ತಿಂಗಳ ಕಾಲ ಒಂಟಿಯಾಗಿದ್ದ ಮಧ್ಯಪ್ರದೇಶ ಸಿಎಂಗೆ ಈಗ ಐವರು ಸಚಿವರ ಪುಟ್ಟ ಸಂಪುಟದ ಬಲ

ಮೇ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ. ಈಗ ಐವರು ನೂತನ ಸಚಿವರಿಗೆ ಶೀಘ್ರದಲ್ಲೇ ಖಾತೆ ಹಂಚಿಕೆಯಾಗಲಿದೆ.

news18
Updated:April 21, 2020, 6:36 PM IST
ತಿಂಗಳ ಕಾಲ ಒಂಟಿಯಾಗಿದ್ದ ಮಧ್ಯಪ್ರದೇಶ ಸಿಎಂಗೆ ಈಗ ಐವರು ಸಚಿವರ ಪುಟ್ಟ ಸಂಪುಟದ ಬಲ
ಶಿವರಾಜ್ ಸಿಂಗ್ ಚೌಹಾಣ್
  • News18
  • Last Updated: April 21, 2020, 6:36 PM IST
  • Share this:
ಭೋಪಾಲ್(ಏ. 21): ಮಧ್ಯಪ್ರದೇಶದಲ್ಲಿ ರಾಜಕೀಯ ವಿಪ್ಲವಗಳ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಬಹುತೇಕ ತಿಂಗಳ ನಂತರ ಸಂಪುಟ ರಚನೆ ಮಾಡಿದೆ. ಮಾರ್ಚ್ 23ರಂದು ಸಿಎಂ ಆಗಿ ಪ್ರಮಾಣವ ವಚನ ಸ್ವೀಕರಿಸಿದ್ದ ಶಿವರಾಜ್ ಸಿಂಗ್ ಚೌಹಾಣ್ ಇವತ್ತು ಐವರು ಸಚಿವರಿರುವ ಸಂಪುಟ ರಚಿಸಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ ಭವನದಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಇಂದು ಐವರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ನರೋತ್ತಮ್ ಮಿಶ್ರಾ, ಗೋವಿಂದ್ ಸಿಂಗ್ ರಾಜಪೂತ್, ಮೀನಾ ಸಿಂಗ್, ಕಮಲ್ ಪಟೇಲ್ ಮತ್ತು ತುಳಸೀರಾಮ್ ಸಿಲಾವತ್ ಅವರು ಇಂದು ಸಂಪುಟ ಸೇರ್ಪಡೆಗೊಂಡ ಐವರು. ಇವರ ಪೈಕಿ ಇಬ್ಬರು ಸಾಮಾನ್ಯ ವರ್ಗದವರಾದರೆ, ಇಬ್ಬರು ಎಸ್ಸಿ/ಎಸ್ಟಿ ಪಂಗಡದವರಾಗಿದ್ಧಾರೆ. ಮತ್ತೊಬ್ಬರು ಒಬಿಸಿಯವರಾಗಿದ್ದಾರೆ.

ಸಂಪುಟ ರಚನೆಗೆ ಅನುಭವಿಗಳ ಬದಲು ಜಾತಿ ಸಮೀಕರಣಕ್ಕೆ ಪ್ರಾಮುಖ್ಯತೆ ಕೊಟ್ಟಿರುವುದು ಕಂಡು ಬಂದಿದೆ. ಹಾಗೆಯೇ, ಕಾಂಗ್ರೆಸ್​ನಿಂದ ಸಿಡಿದು ಬಂದಿರುವ ಜ್ಯೋತಿರಾದಿತ್ಯ ಸಿಂದ್ಯ ಅವರ ಓಲೈಕೆಯೂ ಆಗಿದೆ. ಗೋವಿಂದ್ ಸಿಂಗ್ ರಾಜಪೂತ್ ಮತ್ತು ತುಳಸೀರಾಮ್ ಸಿಲಾವತ್ ಅವರು ಕಮಲನಾಥ್ ಸರ್ಕಾರದಲ್ಲಿ ಸಚಿವರಾಗಿದ್ದವರು. ಇಬ್ಬರೂ ಜ್ಯೋತಿರಾದಿತ್ಯ ಸಿಂಗ್ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ.

ಇದನ್ನೂ ಓದಿ: ಮುಸ್ಲಿಮರಿಗೆ ಭಾರತ ಸ್ವರ್ಗ; ಇದು ಯಾಕೆ ಇವರಿಗೆ ಕಾಣುತ್ತಿಲ್ಲ?: ಒಐಸಿ ವಿರುದ್ಧ ನಖ್ವಿ ಕಿಡಿ

ಹಿರಿಯ ಶಾಸಕರಾದ ಗೋಪಾಲ್ ಭಾರ್ಗ್, ರಾಜೇಂದ್ರ ಶುಕ್ಲ, ಭೂಪೇಂದ್ರ ಸಿಂಗ್, ಯಶೋಧರ ರಾಜೆ ಸಿಂಧ್ಯ, ಗೌರಿ ಶಂಕರ್ ಬಿಸೆನ್, ರಾಮಪಾಲ್ ಸಿಂಗ್, ಬಿಸಾಹು ಲಾಲ್ ಸಿಂಗ್, ಮಹೇಂದ್ರ ಸಿಸೋಡಿಯಾ, ಪ್ರಭುರಾಮ್ ಚೌಧರಿ ಮೊದಲಾದವರೆಲ್ಲರೂ ಸಂಪುಟ ಸೇರ್ಡಡೆಯ ನಿರೀಕ್ಷೆಯಲ್ಲಿದ್ದರು. ಆದರೆ, ಮೊದಲ ಹೆಜ್ಜೆಯಾಗಿ ಪುಟ್ಟ ಕ್ಯಾಬಿನೆಟ್ ಇರಲಿ ಎಂಬುದು ಪಕ್ಷದ ಹೈಕಮಾಂಡ್ ನಿರ್ಧಾರವಾಗಿತ್ತು.

ಮೇ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ. ಈಗ ಐವರು ನೂತನ ಸಚಿವರಿಗೆ ಶೀಘ್ರದಲ್ಲೇ ಖಾತೆ ಹಂಚಿಕೆಯಾಗಲಿದೆ. ಅಧಿಕಾರ ಬಂದ ನಂತರ ಕೊರೋನಾ ಬಿಕ್ಕಟ್ಟು ಪ್ರಾರಂಭವಾಗಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಏಕಾಂಗಿಯಾಗಿಯೇ ಪರಿಸ್ಥಿತಿ ನಿಭಾಯಿಸುತ್ತಿದ್ದರು. ಇದು ವಿಪಕ್ಷಗಳ ಟೀಕೆಗೂ ಕಾರಣವಾಗಿತ್ತು. ಇದೀಗ ಸಂಪುಟ ರಚನೆ ಮಾಡಿರುವ ಸಿಎಂ ಒಂದಷ್ಟು ಹೊರೆಯನ್ನು ಇಳಿಸಿದ್ದಾರೆ. ನೂತನ ಸಚಿವರಿಗೆ ಬಹು ಖಾತೆಗಳನ್ನು ವಹಿಸುವ ಸಾಧ್ಯತೆ ಇದೆ.

First published: April 21, 2020, 6:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading