Mudhol Hounds: ಭೂಸೇನೆ ಬಳಿಕ ಭಾರತೀಯ ವಾಯುಸೇನೆ ಸೇರಿದ ಮುಧೋಳ ಶ್ವಾನ

ಈಗಾಗಲೇ ಮುಧೋಳ ತಳಿಯ ಶ್ವಾನಗಳು ಭಾರತೀಯ ಸೇನೆ, ಇಂಡೋ ಟಿಬೆಟಿಯನ್‌ ಬಾರ್ಡರ್‌ ಪೋರ್ಸ್‌, ಬಿಎಸ್‌ಎಫ್‌, ಶಶಸ್ತ್ರ ಸೀಮಾಬಲ ಸೇರಿವೆ. ಇದೀಗ ಏರ್‌ ಫೋರ್ಸ್‌ಗೂ ಕೂಡ ಮುಧೋಳ ಶ್ವಾನ ಸೇವೆಗೆ ಬಳಕೆಯಾಗುತ್ತಿರುವುದು ಕರ್ನಾಟಕ ಅದರಲ್ಲೂ ಬಾಗಲಕೋಟೆ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.

ಮುಧೋಳ ತಳಿಯ ಶ್ವಾನಗಳು

ಮುಧೋಳ ತಳಿಯ ಶ್ವಾನಗಳು

  • Share this:
    ನವದೆಹಲಿ(ಫೆ.15): ಇದೇ ಮೊದಲ ಬಾರಿಗೆ ಮುಧೋಳ ತಳಿಯ ಶ್ವಾನಗಳು ಭಾರತೀಯ ವಾಯುಸೇನೆಗೆ ಸೇರ್ಪಡೆಯಾಗಿವೆ. ಉತ್ತರಪ್ರದೇಶದ ಏರ್‌ಪೋರ್ಸ್‌ ಸ್ಟೇಶನ್‌ಗೆ ಮುಧೋಳ ಶ್ವಾನ ಸಂವರ್ಧನ ಕೇಂದ್ರದಿಂದ 4 ಶ್ವಾನಗಳನ್ನು ಅಧಿಕೃತವಾಗಿ ವಾಯುಸೇನೆಗೆ ಹಸ್ತಾಂತರಿಸಲಾಗಿದೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು 1 ತಿಂಗಳಿನ 2 ಗಂಡು ಹಾಗೂ 2 ಹೆಣ್ಣು ಮರಿಗಳನ್ನು ಐಎಎಫ್ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

    ವಿಮಾನಗಳಿಗೆ ಯಾವುದೇ ಪಕ್ಷಿಗಳು ಅಡ್ಡ ಬಾರದಂತೆ ತಡೆಯುವುದು, ವಾಯುಸೇನೆ ಕ್ಯಾಂಪ್ ಗಳಲ್ಲಿ ಯಾವುದೇ ಪ್ರಾಣಿ ಮತ್ತು ಪಕ್ಷಿಗಳು ಬಾರದಂತೆ ಭದ್ರತೆ ವಹಿಸುವುದು ಸೇರಿದಂತೆ ವಾಸನೆ ಗ್ರಹಿಕೆ, ಬೇಹುಗಾರಿಕೆಗೆ ಬಳಸಲು ಈ ಶ್ವಾನಗಳನ್ನು ಬಳಸಿಕೊಳ್ಳಲಾಗುತ್ತದೆ. ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಈ ಶ್ವಾನಗಳಿಗೆ 1 ವರ್ಷಗಳ ಕಾಲ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ.

    ಈಗಾಗಲೇ ಮುಧೋಳ ತಳಿಯ ಶ್ವಾನಗಳು ಭಾರತೀಯ ಸೇನೆ, ಇಂಡೋ ಟಿಬೆಟಿಯನ್‌ ಬಾರ್ಡರ್‌ ಪೋರ್ಸ್‌, ಬಿಎಸ್‌ಎಫ್‌, ಶಶಸ್ತ್ರ ಸೀಮಾಬಲ ಸೇರಿವೆ. ಇದೀಗ ಏರ್‌ ಫೋರ್ಸ್‌ಗೂ ಕೂಡ ಮುಧೋಳ ಶ್ವಾನ ಸೇವೆಗೆ ಬಳಕೆಯಾಗುತ್ತಿರುವುದು ಕರ್ನಾಟಕ ಅದರಲ್ಲೂ ಬಾಗಲಕೋಟೆ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಮುಧೋಳ ಶ್ವಾನಗಳು ಭಾರತೀಯ ವಾಯುಸೇನೆ ಸೇರಿರುವುದರಿಂದ ಹೊಸ ಬಲ ಬಂದಂತಾಗಿದೆ. ಅವುಗಳಿಗೆ ಅಗತ್ಯ ತರಬೇತಿ ನೀಡಿ ರಾಷ್ಟ್ರ ರಕ್ಷಣೆಯ ಜವಾಬ್ದಾರಿಯನ್ನು ಹೊರಿಸಲಾಗಿದೆ.

    ಮಂತ್ರಿಸ್ಥಾನ ಪಡೆಯಲು ಹೆಚ್​.ವಿಶ್ವನಾಥ್​ ಯತ್ನ; ದೆಹಲಿಯಲ್ಲಿ ಭೂಪೇಂದ್ರ ಯಾದವ್​ ಭೇಟಿಯಾದ ಹಳ್ಳಿಹಕ್ಕಿ



    ಸಿಆರ್​​​​​ಐಸಿ ಮುಖ್ಯಸ್ಥ ಡಾ.ಮಹೇಶ್‌ ಆಕಾಶಿ ಮಾತನಾಡಿ, ‘ಮುಧೋಳ ತಳಿಯ ಶ್ವಾನಗಳು ಈಗಾಗಲೇ ವಿಶ್ವಪ್ರಸಿದ್ಧಿಯನ್ನು ಹೊಂದಿವೆ. ಸಾಕುನಾಯಿಗಳಾಗಿ ಮಾಲೀಕರ ನಂಬಿಕೆ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುವ ಈ ಶ್ವಾನಗಳು ಬೇಟೆಯಾಡಲು ಪ್ರಖ್ಯಾತಿ ಗಳಸಿವೆ. ಈ ತಳಿಯ ಶ್ವಾನಗಳು ತಮ್ಮ ವಿಶೇಷ ಶಕ್ತಿ ಸಾಮರ್ಥ್ಯ, ತೀಕ್ಷ್ಣತೆ ಹಾಗೂ ಚುರುಕುತನಕ್ಕೆ ಹೆಸರುವಾಸಿಯಾಗಿವೆ. ಭಾರತೀಯ ಸೇನೆಗೆ ಈ ಶ್ವಾನಗಳ ಸೇವೆ ಬಣ್ಣಿಸಲಾಗದು’ ಎಂದಿದ್ದಾರೆ.

    ಬೇಟೆಗೆ ಹೆಸರುವಾಸಿರುವ ಹಾಗೂ ಬೆನ್ನಟ್ಟುವ ಕೌಶಲ್ಯ ಹೊಂದಿರುವ ಮುಧೋಳ ತಳಿಯ ನಾಯಿಗಳನ್ನು 1920ರ ದಶಕದಲ್ಲಿ ಮುಧೋಳನ ಘೋರ್ಪಡೆ ರಾಜರು ಸಾಕುತ್ತಿದ್ದರು. ಪರ್ಸಿಯನ್ ಮತ್ತು ಟರ್ಕಿಶ್ ತಳಿಗಳಿಂದ ಸ್ಥಳೀಯ ನಾಯಿಗಳನ್ನು ಕ್ರಾಸ್ ಬೀಡ್ ಮಾಡಿ ಮುಧೋಳ ತಳಿಯ ಶ್ವಾನಗಳನ್ನು ಬೆಳೆಸಲಾಯಿತು. ಕರ್ನಾಟಕ ಮೂಲದ ಬೇಟೆ ಶ್ವಾನಗಳಿಗೆ 2016ರಂದು ಮೊದಲ ಬಾರಿಗೆ ಮೀರತ್ನಲ್ಲಿರುವ ಆರ್ಮಿ ರಿಮೌಂಟ್ ಮತ್ತು ಪಶುವೈದ್ಯಕೀಯ (ಆರ್‌ವಿಸಿ) ಕೇಂದ್ರದಲ್ಲಿ ತರಬೇತಿ ನೀಡಲು ಪ್ರಾರಂಭಿಸಲಾಯಿತು.

    ಕೇಂದ್ರ ಸರ್ಕಾರದ ‘ಆತ್ಮ ನಿರ್ಭರ ಭಾರತ’ ಅಭಿಯಾನದಡಿ ಭಾರತೀಯ ವಾಯುಸೇನೆ ಈ ಶ್ವಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಪ್ರಧಾನಿ ಮೋದಿಯವರು ಕೂಡ ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಮುಧೋಳ ತಳಿಯ ಶ್ವಾನಗಳ ಬಗ್ಗೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
    Published by:Latha CG
    First published: