Parliament Session: ಮೋದಿ‌ ಎಚ್ಚರಿಕೆ ಬಳಿಕವೂ ತೇಜಸ್ವಿ ಸೂರ್ಯ ಸೇರಿ 9 ಸಂಸದರು ಸಂಸತ್ತಿಗೆ ಗೈರು

ಡಿಸೆಂಬರ್ 7 ರಂದು ನಡೆಯಲಿರುವ ಪಕ್ಷದ ಸಭೆಯಲ್ಲಿ ಸಂಸತ್ತಿನ ಕಲಾಪಗಳನ್ನು ಬಿಟ್ಟುಬಿಡುವುದನ್ನು ಮುಂದುವರಿಸಿದರೆ "ನಿಮ್ಮನ್ನೇ ಬದಲಾವಣೆ ಮಾಡಬೇಕಾಗುತ್ತದೆ" ಎಂಬ ಅರ್ಥದಲ್ಲಿ ಪ್ರಧಾನಿ ಸಂಸದರಿಗೆ ಎಚ್ಚರಿಕೆ ನೀಡಿದ್ದರು. 

ತೇಜಸ್ವಿ ಸೂರ್ಯ

ತೇಜಸ್ವಿ ಸೂರ್ಯ

  • Share this:
ನವದೆಹಲಿ, ಡಿ. 20: ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ಕಳೆದ ವಾರ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ (Parliamentary Party Meeting) ಮತ್ತು ದಕ್ಷಿಣ ಭಾರತದ ಬಿಜೆಪಿ ಸಂಸದರ ಸಭೆಯಲ್ಲಿ (South Indian BJP MPs Meeting) 'ಸಂಸದರು ತಪ್ಪದೆ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕು ಎಂದು ಉಪದೇಶ ನೀಡಿದ್ದರು. ಆದರೆ ಸೋಮವಾರ (ಡಿಸೆಂಬರ್ 20) ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ (Question Hour) ತಮ್ಮ ಪ್ರಶ್ನೆಗಳು ಬಂದಾಗ ಒಂಭತ್ತು ಸಂಸದರು ಗೈರು ಹಾಜರಾಗಿದ್ದರು. 

ಎದ್ದು ಕಾಣುತ್ತಿತ್ತು ಸಂಸದರ ಗೈರು

ಸೋಮವಾರದ ಲೋಕಸಭಾ ಪ್ರಶ್ನೋತ್ತರ ಕಲಾಪದಲ್ಲಿ ಒಟ್ಟು 20 ಪ್ರಶ್ನೆಗಳನ್ನು ಪಟ್ಟಿ ಮಾಡಲಾಗಿದ್ದು ಎಲ್ಲಾ 20 ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಲಾಯಿತು. ಆದರೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲು ಸಂಬಂಧಿಸಿದ ಸಂಸದರೇ ಹಾಜರಿರಲಿಲ್ಲ. ಈ ಹಿಂದೆ 1092ರ ಮಾರ್ಚ್ 14ರಂದು ಮತ್ತು 2019ರ ನವೆಂಬರ್ 27ರಂದು ಇದೇ ರೀತಿ ಆಗಿತ್ತು. ಈಗ ಮತ್ತೆ ಆಡಳಿತ ಪಕ್ಷದ ಒಂಬತ್ತು ಸಂಸದರು ಗೈರುಹಾಜರಾಗಿ ದಾಖಲೆ ಸೃಷ್ಠಿಸಿದ್ದಾರೆ.

ಗೈರಾದ ಬಿಜೆಪಿ ಸಂಸದರು ಇವರು

ಗೈರು ಹಾಜರಾದವರ ಪೈಕಿ ಬಿಜೆಪಿ ಮುಖ್ಯ ಸಚೇತಕ ರಾಕೇಶ್ ಸಿಂಗ್ (BJP chief whip Rakesh Singh), ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Bangalore South MP Tejasvi Surya) ಪಶ್ಚಿಮ ಚಂಪಾರಣ್ (ಬಿಹಾರ) ಸಂಸದ ಸಂಜಯ್ ಜೈಸ್ವಾಲ್, ಕೌಶಾಂಬಿ (ಉತ್ತರ ಪ್ರದೇಶ) ಸಂಸದ ವಿನೋದ್ ಕುಮಾರ್, ಬಲೂರ್‌ಘಾಟ್ (ಪಶ್ಚಿಮ ಬಂಗಾಳ) ಸಂಸದ ಮತ್ತು ರಾಜ್ಯ ಪಕ್ಷದ ಅಧ್ಯಕ್ಷ ಸುಕಾಂತ ಮಜುಂದಾರ್ ಮತ್ತು ಪಾಲಿ (ರಾಜಸ್ಥಾನ) ಸಂಸದ ಪಿಪಿ ಚೌಧರಿ ಪ್ರಮುಖರು.

ಗೈರಿಗೆ ವ್ಯಕ್ತವಾದ ಆಕ್ಷೇಪ

ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ ಪಕ್ಷದ ಗೌರವ್ ಗೊಗೊಯ್ (Gaurav Gogoi) ಮತ್ತು ಎನ್‌ಸಿಪಿಯ ಸುಪ್ರಿಯಾ ಸುಳೆ (Supriya Sule) 'ಆಡಳಿತ ಪಕ್ಷದ ಸಂಸದರಿಗೆ, ಆಡಳಿತ ಪಕ್ಷಕ್ಕೆ ನಾಚಿಕೆ ಆಗಬೇಕು ಎಂದು ಘೋಷಣೆಗಳನ್ನು ಕೂಗಿದರು. ತಮ್ಮ ಹೆಸರನ್ನು ಕರೆಯುವಾಗ ಸದನದಲ್ಲಿ ಪ್ರಶ್ನೆಗಳನ್ನು ಪಟ್ಟಿ ಮಾಡಿದ ಸಂಸದರು ಹಾಜರಿಲ್ಲದಿರುವುದು ಸರಿಯಾದ ಕ್ರಮವಲ್ಲ ಎಂದು ಇಬ್ಬರೂ ಸಂಸದರು ಆಕ್ಷೇಪವನ್ನು ವ್ಯಕ್ತಪಡಿಸಿದರು.

ಇದನ್ನು ಓದಿ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ರಿಲಯನ್ಸ್​ ಫೌಂಡೇಶನ್​ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಚಾಟಿ ಬೀಸಿದ್ದ ಮೋದಿ

ಸಂಸತ್ತಿಗೆ ಗೈರಾಗಿದ್ದ ಬಿಜೆಪಿ ಸಂಸದರ ಮೇಲೆ ಪ್ರಧಾನಿ ನರೇಂದ್ರ ಮೋದಿ ಚಾಟಿ ಬೀಸಿರುವ ಬೆನ್ನಲ್ಲೇ ಇದು ನಡೆದಿದೆ. ಡಿಸೆಂಬರ್ 7 ರಂದು ನಡೆಯಲಿರುವ ಪಕ್ಷದ ಸಭೆಯಲ್ಲಿ ಸಂಸತ್ತಿನ ಕಲಾಪಗಳನ್ನು ಬಿಟ್ಟುಬಿಡುವುದನ್ನು ಮುಂದುವರಿಸಿದರೆ "ನಿಮ್ಮನ್ನೇ ಬದಲಾವಣೆ ಮಾಡಬೇಕಾಗುತ್ತದೆ" ಎಂಬ ಅರ್ಥದಲ್ಲಿ ಪ್ರಧಾನಿ ಸಂಸದರಿಗೆ ಎಚ್ಚರಿಕೆ ನೀಡಿದ್ದರು.

ಇದನ್ನು ಓದಿ: ವೋಟರ್​ ಐಡಿ ಜೊತೆ ಆಧಾರ್​ ಲಿಂಕ್​; ಲೋಕಸಭೆಯಲ್ಲಿ ಮಸೂದೆ ಪಾಸ್​

ಬಿಜೆಪಿಗೆ ಬಹುಮತವಿಲ್ಲದ ರಾಜ್ಯಸಭೆಯಿಂದ 12 ಸಂಸದರನ್ನು ಅಮಾನತುಗೊಳಿಸಿದ ಬಗ್ಗೆ ಪ್ರತಿಪಕ್ಷಗಳು ಗದ್ದಲವನ್ನು ಸೃಷ್ಟಿಸಿದ ನಂತರ ಪ್ರಧಾನಿ ಮೋದಿ ತಮ್ಮ ಸಂಸದರಿಗೆ ಇಂತಹ ಎಚ್ಚರಿಕೆ ನೀಡಿದ್ದರು. ಸಂಸತ್ತಿಗೆ ತಮ್ಮ ಪಕ್ಷದ ಸಂಸದರ ನಿಯಮಿತ ಹಾಜರಾತಿಗೆ ಪ್ರಧಾನಿ ಮೋದಿ ಒತ್ತು ನೀಡಿದ್ದರು. ಆದರೆ ಬಿಜೆಪಿ ಸಂಸದರು ಮೋದಿ ಎಚ್ಚರಿಕೆಯನ್ನೂ ಗಾಳಿಗೆ ತೂರಿದ್ದಾರೆ.

ಮಸೂದೆ ಪಾಸ್​ ಮಾಡಿದ ಆಡಳಿತ ಪಕ್ಷ

ಇದರ ನಡುವೆ ಇಂದು ಮತದಾರರ ಗುರುತಿನ ಚೀಟಿಯನ್ನು  ಆಧಾರ್​ನೊಂದಿಗೆ ಲಿಂಕ್ ಮಾಡುವ ಮಸೂದೆಯನ್ನು  ಲೋಕಸಭೆಯಲ್ಲಿ ಮಂಡಿಸಲಾಯಿತು. ವಿರೋಧ ಪಕ್ಷಗಳ ವಿರೋಧದ ನಡುವೆಯೂ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು, ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ, 2021 ಅನ್ನು ಮಂಡಿಸಿದರು. ಈ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
Published by:Seema R
First published: