ಮಹಾ ಸರ್ಕಸ್​: ಎನ್​ಸಿಪಿ-ಕಾಂಗ್ರೆಸ್​ ಸರ್ಕಾರ ರಚಿಸಲ್ಲ, ವಿರೋಧ ಪಕ್ಷವಾಗಿ ಕೂರುತ್ತೇವೆ; ಪವಾರ್​ ಸ್ಪಷ್ಟನೆ

ಫಲಿತಾಂಶ ಬಂದ ದಿನದಿಂದ ಸರ್ಕಾರ ರಚನೆ ಅನಿಶ್ಚಿತತೆಯತ್ತ ಸಾಗಿತ್ತು. ಇದೀಗ ಬಿಜೆಪಿ ಟ್ರಬಲ್​ ಶೂಟರ್​ ನಿತಿನ್​ ಗಡ್ಕರಿ ಎಂಟ್ರಿ ಮತ್ತು ಸಾಂವಿಧಾನಿಕ ಬಿಕ್ಕಟ್ಟಿನ ತೂಗುಗತ್ತಿ ಹಿನ್ನೆಲೆಯಲ್ಲಿ ಬಿಜೆಪಿ - ಶಿವಸೇನೆ ಚುನಾವಣಾ ಪೂರ್ವ ಮೈತ್ರಿಯಂತೆ ಸರ್ಕಾರ ರಚಿಸುವ ಸಾಧ್ಯತೆ ದಟ್ಟವಾಗುತ್ತಿದೆ

Seema.R | news18-kannada
Updated:November 6, 2019, 1:21 PM IST
ಮಹಾ ಸರ್ಕಸ್​: ಎನ್​ಸಿಪಿ-ಕಾಂಗ್ರೆಸ್​ ಸರ್ಕಾರ ರಚಿಸಲ್ಲ, ವಿರೋಧ ಪಕ್ಷವಾಗಿ ಕೂರುತ್ತೇವೆ; ಪವಾರ್​ ಸ್ಪಷ್ಟನೆ
ದೇವೇಂದ್ರ ಫಡ್ನವಿಸ್ ಮತ್ತು ಉದ್ಧವ್ ಠಾಕ್ರೆ
  • Share this:
ಮುಂಬೈ (ನ.6):  ಮಹಾರಾಷ್ಟ್ರ ಸರ್ಕಾರ ರಚನೆ ಕಸರತ್ತು ಕಗ್ಗಂಟ್ಟಾಗಿ ಪರಿಣಾಮಿಸಿದ್ದು, ಸರ್ಕಾರ ರಚನೆಗೆ ಇನ್ನೆರಡು ದಿನದ ಡೆಡ್​ಲೈನ್​ ನೀಡಲಾಗಿದೆ. ಈ ನಡುವೆ ರಾಜಕೀಯ ಬೆಳವಣಿಗೆಗಳು ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಕಾಂಗ್ರೆಸ್​ ನಾಯಕ ಅಹಮದ್​ ಪಟೇಲ್​ ಅವರನ್ನು ಬಿಜೆಪಿ ನಾಯಕ ನಿತಿನ್​ ಗಡ್ಕರಿ ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಸ್ಪಷ್ಟನೆ ನೀಡಿದ್ದು, ಶಿವಸೇನೆ ಜತೆಗೂಡಿ ಸರ್ಕಾರ ರಚನೆ ಮಾಡುವುದಿಲ್ಲ, ಕಾಂಗ್ರೆಸ್​ ಮತ್ತು ಎನ್​ಸಿಪಿ ವಿರೋಧ ಪಕ್ಷದ ಸ್ಥಾನ ಅಲಂಕರಿಸಲಿದೆ ಎಂದಿದ್ದಾರೆ. 

ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಅತಂತ್ರವಾದ ನಂತರ ಶಿವಸೇನೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದು ಕೂತಿತ್ತು. ಇತ್ತ ಬಿಜೆಪಿ ಕೂಡ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾರಣವೊಡ್ಡಿ ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ಕೊಡಲು ಸಾಧ್ಯವಿಲ್ಲ ಎಂದಿತ್ತು. ಹೀಗಾಗಿ ಫಲಿತಾಂಶ ಬಂದ ದಿನದಿಂದ ಸರ್ಕಾರ ರಚನೆ ಅನಿಶ್ಚಿತತೆಯತ್ತ ಸಾಗಿತ್ತು. ಇದೀಗ ಬಿಜೆಪಿ ಟ್ರಬಲ್​ ಶೂಟರ್​ ನಿತಿನ್​ ಗಡ್ಕರಿ ಎಂಟ್ರಿ ಮತ್ತು ಸಾಂವಿಧಾನಿಕ ಬಿಕ್ಕಟ್ಟಿನ ತೂಗುಗತ್ತಿ ಹಿನ್ನೆಲೆಯಲ್ಲಿ ಬಿಜೆಪಿ - ಶಿವಸೇನೆ ಚುನಾವಣಾ ಪೂರ್ವ ಮೈತ್ರಿಯಂತೆ ಸರ್ಕಾರ ರಚಿಸುವ ಸಾಧ್ಯತೆ ದಟ್ಟವಾಗುತ್ತಿದೆ. ಜತೆಗೆ ಶಿವಸೇನೆ ಜತೆ ಮೈತ್ರಿ ಅಸಾಧ್ಯ ಎಂಬ ಶರದ್​ ಪವಾರ್​ ನಿರ್ಣಯ ಕೂಡ ಬಿಜೆಪಿ - ಸೇನೆ ಮೈತ್ರಿ ಸಾಧ್ಯತೆಗೆ ಪುಷ್ಠಿ ನೀಡಿದೆ.

ಕುತೂಹಲಕ್ಕೆ ಕಾರಣವಾಗಿದ್ದ ಗಡ್ಕರಿ - ಪಟೇಲ್​ ಭೇಟಿ:

ಸೋನಿಯಾ ಗಾಂಧಿ ಆಪ್ತ ಅಹ್ಮದ್​ ಪಟೇಲ್​ ಮತ್ತು ನಿತಿನ್​ ಗಡ್ಕರಿ ಭೇಟಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿತ್ತು. ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ದೂರವಿರುವಂತೆ ಬಿಜೆಪಿ ಟ್ರಬಲ್​ ಶೂಟರ್​​ ಗಡ್ಕರಿ, ಕಾಂಗ್ರೆಸ್​ ನಾಯಕರಿಗೆ ಮನವಿ ಮಾಡಿದ್ದರು ಎನ್ನಲಾಗಿತ್ತು. ಆದರೆ ಈ ಭೇಟಿ ಬಗ್ಗೆ ಮಾತನಾಡಿದ ಪಟೇಲ್​, ತಮ್ಮ ಭೇಟಿಯಲ್ಲಿ ಮಹಾರಾಷ್ಟ್ರ ಸರ್ಕಾರ ರಚನೆ ಕುರಿತು ಯಾವುದೇ ಮಾತುಕತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಬೆಳಗಿನಿಂದ ಆಗಿದ್ದೇನು?:

ಮುಖ್ಯಮಂತ್ರಿ ಪದವಿ ಹಂಚಿಕೆಯಲ್ಲಿ ಬಿಜೆಪಿ ಮೈತ್ರಿಗೆ ಮುಂದಾಗದ ಹಿನ್ನೆಲೆ ಶಿವಸೇನೆ ಮತ್ತೆ ಎನ್​ಸಿಪಿಯೊಂದಿಗೆ ಸಖ್ಯಬೆಳೆಸುವ ಕುರಿತು ಮಾತುಕತೆ ನಡೆಸಿದೆ. ಇಂದು ಮತ್ತೆ ಎನ್​ಸಿಪಿ ನಾಯಕ ಶರದ್​ ಪವರ್​ ಜೊತೆ ಶಿವಸೇನಾ ಹಿರಿಯ ನಾಯಕ ಸಂಜಯ್​ ರಾವತ್​ ಮಾತುಕತೆ ನಡೆಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಕುರಿತು ಪವರ್​ ಕಾಳಜಿ ವ್ಯಕ್ತಪಡಿಸಿದ್ದು, ಸದ್ಯದ ಪರಿಸ್ಥಿತಿ ಕುರಿತು ಮಾತುಕತೆ ನಡೆಸಿದ್ದಾರೆ.

ಬಿಜೆಪಿ ಜೊತೆ ಸೇನೆ ಮೈತ್ರಿ ಬೆಳೆಸದಿದ್ದರೆ, ಉದ್ಧವ್​ ಠಾಕ್ರೆ ಪಕ್ಷದೊಂದಿಗೆ ನಾವು ಕೈ ಜೋಡಿಸಲು ಸಿದ್ಧ ಎಂದು ಪವರ್​ ತಿಳಿಸಿದೆ. ಜೊತೆಗೆ ಶಿವಸೇನೆಗೆ ಮುಖ್ಯಮಂತ್ರಿ ಪದವಿ ನೀಡುವ ಬಗ್ಗೆಯೂ ಸಹಮತ ವ್ಯಕ್ತಪಡಿಸಿದ್ದು, ಇಂದು ಎರಡನೇ ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.ಮಹಾರಾಷ್ಟ್ರದ ಸದ್ಯದ ಪರಿಸ್ಥಿತಿ ಬಗ್ಗೆ ನಮಗೆ ಕಾಳಜಿ ಇದ್ದು, ಈ ಕುರಿತು ಮಾತುಕತೆ ನಡೆಸಲಾಗಿದೆ. ಈ ಬಗ್ಗೆ ಮುಂದಿನ ಮಾತುಕತೆಯನ್ನು ಎದುರು ನೋಡುತ್ತಿದ್ದೇವೆ ಎಂದು ರಾವತ್​ ತಿಳಿಸಿದ್ದಾರೆ.

ಆದರೆ, ಈಗ ಎನ್​ಸಿಪಿ-ಕಾಂಗ್ರೆಸ್​ ಮೈತ್ರಿ ಮಾಡಿಕೊಂಡಿದ್ದು, ಸೇನಾಗೆ ಎನ್​ಸಿಪಿ ಬೆಂಬಲಿಸುವುದನ್ನು ಸೋನಿಯಾ ಗಾಂಧಿ ವಿರೋಧಿಸಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ಮುಷ್ಕರ ನಿರತ ಕಾರ್ಮಿಕರಿಗೆ ನೀಡಿದ್ದ ಡೆಡ್​​ಲೈನ್​​ ಅಂತ್ಯ: ಕುತೂಹಲ ಮೂಡಿಸಿದ ಸಿಎಂ ಕೆಸಿಆರ್​​ ಮುಂದಿನ ನಡೆ

ಇದರ ನಡುವೆ ಕಾಂಗ್ರೆಸ್​ ನಾಯಕರನ್ನು ಆರ್​ಎಸ್​ಎಸ್​ ಕಟ್ಟಾಳು, ಬಿಜೆಪಿ ಟ್ರಬಲ್​ ಶೂಟರ್​ ಗಡ್ಕರಿ ಭೇಟಿಯಾಗಿರುವುದು  ಕುತೂಹಲ ಮೂಡಿಸಿದೆ.

ಈ ಬೆಳವಣಿಗೆ ನಡುವೆಯೇ ಇಂದು ಶಿವಸೆನೆ ಮತ್ತೆ ತಮ್ಮ 50-50 ಸೂತ್ರದ ಕುರಿತು ಮಾತನಾಡಿದ್ದು, ಸಿಎಂ ಕುರ್ಚಿ ಹಂಚಿಕೆಯ ಸೂತ್ರವನ್ನು ಬಿಜೆಪಿ ತಳ್ಳಿಹಾಕಿದೆ. ಫಡ್ನಾವೀಸ್​ ನಮ್ಮ ಪ್ರಸ್ತಾಪವನ್ನು ತಿರಸ್ಕರಿಸಿದ್ದು, ಬಿಜೆಪಿ ಮುಂದೆ ಯಾವುದೇ ಹೊಸ ಪ್ರಸ್ತಾಪವಿಡುವುದಿಲ್ಲ ಎಂದಿದ್ದಾರೆ.

First published:November 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ