ಮೀರತ್ನ ಮನೋಜ್ಕುಮಾರ್ ಪಠಾಣ್ಕೋಟ್ನ 272 ಟ್ರಾನ್ಸಿಟ್ ಕ್ಯಾಂಪ್ನಲ್ಲಿ 108 ಪದಾತಿದಳದ ಬೆಟಾಲಿಯನ್ ಟಿಎಸ್ (ಟೆರಿಟೋರಿಯಲ್ ಆರ್ಮಿ) 'ಮಹಾರ್' ಮೂಲಕ ನಿಯೋಜಿತಗೊಂಡಿದ್ದರು. ನಾಲ್ಕು ತಿಂಗಳ ಕಾಲ ಸೇವೆ ಸಲ್ಲಿಸಿದ ನಂತರ ಭಾರತೀಯ ಸೇನೆ ನ್ನನ್ನು ನೇಮಿಸಿಲ್ಲ ಎಂಬುದನ್ನು ಮನೋಜ್ ಅರಿತುಕೊಂಡರು. 20 ರ ಮನೋಜ್, ನಾಲ್ಕು ತಿಂಗಳ ತರಬೇತಿಯನ್ನು (Training) ಪೂರ್ಣಗೊಳಿಸಿದ್ದು ಇದಕ್ಕಾಗಿ ಆತನಿಗೆ ಐಡಿ (ID) ಹಾಗೂ ಸಮವಸ್ತ್ರ (Uniform) ಕೂಡ ನೀಡಲಾಯಿತು. ತಾನು ಸೇನೆಯಿಂದ (Army) ನೇಮಕಗೊಂಡಿಲ್ಲ (Recruitment) ಎಂಬ ಸತ್ಯ ಮನಗಂಡ ಒಡನೆಯೇ ಮನೋಜ್ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾರೆ.
ವಂಚನೆಗೊಳಗಾದ ಯುವಕ
ಪೊಲೀಸ್ ತನಿಖೆಯ ನಂತರ ಮನೋಜ್ ಕುಮಾರ್ಗೆ ವಂಚನೆ ಮಾಡಿರುವುದು ಪತ್ತೆಯಾಗಿದೆ. ಕುಮಾರ್ ಅವರನ್ನು ನಾಲ್ಕು ತಿಂಗಳ ಸೇವೆಯಲ್ಲಿ ಇರಿಸಲಾಗಿದೆ ಮತ್ತು ಜುಲೈನಿಂದ ತಿಂಗಳಿಗೆ 12,500 ರೂಪಾಯಿ ವೇತನ ಪಡೆಯುತ್ತಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಮೀರತ್ ಪೊಲೀಸರು ಮತ್ತು ಭಾರತೀಯ ಸೇನೆ ಜಂಟಿ ತನಿಖೆ ನಡೆಸಿದ್ದು, ಭಾರತೀಯ ಸೇನೆಯಲ್ಲಿ ಸಿಪಾಯಿಯಾಗಿದ್ದ ರಾಹುಲ್ ಸಿಂಗ್ ಮತ್ತು ಆತನ ಸಹಚರರು 16 ಲಕ್ಷ ರೂಪಾಯಿಗೆ ಪ್ರತಿಯಾಗಿ ಕುಮಾರ್ ಅವರನ್ನು ಸೇನೆಯಲ್ಲಿ ನೇಮಿಸಿಕೊಂಡಿದ್ದರು. ಸೇನೆಯಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಯುವಕರಿಗೆ ರಾಹುಲ್ ಹಾಗೂ ತಂಡವು ಆಮಿಷವೊಡ್ಡುತ್ತಿದ್ದು, ಸಂತ್ರಸ್ತರಿಗೆ ನಕಲಿ ನೇಮಕಾತಿ ಪತ್ರ, ನಕಲಿ ಗುರುತಿನ ಚೀಟಿಗಳನ್ನು ನೀಡುತ್ತಿದ್ದರು.
ಬಂಧನದಲ್ಲಿರುವ ಸಿಪಾಯಿ ಹಾಗೂ ಸಹಚರರು
ಮಿಲಿಟರಿ ಗುಪ್ತಚರ ವಿವರಗಳನ್ನು ಆಧರಿಸಿ ಮೀರತ್ ಪೊಲೀಸರು ರಾಹುಲ್ ಸಿಂಗ್ ಹಾಗೂ ಆತನ ಸಹಚರ ಬಿಟ್ಟು ಸಿಂಗ್ ಅನ್ನು ಬಂಧಿಸಿದ್ದಾರೆ. ಕುಮಾರ್ ನೀಡಿರುವ ದೂರಿನ ಅನ್ವಯ ಸಿಂಗ್ ಹಾಗೂ ಇತರರ ಮೇಲೆ ಐಪಿಸಿ ಸೆಕ್ಷನ್ ಅನ್ವಯ ಕೇಸು ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಆ ಸಮಯದಲ್ಲಿ ಬೆಟಾಲಿಯನ್ ಪಂಜಾಬ್ನ ಗಡಿ ಜಿಲ್ಲೆ ಪಠಾಣ್ಕೋಟ್ನಲ್ಲಿರುವ 272 ಟ್ರಾನ್ಸಿಟ್ ಸೆಂಟರ್ನ ಭದ್ರತೆಯನ್ನು ನಿರ್ವಹಿಸುತ್ತಿತ್ತು, ಅಲ್ಲಿಂದ ಹಲವಾರು ಸೇನಾ ಘಟಕಗಳು ಮುಂದಕ್ಕೆ ಸ್ಥಾನಗಳಿಗೆ ನಿರಂತರವಾಗಿ ಚಲಿಸಲಾರಂಭಿಸಿತು. 25 ರ ಹರೆಯದ ರಾಹುಲ್ ಸಿಂಗ್ 2019 ರಲ್ಲಿ ಸೇನೆಗೆ ಸೇರಿದ್ದು, ಅಕ್ಟೋಬರ್ 22 ರಂದು ಆರೋಗ್ಯ ಕಾರಣಗಳ ನಿಮಿತ್ತ ಸೇನೆಗೆ ರಾಜೀನಾಮೆ ನೀಡಿದ್ದನು.
ತನ್ನ ಅಧಿಕಾರ ಅವಧಿಯಲ್ಲಿ ಉನ್ನತ ಶ್ರೇಣಿಯ ಅಧಿಕಾರಿಯಾಗಿ ರಾಹುಲ್ ಪೋಸ್ ನೀಡುತ್ತಿದ್ದ ಹಾಗೂ ಸೇನೆಗೆ ಸೇರಲು ಬಯಸುವ ಯುವ ಆಕಾಂಕ್ಷಿಗಳಿಗೆ ನೇಮಕಗೊಳ್ಳಲು "ಸಹಾಯ" ಮಾಡುತ್ತೇನೆ ಎಂದು ನಂಬಿಸಿದ್ದ. ಆತನ ಇಬ್ಬರು ಸಹಾಯಕರು, ರಾಹುಲ್ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿದ್ದು ಸೇನೆಗೆ ಸೇರಲು ಸಹಾಯ ಮಾಡುತ್ತಾರೆ ಎಂದು ನಂಬಿಸುವ ಕೆಲಸವನ್ನು ಮಾಡುತ್ತಿದ್ದರು.
ನೇಮಕಾತಿ ನಾಟಕ ಮಾಡಿದ್ದ ರಾಹುಲ್ ಸಿಂಗ್
ಅವರನ್ನು "ನೇಮಕಾತಿ" ಮಾಡಲಾಗಿದೆ ಎಂದು ಕುಮಾರ್ಗೆ ಮನವರಿಕೆ ಮಾಡಿಕೊಡಲು, ರಾಹುಲ್ ಸಿಂಗ್ ಕುಮಾರ್ನನ್ನು ಸಮವಸ್ತ್ರದಲ್ಲಿ ಪೋಸ್ಟ್ಗೆ ಕರೆದು ಸೈನಿಕ ಕರ್ತವ್ಯವನ್ನು ನಿರ್ವಹಿಸಲು ರೈಫಲ್ ಅನ್ನು ಹಸ್ತಾಂತರಿಸುತ್ತಿದ್ದರು ಎಂದು ಸೇನಾ ಮೂಲಗಳು ಬಹಿರಂಗಪಡಿಸಿವೆ. ಈ ಮೋಸದ ಬಗ್ಗೆ ಅರಿವಿಲ್ಲದ ಕುಮಾರ್ ತಾನು ನಿಜವಾಗಿಯೂ ಸೇನೆಯಲ್ಲಿದ್ದೇನೆ ಎಂದೇ ನಂಬಿದ್ದರು.
ಇದನ್ನೂ ಓದಿ: Explained: ಚೀನಾದಲ್ಲಿ ಲಾಕ್ಡೌನ್, ಕ್ಸಿ ಜಿನ್ಪಿಂಗ್ ವಿರುದ್ಧ ಖಾಲಿ ಶ್ವೇತಪತ್ರ ಹಿಡಿದು ಆಕ್ರೋಶ!
272 ಟ್ರಾನ್ಸಿಟ್ ಕ್ಯಾಂಪ್ಗೆ ತನ್ನನ್ನು ಕರೆಸಿಕೊಂಡಿದ್ದು ಸೇನೆಯ ಹಿರಿಯ ಅಧಿಕಾರಿಯಂತೆ ಕಾಣುವವರೊಬ್ಬರು ಕ್ಯಾಂಪ್ನೊಳಕ್ಕೆ ನನ್ನನ್ನು ಕರೆದೊಯ್ದರು ಹಾಗೂ ನನ್ನ ಕೌಶಲ್ಯಗಳನ್ನು ಪರಿಶೀಲಿಸಿದ ನಂತರ ದೈಹಿಕ ಪರೀಕ್ಷೆಯನ್ನು ನಡೆಸಲಾಯಿತು ಎಂದು ತಿಳಿಸಿದ್ದಾರೆ. ಕೂಡಲೇ ನನ್ನನ್ನು ನೇಮಿಸಿಕೊಳ್ಳಲಾಗಿದೆ ಎಂದು ಖುದ್ದು ರಾಹುಲ್ ಸಿಂಗ್ ತಿಳಿಸಿದ್ದು ಇದಕ್ಕಾಗಿ ಬೇರೆ ಕೆಲಸಗಳನ್ನು ಮಾಡಬೇಕು ಎಂದು ತಿಳಿಸಿದ್ದರು ಎಂದು ಸುದ್ದಿಪತ್ರಿಕೆಗೆ ಹೇಳಿದ್ದಾರೆ.
ನಕಲಿ ಐಡಿ ಹಾಗೂ ಸಮವಸ್ತ್ರ
ಸಮಯ ಕಳೆದಂತೆ ಇತರ ಸೇನಾ ಸಿಪಾಯಿಗಳೊಂದಿಗೆ ನಾನು ಸಂವಾದ ನಡೆಸಿದೆ ಹಾಗೂ ನನ್ನ ಬಳಿ ಇದ್ದ ಐಡಿ ಮತ್ತು ಸಮವಸ್ತ್ರವನ್ನು ತೋರಿಸಿದಾಗ ಇದು ನಕಲಿ ಎಂದು ಅವರು ತಿಳಿಸಿದರು ಎಂದು ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ರಾಹುಲ್ ಬಳಿ ವಿಚಾರಿಸಿದಾಗ ಆತ ನನ್ನಿಂದ ವಿಮುಕ್ತಿ ಪಡೆಯಲು ನನ್ನನ್ನು ಕಾನ್ಪುರ್ನಲ್ಲಿರುವ ದೈಹಿಕ ತರಬೇತಿ ಸಂಸ್ಥೆಗೆ ಕಳುಹಿಸಿದನು ಎಂದು ತಿಳಿಸಿದ್ದಾರೆ. ಅಲ್ಲಿಂದ ನನ್ನನ್ನು ಮನೆಗೆ ಕಳುಹಿಸಲಾಯಿತು. ರಾಹುಲ್ನನ್ನು ಈ ಕುರಿತು ಪ್ರಶ್ನಿಸಿದಾಗ, ಆತ ನನ್ನನ್ನು ಬೆದರಿಸಲು ಆರಂಭಿಸಿದನು ಎಂದು ಕುಮಾರ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ