ಮಹಾಘಟಬಂಧನ್​​ಗೆ ಸಿಎಂ ಚಂದ್ರಬಾಬು ನಾಯ್ದು ನೇತೃತ್ವ; ಇಂದು ಮಾಯಾವತಿ ಜತೆ ಮಾತುಕತೆ

ಈಗಾಗಲೇ ಸಿತಾರಾಮ್ ಯೆಚೂರಿ ಅವರನ್ನು ನಾಯ್ಡು ಭೇಟಿ ಮಾಡಿ ಮಾತುಕತೆ ಮುಗಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ಅವರ ಜತೆಗೂ ಮಾತುಕತೆ ನಡೆಸಲಾಗಿದೆ.

Ganesh Nachikethu | news18
Updated:May 18, 2019, 8:25 PM IST
ಮಹಾಘಟಬಂಧನ್​​ಗೆ ಸಿಎಂ ಚಂದ್ರಬಾಬು ನಾಯ್ದು ನೇತೃತ್ವ; ಇಂದು ಮಾಯಾವತಿ ಜತೆ ಮಾತುಕತೆ
ಸಿಎಂ ಚಂದ್ರಬಾಬು ನಾಯ್ಡು
Ganesh Nachikethu | news18
Updated: May 18, 2019, 8:25 PM IST
ನವದೆಹಲಿ(ಮೇ.18): ಬಿಜೆಪಿ ವಿರೋಧಿ ಪಕ್ಷಗಳನ್ನು ಒಗ್ಗೂಡಿಸಿ ಕೇಂದ್ರದಲ್ಲಿ ಸರ್ಕಾರ ರಚನೆಗೆ ಮುಂದಾಗಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಇಂದು ಮಹತ್ವದ ಸಭೆ ನಡೆಸಲಿದ್ದಾರೆ. ಮೊದಲು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಉತ್ತರ ಪ್ರದೇಶಕ್ಕೆ ತೆರಳಿ ಬಿಎಸ್​​ಪಿ ನಾಯಕಿ ಮಾಯಾವತಿ ಮತ್ತು ಎಸ್​​ಪಿ ನಾಯಕ ಅಖಿಲೇಶ್ ಯಾದವ್ ಅವರ ಜತೆಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

"ಅಷ್ಟೇ ಅಲ್ಲದೇ ಬಿಜೆಪಿ ವಿರುದ್ಧದ ಎಲ್ಲಾ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ಸಿಎಂ ಕೆಸಿಆರ್​​ ನೇತೃತ್ವದ ಟಿಆರ್​​ಎಸ್​​​ ಮಹಾಘಟಬಂಧನ್​​​ ಸೇರಲು ಮುಂದಾಗಿದೆ. ಹೀಗೆ ಕೇಸರಿ ಪಕ್ಷವನ್ನು ವಿರೋಧಿಸುವ ಯಾವುದೇ ಪಕ್ಷವಾಗಲೀ ನಮ್ಮ ಜೊತೆ ಕೈಜೋಡಿಸಬಹುದು" ಎಂದು ಸಿಎಂ ಚಂದ್ರಬಾಬು ನಾಯ್ಡು ಅವರು ಘೋಷಿಸಿದ್ದಾರೆ.

ಹಾಗೆಯೇ ತೆಲುಗು ದೇಶಂ ಪಕ್ಷದ ನಾಯಕ ನಾಯ್ಡೂ ಅವರು, ಎನ್​​ಸಿಪಿ ಮುಖಂಡ ಶರದ್ ಪವಾರ್ ಅವರನ್ನು ಭೇಟಿ ಮಾಡಲಿದ್ದಾರಂತೆ. ಸಿಪಿಐ ಮುಖಂಡ ಸುರವರಂ ಸುಧಾಕರ್ ರೆಡ್ಡಿ, ಎಲ್​ಜೆಡಿ ನಾಯಕ ಶರದ್ ಯಾದವ್ ಅವರ ಜತೆಗೆ ಮಾತುಕತೆಗೆ ನಾಯ್ಡು ಮುಂದಾಗಿದ್ದಾರೆ.

ಇದನ್ನೂ ಓದಿ: ಕೊನೆ ಹಂತದ ಚುನಾವಣೆ: ಒಂದು ಕೇಂದ್ರಾಡಳಿತ ಪ್ರದೇಶ ಸೇರಿದಂತೆ 7 ರಾಜ್ಯಗಳ 59 ಕ್ಷೇತ್ರಗಳಿಗೆ ನಾಳೆ ಮತದಾನ

ಇತ್ತೀಚೆಗೆ ಆಂಧ್ರಪ್ರದೇಶದ ಐದು ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಆದೇಶ ನೀಡಿದ ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಕೆಂಡಾಮಂಡಲವಾಗಿದ್ದರು. "ಚುನಾವಣಾ ಆಯೋಗ ನಾವು ಯಾವುದೇ ಬೇಡಿಕೆ ಇಟ್ಟರೂ ಅದಕ್ಕೆ ಕಿವಿಗೊಡುವುದಿಲ್ಲ. ಆದರೆ ಮರುಮತದಾನ ಮಾಡಬೇಕು ಎಂಬ ವೈಎಸ್​ಆರ್​​ ಕಾಂಗ್ರೆಸ್ ಮನವಿಗೆ ಮಾತ್ರ ಕಿವಿಗೊಡುತ್ತದೆ. ಇಂಥ ತಾರಮ್ಯದ ನಿರ್ಣಯವನ್ನು ನಾವು ವಿರೋಧಿಸುತ್ತೇವೆ" ಎಂದು ನಾಯ್ಡು ಕಿಡಿಕಾರಿದ್ದರು.

ಚಂದ್ರಗಿರಿ ಲೋಕಸಭೆ ಕ್ಷೇತ್ರದ ಅಡಿಯಲ್ಲಿ ಬರುವ ಮತಗಟ್ಟೆ ಸಂಖ್ಯೆ 166 ಮತ್ತು ಚಿತ್ತೋರ್ ಕ್ಷೇತ್ರದ ಅಡಿ ಬರುವ ಮತಗಟ್ಟೆ ಸಂಖ್ಯೆ 25 ರಲ್ಲಿ ಮರುಮತದಾನಕ್ಕೆ ಚುನಾವಣಾ ಆಯೋಗ ಆದೇಶ ನೀಡಿದೆ.ಇದನ್ನೂ ಓದಿ: ಬಿಡುಗಡೆ ಆಯ್ತು 'ನಿಖಿಲ್ ಎಲ್ಲಿದ್ದೀಯಪ್ಪಾ' ಫಸ್ಟ್​ಲುಕ್ ಫೋಸ್ಟರ್: ಹೀರೋ ಯಾರು?

ಈಗಾಗಲೇ ಸಿತಾರಾಮ್ ಯೆಚೂರಿ ಅವರನ್ನು ನಾಯ್ಡು ಭೇಟಿ ಮಾಡಿ ಮಾತುಕತೆ ಮುಗಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ಅವರ ಜತೆಗೂ ಮಾತುಕತೆ ನಡೆಸಲಾಗಿದೆ. ಮೇ 19 ರಂದು ಏಳನೇ ಹಂತದ ಲೋಕಸಭೆ ಚುನಾವಣೆ ಮುಕ್ತಾಯವಾಗಲಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ.
---------
First published:May 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ