ಪಾಕ್​ನ​​​ ಬಾಲಾಕೋಟ್​ನಲ್ಲಿ ಸಕ್ರಿಯವಾಗಿದ್ದವು 300 ಮೊಬೈಲ್‌: ಗೃಹ ಸಚಿವ ರಾಜನಾಥ್​​ ಸಿಂಗ್​​!

ಬಾಲಾಕೋಟ್ ದಾಳಿಯಲ್ಲಿ ಭಾರತದ ಯುದ್ಧವಿಮಾನಗಳು ಕೇವಲ ಮರಗಿಡಗಳನ್ನು ಉರುಳಿಸಿ ಬಂದಿವೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ರಾಜನಾಥ್ ಸಿಂಗ್, ಮರಗಿಡಗಳು ಮೊಬೈಲ್ ಫೋನ್ ಬಳಸುತ್ತವೆಯೇ ಎಂದು ವಿರೋಧಿಗಳನ್ನು ಕುಟುಕಿದ್ದಾರೆ.

Ganesh Nachikethu | news18
Updated:March 5, 2019, 8:15 PM IST
ಪಾಕ್​ನ​​​ ಬಾಲಾಕೋಟ್​ನಲ್ಲಿ ಸಕ್ರಿಯವಾಗಿದ್ದವು 300 ಮೊಬೈಲ್‌: ಗೃಹ ಸಚಿವ ರಾಜನಾಥ್​​ ಸಿಂಗ್​​!
ನಿರ್ಮಲಾ ಸೀತಾರಾಮನ್​​ ಮತ್ತು ರಾಜನಾಥ್​​ ಸಿಂಗ್​​
  • News18
  • Last Updated: March 5, 2019, 8:15 PM IST
  • Share this:
ನವದೆಹಲಿ(ಮಾ.05): ಪಾಕ್​ ಬಾಲಾಕೋಟ್​ನಲ್ಲಿ ಭಾರತ ವಾಯುಸೇನೆ ನಡೆಸಿದ್ದ ದಾಳಿಯಲ್ಲಿ ಎಷ್ಟು ಮಂದಿ ಉಗ್ರರು ಸತ್ತಿದ್ದಾರೆ ಎಂಬ ವಿಚಾರದಲ್ಲಿ ಕೇಂದ್ರ ಸಚಿವರು ತಲೆಗೊಂದು ಹೇಳಿಕೆ ನೀಡುತ್ತಿದ್ದಾರೆ. ಈಗಷ್ಟೇ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್​​​ ಅವರು, ಸತ್ತ ಉಗ್ರ ಲೆಕ್ಕ ನೀಡಲು ಸಾಧ್ಯವಿಲ್ಲ ಎಂದಿದ್ದರು. ಈ ಮೂಲಕ ಬಾಲಾಕೋಟ್ ದಾಳಿಯಲ್ಲಿ 250 ಉಗ್ರರು ಸತ್ತಿದ್ದಾರೆಂದು ಹೇಳಿಕೆ ನೀಡಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಮುಜುಗರಕ್ಕೀಡು ಮಾಡಿದ್ದರು. ಈ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ರಾಜನಾಥ್​​ ಸಿಂಗ್​​​, ಫೆ.26ರಂದು ಬಾಲಾಕೋಟ್‌ನಲ್ಲಿ ಜೈಷ್‌ ಶಿಬಿರದ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸುವ ಮುನ್ನ ಅಲ್ಲಿಯೇ 300 ಮೊಬೈಲ್‌ ಪೋನ್‌ಗಳು ಕಾರ್ಯ ಪ್ರವೃತ್ತವಾಗಿದ್ದವು ಎಂದಿದ್ದಾರೆ. ಪರೋಕ್ಷವಾಗಿ 300 ಉಗ್ರರು ಸಾವನ್ನಪ್ಪಿದ್ದಾರೆ ಎಂಬುದನ್ನು ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಮತ್ತಷ್ಟು ಗೊಂದಲ ಮುಂದುವರೆದಿದೆ.

ಭಾರತ ನಡೆಸಿದ ಬಾಲಾಕೋಟ್ ವಾಯುದಾಳಿಯಲ್ಲಿ ಹತ್ಯೆಗೀಡಾದ ಉಗ್ರರ ಸಂಖ್ಯೆ ಇಂದಲ್ಲ, ನಾಳೆ ಗೊತ್ತಾಗಲಿದೆ. ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆ ತರಬೇತಿ ಶಿಬಿರದ ಮೇಲೆ ವಾಯುಪಡೆ ನಡೆಸಿದ ನಿಖರ ದಾಳಿಯಲ್ಲಿ ಎಷ್ಟು ಜನರು ಸತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡುವ ಮಾಹಿತಿಯೊಂದನ್ನು ಎನ್‌ಟಿಆರ್‌ಒ ನೀಡಿದೆ. ಬಾಲಾಕೋಟ್ನಲ್ಲಿ ದಾಳಿಗೆ ಮುನ್ನ 300 ಮೊಬೈಲ್‌ ಪೋನ್‌ಗಳು ಸಕ್ರಿವಾಗಿದ್ದವು. ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ(ನ್ಯಾಷನಲ್‌ ಟೆಕ್ನಿಕಲ್‌ ರೀಸರ್ಚ್‌ ಆರ್ಗನೈಜೇಷನ್-ಎನ್‌ಟಿಆರ್‌ಒ) ಈ ಮಾಹಿತ ನೀಡಿದೆ. ಇದುವೇ 300 ಉಗ್ರರು ಸತ್ತಿದ್ಧಾರೆ ಎಂಬುದಕ್ಕೆ ಸಾಕ್ಷಿ ಎಂದಿದ್ದಾರೆ.

ಬಾಲಾಕೋಟ್ ದಾಳಿಯಲ್ಲಿ ಭಾರತದ ಯುದ್ಧವಿಮಾನಗಳು ಕೇವಲ ಮರಗಿಡಗಳನ್ನು ಉರುಳಿಸಿ ಬಂದಿವೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ರಾಜನಾಥ್ ಸಿಂಗ್, ಮರಗಿಡಗಳು ಮೊಬೈಲ್ ಫೋನ್ ಬಳಸುತ್ತವೆಯೇ ಎಂದು ವಿರೋಧಿಗಳನ್ನು ಕುಟುಕಿದ್ದಾರೆ.

ಇದನ್ನೂ ಓದಿ: Balakot Airstrike: ‘ಸತ್ತ ಉಗ್ರರ ಲೆಕ್ಕ ಇಲ್ಲ’- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್!

ಈ ಹಿಂದೆಯಷ್ಟೇ ಪಾಕ್​​ ಮೇಲಿನ ವಾಯುದಾಳಿಯಲ್ಲಿ ಎಷ್ಟು ಮಂದಿ ಉಗ್ರರು ಸತ್ತಿದ್ದಾರೆಂಬ ಅಧಿಕೃತ ಮಾಹಿತಿ ಇಲ್ಲ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ನಿರ್ಮಲಾ ಸೀತಾರಾಮನ್ ನೀಡಿದ ಹೇಳಿಕೆ ಕೂಡ ವಾಯುಸೇನೆ ದಾಳಿಗೆ ಹತ್ಯೆಗೀಡಾದ ಉಗ್ರರ ಸಾವಿನ ಸಂಖ್ಯೆಯ ವಿಚಾರದ ಸುತ್ತ ಉಂಟಾಗಿರುವ ಗೊಂದಲ ಮುಂದುವರಿಸಿತ್ತು. ಹಾಗೆಯೇ ದಾಳಿಯಲ್ಲಿ 250 ಉಗ್ರರು ಸತ್ತಿದ್ದಾರೆಂದು ಹೇಳಿಕೆ ನೀಡಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಮುಜುಗರ ತಂದಿತ್ತು. ಈ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಸುನೀಗಿದ್ದಾರೆ ಎನ್ನಲಾದ ಉಗ್ರರ ಬಗ್ಗೆ ಮತ್ತೊಂದು ಹೇಳಿಕೆ ನೀಡಿ ಇನ್ನಷ್ಟೂ ಗೊಂದಲ ಸೃಷ್ಟಿಸಿದ್ಧಾರೆ.

ಇದನ್ನೂ ಓದಿ: ಹುತಾತ್ಮ ಯೋಧರ ತ್ಯಾಗ ಬಲಿದಾನ ವ್ಯರ್ಥವಾಗಲಿಕ್ಕೆ ಬಿಡಲ್ಲ; ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​​!

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿಯೇ ಪುಲ್ವಾಮಾ ಘಟನೆ ನಡೆಯಿತು. ಇದಾದ 12 ದಿನಗಳ ಬಳಿಕ ಭಾರತ ಪಾಕ್​​ ಮೇಲೆ ವಾಯುಸೇನೆ ಮೂಲಕ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಆದರಗ ಇಲ್ಲಿನ ವಾಯುಸೇನೆ ದಾಳಿಯಲ್ಲಿ ಎಷ್ಟು ಜನ ಉಗ್ರರು ಸತ್ತಿದ್ಧಾರೆ ಎಂಬುದರ ಸುತ್ತ ಭಾರೀ ಚರ್ಚೆ ನಡೆಯುತ್ತಿದೆ. ಈ ವಿಚಾರವನ್ನು ಇಟ್ಟುಕೊಂಡು ಆಡಳಿತರೂಢ ಬಿಜೆಪಿ ಮತ್ತು ಕಾಂಗ್ರೆಸ್​​ ಸೇರಿದಂತೆ ವಿಪಕ್ಷಗಳು ಕೆಸರೆರಚಾಟದಲ್ಲಿ ಮುಳುಗಿವೆ.ನಮಗೆ ನೀಡಿದ ಗುರಿಯನ್ನು ನಾವು ಮುಟ್ಟಿದ್ದೀವಾ ಎನ್ನುವದಷ್ಟೇ ನಮ್ಮ ಟಾರ್ಗೆಟ್. ಎಷ್ಟು ಜನ ಉಗ್ರರು ಸತ್ತಿದ್ಧಾರೆ ಎಂದು ಲೆಕ್ಕಹಾಕುವುದು ನಮ್ಮ ಕೆಲಸವಲ್ಲ ಎಂದು ವಾಯುಸೇನೆ ಮುಖ್ಯಸ್ಥ ಮಾರ್ಷಲ್ ಬಿಎಸ್​ ಧನಾವೋ ಸ್ಪಷ್ಟನೆ ನೀಡಿದ್ದಾರೆ. ಆದರೂ, ಈ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿನ ರಾಜಕೀಯ ಮುಂದುವರಿಯುತ್ತಲೇ ಇದೆ. ಇತ್ತ ಬಿಜೆಪಿ ಕೇಂದ್ರ ಸಚಿವರ ಹೇಳಿಕೆಯೇ ಗೊಂದಲಕ್ಕೀಡು ಮಾಡಿದರೇ, ಅತ್ತ ಕಾಂಗ್ರೆಸ್​​ ಮತ್ತು ವಿಪಕ್ಷಗಳು ಎಷ್ಟು ಜನ ಸತ್ತಿದ್ಧಾರೆಂಬುದಕ್ಕೆ ಸಾಕ್ಷ್ಯ ಕೇಳುತ್ತಿವೆ.
-------------
First published:March 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ