ಕಾಶ್ಮೀರ ವಿಚಾರದಲ್ಲಿ ಪಾಕ್ ಬೆನ್ನಿಗೆ ನಿಂತ ಚೀನಾ; ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಾಳೆ ಚರ್ಚೆ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿಚಾರವನ್ನು ಕೈಗೆತ್ತಿಕೊಳ್ಳುವ ಪಾಕಿಸ್ತಾನದ ಪ್ರಯತ್ನಕ್ಕೆ ಚೀನಾ ಸಹಾಯವಾಗಿ ನಿಂತಿದೆ. ತತ್​ಫಲವಾಗಿ ಶುಕ್ರವಾರ ಮಂಡಳಿಯಲ್ಲಿ ಗುಪ್ತ ಸಮಾಲೋಚನೆ ನಡೆಯಲಿದೆ.

news18
Updated:August 15, 2019, 9:31 PM IST
ಕಾಶ್ಮೀರ ವಿಚಾರದಲ್ಲಿ ಪಾಕ್ ಬೆನ್ನಿಗೆ ನಿಂತ ಚೀನಾ; ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಾಳೆ ಚರ್ಚೆ
ಪಾಕಿಸ್ತಾನ ಮತ್ತು ಚೀನಾದ ಧ್ವಜ
news18
Updated: August 15, 2019, 9:31 PM IST
ನವದೆಹಲಿ(ಆ. 15): ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ಹಿಂಪಡೆದ ಭಾರತದ ಕ್ರಮವನ್ನು ಪ್ರಶ್ನಿಸಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಧ್ವನಿ ಎತ್ತಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಚೀನಾದ ನೆರವಿನಿಂದ ಪಾಕಿಸ್ತಾನದ ಪ್ರಯತ್ನ ಫಲಕೊಟ್ಟಿದೆ. ನಾಳೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿಚಾರದ ಬಗ್ಗೆ ಗುಪ್ತ ಸಮಾಲೋಚನೆಗಳು ನಡೆಯಲಿವೆ.

ಕಾಶ್ಮೀರ ವಿಚಾರದ ಬಗ್ಗೆ ಭದ್ರತಾ ಮಂಡಳಿಯಲ್ಲಿ ತುರ್ತು ಸಭೆ ನಡೆಸುವಂತೆ ಪಾಕಿಸ್ತಾನವು ಮಂಗಳವಾರವೇ ಕೋರಿಕೆ ಸಲ್ಲಿಸಿತ್ತು. ಈ ವಿಚಾರದಲ್ಲಿ ಪಾಕಿಸ್ತಾನಕ್ಕೆ ಸಹಾಯಹಸ್ತ ಚಾಚಿದ ಅದರ ಮಿತ್ರ ಚೀನಾ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಗುಪ್ತ ಸಮಾಲೋಚನೆ(Closed Consultations) ನಡೆಸುವಂತೆ ಮನವಿ ಮಾಡಿದ್ದರು. ಯುಎನ್​ಎಸ್​ಸಿಯಲ್ಲಿ ಖಾಯಂ ಸದಸ್ಯನಾಗಿರುವ ಚೀನಾದ ಮನವಿಗೆ ಒಪ್ಪಿರುವ ಮಂಡಳಿಯು ನಾಳೆ ಚರ್ಚೆ ನಡೆಸಲು ತೀರ್ಮಾನಿಸಿದೆ.

ಇದನ್ನೂ ಓದಿ: ನಿಮಗೆ 370ನೇ ವಿಧಿ ಮುಖ್ಯವಾಗಿದ್ದರೆ, ಅದನ್ಯಾಕೆ ಖಾಯಂಗೊಳಿಸಲಿಲ್ಲ?: ವಿಪಕ್ಷಗಳಿಗೆ ಪ್ರಧಾನಿ ಕುಟುಕು

ಜಮ್ಮು-ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನ ಮಧ್ಯೆ ದ್ವಿಪಕ್ಷೀಯ ವಿಚಾರವಾಗಿದೆ. ಮೂರನೇ ಪಕ್ಷದ ಮಧ್ಯಪ್ರವೇಶದ ಅಗತ್ಯವಿಲ್ಲ. 370ನೇ ವಿಧಿಯನ್ನು ರದ್ದು ಮಾಡಿದ್ದು ಭಾರತದ ಆಂತರಿಕ ವಿಚಾರವಾಗಿದೆ ಎಂಬುದು ಭಾರತದ ನಿಲುವು. ಆದರೆ, ಅಮೆರಿಕ, ಚೀನಾ ಸೇರಿದಂತೆ ಹೊರಗಿನ ದೇಶಗಳನ್ನು ಕಾಶ್ಮೀರದ ವಿಚಾರಕ್ಕೆ ಭಾಗಿಯಾಗಿಸಲು ಚೀನಾ ಮೊದಲಿಂದಲೂ ಪ್ರಯತ್ನಿಸುತ್ತಲೇ ಇದೆ. ಕಾಶ್ಮೀರದಲ್ಲಿ ಭಾರತ ಸರ್ಕಾರದಿಂದ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿ ಎತ್ತಲು ಪಾಕಿಸ್ತಾನ ಯತ್ನಿಸುತ್ತಿದ್ದರೂ ಅದು ನಿರೀಕ್ಷಿಸಿದಷ್ಟು ಬೆಂಬಲ ಸಿಕ್ಕಿಲ್ಲ.

ಈಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇದರ ಚರ್ಚೆ ನಡೆಯುತ್ತಿರುವುದು ಪಾಕಿಸ್ತಾನಕ್ಕೆ ಒಂದು ರೀತಿಯಲ್ಲಿ ನಿರಾಳ ತಂದಿದೆ. ಕಾಶ್ಮೀರ ವಿಚಾರದಲ್ಲಿ ನ್ಯಾಯದ ಪರವಾಗಿ ನಿಲ್ಲುತ್ತೇವೆ ಎಂದು ಚೀನಾ ದೇಶ ತಮಗೆ ಭರವಸೆ ನೀಡಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಇತ್ತೀಚೆಗೆ ಹೇಳಿದ್ದರು. ಅದರಂತೆ ಈಗ ಚೀನಾ ದೇಶವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರದ ವಿಚಾರ ಚರ್ಚೆಯಾಗುವಂತೆ ನೋಡಿಕೊಳ್ಳುತ್ತಿದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...