• Home
 • »
 • News
 • »
 • national-international
 • »
 • ಮಧ್ಯಪ್ರದೇಶದಲ್ಲಿ ಹಸುಗಳ ರಕ್ಷಣೆಗೆ ಹೊಸ ಕ್ರಮ; ಪ್ರತ್ಯೇಕ ಗೋ ಸಂಪುಟ ರಚಿಸಿದ ಶಿವರಾಜ್​ ಸಿಂಗ್​ ಚೌಹಾಣ್​

ಮಧ್ಯಪ್ರದೇಶದಲ್ಲಿ ಹಸುಗಳ ರಕ್ಷಣೆಗೆ ಹೊಸ ಕ್ರಮ; ಪ್ರತ್ಯೇಕ ಗೋ ಸಂಪುಟ ರಚಿಸಿದ ಶಿವರಾಜ್​ ಸಿಂಗ್​ ಚೌಹಾಣ್​

ಶಿವರಾಜ್​ ಸಿಂಗ್​ ಚೌಹಾಣ್​

ಶಿವರಾಜ್​ ಸಿಂಗ್​ ಚೌಹಾಣ್​

ಗೋ ಸಂಪುಟದ ಬಗ್ಗೆ ಶಿವರಾಜ್​ ಸಿಂಗ್​ ಚೌಹಾಣ್ ಪ್ರಾಥಮಿಕ ಮಾಹಿತಿಯನ್ನಷ್ಟನ್ನೇ ನೀಡಿದ್ದಾರೆ. ಈ ಸಂಪುಟದ ಜವಾಬ್ದಾರಿಗಳೇನು? ಇದರ ಅಧಿಕಾರಿದ ಮಿತಿಗಳೇನು ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಕೊಡಬೇಕಿದೆ.

 • Share this:

  ಗೋವುಗಳ ರಕ್ಷಣೆಗೆ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿರುವ ಮಧ್ಯಪ್ರದೇಶ ಸರ್ಕಾರ ಈಗ ಅಚ್ಚರಿಯ ನಿರ್ಧಾರವೊಂದಕ್ಕೆ ಬಂದಿದೆ. ಗೋ ರಕ್ಷಣೆಗೆ ವಿಶೇಷ ಸಂಪುಟ ರಚನೆ ಮಾಡಲು ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ನಿರ್ಧಾರ ಮಾಡಿದ್ದಾರೆ. ನವೆಂಬರ್​ 22ರಂದು ಈ ಸಂಪುಟದ ಮೊದಲ ಸಭೆ ನಡೆಯಲಿದೆ.


  “ಹಸುಗಳ ರಕ್ಷಣೆ ಮತ್ತು ಅವುಗಳನ್ನು ಸಾಕಲು ಹೆಚ್ಚು ಉತ್ತೇಜನ ನೀಡುವ ಉದ್ದೇಶದಿಂದ ಗೋ ಸಂಪುಟ ರಚನೆ ಮಾಡಲಾಗಿದೆ. ಪಶುಸಂಗೋಪನೆ, ಅರಣ್ಯ, ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ, ಕಂದಾಯ, ಗೃಹ ಮತ್ತು ರೈತ ಕಲ್ಯಾಣ ಇಲಾಖೆಯನ್ನು ಈ ಸಂಪುಟದಲ್ಲಿ ಸೇರಿಸಲಾಗುವುದು. ನವೆಂಬರ್​ 22ರಂದು ಇದರ ಮೊದಲ ಸಭೆ ನಡೆಯಲಿದೆ,” ಎಂದು ಅವರು ತಿಳಿಸಿದ್ದಾರೆ.


  ಗೋ ಸಂಪುಟದ ಬಗ್ಗೆ ಶಿವರಾಜ್​ ಸಿಂಗ್​ ಚೌಹಾಣ್ ಪ್ರಾಥಮಿಕ ಮಾಹಿತಿಯನ್ನಷ್ಟನ್ನೇ ನೀಡಿದ್ದಾರೆ. ಈ ಸಂಪುಟದ ಜವಾಬ್ದಾರಿಗಳೇನು? ಇದರ ಅಧಿಕಾರಿದ ಮಿತಿಗಳೇನು ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಕೊಡಬೇಕಿದೆ.


  ಗೋವಿನ ವಿಚಾರ ಇಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸಿತ್ತು. ಆದಾಗ್ಯೂ, ಚುನಾವಣೆಯಲ್ಲಿ ಸೋಲು ಕಂಡಿತ್ತು. ಆದರೆ, ಮಾರ್ಚ್​ನಲ್ಲಿ ಕಾಣಿಸಿಕೊಂಡ ರಾಜಕೀಯ ಬಿಕ್ಕಟ್ಟಿನಿಂದ ಮುಖ್ಯಮಂತ್ರಿ ಕಮಲ್​ ನಾತ್​ ರಾಜೀನಾಮೆ ನೀಡಿದ್ದರು. ಈ ಮೂಲಕ ಕಾಂಗ್ರೆಸ್​ ಸರ್ಕಾರ ಬಿದ್ದಿತ್ತು. ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. 2017ರಲ್ಲಿ ಮೊಟ್ಟ ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ಹಸುಗಳ ಅಭಯಾರಣ್ಯ ಸ್ಥಾಪನೆ ಮಾಡಲಾಗಿತ್ತು.

  Published by:Rajesh Duggumane
  First published: