HOME » NEWS » National-international » AFTER REMOVED AS PUDUCHERRY LT GOV KIRAN BEDI QUOTES WORDS FROM HER DIARY SNVS

ಲೆ. ಗವರ್ನರ್ ಸ್ಥಾನದಿಂದ ಪದಚ್ಯುತಗೊಂಡ ಬೆನ್ನಲ್ಲೇ ಡೈರಿ ಪದಗಳನ್ನ ಉಲ್ಲೇಖಿಸಿದ ಕಿರಣ್ ಬೇಡಿ

ಕರುಣಾ ಹೃದಯ, ತೀಕ್ಷ್ಣ ಮನಸು ಮತ್ತು ಧೈರ್ಯ ಮನೋಭಾಗ ಇರಬೇಕು ಎಂಬ ಸಂದೇಶವು ನನ್ನ ಡೈರಿಯ ಹೊದಿಕೆಯಲ್ಲಿ ಕಾಣಿಸಿತು ಎಂದು ಪುದುಚೇರಿ ಲೆ. ಗವರ್ನರ್ ಸ್ಥಾನದಿಂದ ಪದಚ್ಯುತಗೊಂಡ ಕಿರಣ್ ಬೇಡಿ ತಿಳಿಸಿದ್ದಾರೆ.

news18
Updated:February 17, 2021, 10:43 AM IST
ಲೆ. ಗವರ್ನರ್ ಸ್ಥಾನದಿಂದ ಪದಚ್ಯುತಗೊಂಡ ಬೆನ್ನಲ್ಲೇ ಡೈರಿ ಪದಗಳನ್ನ ಉಲ್ಲೇಖಿಸಿದ ಕಿರಣ್ ಬೇಡಿ
ಕಿರಣ್ ಬೇಡಿ
  • News18
  • Last Updated: February 17, 2021, 10:43 AM IST
  • Share this:
ಬೆಂಗಳೂರು(ಫೆ. 17): ಹಲವು ರಾಜಕೀಯ ಡ್ರಾಮಗಳಿಗೆ ಸಾಕ್ಷಿಯಾಗುತ್ತಿರುವ ಪುದುಚೇರಿಯಲ್ಲಿ ನಿನ್ನೆ ರಾತ್ರಿ ನಡೆದ ಮತ್ತೊಂದು ದಿಢೀರ್ ಬೆಳವಣಿಗೆಯಲ್ಲಿ ಕಿರಣ್ ಬೇಡಿ ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ಪದಚ್ಯುತಗೊಂಡಿದ್ದಾರೆ. ವಿ. ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಂಡೆದ್ದು ಅನೇಕ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ ಕಿರಣ್ ಬೇಡಿ ಅವರು ಪದವಿ ಕಳೆದುಕೊಂಡಿದ್ದಾರೆ. ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಅಧಿಕಾರ ನಿಲ್ಲಿಸುವಂತೆ ಕಿರಣ್ ಬೇಡಿ ಅವರಿಗೆ ರಾಷ್ಟ್ರಪತಿಗಳು ನಿರ್ದೇಶನ ನೀಡಿದ್ಧಾರೆ ಎಂದು ರಾಷ್ಟ್ರಪತಿ ಭವನದ ವಕ್ತಾರ ಅಜಯ್ ಕುಮಾರ್ ಸಿಂಗ್ ತಿಳಿಸಿದ್ಧಾರೆ. ಈ ದಿಢೀರ್ ಬೆಳವಣಿಗೆಯಾದ ನಂತರ ಇಂದು ಬೆಳಗ್ಗೆ ಕಿರಣ್ ಬೇಡಿ ತಮ್ಮ ಡೈರಿಯ ಹೊದಿಕೆಯಲ್ಲಿರುವ ಪದಗಳನ್ನ ಉಲ್ಲೇಖಿಸಿ ಅಸಮಾಧಾನ ಹೊರಹಾಕಿದ್ದಾರೆ.

‘ಕರುಣಾ ಹೃದಯ, ತೀಕ್ಷ್ಣ ಮನಸು ಮತ್ತು ಧೈರ್ಯ ಮನೋಭಾವ’ ಇರಬೇಕೆಂದು ನನ್ನ ಡೈರಿಯ ಹೊದಿಕೆಯಲ್ಲಿದ್ದ ಸಂದೇಶವನ್ನ ನಾನು ಓದಿದೆ ಎಂದು ಕಿರಣ್ ಬೇಡಿ ಇಂದು ಪ್ರತಿಕ್ರಿಯೆ ನೀಡಿದ್ದಾರೆ.
ರಾಜಕಾರಣಕ್ಕೆ ಬರುವ ಮೊದಲು ಐಪಿಎಸ್ ಅಧಿಕಾರಿಯಾಗಿದ್ದ ಕಿರಣ್ ಬೇಡಿ, ಪುದುಚೇರಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಆಗಿ ಸಿಎಂ ಜೊತೆ ಹಲವು ವಿಚಾರಗಳಲ್ಲಿ ಸಂಘರ್ಷದಲ್ಲಿದ್ದರು. ಹಲವು ಕಾಂಗ್ರೆಸ್ ಶಾಸಕರು ಸರ್ಕಾರದ ವಿರುದ್ಧ ಬಂಡೆದ್ದು ರಾಜೀನಾಮೆ ನೀಡಿದ್ದರು. ನಿನ್ನೆ ಕೂಡ ಒಬ್ಬ ಶಾಸಕರು ರಾಜೀನಾಮೆ ನೀಡಿದ ಪರಿಣಾಮ ಮುಖ್ಯಮಂತ್ರಿ ನಾರಾಯಣಸ್ವಾಮಿ ಸರ್ಕಾರದ ಬಹುಮತ ಕುಸಿಯಿತು. ಈ ಬೆಳವಣಿಗೆಯಾದ ಹೊತ್ತಲ್ಲೇ ಕಿರಣ್ ಬೇಡಿ ಅವರನ್ನ ಕೆಳಗಿಳಿಸಿದ್ದು ಅಚ್ಚರಿ ಮೂಡಿಸಿದೆ. ಕಿರಣ್ ಬೇಡಿ ನಿನ್ನೆ ರಾತ್ರಿಯವರೆಗೂ ಕೋವಿಡ್ ಲಸಿಕೆ ಕಾರ್ಯಕ್ರಮದ ಪರಿಶೀಲನೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಲಸಿಕೆ ಪಡೆಯುವ ಫ್ರಂಟ್​ಲೈನ್ ವರ್ಕರ್ಸ್ ವಿಭಾಗಕ್ಕೆ ಪೊಲೀಸರು ಮತ್ತು ಸ್ಯಾನಿಟೇಶನ್ ಕಾರ್ಮಿಕರನ್ನೂ ಸೇರಿಸಲು ಅವರು ನಿರ್ದೇಶನ ಹೊರಡಿಸುತ್ತಿದ್ದರೆನ್ನಲಾಗಿದೆ.ಇದನ್ನೂ ಓದಿ: ಟೂಲ್​ಕಿಟ್​ ಪ್ರಕರಣ; ಆರೋಪಿ ಶಾಂತನೂಗೆ ಜಾಮೀನು, ವಕೀಲೆ ನಿಕಿತಾ ಜಾಕೋಬ್​ಗೆ ಮುಂದುವರೆದ ಸಂಕಷ್ಟ!

ಪುದುಚೇರಿಯಲ್ಲಿ ಹೊಸ ಲೆ. ಗವರ್ನರ್ ನೇಮಕ ಆಗುವವರೆಗೂ ತೆಲಂಗಾಣದ ರಾಜ್ಯಪಾಲೆ ತಮಿಳ್​ಸಾಯಿ ಸೌಂದರರಾಜನ್ ಅವರಿಗೆ ಪುದುಚೇರಿಯ ಹೆಚ್ಚುವರಿ ಜವಾಬ್ದಾರಿ ನೀಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆದೇಶ ಹೊರಡಿಸಿದ್ದಾರೆ.ದೆಹಲಿಯಲ್ಲಿ ಐಪಿಎಸ್ ಅಧಿಕಾರಿಯಾಗಿ ನಿವೃತ್ತರಾದ ಬಳಿಕ ಕಿರಣ್ ಬೇಡಿ ಅವರು ಯುಪಿಎ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ನಂತರ ಅವರು ಬಿಜೆಪಿ ಸೇರಿಕೊಂಡರು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೇಡಿ ಅವರನ್ನ ಮಂತ್ರಿ ಮಾಡುವ ನಿರೀಕ್ಷೆ ಇತ್ತಾದರೂ ಅಚ್ಚರಿ ಎಂಬಂತೆ ಅವರನ್ನ ರಾಜ್ಯಪಾಲೆಯಾಗಿ ಕಳುಹಿಸಲಾಯಿತು. ಇದೀಗ ದಿಢೀರ್ ಆಗಿ ಅವರನ್ನ ಆ ಸ್ಥಾನದಿಂದಲೂ ಕೆಳಗಿಳಿಸಲಾಗಿದೆ. ಇದರ ಹಿಂದಿನ ಮರ್ಮ ಏನು ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ.
Published by: Vijayasarthy SN
First published: February 17, 2021, 10:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories