Uttar Pradesh: ಮದರಸಾ ಆಯ್ತು ಈಗ ವಕ್ಫ್ ಬೋರ್ಡ್ ಆಸ್ತಿಗಳ ಸಮೀಕ್ಷೆ ನಡೆಸಲು ಆದೇಶ ಹೊರಡಿಸಿದ ಸಿಎಂ ಯೋಗಿ!

UP Waqf Board Property Survey:ಈ ಸಮೀಕ್ಷೆಯ ಸಮಯದಲ್ಲಿ, ವಕ್ಫ್ ಮಂಡಳಿಯ ಆಸ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ವಕ್ಫ್ ಆಸ್ತಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿ ಮಾರಾಟ ಮಾಡುವುದನ್ನು ತಡೆಯುವುದು ಇದರ ಹಿಂದಿರುವ ಸರ್ಕಾರದ ಉದ್ದೇಶವಾಗಿದೆ. ಆದೇಶದ ಪ್ರಕಾರ, ಯುಪಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಿಯಾ ಮತ್ತು ಸುನ್ನಿ ವಕ್ಫ್ ಬೋರ್ಡ್‌ಗಳನ್ನು ತನಿಖೆ ಮಾಡಲಾಗುತ್ತದೆ. ಇದರೊಂದಿಗೆ 1989ರಲ್ಲಿ ಕಂದಾಯ ಇಲಾಖೆಯ ಆದೇಶವನ್ನು ರದ್ದುಪಡಿಸಿ ಒಂದು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸುವಂತೆ ಎಲ್ಲ ಜಿಲ್ಲೆಗಳಿಗೆ ಸರಕಾರ ಸೂಚನೆ ನೀಡಿದೆ.

ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್

  • Share this:
ಲಕ್ನೋ(ಸೆ.20): ಯುಪಿಯಲ್ಲಿ (Uttar Pradesh) ಮದರಸಾಗಳ ನಂತರ, ರಾಜ್ಯದ ಯೋಗಿ ಸರ್ಕಾರವು ವಕ್ಫ್ ಮಂಡಳಿಯ ಆಸ್ತಿಗಳ ಸಮೀಕ್ಷೆಯನ್ನು ಸಹ ನಡೆಸಲಿದೆ. ಒಂದು ತಿಂಗಳೊಳಗೆ ಸಮೀಕ್ಷೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Chief Minister Yogi Adityanath) ಸೂಚಿಸಿದ್ದಾರೆ. ಇದೇ ವೇಳೆ ವಕ್ಫ್ ಮಂಡಳಿಯ (Waqf Board) ಆಸ್ತಿಗಳನ್ನು ಕಂದಾಯ ದಾಖಲೆಗಳಲ್ಲಿ ದಾಖಲಿಸಬೇಕು ಎಂದು ಸೂಚನೆ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ರಾಜ್ಯಾದ್ಯಂತ 75 ಜಿಲ್ಲೆಗಳಲ್ಲಿರುವ ಎಲ್ಲ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ದಾಖಲಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಕೈ ಬಿಟ್ಟಿದ್ದೇಕೆ ಆಜಾದ್? ಬಯಲಾಯ್ತು ಒಳಗಿನ ಗುಟ್ಟು, ಇಲ್ಲಿದೆ Exclusive ಇನ್​ಸೈಡ್​ ಸ್ಟೋರಿ!

ಈ ಸಮೀಕ್ಷೆಯ ವೇಳೆ ವಕ್ಫ್ ಮಂಡಳಿಯ ಆಸ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಬೇಕಿದೆ ಎಂಬುದು ಗಮನಿಸಬೇಕಾದ ಸಂಗತಿ. ವಕ್ಫ್ ಆಸ್ತಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿ ಮಾರಾಟ ಮಾಡುವುದನ್ನು ತಡೆಯುವುದು ಇದರ ಹಿಂದಿರುವ ಸರ್ಕಾರದ ಉದ್ದೇಶವಾಗಿದೆ. ಆದೇಶದ ಪ್ರಕಾರ, ಯುಪಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಿಯಾ ಮತ್ತು ಸುನ್ನಿ ವಕ್ಫ್ ಬೋರ್ಡ್‌ಗಳನ್ನು ತನಿಖೆ ಮಾಡಲಾಗುತ್ತದೆ. ಇದರೊಂದಿಗೆ 1989ರಲ್ಲಿ ಕಂದಾಯ ಇಲಾಖೆಯ ಆದೇಶವನ್ನು ರದ್ದುಪಡಿಸಿ ಒಂದು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸುವಂತೆ ಎಲ್ಲ ಜಿಲ್ಲೆಗಳಿಗೆ ಸರ್ಕಾರ ಸೂಚನೆ ನೀಡಿದೆ.

ಉತ್ತರ ಪ್ರದೇಶ ಸರಕಾರದ ಮದರಸಾ ಸಮೀಕ್ಷೆಯ ಪ್ರಕ್ರಿಯೆಗೆ ದಾರೂಲ್ ಉಲುಮ ದೇವಬಂದದ ಬೆಂಬಲ

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮದರಸಾ ಸಮೀಕ್ಷೆಯ ಸಂದರ್ಭದಲ್ಲಿ ಇಸ್ಲಾಮಿಕ್ ಶಿಕ್ಷಣದ ಮುಖ್ಯ ಕೇಂದ್ರ ಇರುವ ದಾರೂಲ್ ಉಲುಮ ದೇವಬಂದನಿಂದ ಇತ್ತಿಚೆಗೆ ಮಹತ್ವದ ಸಭೆ ನೆವೇರಿತು. ಈ ಸಭೆಯಲ್ಲಿ ದಾರೂಲ ಉಲುಮ ದೇವಬಂದ ಸರಕಾರದ ಮದರಸಾಗಳ ಸಮೀಕ್ಷೆಯ ಪ್ರಕ್ರಿಯೆಗೆ ಬೆಂಬಲ ನೀಡಿದೆ. ಇದರ ನಂತರ ಉತ್ತರಪ್ರದೇಶದಲ್ಲಿನ ಮದರಸ ಸಮೀಕ್ಷೆಯ ಮೇಲೆ ರಾಜಕೀಯ ಕಡಿಮೆ ಆಗುವ ಅಪೇಕ್ಷೆ ಇದೆ. ಸರಕಾರಿ ಭೂಮಿಯ ಮೇಲೆ ಕಟ್ಟಲಾಗಿರುವ ಮದರಸಾ ಕಾನೂನುಬಾಹಿರ ಇರುವುದು ದಾರೂಲ್ ಉಲುಮ ಬೈಠಕಿನಲ್ಲಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಮೋದಿ ಕಾರ್ಯಕ್ರಮದಲ್ಲಿ ನಳಿನ್ ಕಟೀಲ್ ವಿರುದ್ಧ ಆಕ್ರೋಶಕ್ಕೆ ಸಿದ್ಧತೆ!

  1. ಮದರಸಾ ಸಮೀಕ್ಷೆಯ ವಿಷಯವಾಗಿ ನಡೆದಿರುವ ಸಭೆಯಲ್ಲಿ ‘ಆಲ್ ಇಂಡಿಯಾ ಜಮೀತ್ ಉಲೇಮಾ-ಎ-ಹಿಂದ’ ನ ಅಧ್ಯಕ್ಷ ಮೌಲಾನ (ಇಸ್ಲಾಮಿ ಅಭ್ಯಾಸಕ) ಅರ್ಷದ ಮದನಿ ಇವರು ಪತ್ರಕರ್ತರ ಸಭೆಯಲ್ಲಿ, ಸರಕಾರವು ಮದರಸಾ ಸಮೀಕ್ಷೆಯ ವಿಷಯವಾಗಿ ನೀಡಿರುವ ಆದೇಶ ಯೋಗ್ಯವಾಗಿದೆ. ಅದರಲ್ಲಿ ಯಾವುದೇ ಕೊರತೆ ಇಲ್ಲ. ಆದ್ದರಿಂದ ಸರಕಾರಕ್ಕೆ ಬೆಂಬಲ ನೀಡಬೇಕು. ದಾರೂಲ ಉಲುಮ ಸರಕಾರದ ಶೈಕ್ಷಣಿಕ ಉದ್ದೇಶದ ಜೊತೆ ಇದೆ, ಎಂದು ಹೇಳಿದರು.

  2.  ದೇವಬಂದಿನ ರಶೀದ್ ಮಸೀದಿಯಲ್ಲಿ ತೆಗೆದುಕೊಳ್ಳಲಾಗಿರುವ ಈ ಸಭೆಯಲ್ಲಿ ರಾಜ್ಯಾದ್ಯಂತ ಇರುವ ದಾರೂಲ್ ಉಲುಮ ದೆವಬಂದ ಜೊತೆ ಇರುವ ಸುಮಾರು ೨೫೦ ಮದರಸಾದ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪತ್ರಕರ್ತರು ಮತ್ತು ಛಾಯಾ ಚಿತ್ರಕಾರರಿಗೆ ಪ್ರವೇಶ ನೀಡಲಾಗಿರಲಿಲ್ಲ. ಕಾರ್ಯಕ್ರಮ ಮುಗಿದ ನಂತರ ದಾರೂಲ್ ಉಲುಮನಿನ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರಿಗೆ ಸಂಪೂರ್ಣ ಮಾಹಿತಿ ನೀಡಲಾಯಿತು.

Published by:Precilla Olivia Dias
First published: