ನವದೆಹಲಿ(ಮಾ.24): ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ನಯ್ಯ ಕುಮಾರ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಒಂದು ಕಾಲದ ಕಮ್ಯುನಿಷ್ಟ್ ಪಕ್ಷದ ಭದ್ರಕೋಟೆ ಎಂದೇ ಕರೆಯುತ್ತಿದ್ದ ಬಿಹಾರದ ಬೇಗುಸರಾಯ್ ಕ್ಷೇತ್ರದಿಂದ ಕನ್ನಯ್ಯ ಕುಮಾರ್ ಕಣಕ್ಕಿಳಿಯಲಿದ್ದಾರೆ ಎಂದು ಸಿಪಿಐ ಅಧಿಕೃತವಾಗಿ ಘೋಷಿಸಿದೆ. ಇನ್ನು ಕನ್ನಯ್ಯ ಕುಮಾರ್ ಅವರನ್ನು ಸಿಪಿಐ ಮತ್ತು ಸಿಪಿಐಎಂ ಪಕ್ಷ ಮೈತ್ರಿ ಅಭ್ಯರ್ಥಿಯಾಗಿ ಬೇಗುಸರಾಯ್ ಕ್ಷೇತ್ರದಿಂದ ಅಖಾಡಕ್ಕಿಳಿಸಲಾಗುತ್ತಿದೆ.
ಈ ಹಿಂದೆಯೇ ಈ ವಿದ್ಯಾರ್ಥಿ ಯುವ ನಾಯಕ ಮಹಾಘಟಬಂಧನ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಬಿಹಾರದಲ್ಲಿ ಆರ್ಜೆಡಿ, ಕಾಂಗ್ರೆಸ್, ಎಡಪಕ್ಷ ಸೇರಿದಂತೆ ಇತರ ಸಣ್ಣ ಪಕ್ಷಗಳು ಒಳಗೊಂಡ ಮಹಾಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿಕೂಟದ ಅಭ್ಯರ್ಥಿಯಾಗಿ ಕನ್ನಯ್ಯ ಕುಮಾರ್ ಬೇಗುಸರಾಯ್ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಸದ್ಯ ಕನ್ನಯ್ಯ ಕುಮಾರ್ ಅವರಿಗೆ ಸಿಪಿಎಂ ಪಕ್ಷ ಅಧಿಕೃತವಾಗಿ ಟಿಕೆಟ್ ಘೋಷಿಸಬೇಕಷ್ಟೇ ಎಂದು ಹೇಳಲಾಗಿತ್ತು.
ಕನ್ನಯ್ಯ ಕುಮಾರ್ ಸ್ಪರ್ಧೆಗೆ ಈ ಹಿಂದೇ ಸಮ್ಮತಿಸಿದ್ದ ಆರ್ಜೆಡಿ ಮುಖಂಡ ತೇಜಸ್ವಿ ಯಾಧವ್ ಅವರೇ, ಈಗ ವಿರೋಧ ವ್ಯಕ್ತಪಡಿಸುತ್ತಿದ್ಧಾರೆ. ಹೀಗಾಗಿ ಮಹಾಮೈತ್ರಿ ಬೆಂಬಲವಿಲ್ಲದೇ ಹೋದರು, ನಾನು ಯಾವುದೇ ಕಾರಣಕ್ಕೂ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ಈಗಾಗಲೇ ಸಿಪಿಐ ತೀರ್ಮಾನ ತೆಗೆದುಕೊಂಡಿದೆ. ಬೇಗುಸರಾಯ್ನಲ್ಲಿ ಎಡಪಕ್ಷದ ಸಂಯುಕ್ತ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೇನೆ ಎಂದು ಕನ್ನಯ್ಯ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ದಕ್ಷಿಣದಿಂದ ಪ್ರಧಾನಿ ಮೋದಿ ಕಣಕ್ಕೆ?: ಎದುರಾಳಿಯಾಗಿ ಕಾಂಗ್ರೆಸ್ ಕಟ್ಟಾಳು ಡಿಕೆಶಿ ಸ್ಪರ್ಧೆ ಸಾಧ್ಯತೆ!
ಕನ್ನಯ್ಯ ಕುಮಾರ್ ದೆಹಲಿಯ ಪ್ರತಿಷ್ಠಿತ ಜೆಎನ್ಯು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗಷ್ಟೇ ತಮ್ಮ ಪಿಎಚ್ಡಿ ಮುಗಿಸಿದ್ದಾರೆ. ಅಲ್ಲದೇ ಇಡೀ ದೇಶಾದ್ಯಂತ ವಿದ್ಯಾರ್ಥಿ ಚಳುವಳಿ ಕಟ್ಟಲು ಸಕ್ರಿಯವಾಗಿ ಓಡಾಟ ನಡೆಸುತ್ತಿದ್ದಾರೆ. ಜತೆಗೆ ಗುಜರಾತ್ ದಲಿತ ಹೋರಾಟಗಾರ ಮತ್ತು ಶಾಸಕ ಜಿಗ್ನೇಶ್ ಮತ್ತು ಪಾಟೀದಾರ್ ಸಮುದಾಯ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಜೊತೆಗೂಡಿ ಬಿಜೆಪಿ ವಿರುದ್ಧ ಪ್ರಬಲವಾಗಿ ಪ್ರಚಾರ ಮಾಡುತ್ತಿದ್ಧಾರೆ.
ಇದನ್ನೂ ಓದಿ: "ಮೈತ್ರಿ ಮರೆತು ಕೆಲ ಕಾಂಗ್ರೆಸ್ಸಿಗರು ಜೆಡಿಎಸ್ ವಿರುದ್ಧವೇ ತಿರುಗಿ ಬಿದ್ದಿದ್ದಾರೆ": ಸಿಎಂ ಎಚ್ಡಿಕೆ ಅಸಮಾಧಾನ!
2016, ಫೆಬ್ರವರಿ 12 ರಂದು ಅಫ್ಜಲ್ ಗುರು ಗಲ್ಲು ಶಿಕ್ಷೆಯನ್ನು ವಿರೋಧಿಸಿ ಕಾರ್ಯಗಾರ ಮಾಡಿದ್ದರು; ಹಾಗೆಯೇ ದೇಶ ವಿರೋಧಿ ಘೋಷಣೆ ಕೂಗಿದ್ದರು ಎನ್ನುವ ಆರೋಪದ ಅಡಿಯಲ್ಲಿ ಕನ್ನಯ್ಯ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಬಳಿಕ ದೇಶದ್ರೋಹದ ಕೇಸ್ ಜೊತೆಗೆ 10 ಸಾವಿರ ರೂ ದಂಡವನ್ನು ವಿಧಿಸಲಾಗಿತ್ತು . ನಂತರದಲ್ಲಿ ದೆಹಲಿ ಹೈಕೋರ್ಟ್ ಜುಲೈ ತಿಂಗಳಿನಲ್ಲಿ ಈ ಕೇಸ್ಗೆ ತಡೆಯೊಡ್ಡಿತ್ತು. ಈ ಪ್ರಕರಣದಿಂದಾಗಿ ಕನ್ನಯ್ಯಕುಮಾರ್ ಹೆಸರು ವಿದ್ಯಾರ್ಥಿ ಚಳುವಳಿಯಲ್ಲಿ ಮುಂಚೂಣಿಗೆ ಬಂದಿದೆ ಎನ್ನಬಹುದು.
-------------
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ