ಚೀನೀ ಹ್ಯಾಕರ್​ಗಳಿಂದ ಕೇಂದ್ರ ಗೃಹ, ಕಾನೂನು ಮತ್ತು ರಕ್ಷಣಾ ಸಚಿವಾಲಯದ ಜಾಲತಾಣಗಳಿಗೆ ಕನ್ನ


Updated:April 6, 2018, 7:57 PM IST
ಚೀನೀ ಹ್ಯಾಕರ್​ಗಳಿಂದ ಕೇಂದ್ರ ಗೃಹ, ಕಾನೂನು ಮತ್ತು ರಕ್ಷಣಾ ಸಚಿವಾಲಯದ ಜಾಲತಾಣಗಳಿಗೆ ಕನ್ನ

Updated: April 6, 2018, 7:57 PM IST
-ನ್ಯೂಸ್ 18

ನವದೆಹಲಿ (ಏ.7): ದೇಶದ ಪ್ರಮುಖ ಸಚಿವಾಲಯಗಳ ಜಾಲತಾಣಗಳಿಗೆ ಹ್ಯಾಕರ್​ಗಳು ಕೈಹಾಕಿದ್ದಾರೆ. ರಕ್ಷಣಾ ಸಚಿವಾಲಯದ ವೆಬ್​ಸೈಟ್​ಗೆ ಹ್ಯಾಕ್ ಆದ ಬೆನ್ನಲ್ಲೇ ಗೃಹ ಸಚಿವಾಲಯ ಹಾಗೂ ಕಾನೂನು ಸಚಿವಾಲಯದ ವೆಬ್​ಸೈಟ್​ಗಳು ಸಹ ನಿಷ್ಕ್ರಿಯಗೊಂಡಿದ್ದು, ಹ್ಯಾಕರ್ ಕೈವಾಡವಿದೆ ಎಂದು ವರದಿಯಾಗಿದೆ.

Ministry of Defence ವೆಬ್‌ಸೈಟ್‌ನಲ್ಲಿ ಎರರ್‌ ಹಾಗೂ ಟ್ರೈ ಅಗೇನ್‌ ಲೇಟರ್‌ ಎಂಬ ಸಂದೇಶ ಕಾಣಿಸುತ್ತಿದ್ದು, ಈ ಪೇಜ್​ಗೆ ಭೇಟಿ ನೀಡಿದರೆ “The website encountered an unexpected error. Please try again later”.  ಎಂಬ ಮೆಸೇಜ್​ ಬಳಿಕ ಚೀನೀ ಭಾಷೆಯಲ್ಲಿ ಜೆನ್​ ಎಂಬ ಪದವೊಂದು ಕಾಣಿಸಿಕೊಂಡಿದೆ. ಹೀಗಾಗಿ, ಹಲವಾರು ಮಾಧ್ಯಮಗಳು ಈ ಕೃತ್ಯವನ್ನು ಚೀನೀ ಹ್ಯಾಕರ್​ಗಳು ಮಾಡಿದ್ದಾರೆ ಎಂದು ವರದಿ ಮಾಡಿವೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಕೂಡ ಟ್ವೀಟರ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವೆಬ್‌ಸೈಟ್‌ ಹ್ಯಾಕ್‌ ಆಗಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ, ಕೆಲವೇ ಕ್ಷಣಗಳಲ್ಲಿ ಮತ್ತೆ ವೆಬ್​ಸೈಟ್​  ಚಾಲನೆ ಆಗಲಿದೆ  ಎಂದು ಟ್ವೀಟಿಸಿದ್ದಾರೆ.


Loading...

ಇದರೊಂದಿಗೆ ಗೃಹ ವ್ಯವಹಾರಗಳ ಸಚಿವಾಲಯದ ವೆಬ್​ಸೈಟ್​ ಹಾಗೂ ಕಾನೂನು ಸಚಿವಾಲಯದ ವೆಬ್​ಸೈಟ್​ ಡೌನ್​ ಆಗಿದ್ದವು. ಪರಿಣಾಮ ಕೆಲ ಮಾಧ್ಯಮಗಳು ಈ ವೆಬ್​ಸೈಟ್​ಗಳು ಹ್ಯಾಕ್​ ಆಗಿವೆ ಎಂದು ಹೇಳಿದ್ದವು. ಆದರೆ ಈ ವಿಚಾರವನ್ನು ಅಲ್ಲಗೆಳೆದ ಸಚಿವಾಲಯದ ಅಧಿಕಾರಿಗಳು, ಮೈಂಟೈನೆನ್ಸ್​ ವಿಚಾರಕ್ಕೆ ಸಂಬಂಧಿಸಿದಂತೆ ನಾವು ವೆಬ್​ಸೈಟ್​ನ್ನು ಡೌನ್​ ಮಾಡಿರುವುದಾಗಿ ಹೇಳಿದ್ದಾರೆ.

ಕಳೆದ ವರ್ಷ ಈ ಕುರಿತಂತೆ ಲೋಕಸಭೆಗೆ ಲಿಖಿತ ಮಾಹಿತಿ ನೀಡಿದ್ದ ಗೃಹ ಇಲಾಖೆಯ ರಾಜ್ಯ ಸಚಿವ  ಕಿರಣ್ ರಿಜಿಜು, ಕಳೆದ 4 ವರ್ಷಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ಸೇರಿದ 700ಕ್ಕೂ ಅಧಿಕ ವೆಬ್ ಸೈಟ್​ಗಳು ಹ್ಯಾಕ್ ಅಗಿರುವುದಾಗಿ ತಿಳಿಸಿದ್ದರು.  ಒಟ್ಟಾರೆ, ಕಳೆದ ವರ್ಷವೇ ದೇಶದ 707,199 ವೆಬ್​ಸೈಟ್​ಗಳು ಹ್ಯಾಕ್ ಆಗಿದ್ದು, ಸೈಬರ್ ಕ್ರೈಂ ಆರೋಪದಡಿ 8,348 ಮಂದಿಯನ್ನ ಬಂಧಿಸಿರುವುದಾಗಿ ಹೇಳಿದ್ದರು.

 

.
First published:April 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ