• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • National Anthem: ಪ್ರತಿನಿತ್ಯ ರಾಷ್ಟ್ರಗೀತೆ ಹೇಳುವುದನ್ನು ನಿಲ್ಲಿಸಿದ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ

National Anthem: ಪ್ರತಿನಿತ್ಯ ರಾಷ್ಟ್ರಗೀತೆ ಹೇಳುವುದನ್ನು ನಿಲ್ಲಿಸಿದ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ

ರಾಷ್ಟ್ರಧ್ವಜ

ರಾಷ್ಟ್ರಧ್ವಜ

National Anthem: ಐಸಿಎಚ್ ಆರ್ ಗ್ರಂಥಾಲಯದ ಮುಂದೆ ಪ್ರತಿ ದಿನ ಬೆಳಗ್ಗೆ 10 ಗಂಟೆಗೆ ಸಿಬ್ಬಂದಿ ಎಲ್ಲರೂ ಸೇರಿ ರಾಷ್ಟ್ರಗೀತೆಯನ್ನು ಹಾಡುತ್ತಿದ್ದೆವು. ಇದನ್ನು ಸಿಬ್ಬಂದಿಗಳು ಸ್ವಯಂಪ್ರೇರಣೆಯಿಂದ ನಿರ್ವಹಿಸಿದ್ದಾರೆ ಎಂದು ಕದಂ ಹೇಳಿದರು.

  • Trending Desk
  • 4-MIN READ
  • Last Updated :
  • Share this:

ರಾಷ್ಟ್ರಗೀತೆ, ಇದನ್ನು ಕೇಳಿದ ತಕ್ಷಣ ನಮ್ಮಲ್ಲಿ ದೇಶಭಕ್ತಿಯ ಭಾವನೆ ಜಾಗೃತವಾಗುತ್ತದೆ. ಭಾರತೀಯರಾದ ನಮಗೆ ಏಕತೆಯ ಸಂಕೇತವೇ ಈ ರಾಷ್ಟ್ರಧ್ವಜ, ರಾಷ್ಟ್ರ ಗೀತೆ (National Anthem) ಎಲ್ಲವೂ. ರಾಷ್ಟ್ರಗೀತೆಯನ್ನು ಕೆಲವು ವಿಶಿಷ್ಟ ಹಾಗೂ ನಿಗದಿತ ಸಂದರ್ಭಗಳಲ್ಲಿ ಮಾತ್ರ ಹಾಡಲಾಗುತ್ತದೆ ಎಂಬುವುದು ಎಲ್ಲರಿಗೂ ತಿಳಿದ ವಿಚಾರ. ಆದಾಗ್ಯೂ ಭಾರತೀಯ (INDIA) ಐತಿಹಾಸಿಕ ಸಂಶೋಧನಾ ಮಂಡಳಿಯಲ್ಲಿ ಪ್ರತಿನಿತ್ಯ ರಾಷ್ಟ್ರಗೀತೆಯನ್ನು ಹಾಡಲಾಗುತ್ತಿತ್ತಂತೆ. ಆದರೆ ಮಂಡಳಿಯ ಕ್ರಮಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ಪ್ರತಿನಿತ್ಯ ರಾಷ್ಟ್ರಗೀತೆ ಹಾಡುವುದನ್ನು ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ ಮಂಡಳಿಯಲ್ಲಿದ್ದ ಭಾರತ ಮಾತೆಯ ಮತ್ತು ದೀನ್ ದಯಾಳ್ ಉಪಾಧ್ಯಾಯ ಅವರ ಫೋಟೋವನ್ನು ಸಹ ತೆಗೆದುಹಾಕಲಾಗಿದೆಯಂತೆ.


ಆರು ತಿಂಗಳಿಂದ ರಾಷ್ಟ್ರಗೀತೆ ಹಾಡುತ್ತಿದ್ದ ಸಿಬ್ಬಂದಿ:


ಶಿಕ್ಷಣ ಸಚಿವಾಲಯದ ಅಡಿಯಲ್ಲಿನ ಸ್ವಾಯತ್ತ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಫಾರ್ ಹಿಸ್ಟಾರಿಕಲ್ ರಿಸರ್ಚ್‌ನ ಸಿಬ್ಬಂದಿ ಸುಮಾರು ಆರು ತಿಂಗಳಿಂದ ಪ್ರತಿ ದಿನ ಬೆಳಗ್ಗೆ ರಾಷ್ಟ್ರಗೀತೆಯನ್ನು ಹಾಡುತ್ತಿದ್ದರು. ಜೊತೆಗೆ ಭಾರತ ಮಾತೆಯ ಚಿತ್ರಗಳು ಮತ್ತು ಮಾಜಿ ಜನಸಂಘದ ಅಧ್ಯಕ್ಷ ದೀನದಯಾಳ್ ಉಪಾಧ್ಯಾಯ ಅವರ ಚಿತ್ರಗಳು ಸದಸ್ಯ ಕಾರ್ಯದರ್ಶಿ ಉಮೇಶ್ ಕದಂ ಅವರ ಕಚೇರಿ ಮತ್ತು ICHR ಕಾನ್ಫರೆನ್ಸ್ ಕೊಠಡಿಯಲ್ಲಿ ಇರಿಸಲಾಗಿತ್ತು. ಆದರೆ ಈ ಕ್ರಮಕ್ಕೆ ತೀರ್ವ ಆಕ್ಷೇಪಣೆ ಕೇಳಿ ಬಂದಿದ್ದರ ಬೆನ್ನಲ್ಲೇ ಈ ಕ್ರಮವನ್ನು ನಿಲ್ಲಿಸಲಾಗಿದೆ ಎಂದು ಸುದ್ದಿ ಮೂಲಗಳು ವರದಿ ಮಾಡಿವೆ.


ICHR ಅಧ್ಯಕ್ಷ ರಘುವೇಂದ್ರ ತನ್ವಾರ್ ಮತ್ತು ಸದಸ್ಯ ಕಾರ್ಯದರ್ಶಿ ಕದಂ ಅವರು ಈ ಘಟನೆ ಬಗ್ಗೆ ಸ್ಪಷ್ಟಪಡಿಸಿದ್ದು ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿದ್ದಾರೆ. ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ “ಕಳೆದ ಸೆಪ್ಟೆಂಬರ್‌ನಲ್ಲಿ ಮೌಖಿಕ ಆದೇಶದ ಆಧಾರದ ಮೇಲೆ ರಾಷ್ಟ್ರಗೀತೆಯನ್ನು ಹೇಳುವುದನ್ನು ಅಳವಡಿಸಿಕೊಳ್ಳಲಾಗಿತ್ತು. ಆದರೆ ಈ ಕ್ರಮಕ್ಕೆ ಮತ್ತೊಂದು ಮೌಖಿಕ ಆದೇಶ ಬಂದಿದ್ದು, ಸೂಚನೆಯ ಮೇರೆಗೆ ರಾಷ್ಟ್ರಗೀತೆಯನ್ನು ಹೇಳುವುದನ್ನು ನಿಲ್ಲಿಸಲಾಗಿದೆ. ಭಾರತ ಮಾತೆಯ ಮತ್ತು ಉಪಾಧ್ಯಾಯರ ಚಿತ್ರಗಳನ್ನು ತೆಗೆದುಹಾಕಲು ಯಾವುದೇ ಲಿಖಿತ ಆದೇಶ ಬರದಿದ್ದರೂ ಅವುಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.


ಇದನ್ನೂ ಓದಿ: Hit And Drags: ಸ್ಕೂಟರ್​ಗೆ ಡಿಕ್ಕಿ ಹೊಡೆದ ಟ್ರಕ್, 6 ವರ್ಷದ ಮಗುವನ್ನು 2 ಕಿಮೀ ದೂರ ಎಳೆದೊಯ್ದ ಚಾಲಕ!


ಎರಡೂ ಕೊಠಡಿಗಳಲ್ಲಿ ಭಾರತ ಮಾತೆ ಮತ್ತು ಉಪಾಧ್ಯಾಯ ಅವರ ಚಿತ್ರಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಗಳೊಂದಿಗೆ ಕೊಠಡಿಯಲ್ಲಿತ್ತು ಎಂದು ಮೂಲಗಳು ತಿಳಿಸಿವೆ.


ಸ್ವಯಂಪ್ರೇರಣೆಯಿಂದ ಗೀತೆ ಹಾಡುತ್ತಿದ್ದ ಸಿಬ್ಬಂದಿ:


ಐಸಿಎಚ್ ಆರ್ ಗ್ರಂಥಾಲಯದ ಮುಂದೆ ಪ್ರತಿ ದಿನ ಬೆಳಗ್ಗೆ 10 ಗಂಟೆಗೆ ಸಿಬ್ಬಂದಿ ಎಲ್ಲರೂ ಸೇರಿ ರಾಷ್ಟ್ರಗೀತೆಯನ್ನು ಹಾಡುತ್ತಿದ್ದೆವು. ಇದನ್ನು ಸಿಬ್ಬಂದಿಗಳು ಸ್ವಯಂಪ್ರೇರಣೆಯಿಂದ ನಿರ್ವಹಿಸಿದ್ದಾರೆ ಎಂದು ಕದಂ ಹೇಳಿದರು.


ಕಳೆದ ವರ್ಷ ಆಗಸ್ಟ್ 11 ರಂದು ಕದಂ ಐಸಿಎಚ್‌ಆರ್‌ಗೆ ಸೇರಿದ ನಂತರ ಗೀತೆ ಹೇಳುವ ಹವ್ಯಾಸ ಪ್ರಾರಂಭವಾಯಿತು ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಅಧ್ಯಕ್ಷ ತನ್ವರ್ “ ಕೌನ್ಸಿಲ್‌ನಿಂದ ಅಥವಾ ನನ್ನಿಂದ ಸೂಕ್ತ ಅನುಮತಿ ರಾಷ್ಟ್ರಗೀತೆ ಹೇಳಲು ಇರಲಿಲ್ಲ ನಿಜ. ಆದರೆ ಚಿತ್ರಗಳನ್ನು ತೆಗೆದುಹಾಕುವಲ್ಲಿ ಅಥವಾ ರಾಷ್ಟ್ರಗೀತೆಯನ್ನು ನಿಲ್ಲಿಸುವಲ್ಲಿ ನನ್ನ ಪಾತ್ರವಿಲ್ಲ ಎಂದು ತಿಳಿಸಿದ್ದಾರೆ. “ICHR ಒಂದು ಪಂಥೀಯವಲ್ಲದ ಸಂಸ್ಥೆಯಾಗಿದೆ. ನಾವು ಅದರ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.




ಕದಂ ಅವರು ಇತ್ತೀಚೆಗೆ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ (ಚೇರ್ ಮಧ್ಯಕಾಲೀನ ಭಾರತೀಯ ಇತಿಹಾಸ) ಬೋಧಿಸುತ್ತಿದ್ದರು, ಅಲ್ಲಿ ಅವರು ವಿದ್ಯಾರ್ಥಿ ಕಲ್ಯಾಣದ ಡೀನ್ ಕೂಡ ಆಗಿದ್ದರು. ಕುರುಕ್ಷೇತ್ರ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ತನ್ವರ್ ಅವರನ್ನು ಕಳೆದ ವರ್ಷ ಜನವರಿಯಲ್ಲಿ ICHR ನ ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಲಾಯಿತು. ಅವರ ಇತ್ತೀಚಿನ ಕೃತಿ "ದಿ ಸ್ಟೋರಿ ಆಫ್ ಇಂಡಿಯಾಸ್ ಪಾರ್ಟಿಶನ್" ಅನ್ನು 2021 ರಲ್ಲಿ ಭಾರತ ಸರ್ಕಾರವು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪ್ರಕಟಿಸಿದೆ.


ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ:


ಮಾರ್ಚ್ 1972 ರಲ್ಲಿ ಸ್ಥಾಪಿತವಾದ ICHR ಫೆಲೋಶಿಪ್‌ಗಳು, ಅನುದಾನಗಳು ಮತ್ತು ವಿಚಾರ ಸಂಕಿರಣಗಳ ಮೂಲಕ ಇತಿಹಾಸಕಾರರು ಮತ್ತು ವಿದ್ವಾಂಸರಿಗೆ ಹಣಕಾಸಿನ ನೆರವು ನೀಡುತ್ತದೆ.

Published by:shrikrishna bhat
First published: