HOME » NEWS » National-international » AFTER RESIGNING FROM CONG ASHOK TANWARS ANNOUNCES SUPPORT TO CHAUTALAS JJP AHEAD OF HARYANA POLLS VS

‘ಕಾಂಗ್ರೆಸ್ ಪಕ್ಷದ ಮೇಲೆ ನನ್ನ ಮೊದಲ ಸರ್ಜಿಕಲ್ ಸ್ಟ್ರೈಕ್’ – ಹರಿಯಾಣ ಮಾಜಿ ಕಾಂಗ್ರೆಸ್ ಅಧ್ಯಕ್ಷನಿಂದ ಜೆಜೆಪಿಗೆ ಬೆಂಬಲ

“ಬಹಳ ನೋವಿನಿಂದ ಕಾಂಗ್ರೆಸ್ ತ್ಯಜಿಸಿದ್ದೇನೆ. ಪಕ್ಷದಲ್ಲಿರುವ ಕೆಲ ದುರಹಂಕಾರಿಗಳಿಗೆ ಪಾಠ ಕಲಿಸಬೇಕಿದೆ. ಈಗ ನೆಲ ಬಾಂಬು ಇಟ್ಟಿದ್ದೇನೆ. ಇದು ಅವರ ಮೇಲೆ ನಡೆದ ಮೊದಲ ಸರ್ಜಿಕಲ್ ಸ್ಟ್ರೈಕ್” ಎಂದು ಮಾಜಿ ಕಾಂಗ್ರೆಸ್ಸಿಗ ಅಶೋಕ್ ತನ್ವರ್ ಹೇಳಿದ್ಧಾರೆ.

Vijayasarthy SN | news18
Updated:October 16, 2019, 7:15 PM IST
‘ಕಾಂಗ್ರೆಸ್ ಪಕ್ಷದ ಮೇಲೆ ನನ್ನ ಮೊದಲ ಸರ್ಜಿಕಲ್ ಸ್ಟ್ರೈಕ್’ – ಹರಿಯಾಣ ಮಾಜಿ ಕಾಂಗ್ರೆಸ್ ಅಧ್ಯಕ್ಷನಿಂದ ಜೆಜೆಪಿಗೆ ಬೆಂಬಲ
ಅಶೋಕ್ ತನ್ವರ್
  • News18
  • Last Updated: October 16, 2019, 7:15 PM IST
  • Share this:
ನವದೆಹಲಿ(ಅ. 16): ಕೆಲ ದಿನಗಳ ಹಿಂದಷ್ಟೇ ಸೋನಿಯಾ ಗಾಂಧಿ ನಿವಾಸದೆದುರು ಪ್ರತಿಭಟನೆ ನಡೆಸಿ ರಾಷ್ಟ್ರಾದ್ಯಂತ ಸುದ್ದಿಯಾಗಿದ್ದ ಅಶೋಕ್ ತನ್ವರ್ ಈಗ ಕಾಂಗ್ರೆಸ್ ಮೇಲೆ ಪ್ರಹಾರ ನಡೆಸಲು ಪ್ರಾರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಅಶೋಕ್ ತನ್ವರ್ ಇದೀಗ ಜನನಾಯಕ್ ಜನತಾ ಪಾರ್ಟಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ಈ ಬೆಳವಣಿಗೆ ಕಾಂಗ್ರೆಸ್ ಪಕ್ಷಕ್ಕೆ ಮಗ್ಗುಲಮುಳ್ಳಾಗಲಿದೆ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯೋಗ್ಯರಿಗೆ ಟಿಕೆಟ್ ಸಿಕ್ಕಿಲ್ಲ. ಬೇಕಾಬಿಟ್ಟಿ ಟಿಕೆಟ್ ಹಂಚಿಕೆಯಾಗಿದೆ ಎಂದು ಆರೋಪಿಸಿ ಅವರು ಸೋನಿಯಾ ಗಾಂಧಿ ನಿವಾಸದೆದುರು ಪ್ರತಿಭಟನೆ ನಡೆಸಿದ್ದರು. 2014ರಲ್ಲಿ ಹರಿಯಾಣ ಘಟಕದ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅಶೋಕ್ ತನ್ವರ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಮಧ್ಯೆ ಸಂಬಂಧ ಹಳಸಿತ್ತು. ಕಳೆದ ತಿಂಗಷ್ಟೇ ಅಶೋಕ್ ತನ್ವರ್ ಅವರನ್ನು ಅಧ್ಯಕ್ಷ ಪದವಿಯಿಂದ ಕೆಳಗಿಳಿಸಿ ಕುಮಾರಿ ಸೆಲ್ಜಾ ಎಂಬುವರನ್ನು ಕೂರಿಸಲಾಗಿತ್ತು. ಭೂಪಿಂದರ್ ಹೂಡಾ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು.

ಇದನ್ನೂ ಓದಿ: ನಮ್ಮಲ್ಲೇ ಹೆಚ್ಚು ಹಸಿವು..! ಜಾಗತಿಕ ಹಸಿವಿನ ಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತಲೂ ಹಿಂದುಳಿದ ಭಾರತ

ಪಕ್ಷದಲ್ಲಿ ತಮ್ಮ ಸ್ಥಾನಮಾನ ಕಳೆದುಹೋಗಿದ್ದು ಹಾಗೂ ತಮಗೆ ಬೇಕಾದವರಿಗೆ ಚುನಾವಣೆಯಲ್ಲಿ ಟಿಕೆಟ್ ಸಿಗದೇ ಹೋಗಿದ್ದು ಅಶೋಕ್ ತನ್ವರ್ ಅವರಿಗೆ ಅಸಮಾಧಾನ ತಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

ಇದೀಗ ಅವರು ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲ ಅವರ ಮೊಮ್ಮಗ ದುಶ್ಯಂತ್ ಚೌಟಾಲ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಚೌಟಾಲ ನೇತೃತ್ವದ ಜನನಾಯಕ್ ಜನತಾ ಪಾರ್ಟಿ ಪರವಾಗಿ ಕೆಲಸ ಮಾಡುವಂತೆ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ.

“ಬಹಳ ನೋವಿನಿಂದ ಕಾಂಗ್ರೆಸ್ ತ್ಯಜಿಸಿದ್ದೇನೆ. ಕೆಲ ದುರಹಂಕಾರಿ ವ್ಯಕ್ತಿಗಳು ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಳಿಸಿದ್ದಾರೆ. ಈ ದುರಹಂಕಾರಿಗಳಿಗೆ ಪಾಠ ಕಲಿಸಬೇಕಿದೆ. ನನ್ನ ಶತ್ರುಗಳಿಗೆ ನಾನು ನೆಲ ಬಾಂಬು ಇಟ್ಟಿದ್ದೇನೆ. ಇದು ಅವರ ಮೇಲೆ ನಡೆದ ಮೊದಲ ಸರ್ಜಿಕಲ್ ಸ್ಟ್ರೈಕ್” ಎಂದು ಅಶೋಕ್ ತನ್ವರ್ ತಿಳಿಸಿದ್ಧಾರೆ.

ಇದನ್ನೂ ಓದಿ: ನರೇಂದ್ರ ಮತ್ತು ಫಡ್ನವೀಸ್ ಜೊತೆಯಾದರೆ 1+12 ಅಲ್ಲ 11; ಪ್ರಧಾನಿ ಮೋದಿದುಶ್ಯಂತ್ ಚೌಟಾಲ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವುದೇ ತಮ್ಮ ಗುರಿ. ಮುಂದಿನ ವಾರ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹರಿಯಾಣದಲ್ಲಿ ಮೂರು ಅಥವಾ ನಾಲ್ಕನೇ ಸ್ಥಾನಕ್ಕೆ ಕುಸಿಯುತ್ತದೆ ಎಂದು ತನ್ವರ್ ಭವಿಷ್ಯ ನುಡಿದಿದ್ದಾರೆ.

90 ಕ್ಷೇತ್ರಗಳಿರುವ ಹರಿಯಾಣ ವಿಧಾನಸಭೆಗೆ ಇದೇ ಅಕ್ಟೋಬರ್ 21ರಂದು ಚುನಾವಣೆ ನಡೆಯುತ್ತಿದೆ. 2014ರಲ್ಲಿ ನಡೆದ ಚುನಾವಣೆಯಲ್ಲಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದಲ್ಲಿ ಬಿಜೆಪಿ 43 ಸ್ಥಾನ ಗೆದ್ದು ಅಧಿಕಾರ ಪಡೆಯಿತು. ಆ ಚುನಾವಣೆಯಲ್ಲಿ ಕಾಂಗ್ರೆಸ್ 15 ಕ್ಷೇತ್ರ ಗೆದ್ದು ಮೂರನೇ ಸ್ಥಾನಕ್ಕೆ ಕುಸಿಯಿತು. ಓಂ ಪ್ರಕಾಶ್ ಚೌಟಾಲ ನೇತೃತ್ವದಲ್ಲಿ ಐಎನ್​ಎಲ್​ಡಿ ಪಕ್ಷ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿತು.

ಈ ಬಾರಿಯ ಚುನಾವಣೆಯಲ್ಲಿ ದುಶ್ಯಂತ್ ಚೌಟಾಲ ಅವರ ಜೆಜೆಪಿ ಪಕ್ಷ ಅಖಾಡಕ್ಕೆ ಇಳಿದಿರುವುದರಿಂದ ಹರಿಯಾಣದಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ. ಅ. 24ರಂದು ಮತ ಎಣಿಕೆ ನಡೆಯಲಿದೆ.

(ವರದಿ: ಪಿಟಿಐ ಸುದ್ದಿ ಸಂಸ್ಥೆ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 16, 2019, 7:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading