Punjab​ ಗೆಲುವಿನ ಬೆನ್ನಲ್ಲೇ ದಕ್ಷಿಣ ಭಾರತದತ್ತ ಮುಖ ಮಾಡಿದ AAP; ಪಾದಯಾತ್ರೆಗೆ ಸಜ್ಜು

ದಕ್ಷಿಣ ರಾಜ್ಯಗಳಲ್ಲಿ ಹಂತ ಹಂತವಾಗಿ ಪಾದಯಾತ್ರೆ ನಡೆಸಲು ಕೂಡ ಪಕ್ಷ ನಿರ್ಧರಿಸಿದೆ. ಏ 14 ರಂದು ಡಾ ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನದಂದು ತೆಲಂಗಾಣದಲ್ಲಿ ಮೊದಲ ಪಾದಯಾತ್ರೆ ಪ್ರಾರಂಭವಾಗಲಿದೆ.

ಸಿಎಂ ಅರವಿಂದ ಕೇಜ್ರಿವಾಲ್​

ಸಿಎಂ ಅರವಿಂದ ಕೇಜ್ರಿವಾಲ್​

  • Share this:
    ನವದೆಹಲಿ (ಮಾ. 12): ದೆಹಲಿಯಲ್ಲಿ ಎರಡನೇ ಬಾರಿ ಗದ್ದುಗೆ ಏರಿ ಯಶಸ್ವಿ ಆಡಳಿತ ನಡೆಸುತ್ತಿರುವ ಅರವಿಂದ್​ ಕೇಜ್ರಿವಾಲ್ (Arvind Kejriwal)​ ನೇತೃತ್ವದ ಎಎಪಿ (AAP) ವರ್ಚಸ್ಸು ಇದೀಗ ಮತ್ತಷ್ಟು ಹೆಚ್ಚಿದೆ. ಪಂಜಾಬ್​ ಚುನಾವಣೆಯಲ್ಲಿ (Punjab) ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿರುವ ಎಎಪಿ ಇದೀಗ ದಕ್ಷಿಣ ಭಾರತದತ್ತ (South State) ಮುಖ ಮಾಡಲು ಸಜ್ಜಾಗಿದೆ. ರಾಷ್ಟ್ರೀ ಪಕ್ಷಗ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಎಎಪಿ ಪಕ್ಷದ ಬಗ್ಗೆ ಅನೇಕರು ಆಸಕ್ತಿವಹಿಸಿದ್ದಾರೆ. ಈ ಹಿನ್ನಲೆ ಪಕ್ಷ ತನ್ನ ಸದಸ್ಯತ್ವ ನೋಂದಣಿಗೆ ಮುಂದಾಗಿದೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಈ ಸದಸ್ಯತ್ವ ನೋಂದಣಿಗೆ ಮುಂದಾಗಿದೆ.

    ರಾಷ್ಟ್ರಮಟ್ಟದಲ್ಲಿ ಹೆಚ್ಚಿದ ವರ್ಚಸ್ಸು

    ಎಎಪಿ ಯಶಸ್ಸು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ ಹಿನ್ನಲೆ ಪಕ್ಷ ಇದೀಗ ತೆಲಂಗಾಣ, ಆಂಧ್ರ ಪ್ರದೇಶ, ತಮಿಳು ನಾಡು, ಕೇರಳ, ಪುದುಚೇರಿ ಹಾಗೂ ಅಂಡಮಾನ್​ ಮತ್ತು ನಿಕೋಬರ್, ಲಕ್ಷದ್ವೀಪದಲ್ಲಿ ಸದಸ್ಯತ್ವ ನೋಂದಣಿಗೆ ಮುಂದಾಗಿದೆ ಎಂದು ಪಕ್ಷದ ಹಿರಿಯ ನಾಯಕ ಸೋಮಾನಾಥ್​ ಭಾರ್ತಿ ತಿಳಿಸಿದ್ದಾರೆ.

    ಜನರ ಮನಸ್ಥಿತಿ ಅರಿತು ನಿರ್ಧಾರ

    ಈ ಸಂಬಂಧ ಮಾತನಾಡಿದ ಅವರು, ಪಂಜಾಬ್‌ನಲ್ಲಿ ಪಕ್ಷದ ಭರ್ಜರಿ ಗೆಲುವಿನ ನಂತರ ದಕ್ಷಿಣ ಭಾರತದ ಜನರು ನಮ್ಮ ಪಕ್ಷದ ರಾಜಕೀಯದ ಬಗ್ಗೆ ಆಸಕ್ತಿ ತೋರಿಸಲಾರಂಭಿಸಿದ್ದಾರೆ. ದಕ್ಷಿಣ ಭಾರತದಿಂದ ನಮಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನರ ಮನಸ್ಥಿತಿಯನ್ನು ಅರಿತು. ಜೊತೆಗೆ ತಮ್ಮ ಪಕ್ಷಕ್ಕೆ ಅವರ ಪ್ರತಿಕ್ರಿಯೆಗಳನ್ನು ಗಣನೆಗೆ ತೆಗೆದುಕೊಂಡಿದ್ದೇವೆ. ಇದೇ ಕಾರಣಕ್ಕೆ ನಾವು ಅಲ್ಲಿ ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ ಎಂದರು.

    ಎಎಪಿ ಸೇರಲು ಮುಕ್ತ ಆಹ್ವಾನ

    ಈ ಪಕ್ಷದ ಸದಸ್ಯತ್ವ ನೋಂದಣಿಯನ್ನು ಪಕ್ಷದ ಸ್ಥಳೀಯ ತಂಡಗಳು ನಿರ್ವಹಿಸಲಿದೆ ಎಂದ ಅವರು, ದೇಶದ ರಾಜಕೀಯದಲ್ಲಿ ಬದಲಾವಣೆ ತರಬೇಕು ಎಂದು ಭಾವಿಸುವವರಿಗೆ ಹಾಗೂ ಇಂತಹ ಕ್ರಾಂತಿಯ ಭಾಗವಾಗಲು ಬಯಸುವವರಿಗೆ ಎಎಪಿ ಸೇರುವಂತೆ ನಾನು ಕರೆ ನೀಡುತ್ತೇನೆ ಎಂದು ತಿಳಿಸಿದರು.

    ಇದನ್ನು ಓದಿ: ಯಾವುದೇ ಮೈತ್ರಿ ಇಲ್ಲ; ಪಕ್ಷ ಉಳಿಸಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ; HD Devegowda

    ಪಾದಯಾತ್ರೆಗೆ ಸಜ್ಜಾದ ಪಕ್ಷ 

    ಇನ್ನು ದಕ್ಷಿಣ ರಾಜ್ಯಗಳಲ್ಲಿ ಹಂತ ಹಂತವಾಗಿ ಪಾದಯಾತ್ರೆ ನಡೆಸಲು ಕೂಡ ಪಕ್ಷ ನಿರ್ಧರಿಸಿದೆ. ಏ 14 ರಂದು ಡಾ ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನದಂದು ತೆಲಂಗಾಣದಲ್ಲಿ ನಮ್ಮ ಮೊದಲ ಪಾದಯಾತ್ರೆ ಪ್ರಾರಂಭವಾಗಲಿದೆ. ಕ್ಷೇತ್ರದ ಪ್ರತಿಯೊಂದು ವಿಧಾನಸಭಾ ಕ್ಷೇತ್ರವನ್ನು ನಾವು ವ್ಯಾಪ್ತಿಯಲ್ಲೂ ಇದು ನಡೆಯಲಿದೆ. ಈ ಪಾದಯಾತ್ರೆಗಳ ಮೂಲಕ, ನಾವು ಕೇಜ್ರಿವಾಲ್ ಅವರ ರಾಜಕೀಯ ಮತ್ತು ಬಾಬಾಸಾಹೇಬ್ ಮತ್ತು ಭಗತ್ ಸಿಂಗ್ ಅವರ ಆದರ್ಶಗಳನ್ನು ಪ್ರದೇಶದ ಪ್ರತಿಯೊಬ್ಬ ನಿವಾಸಿಗಳಿಗೆ ಮುಟ್ಟಿಸುವ ಯತ್ನ ನಡೆಸುತ್ತೇವೆ. ದೆಹಲಿಯಲ್ಲಿ ಎಎಪಿ ಸರ್ಕಾರ ಜನರ ಜೀವನ ಸುಧಾರಣೆಗೆ ಮಾಡಿದ ಕಾರ್ಯಗಳನ್ನು ಅವರ ಮುಂದೆ ಇಡುತ್ತೇವೆ.

    ಇದನ್ನು ಓದಿ: ಮಾರ್ಚ್‌ 16ಕ್ಕೆ ಪಂಜಾಬ್‌ ಸಿಎಂ ಪದಗ್ರಹಣ, ಭಗತ್ ಸಿಂಗ್ ಊರಿನಲ್ಲಿ ಪ್ರಮಾಣವಚನಕ್ಕೆ ಸಿದ್ಧತೆ

    ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಎಎಪಿ ಈಗಾಗಲೇ ತಮ್ಮ ಕಚೇರಿ ತೆರೆದಿದೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಳೆದ ವಿಧಾನಸಭೆಯಲ್ಲಿ ಎಎಪಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತು. ಈ ಮೂಲಕ ದಕ್ಷಿಣದಲ್ಲಿ ತಮ್ಮ ರಾಜಕೀಯ ಶುರು ಮಾಡಿತು. ಆದರೆ, ಎಎಪಿ ಖಾತೆಗಳನ್ನು ತೆರೆಯುವಲ್ಲಿ ಯಶಸ್ವಿಯಾಗಲಿಲ್ಲ.

    ಪಂಜಾಬ್​ನಲ್ಲಿ ನೂತನ ಸಿಎಂ ಪದಗ್ರಹಣಕ್ಕೆ ಸಮಯ ನಿಗದಿ

    ಪಂಜಾಬ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಅವರು ಇದೇ ಮಾರ್ಚ್ 16ರಂದು ಮಧ್ಯಾಹ್ನ 12.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್ ಪಂಜಾಬ್ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ನೂತನ ಆಮ್ ಆದ್ಮಿ ಪಕ್ಷದ ಸರ್ಕಾರ ರಚನೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ
    Published by:Seema R
    First published: