63 ಜನರ ಪ್ರಾಣ ತೆಗೆದ ಕಾಬೂಲ್​ ದಾಳಿ ಬಳಿಕ ಅಘ್ಘಾನ್​ನ ಜಲಾಲಾಬಾದ್​ನಲ್ಲಿ ಸರಣಿ ಬಾಂಬ್​ ಸ್ಫೋಟ; 34 ಮಂದಿಗೆ ಗಾಯ

ರಾಜಧಾನಿ ಕಾಬೂಲ್​ನಲ್ಲಿ ವಾರಾಂತ್ಯದಂದು ಮದುವೆ ಆರತಕ್ಷತೆ ವೇಳೆ ನಡೆದ ಬಾಂಬ್​ ದಾಳಿಯ ಹೊಣೆಯನ್ನು ಐಎಸ್​ ಹೊತ್ತುಕೊಂಡಿತ್ತು. ಈ ದಾಳಿಯಲ್ಲಿ 63 ಮಂದಿ ಮೃತಪಟ್ಟು, 200 ಮಂದಿ ಗಾಯಗೊಂಡಿದ್ದರು.

HR Ramesh | news18
Updated:August 19, 2019, 6:55 PM IST
63 ಜನರ ಪ್ರಾಣ ತೆಗೆದ ಕಾಬೂಲ್​ ದಾಳಿ ಬಳಿಕ ಅಘ್ಘಾನ್​ನ ಜಲಾಲಾಬಾದ್​ನಲ್ಲಿ ಸರಣಿ ಬಾಂಬ್​ ಸ್ಫೋಟ; 34 ಮಂದಿಗೆ ಗಾಯ
ಅಘ್ಘಾನಿಸ್ತಾನದ ಜಲಾಲಾಬಾದ್​ನಲ್ಲಿ ನಡೆದ ಬಾಂಬ್​ ಸ್ಫೋಟದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುತ್ತಿರುವುದು.
  • News18
  • Last Updated: August 19, 2019, 6:55 PM IST
  • Share this:
ಕಾಬೂಲ್​: ಪೂರ್ವ ಆಫ್ಘಾನ್​ನ ಜಲಾಲಾಬಾದ್​ ನಗರದ ರೆಸ್ಟೋರೆಂಟ್​ ಮತ್ತು ಸಾರ್ವಜನಿಕ ಸ್ದಳಗಳಲ್ಲಿ ಸೋಮವಾರ ಸರಣಿ ಬಾಂಬ್​ ಸ್ಫೋಟ ನಡೆದಿದೆ. ಈ ಸ್ಪೋಟದಲ್ಲಿ 34 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 100ನೇ ಸ್ವಾತಂತ್ರ್ಯ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ದೇಶದಲ್ಲಿ ಭಯೋತ್ಪಾದಕರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ.

ಈ ಸರಣಿ ಬಾಂಬ್​ ಸ್ಪೋಟದ ಜವಾಬ್ದಾರಿಯನ್ನು ಈವರೆಗೂ ಯಾವ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ. ಆದರೆ, ಈ ಪ್ರದೇಶವು ಇಸ್ಲಾಮಿಕ್​ ಸ್ಟೇಟ್​ (ಐಎಸ್​) ಮತ್ತು ತಾಲಿಬಾನ್​ ಉಗ್ರ ಸಂಘಟನೆಗಳು ಕಾರ್ಯಾಚರಣೆ ನಡೆಸುವ ಸ್ಥಳಗಳಾಗಿವೆ.

ಸ್ವಾತಂತ್ರ್ಯೋತ್ಸವ ಅಂಗವಾಗಿ ಜಲಾಲಾಬಾದ್​ ನಗರದ ಮಾರುಕಟ್ಟೆ ಪ್ರದೇಶದಲ್ಲಿ ನೂರಾರು ಜನರು ಸೇರುತ್ತಾರೆ. ಇದೇ ಸಮಯ ನೋಡಿಕೊಂಡು ಈ ಸರಣಿ ಬಾಂಬ್​ ದಾಳಿ ನಡೆಸಲಾಗಿದೆ ಎಂದು ಹಿರಿಯ ಆರೋಗ್ಯ ಅಧಿಕಾರಿ ಫಹೀಮಾ ಬಾಷರಿ ತಿಳಿಸಿದ್ದಾರೆ.

ಅಧ್ಯಕ್ಷ ಅಶ್ರಫ್​ ಘನಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡುವಾಗ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಅಘ್ಘಾನ್​ ಜೊತೆಗೆ ನಿಲ್ಲುವಂತೆ ಜಾಗತಿಕ ಸಮುದಾಯಕ್ಕೆ ಕರೆ ನೀಡಿದ್ದರು. ಅವರ ಭಾಷಣದ ಬಳಿಕ ಉಗ್ರರು ತಮ್ಮ ಅಟ್ಟಹಾಸ ತೋರಿದ್ದಾರೆ.

First published: August 19, 2019, 6:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading