HOME » NEWS » National-international » AFTER PM MODIS SWADESHI PITCH PARAMILITARY CANTEENS TO SELL ONLY INDIGENOUS PRODUCTS FROM JUNE 1 RH

ಪ್ರಧಾನಿ ಮೋದಿ ಸ್ವದೇಶಿ ಮಂತ್ರದ ಬಳಿಕ ಅರೆಸೈನಿಕ ಪಡೆಗಳ ಎಲ್ಲ ಕ್ಯಾಂಟೀನ್​ಗಳಲ್ಲಿ ಜೂ.1ರಿಂದ ಸ್ಥಳೀಯ ಉತ್ಪನ್ನ ಮಾತ್ರ ಮಾರಾಟ

PM Modi: ಪ್ರಧಾನಿ ಮೋದಿ ಅವರು ಮಂಗಳವಾರ ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡುವಾಗ ಸ್ವಾವಲಂಬಿ ಹಾಗೂ ದೇಶದಲ್ಲಿ ಉತ್ಪಾದನೆಯಾಗುವ ಸ್ಥಳೀಯ ಉತ್ಪನ್ನಗಳನ್ನು ಬಳಸುವವಂತೆ ಮನವಿ ಮಾಡಿದ್ದರು. ಇದರಿಂದ ಭಾರತ ಭವಿಷ್ಯದಲ್ಲಿ ಇಡೀ ಜಗತ್ತನ್ನು ಮುನ್ನಡೆಸಲಿದ್ದಾರೆ ಎಂದು ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:May 13, 2020, 2:54 PM IST
ಪ್ರಧಾನಿ ಮೋದಿ ಸ್ವದೇಶಿ ಮಂತ್ರದ ಬಳಿಕ ಅರೆಸೈನಿಕ ಪಡೆಗಳ ಎಲ್ಲ ಕ್ಯಾಂಟೀನ್​ಗಳಲ್ಲಿ ಜೂ.1ರಿಂದ ಸ್ಥಳೀಯ ಉತ್ಪನ್ನ ಮಾತ್ರ ಮಾರಾಟ
ಸಿಎಪಿಎಫ್​ ಕ್ಯಾಂಟೀನ್.
  • Share this:
ನವದೆಹಲಿ: ಸಿಆರ್​ಪಿಎಫ್​ ಮತ್ತು ಬಿಎಸ್​ಎಫ್​ ನಂತಹ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್​)ಯ ಎಲ್ಲ ಕ್ಯಾಂಟೀನ್​ಗಳಲ್ಲೂ ಜೂನ್​ 1ರಿಂದ ಸ್ವದೇಶಿ ವಸ್ತುಗಳನ್ನಷ್ಟೇ ಮಾರಾಟ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಘೋಷಿಸಿದ್ದಾರೆ.

ಈ ಸಂಬಂಧ ಹಿಂದಿಯಲ್ಲಿ ಸರಣಿ ಟ್ವೀಟ್​ಗಳನ್ನು ಮಾಡಿರುವ ಅಮಿತ್ ಶಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳೀಯ ಉತ್ಪಾದನೆ ಮತ್ತು ಸ್ವಾವಲಂಬಿ ಬಗ್ಗೆ ಮನವಿ ಮಾಡಿದ ಬಳಿಕ ಕೇಂದ್ರ ಗೃಹ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಉತ್ಪಾದಿಸಿದ ಉತ್ಪನ್ನಗಳನ್ನು ಗರಿಷ್ಠ ಮಟ್ಟದಲ್ಲಿ ಖರೀದಿಸುವಂತೆ ಹಾಗೂ ಪ್ರೋತ್ಸಾಹಿಸುವಂತೆ ಅಮಿತ್ ಶಾ ಅವರು ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.

ಗೃಹ ಸಚಿವಾಲಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್​) ಎಲ್ಲ ಕ್ಯಾಂಟೀನ್​ಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಮಾರುವ ನಿರ್ಧಾರ ಮಾಡಿದೆ. ದೇಶದ ಎಲ್ಲ ಸಿಎಪಿಎಫ್ ಕ್ಯಾಂಟೀನ್​ಗಳಲ್ಲೂ ಈ ನಿಯಮ ಜೂನ್​ 1ರಿಂದ ಅನ್ವಯವಾಗಲಿದೆ. ಇದರಿಂದ 10 ಲಕ್ಷ ಸಿಎಪಿಎಫ್​ ಸಿಬ್ಬಂದಿಯಿಂದ 50 ಲಕ್ಷ ಕುಟುಂಬ ಸದಸ್ಯರು ಸ್ವದೇಶಿ ಉತ್ಪನ್ನಗಳನ್ನು ಬಳಸುವಂತಾಗಲಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.

ಸಿಎಪಿಎಫ್​ನ ಸಿಆರ್​ಪಿಎಫ್​, ಬಿಎಸ್​ಎಫ್​, ಸಿಐಎಸ್​ಎಫ್​, ಐಟಿಬಿಪಿ, ಎಸ್​ಎಸ್​ಬಿ, ಎನ್​ಎಸ್​ಜಿ ಮತ್ತು ಅಸ್ಸಾಂ ರೈಫಲ್ಸ್​ ಪಡೆಗಳ ಕ್ಯಾಂಟೀನ್​ಗಳಿಂದ ವಾರ್ಷಿಕವಾಗಿ 2800 ಕೋಟಿ ರೂ. ಉತ್ಪನ್ನಗಳು ಮಾರಾಟವಾಗಲಿವೆ.

ಪ್ರಧಾನಿ ಮೋದಿ ಅವರು ಮಂಗಳವಾರ ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡುವಾಗ ಸ್ವಾವಲಂಬಿ ಹಾಗೂ ದೇಶದಲ್ಲಿ ಉತ್ಪಾದನೆಯಾಗುವ ಸ್ಥಳೀಯ ಉತ್ಪನ್ನಗಳನ್ನು ಬಳಸುವವಂತೆ ಮನವಿ ಮಾಡಿದ್ದರು. ಇದರಿಂದ ಭಾರತ ಭವಿಷ್ಯದಲ್ಲಿ ಇಡೀ ಜಗತ್ತನ್ನು ಮುನ್ನಡೆಸಲಿದ್ದಾರೆ ಎಂದು ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ: PM Modi Speech Highlights: ಭಾರತದ ಸ್ವಾವಲಂಬನೆಗೆ ಐದು ಪಿಲ್ಲರ್​ಗಳನ್ನ ತಿಳಿಸಿದ ಪ್ರಧಾನಿ ಮೋದಿಒಂದು ವೇಳೆ ಪ್ರತಿಯೊಬ್ಬ ಭಾರತೀಯರು ದೇಶದಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳನ್ನು (ಸ್ವದೇಶಿ) ಬಳಸಿದ್ದೆ ಆದಲ್ಲಿ, ಮುಂದಿನ ಐದು ವರ್ಷಗಳಲ್ಲಿ ಸ್ವಾವಲಂಬಿ ದೇಶವಾಗಿ ಹೊರಹೊಮ್ಮಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
First published: May 13, 2020, 2:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories