ಸರ್ಕಾರಿ ಅಧಿಕಾರಿಗಳನ್ನು ಬ್ಯಾಟ್​ನಿಂದ ಥಳಿಸಿದ್ದ ಶಾಸಕನಿಗೆ ಶೋಕಾಸ್​ ನೋಟಿಸ್​ ನೀಡಿದ ಬಿಜೆಪಿ

ಬಿಡುಗಡೆ ನಂತರವೂ ಆಕಾಶ್​ ಘಟನೆ ಸಂಬಂಧ ಕ್ಷಮಾಪಣೆ ಕೇಳಲು ಹಾಗೂ ವಿಷಾದ ವ್ಯಕ್ತಪಡಿಸಲು ನಿರಾಕರಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರ ಸಂಭ್ರಮಾಚರಣೆ ಮಾಡಿದ್ದಕ್ಕೆ ಪ್ರಧಾನಿ ಮೋದಿ ಕಿಡಿಕಾರಿದ್ದರು. 

HR Ramesh | news18
Updated:July 4, 2019, 7:00 PM IST
ಸರ್ಕಾರಿ ಅಧಿಕಾರಿಗಳನ್ನು ಬ್ಯಾಟ್​ನಿಂದ ಥಳಿಸಿದ್ದ ಶಾಸಕನಿಗೆ ಶೋಕಾಸ್​ ನೋಟಿಸ್​ ನೀಡಿದ ಬಿಜೆಪಿ
ಬಿಜೆಪಿ ಶಾಸಕ ಆಕಾಶ್ ವಿಜಯ್​ವಾರ್ಗಿಯಾ
  • News18
  • Last Updated: July 4, 2019, 7:00 PM IST
  • Share this:
ಭೋಪಾಲ್: ಪಾಲಿಕೆ ಅಧಿಕಾರಿಗಳ ಮೇಲೆ ಬ್ಯಾಟ್​ನಿಂದ ಹಲ್ಲೆ ಮಾಡಿದ್ದ ಮಧ್ಯಪ್ರದೇಶದ ಬಿಜೆಪಿ ಶಾಸಕ ಆಕಾಶ್​ ವಿಜಯ್​ವಾರ್ಗಿಯಾ ಅವರಿಗೆ ಪಕ್ಷ ಶೋಕಾಸ್​ ನೋಟಿಸ್ ನೀಡಿದೆ. ಘಟನೆ ಸಂಬಂಧ ಎರಡು ದಿನದ ಹಿಂದೆ ಪ್ರಧಾನಿ ಮೋದಿ ಅವರು ಯಾರ ಮಗನಾದರೂ ಸರಿ, ಗೂಂಡಾ ಪ್ರವೃತ್ತಿಯನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಪ್ರಧಾನಿ ಎಚ್ಚರಿಕೆ ನೀಡಿದ ಬಳಿಕ ಬಿಜೆಪಿ ಇದೇ ಮೊದಲ ಬಾರಿಗೆ ಶಾಸಕರೊಬ್ಬರಿಗೆ ಶೋಕಾಸ್ ನೋಟಿಸ್ ನೀಡಿದೆ.

ಆಕಾಶ್​ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್​ವಾರ್ಗಿಯಾ ಅವರ ಮಗ. ಕಳೆದ ವಾರ ಇಂಧೋರ್​ನಲ್ಲಿ ಪಾಲಿಕೆ ಅಧಿಕಾರಿಗಳ ಮೇಲೆ ನಡುರಸ್ತೆಯಲ್ಲಿ ಬ್ಯಾಟ್​ನಿಂದ ಹಲ್ಲೆ ಮಾಡಿದ್ದ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಂಧಿತ ಶಾಸಕರನ್ನು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾಗಿ ಬಂದ ಶಾಸಕನನ್ನು ಬಿಜೆಪಿ ಕಚೇರಿಯಲ್ಲಿ ಹೂ ಮಾಲೆ ಹಾಕಿ ಸ್ವಾಗತಿಸಲಾಗಿತ್ತು.

ಇದನ್ನು ಓದಿ: ನಡುರಸ್ತೆಯಲ್ಲಿ ಕ್ರಿಕೆಟ್ ಬ್ಯಾಟ್​ನಿಂದ ಸರ್ಕಾರಿ ಅಧಿಕಾರಿಗೆ ಹೊಡೆದ ಬಿಜೆಪಿ ಶಾಸಕನ ಬಂಧನ

ಇದನ್ನು ಓದಿ: ಈ ಪವಾಡ ನಡೆದರೆ ಪಾಕಿಸ್ತಾನ ಸೆಮಿ ಫೈನಲ್ ಪ್ರವೇಶಿಸುವುದು ಬಹುತೇಕ ಖಚಿತ..!

ಬಿಡುಗಡೆ ನಂತರವೂ ಆಕಾಶ್​ ಘಟನೆ ಸಂಬಂಧ ಕ್ಷಮಾಪಣೆ ಕೇಳಲು ಹಾಗೂ ವಿಷಾದ ವ್ಯಕ್ತಪಡಿಸಲು ನಿರಾಕರಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರ ಸಂಭ್ರಮಾಚರಣೆ ಮಾಡಿದ್ದಕ್ಕೆ ಪ್ರಧಾನಿ ಮೋದಿ ಕಿಡಿಕಾರಿದ್ದರು.
 ಕಳೆದ ಮಂಗಳವಾರ ನಡೆದ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ, ಯಾರಾದರೂ ಆಗಿರಲಿ, ಯಾರ ಮಗನಾದರೂ ಆಗಿರಲಿ, ಅನುಚಿತ ವರ್ತನೆ, ದುರಂಹಕಾರದ ನಡೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಘಟನೆ ಕುರಿತು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.  ಇದಾದ ಎರಡು ದಿನಗಳ ಬಳಿಕ ಪಕ್ಷ ಶಾಸಕ ಆಕಾಶ್​ ವಿಜಯ್​ವಾರ್ಗಿಯಾ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ.

First published:July 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ