.com ಪ್ರಕಟಿಸಿರುವಂತೆ 2022 ರ ವರ್ಷಾರಂಭದಲ್ಲಿ ದುಬೈನಲ್ಲಿ ಆಸ್ತಿ ಮಾರಾಟಗಳು 60 ಪ್ರತಿಶದಷ್ಟು ಏರಿವೆ. ಒಟ್ಟು 43,000 ಕ್ಕೂ ಹೆಚ್ಚು ಘಟಕಗಳ ಮಾರಾಟದ ದಾಖಲೆ ಮೊದಲ ಅರ್ಧ ವರ್ಷದಲ್ಲಿ ಕಂಡುಬಂದಿದೆ.

ಆಸ್ತಿಗಳ ವಿವರಗಳಿಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸುವಂತೆ 2022 ರ ವರ್ಷಾರಂಭದಲ್ಲಿ ಸಾಕಷ್ಟು ವಿಚಾರಣೆಗಳು ಕೇಳಿ ಬಂದಿದ್ದು ಇದರ ಪ್ರಮಾಣ ಕಳೆದ ವರ್ಷ ಇದೇ ಸಮಯಕ್ಕೆ ಹೋಲಿಸಿದರೆ ಏನಿಲ್ಲವೆಂದರೂ 10-15 ಪ್ರತಿಶತದಷ್ಟು ಹೆಚ್ಚಳವಾಗಿವೆ ಎನ್ನಲಾಗಿದೆ. ಲಕ್ಸುರಿಮನೆಗಳ ಕಡಿಮೆ ದರಗಳು ಹಾಗೂ ದುಬೈ ಭಾರತಕ್ಕೆ ನಿಕಟವಾಗಿರುವಂತಹ ಅಂಶಗಳು ಹೆಚ್ಚು ಹೆಚ್ಚು ಭಾರತೀಯರು ದುಬೈನಲ್ಲಿ ಆಸ್ತಿ ಹೊಂದುವಂತೆ ಸಾಕಷ್ಟು ಪ್ರೇರಣೆ ನೀಡುತ್ತಿವೆ ಎಂದು ಅನಾರಾಕ್ ಸಮೂಹದ ಅಧ್ಯಕ್ಷರಾಗಿರುವ ಅನುಜ್ ಪುರಿ ಹೇಳುತ್ತಾರೆ.

ಭಾರತೀಯರೇ ಹೆಚ್ಚಿನ ಆಸ್ತಿ ಖರೀದಿಸುವುದೇಕೆ 
ಸದ್ಯ ಯುಎಇನಲ್ಲಿ ಪರಿಷ್ಕರಿಸಲಾಗಿರುವ ನಿಯಮಗಳನುಸಾರ ಹಲವು ಆಸ್ತಿಗಳನ್ನು ಸಂಯೋಜಿಸಲು ಅನುಮತಿಸಲಾಗಿದ್ದು ಈಗ ಭಾರತೀಯರು ಗೋಲ್ಡನ್ ವಿಸಾ ಪಡೆಯುವ ದೃಷ್ಟಿಯಿಂದ ಹೆಚ್ಚು ಹೆಚ್ಚು ಆಸ್ತಿಗಳ ಖರೀದಿಯ ಬಗ್ಗೆ ಆಸಕ್ತಿ ತೋರಿಸುವಂತಾಗಿದೆ. ಇಷ್ಟೆ ಅಲ್ಲದೆ, ಯುಎಇಯ ಹೊಸ ನಿಯಮದ ಪ್ರಕಾರ ಯಾವುದೇ ಹೂಡಿಕೆದಾರ ಯುಎಇನಲ್ಲಿ ಸ್ಟಾರ್ಟಪ್ ನಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಹತ್ತು ವರ್ಷಗಳ ವಾಸದ ವಿಸಾವನ್ನೂ ಸಹ ಪಡೆಯಬಹುದಾಗಿದೆ ಎಂದು ಐಪಿಎಂ ಏಷಿಯಾದ ವ್ಯಪಾರ ವಿಭಾಗದ ಮುಖ್ಯಸ್ಥರಾದ ರಬಿಯಾ ಶೇಖ್ ಹೇಳುತ್ತಾರೆ.

ಇತ್ತ ಭಾರತದ ಅನೇಕ ಬ್ರೋಕರೇಜ್ ಸಂಸ್ಥೆಗಳೂ ಸಹ ಭಾರತದಲ್ಲಿ ಹೂಡಿಕೆದಾರರು, ಖರೀದಿದಾರರು ದುಬೈನಲ್ಲಿ ಆಸ್ತಿ ಕೊಂಡುಕೊಳ್ಳುವಂತೆ ಅನುಕೂಲವಾಗಲು ಪ್ರಾಪರ್ಟಿ ಶೋಗಳನ್ನು ಏರ್ಪಡಿಸುತ್ತಿದ್ದಾರೆ. ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ನಿರ್ದೇಶಕರಾಗಿರುವ ಸಚಿನ್ ಅರೋರಾ ಅವರು, "ನಮಗೆ ಹೆಚ್ಚಿನ ವಿಚಾರಣೆಗಳು ದುಬೈನಲ್ಲಿ ಆಸ್ತಿಯ ಮೇಲೆ ಹೂಡಿಕೆ ಮಾಡಿ ಅಥವಾ ಖರೀದಿಸಿ ಅಲ್ಲಿ ವಾಸಿಸಬಯಸುವ" ಬಗ್ಗೆಯೆ ಬರುತ್ತಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ:  China Unemployment: ಕ್ಲರ್ಕ್ ಕೆಲಸಕ್ಕೆ ಸಾಲುಗಟ್ಟಿ ನಿಂತ ಎಂಜಿನಿಯರ್​​ಗಳು: ಚೀನಾದಲ್ಲಿ ನಿರುದ್ಯೋಗದ ತಾಂಡವ!

ದುಬೈ ಸ್ಥಿತ ಲಯನ್ ಮಾರ್ಟಗೇಜ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಗೌರವ್ ಗಂಭೀರ್ ಅವರು, "ದುಬೈನಲ್ಲಿ ವಾಸಿಸುವ ಬಗ್ಗೆ ಬೇಡಿಕೆಯಲ್ಲಿ ಸಾಕಷ್ಟು ವೃದ್ಧಿಯಾಗಿದ್ದು ಜಾಗತಿಕವಾಗಿಯೂ ಜನರು ಇಲ್ಲಿ ಬಂದು ನೆಲೆಸಲು ಬಯಸುತ್ತಿದ್ದಾರೆ. ಹೀಗೆ ಬೇಡಿಕೆ ಬರುತ್ತಿರುವ ಪ್ರಮಾಣದಲ್ಲಿ ಹೆಚ್ಚಿನ ಭಾಗವು ಭಾರತದಿಂದ ಬರುತ್ತಿದೆ. ಪೋಸ್ಟ್ ಕೋವಿಡ್ ನಂತರ ಇಲ್ಲಿನ ಸರ್ಕಾರ ಹಲವು ಅದ್ಭುತ ನೀತಿಗಳನ್ನು ಜಾರಿಗೊಳೀಸಿರುವುದು ಸಹ ಜನರು ಇಲ್ಲಿಗೆ ಬಂದು ನೆಲೆಸಲು ಪ್ರಚೋದಿಸಿವೆ" ಎಂದು ಹೇಳುತ್ತಾರೆ.
Published by:Ashwini Prabhu
First published: