ಪುಲ್ವಾಮ ದಾಳಿಗೆ ಪ್ರತೀಕಾರ : ಪಾಕಿಸ್ತಾನಕ್ಕೆ ಚಹಾ ಸಾಗಣೆ ಸ್ಥಗಿತ...!

ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಕ್ರಮಕ್ಕೆ ನಾವು ಬೆಂಬಲವಾಗಿ ನಿಲ್ಲಲು ಸಿದ್ಧವಿದ್ದು, ಭಾರತ ಸರ್ಕಾರ ದ್ವಿಪಕ್ಷೀಯ ವಾಣಿಜ್ಯ ವ್ಯವಹಾರವನ್ನು ಬಂದ್ ಮಾಡಿದರೆ ಐಟಿಇಎ ಅದಕ್ಕೆ ಸಂಪೂರ್ಣ ಬೆಂಬಲ ನೀಡಲು ಸಿದ್ಧವಿದೆ. 

G Hareeshkumar | news18
Updated:February 16, 2019, 9:39 PM IST
ಪುಲ್ವಾಮ ದಾಳಿಗೆ ಪ್ರತೀಕಾರ : ಪಾಕಿಸ್ತಾನಕ್ಕೆ ಚಹಾ ಸಾಗಣೆ ಸ್ಥಗಿತ...!
ಸಾಂದರ್ಭಿಕ ಚಿತ್ರ
  • News18
  • Last Updated: February 16, 2019, 9:39 PM IST
  • Share this:
ಶ್ರೀನಗರ (ಫೆ. 16) : ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ಮೇಲೆ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂಬ ಆಗ್ರಹ ಹೆಚ್ಚಾಗುತ್ತಿದ್ದಂತೆ ಭಾರತೀಯ ಚಹಾ ಮಾರಾಟಗಾರರ ಸಂಘಟನೆ (ಐಟಿಇಎ) ಪಾಕಿಸ್ತಾನಕ್ಕೆ ಚಹಾ ಸಾಗಣೆಯನ್ನು ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಐಟಿಇಎ ಅಧ್ಯಕ್ಷ ಅಂಶುಮಾನ್ ಕನೋರಿಯಾ ಭಾರತದ ರಫ್ತುದಾರರ ಸಂಸ್ಥೆ, ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಕ್ರಮಕ್ಕೆ ನಾವು ಬೆಂಬಲವಾಗಿ ನಿಲ್ಲಲು ಸಿದ್ಧವಿದ್ದು, ಭಾರತ ಸರ್ಕಾರ ದ್ವಿಪಕ್ಷೀಯ ವಾಣಿಜ್ಯ ವ್ಯವಹಾರವನ್ನು ಬಂದ್ ಮಾಡಿದರೆ ಐಟಿಇಎ ಅದಕ್ಕೆ ಸಂಪೂರ್ಣ ಬೆಂಬಲವನ್ನು ನೀಡಲು ಸಿದ್ಧವಿದೆ. ಭಾರತದ ಭದ್ರತೆ, ದೇಶದ ಸೈನಿಕರ ರಕ್ಷಣೆಯೇ ನಮ್ಮ ಮೊದಲ ಆದ್ಯತೆ.  ವ್ಯಾಪಾರ ವಹಿವಾಟು ನಂತರದ್ದು ಎಂದು ಅಂಶುಮಾನ್ ಹೇಳಿದ್ದಾರೆ.ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೊರ ಪ್ರದೇಶದಲ್ಲಿ ನಡೆದ ದಾಳಿಯ ಬಗ್ಗೆ ಎರಡು ದಿನ ಮೊದಲೇ ಸೂಚನೆ ಸಿಕ್ಕಿತ್ತು ಎನ್ನುವ ವಿಚಾರ ಈಗ ಬಹಿರಂಗಗೊಂಡಿದೆ. ಆಘಾತಕಾರಿ ವಿಚಾರ ಏನೆಂದರೆ, ಒಂದು ವರ್ಷದ ಮೊದಲೇ ಈ ದಾಳಿಗೆ ಸಿದ್ಧತೆ ಆರಂಭಗೊಂಡಿತ್ತಂತೆ. ಈ ದಾಳಿ ನಡೆಯಲು ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣ ಎನ್ನುವ ಮಾತುಗಳು ಕೇಳಿ ಬಂದಿದ್ದವು.

ಇದನ್ನೂ ಓದಿ :  ಪಾಕಿಸ್ತಾನಕ್ಕೆ ನೀಡಿದ್ದ ಮೋಸ್ಟ್ ಫೇವರ್ಡ್ ನೇಷನ್ ಸ್ಥಾನಮಾನ ಹಿಂಪಡೆದ ಭಾರತ ಸರಕಾರ

ಈ ರೀತಿ ದಾಳಿ ನಡೆಯಬಹುದು ಎಂದು ಎರಡು ದಿನಗಳ ಹಿಂದೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತಂತೆ. ಈ ಬಗ್ಗೆ ಪೊಲೀಸರು ಎಲ್ಲಾ ಕಡೆಗಳಲ್ಲಿ  ಸುತ್ತೋಲೆ ರವಾನೆ ಮಾಡಿದ್ದರು. ದಾಳಿಯ ಸೂಚನೆ ನೀಡುವಂಥ ವಿಡಿಯೋ ಒಂದು ಟ್ವಿಟ್ಟರ್​ನಲ್ಲಿ ಇತ್ತೀಚೆಗೆ ಹರಿದಾಡಿತ್ತು. ಅದರಲ್ಲಿ ಉಗ್ರರು ನಾವು ಹೇಗೆ ದಾಳಿ ನಡೆಸುತ್ತೇವೆ ಎನ್ನುವ ಬಗ್ಗೆ ಹೇಳಿಕೊಂಡಿದ್ದರು. ವಿಡಿಯೋದಲ್ಲಿ ಹೇಳಿದ ಮಾದರಿಯಲ್ಲೇ ನಿನ್ನೆ ದಾಳಿ ನಡೆದಿದೆ.

ಈ ಟ್ವೀಟ್ಟರ್​ ಖಾತೆಯನ್ನು ಎಲ್ಲರೂ ವೀಕ್ಷಣೆ ಮಾಡಲು ಸಾಧ್ಯವಿಲ್ಲ. ಇದರ ಜೊತೆಗೆ, ಯಾವ ಪ್ರದೇಶದಿಂದ ಈ ಖಾತೆಯನ್ನು ಆಪರೇಟ್​ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ಕಷ್ಟ ಎನ್ನಲಾಗಿದೆ.

ಚಹಾ ಮಂಡಳಿ ಅಂಕಿ ಅಂಶಗಳ ಪ್ರಕಾರ 2018ರಲ್ಲಿ ಪಾಕಿಸ್ತಾನಕ್ಕೆ ಒಟ್ಟು 15.83 ಮಿಲಿಯನ್ ಕೆ ಜಿ. ಚಹಾ ರಫ್ತಾಗಿತ್ತಿದ್ದು, 154.71 ಕೋಟಿ ರೂಪಾಯಿ ವಹಿವಾಟು ನಡೆಸಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ :  ಪುಲ್ವಾಮಾದಲ್ಲಿ ಹೇಗಿದೆ ವಾಸ್ತವ ಸ್ಥಿತಿ? ಉಗ್ರ ದಾಳಿಯಾಗುವ ಕೆಲ ಕ್ಷಣಗಳ ಮೊದಲು ಸ್ಥಳದಲ್ಲಿದ್ದ ಶಿವಮೊಗ್ಗದ ಯೋಧ ಹೇಳುವುದೇನು?

ಮೊನ್ನ 78 ವಾಹನಗಳಲ್ಲಿ 2547 ಸಿಆರ್​ಪಿಎಫ್ ಬೆಂಗಾವಲು ವಾಹನಗಳಲ್ಲಿ ಜಮ್ಮುವಿನಿಂದ ಶ್ರೀನಗರಕ್ಕೆ ಬರುತ್ತಿದ್ದರು ಎನ್ನಲಾಗಿದೆ. ಈ ದಾಳಿಯಲ್ಲಿ ಒಟ್ಟು 45 ಭಾರತೀಯ ಯೋಧರು ಹುತಾತ್ಮರಾಗಿದ್ದರು.

First published: February 16, 2019, 4:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading