• Home
  • »
  • News
  • »
  • national-international
  • »
  • Man Suicide: ಹದಗೆಟ್ಟ ರಸ್ತೆಯಲ್ಲಿ ಜೀವಬಿಟ್ಟ ಗರ್ಭಿಣಿ ಪತ್ನಿ, ಆಘಾತ ಸಹಿಸಲಾಗದೇ ನೇಣಿಗೇರಿದ ಪತಿ!

Man Suicide: ಹದಗೆಟ್ಟ ರಸ್ತೆಯಲ್ಲಿ ಜೀವಬಿಟ್ಟ ಗರ್ಭಿಣಿ ಪತ್ನಿ, ಆಘಾತ ಸಹಿಸಲಾಗದೇ ನೇಣಿಗೇರಿದ ಪತಿ!

ಮೃತ ರಮೇಶ್ ಮತ್ತು ವಿದ್ಯಾ ದಂಪತಿ

ಮೃತ ರಮೇಶ್ ಮತ್ತು ವಿದ್ಯಾ ದಂಪತಿ

ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಗರ್ಭಿಣಿ ಪತ್ನಿ ಹೋಗುವಾಗ ಹದಗೆಟ್ಟ ರಸ್ತೆಯಲ್ಲಿದ್ದ ಸ್ಪೀಡ್ ಬ್ರೇಕರ್‌ಗೆ ವಾಹನ ಬಡಿದು, ಗರ್ಭಿಣಿ ಕೆಳಕ್ಕೆ ಬಿದ್ದಿದ್ದಾಳೆ. ಈ ವೇಳೆ ತಲೆಯ ಮೇಲೆ ಟ್ರ್ಯಾಕ್ಟರ್ ಟ್ರಾಲಿ ಹರಿದು ಅಲ್ಲಿಯೇ ಸಾವನ್ನಪ್ಪಿದ್ದಾಳೆ. ಈ ಆಘಾತದಿಂದ ಹೊರ ಬರಲಾಗದೇ ಪತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Maharashtra, India
  • Share this:

    ಮಹಾರಾಷ್ಟ್ರ: ಗರ್ಭಿಣಿ ಪತ್ನಿಯ (Pregnant Wife) ಸಾವಿನಿಂದ (Death) ತೀವ್ರವಾಗಿ ನೊಂದಿದ್ದ ಪತಿ ಆತ್ಮಹತ್ಯೆ (Husband Suicide) ಮಾಡಿಕೊಂಡ ಘಟನೆ ನಡೆದಿದೆ. ಪುಣೆ (Pune) ಜಿಲ್ಲೆಯ ನಾರಾಯಣ ಗ್ರಾಮದಲ್ಲಿ ಪತಿಯೊಬ್ಬ ಗರ್ಭಿಣಿ ಪತ್ನಿ ಜೊತೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ಉಂಟಾದ ಅಪಘಾತ ಪತ್ನಿಯ ಜೀವವನ್ನೇ ತೆಗೆದಿದೆ. ಇದ್ರಿಂದ ಸಾಕಷ್ಟು ನೊಂದಿದ್ದ ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹದಗೆಟ್ಟ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಹಾಕಲಾಗಿತ್ತು. ಈ ವೇಳೆ ಅಪಘಾತ ಉಂಟಾಗಿ ಅನಾಹುತ ನಡೆದಿದ್ದು, ಜಗತ್ತು ನೋಡದ ಕಂದ ಹಾಗೂ ಹೆಂಡತಿ ಜೀವ ಹೋಗಿತ್ತು. ಈ ನೋವಿನಿಂದ ಹೊರ ಬರಲಾರದೇ ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.


    ಗರ್ಭಿಣಿ ಪತ್ನಿ ಅಪಘಾತದಲ್ಲಿ ಸಾವು, ಮನನೊಂದು ಪತಿ ಆತ್ಮಹತ್ಯೆ


    ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಗರ್ಭಿಣಿ ಪತ್ನಿ ಹೋಗುತ್ತಿದ್ದರು. ಈ ವೇಳೆ ಅವರು ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಈ ಮಧ್ಯೆ ಹದಗೆಟ್ಟ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಹಾಕಲಾಗಿತ್ತು. ವಾಹನ ಚಲಿಸಿದಾಗ ಸ್ಪೀಡ್ ಬ್ರೇಕರ್ ಬಂದಾಗ ಗರ್ಭಿಣಿ ಪತ್ನಿ ವಿದ್ಯಾ ಕೆಳಕ್ಕೆ ಬಿದ್ದಿದ್ದಾಳೆ.


    ಈ ವೇಳೆ ಅವಳ ತಲೆಯ ಮೇಲೆ ಟ್ರ್ಯಾಕ್ಟರ್ ಟ್ರಾಲಿ ಹರಿದು, ಅಲ್ಲಿಯೇ ಸಾವನ್ನಪ್ಪಿದ್ದಳು. ಈ ಆಘಾತದಿಂದ ಹೊರ ಬರಲಾಗದೇ ಪತಿ ರಮೇಶ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಹದಗೆಟ್ಟ ರಸ್ತೆ ಮತ್ತು ಸ್ಪೀಡ್ ಬ್ರೇಕರ್ ಎರಡು ಜೀವಗಳನ್ನು ಬಲಿ ಪಡೆದಿದೆ. ಜೊತೆಗೆ ಬಾಳಿ ಬದುಕಬೇಕಿದ್ದ ಕುಟುಂಬವೊಂದು ಇಹಲೋಕ ತೊರೆದಿದೆ.


    ಆಸ್ಪತ್ರೆಗೆ ತಪಾಸಣೆಗೆ ಹೋಗ್ತಿದ್ದ ವೇಳೆ ದುರಂತ


    ಮಹಾರಾಷ್ಟ್ರದ ಪುಣೆ ಜಿಲ್ಲೆಯ ನಾರಾಯಣ ಗ್ರಾಮದಲ್ಲಿ ಕಳೆದ ವಾರ ಈ ಘಟನೆ ನಡೆದಿದೆ. ಗರ್ಭಿಣಿ ವಿದ್ಯಾ ಮತ್ತು ಆಕೆಯ ಪತಿ ರಮೇಶ್ ಆಸ್ಪತ್ರೆಯೊಂದಕ್ಕೆ ತಪಾಸಣೆಗೆ ಅಂತಾ ಹೋಗಿದ್ದರು. ಈ ವೇಳೆ ಹದಗೆಟ್ಟ ರಸ್ತೆಯಲ್ಲಿ ಹಾಕಲಾಗಿದ್ದ ಸ್ಪೀಡ್ ಬ್ರೇಕರ್ ಬಂದ ಕೂಡಲೇ ಗರ್ಭಿಣಿ ಪತ್ನಿ ವಿದ್ಯಾ ಬೈಕ್ ಮೇಲಿಂದ ರಸ್ತೆ ಬದಿ ಬಿದ್ದಿದ್ದಾಳೆ.


    ಈ ವೇಳೆ ಎದುರಿನಿಂದ ಬರುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಆಕೆಯ ತಲೆಯ ಮೇಲೆ ಹರಿದಿದೆ. ಸ್ಥಳದಲ್ಲೇ ಆಕೆ ಮೃತಪಟ್ಟಿದ್ದಳು. ಪತಿ ರಮೇಶ್ ಕಣ್ಣೆದುರೇ ಪತ್ನಿಯ ಜೀವ ಹೋಗಿತ್ತು. ಅಲ್ಲದೇ ಗರ್ಭಿಣಿ ಹೆಂಡತಿಯ ಆ ನೋವಿನ ಸಾವನ್ನು ತನ್ನ ಕಣ್ಣಾರೆ ಕಂಡಿದ್ದ ಪತಿ ತೀವ್ರ ಆಘಾತಕ್ಕೆ ಒಳಗಾಗಿದ್ದನು. ನಂತರ ಅವನು ಕೆಲವು ದಿನಗಳವರೆಗೆ ಆ ನೋವಿನಿಂದ ಹೊರ ಬರಲಿಲ್ಲ.


    ಪತ್ನಿಯ ಸಾವಿನ ಆಘಾತದಿಂದ ಹೊರಬರಲಾಗದೇ ಪತಿ ಆತ್ಮಹತ್ಯೆ


    ಪತ್ನಿ ವಿದ್ಯಾಳ ಸಾವಿನ ಆಘಾತದಿಂದ ಪತಿ ಚೇತರಿಸಿಕೊಳ್ಳಲಾಗದೆ ಕೆಲವು ದಿನ ನೋವಿನಲ್ಲೇ ದಿನಗಳೆದ ಪತಿ ರಮೇಶ್ ಕೊನೆಗೆ ಈ ಆಘಾತ ಸಹಿಸಲಾಗದೆ ವಿಷ ಸೇವಿಸಿ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜುನ್ನಾರ ತಾಲೂಕಿನ ಧೋಂಡಕರವಾಡಿಯಲ್ಲಿ ಪತಿ ರಮೆಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


    ಆತ್ಮಹತ್ಯೆ ಮಾಡಿಕೊಂಡ ಯುವಕನ ಹೆಸರು ರಮೇಶ್ ನವನಾಥ್ ಕಂಸ್ಕರ್. ವಯಸ್ಸು 29 ವರ್ಷ ವಯಸ್ಸು. ಧೋಂಡಕರವಾಡಿ ಜಿಲ್ಲೆ, ನಿಮ್ದಾರಿ ಜಿಲ್ಲೆ, ಜುನ್ನಾರ್ ನಿವಾಸಿ ಆಗಿದ್ದನು. ಕಳೆದ ಎಂಟು ತಿಂಗಳ ಹಿಂದೆ ವಿದ್ಯಾ ಮತ್ತು ರಮೇಶ್ ಮದುವೆ ಆಗಿದ್ದರು. ವಿದ್ಯಾ ಸಾಯುವ ವೇಳೆಗೆ ನಾಲ್ಕು ತಿಂಗಳ ಗರ್ಭಿಣಿ.


    ಇದನ್ನೂ ಓದಿ: ಶಸ್ತ್ರಚಿಕಿತ್ಸೆ ವೇಳೆ ಕಿಡ್ನಿ ಕಳ್ಳತನ, ಕದ್ದ ವೈದ್ಯನ ಮೂತ್ರಪಿಂಡವನ್ನೇ ಕಸಿ ಮಾಡುವಂತೆ ಮಹಿಳೆಯ ಹಠ


    ಆ.14ರಂದು ರಮೇಶ್ ಪತ್ನಿ ಮತ್ತು ಅತ್ತೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದರು. ದಾರಿ ಮಧ್ಯೆ ಸ್ಪೀಡ್ ಬ್ರೇಕರ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಿಂದ ವಿದ್ಯಾ ಕೆಳಗೆ ಬಿದ್ದು, ಟ್ರಾಲಿಯ ಚಕ್ರ ತಲೆಯ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಘಟನೆಯಿಂದ ರಮೇಶ್ ತೀವ್ರ ಖಿನ್ನತೆಗೆ ಒಳಗಾಗಿದ್ದು, ಕಳೆದ ಎರಡು ದಿನಗಳಿಂದ ಊಟ, ನೀರು ಬಿಟ್ಟಿದ್ದ ಅವರು ಬುಧವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    Published by:renukadariyannavar
    First published: