ವಿರೋಧ ಪಕ್ಷ ಸ್ಥಾನ ಪಡೆಯುವಲ್ಲಿ ಮತ್ತೆ ವಿಫಲವಾದ ಕಾಂಗ್ರೆಸ್​; ಖರ್ಗೆ ಸೋಲಿನ ಬಳಿಕ ಯಾರಾಗಲಿದ್ದಾರೆ ವಿಪಕ್ಷ ನಾಯಕರು?

52 ಸ್ಥಾನ ಗೆದ್ದಿರುವ ಕಾಂಗ್ರೆಸ್​​ ವಿರೋಧ ಪಕ್ಷದ ಸ್ಥಾನ ಪಡೆಯದಿದ್ದರೂ ಕಳೆದ ಬಾರಿಯಂತೆಯೇ ಮವಲಂಕರ್​ ನಿಯಮ ಅನುಸರಿಸಿ ಸ್ಪೀಕರ್​ ವಿಪಕ್ಷ ಸ್ಥಾನವನ್ನು ನೀಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಆದರೆ, ಆ ಸ್ಥಾನಕ್ಕೆ ಕೂರುವವರು ಯಾರು ಎಂಬ ಹುಡುಕಾಟವನ್ನು ಕೈ ಪಡೆ ನಡೆಸಬೇಕಿದೆ.

Seema.R | news18
Updated:May 25, 2019, 4:34 PM IST
ವಿರೋಧ ಪಕ್ಷ ಸ್ಥಾನ ಪಡೆಯುವಲ್ಲಿ ಮತ್ತೆ ವಿಫಲವಾದ ಕಾಂಗ್ರೆಸ್​; ಖರ್ಗೆ ಸೋಲಿನ ಬಳಿಕ ಯಾರಾಗಲಿದ್ದಾರೆ ವಿಪಕ್ಷ ನಾಯಕರು?
ಮಲ್ಲಿಕಾರ್ಜುನ ಖರ್ಗೆ
Seema.R | news18
Updated: May 25, 2019, 4:34 PM IST
ಬೆಂಗಳೂರು (ಮೇ.25): ಕಳೆದ ಬಾರಿ ಲೋಕಸಭಾ ಚುನಾವಣೆ ಫಲಿತಾಂಶಕ್ಕಿಂತ ಈ ಬಾರಿ ಕಾಂಗ್ರೆಸ್​ 8 ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆಯಾದರೂ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಬೇಕಾದ ಸಂಖ್ಯಾ ಬಲದಿಂದ ವಂಚಿತವಾಗಿದೆ. ವಿಪಕ್ಷ ಸ್ಥಾನದಲ್ಲಿ ಕಾಂಗ್ರೆಸ್​ ಕುಳಿತರೂ ಕಳೆದ ಬಾರಿಯಂತೆ ಲೋಕಸಭೆಯಲ್ಲಿ ಮೋದಿ ವಿರುದ್ಧ ಸಮರ್ಥವಾಗಿ ಧ್ವನಿ ಎತ್ತುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಕಳೆದ ಬಾರಿ ವಿಪಕ್ಷ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಈ ಚುನಾವಣೆಯಲ್ಲಿ ಸೋತು ಸುಣ್ಣಾವಾಗಿದ್ದಾರೆ. ಈಗ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಪ್ರಶ್ನೆ ಕೂಡ ಕಾಡಿದೆ.

ಪ್ರಸ್ತುತವಿರುವ ನಿಯಮದ ಪ್ರಕಾರ,  ಆಡಳಿತ ಪಕ್ಷದ ಎದುರು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕು ಎಂದರೆ, ಲೋಕಸಭೆ ಒಟ್ಟಾರೆ ಸದಸ್ಯಬಲದ ಶೇ.10ರಷ್ಟು ಸದಸ್ಯರನ್ನು ರಾಜಕೀಯ ಪಕ್ಷ ಹೊಂದಿರಬೇಕು. ಅಂದರೆ, 543 ಲೋಕಸಭಾ ಸ್ಥಾನಗಳಲ್ಲಿ ಕನಿಷ್ಠ ಪಕ್ಷ 55 ಸ್ಥಾನವನ್ನು ವಿಪಕ್ಷಗಳು ಹೊಂದಿರಬೇಕು. ಇಂತಹ ಸಂದರ್ಭದಲ್ಲಿ ಮಾತ್ರ ಸದನದಲ್ಲಿ ಅಧಿಕೃತವಾಗಿ ವಿರೋಧ ಪಕ್ಷದ ಮಾನ್ಯತೆ ಪಡೆಯಬಹುದು.

ಆಡಳಿತ ಪಕ್ಷಗಳು ಎಡವಿದಾಗ ಸರ್ಕಾರವನ್ನು ಎಚ್ಚರಗೊಳಿಸುವಲ್ಲಿ ವಿರೋಧ ಪಕ್ಷಗಳ ಪಾತ್ರ ಪ್ರಮುಖವಾದದ್ದು, ಅದರಲ್ಲಿಯೂ ಕೆಲವು ಮಸೂದೆಗಳ ಮಂಡನೆ ವೇಳೆ ವಿರೋಧ ಪಕ್ಷಗಳು ಅಭಿಪ್ರಾಯ, ಟೀಕೆಗಳ ಅಭಿಪ್ರಾಯ ಮುಖ್ಯವಾಗುತ್ತದೆ. ಅಷ್ಟೇ ಅಲ್ಲದೇ, ಲೋಕಪಾಲ್​, ಸಿಬಿಐ ನಿರ್ದೇಶಕರು, ಮುಖ್ಯ ವಿಚಕ್ಷಣಾ ಆಯುಕ್ತರು, ಮುಖ್ಯ ಮಾಹಿತಿ ಆಯುಕ್ತರು ಹಾಗೂ ಎನ್​ಎಚ್​ಆರ್​ಸಿ ಮುಖ್ಯಸ್ಥರ ನೇಮಕಮಾಡುವಲ್ಲಿ ವಿರೋಧ ಪಕ್ಷಗಳು ಪ್ರಮುಖ ಪಾತ್ರವಹಿಸುತ್ತಾರೆ.

ಕಳೆದ ಬಾರಿಯ 16ನೇ ಲೋಕಸಭೆಯಲ್ಲಿಯೂ ವಿರೋಧ ಪಕ್ಷದಲ್ಲಿ ಸ್ಥಾನದಲ್ಲಿ ಕುಳಿತುಕೊಳ್ಳುವಲ್ಲಿ ಕೂಡ ಕಾಂಗ್ರೆಸ್​ ಸೋತಿತ್ತು. ಅಧಿಕೃತವಾಗಿ ವಿರೋಧ ಪಕ್ಷದ ಸ್ಥಾನ ಕಾಂಗ್ರೆಸ್​ ಪಾಲಿಗೆ ಇರಲಿಲ್ಲ. ಕಡೆಗೆ ಮಾವಲಂಕರ್​ ನಿಯಮದಂತೆ ವಿರೋಧ ಪಕ್ಷದ ಸ್ಥಾನ ನೀಡಲಿಲ್ಲ. ಬದಲಿಗೆ ಆಡಳಿತ ಪಕ್ಷವನ್ನು ಸಮರ್ಥವಾಗಿ ಟೀಕಿಸುವ ನಾಯಕರು ಇರಬೇಕು ಎಂದು ಸ್ಪೀಕರ್​ ಅನುವು ಮಾಡಿಕೊಟ್ಟ ಹಿನ್ನೆಲೆ ಮಲ್ಲಿಕಾರ್ಜುನ ಖರ್ಗೆಗೆ ವಿಪಕ್ಷ ನಾಯಕನ ಸ್ಥಾನ ನೀಡಲಾಗಿತ್ತು.

ಏನಿದು ಮಾವಲಂಕರ್​ ನಿಯಮ?

ಸ್ವತಂತ್ರ ಬಂದಾಗಿನಿಂದ 1969ರವರೆಗೆ ಲೋಕಸಭೆಯಲ್ಲಿ ಯಾವುದೇ ವಿರೋಧ ಪಕ್ಷಗಳು ಇರಲಿಲ್ಲ. ಆದರೆ, ವಿರೋಧ ಪಕ್ಷಗಳ ಜವಾಬ್ದಾರಿ ಅರಿವಿದ್ಧ ಸಂಸತ್ತಿನ ಮೊದಲ ಸ್ಪೀಕರ್​  ಜಿವಿ ಮಾವಲಂಕಾರ್​ ಇದಕ್ಕಾಗಿ ನಿಯಮ ರೂಪಿಸಿದರು. ಆಡಳಿತ ಪಕ್ಷದ ಎದುರು  ವಿರೋಧ ಪಕ್ಷಗಳಿಗೆ ಅಧಿಕೃತ ಸ್ಥಾನ ಸಿಗಬೇಕು ಎಂದರೆ ಸದನದ ಸದಸ್ಯರ ಶೇ 10ರಷ್ಟು ಸದಸ್ಯರನ್ನು ಹೊಂದಿರಬೇಕು ಎಂಬ ನಿಯಮ ರೂಪಿಸಿದರು. ವಿರೋಧ ಪಕ್ಷ ಕಾಯ್ದೆ 1977ರ ಅನುಸಾರ ಸಂಬಳ ಭತ್ಯೆಯನ್ನು ನೀಡುವ ಕುರಿತು ತಿಳಿಸಿದರು. ಒಂದು ವೇಳೆ ಯಾವುದೇ ಪಕ್ಷ ವಿರೋಧ ಪಕ್ಷದಲ್ಲಿ ಕೂರಲು ವಿಫಲರಾದರೆ, ರಾಜ್ಯ ಸಭಾ ಹಾಗೂ ಲೋಕಸಭಾ ಸ್ಪೀಕರ್​ ವಿಪಕ್ಷ ನಾಯಕರನ್ನು ಸಂಸತ್ತು (ಸೌಲಭ್ಯ) ಕಾಯ್ದೆ 1998 ಪ್ರಕಾರ ಆಯ್ಕೆ ಮಾಡಬಹುದು ಎಂದು ತಿಳಿಸಲಾಯಿತು.
Loading...

ಯಾರಾಗಲಿದ್ದಾರೆ ವಿಪಕ್ಷ ನಾಯಕ

ಈ ಬಾರಿ ಕೂಡ ವಿರೋಧ ಪಕ್ಷದಲ್ಲಿ ಕೂರುವಲ್ಲಿ ಕಾಂಗ್ರೆಸ್​ ವಿಫಲವಾಗಿದೆ. ​ 52 ಸ್ಥಾನ ಗೆದ್ದಿರುವ ಕಾಂಗ್ರೆಸ್​​ ವಿರೋಧ ಪಕ್ಷದ ಸ್ಥಾನ ಪಡೆಯದಿದ್ದರೂ ಕಳೆದ ಬಾರಿಯಂತೆಯೇ ಮವಲಂಕರ್​ ನಿಯಮ ಅನುಸರಿಸಿ ಸ್ಪೀಕರ್​ ವಿಪಕ್ಷ ಸ್ಥಾನವನ್ನು ನೀಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಆದರೆ, ಆ ಸ್ಥಾನಕ್ಕೆ ಕೂರುವವರು ಯಾರು ಎಂಬ ಹುಡುಕಾಟವನ್ನು ಕೈ ಪಡೆ ನಡೆಸಬೇಕಿದೆ.

ಇದನ್ನು ಓದಿ: ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಂಪುಟ ಸರ್ಜರಿಗೆ ಮುಂದಾದ ಸಿದ್ದು-ಎಚ್​ಡಿಕೆ; ಅತೃಪ್ತರ ಸೆಳೆಯಲು ಮಂತ್ರಿ ಸ್ಥಾನದ ಆಫರ್?

ಕಳೆದ ಸರ್ಕಾರದಲ್ಲಿ ವಿಪಕ್ಷ ಸ್ಥಾನದಲ್ಲಿ ಕುಳಿತ ಮಲ್ಲಿಕಾರ್ಜುನ ಖರ್ಗೆ ಸಮರ್ಥವಾಗಿ ತಮ್ಮ ಕಾರ್ಯ ನಿರ್ವಹಿಸುವುದರ ಜೊತೆಗೆ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದರು. ರಫೇಲ್​, ನೋಟು ಅಮಾನ್ಯೀಕರಣ, ಕಪ್ಪುಹಣ ವಾಪಸ್ಸು ತರುವ ಬಿಜೆಪಿ ನೀತಿ ವಿರುದ್ದ ಧ್ವನಿ ಎತ್ತಿದ್ದರು.  ಸದನದಲ್ಲಿನ ಅವರ ಪ್ರಶ್ನೆಗಳು ಬಿಜೆಪಿ ನಾಯಕರಿಗೆ ಸಂದಿಗ್ಧ ಪರಿಸ್ಥಿತಿ ಉಂಟುಮಾಡಿತು. ಇದರಿಂದಲೇ ಖರ್ಗೆ ಸೋಲಿಗೆ ಅಮಿತ್​ ಶಾ ಹಾಗೂ ಮೋದಿ ಖುದ್ದು ತಂತ್ರ ರೂಪಿಸಿ, ತಮ್ಮ ಕಾರ್ಯದಲ್ಲಿ ಯಶಸ್ವಿಯಾದರು. ಖರ್ಗೆ ಸೋಲಿನ ಬಳಿಕ ಮೂಡಿರುವ ಪ್ರಶ್ನೆ ಈಗ ಯಾರಾಗಲಿದ್ದಾರೆ ವಿಪಕ್ಷ ನಾಯಕ ಎಂಬುದು.

ಕಾಂಗ್ರೆಸ್​ನ ಪ್ರಮುಖ ನಾಯಕರಾದ ದಿಗ್ವಿಜಯ ಸಿಂಗ್​, ಖರ್ಗೆ ಸೇರಿದಂತೆ ಅನೇಕ ದಿಗ್ಗಜರು ಸೋಲಿನ ಆಘಾತದಲ್ಲಿದ್ದು, ಯಾರು ಈ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ.

First published:May 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...