ಟ್ವಿಟ್ಟರ್​ನಲ್ಲಿ ಮೋದಿಗೆ ಉಘೇ ಉಘೇ; ಭಾರತೀಯ ವಾಯುಪಡೆಗೆ ರಾಜಕೀಯ ನಾಯಕರ ಸಲಾಮ್​

India Strikes Pakistan LIVE Updates: ಪ್ರಧಾನಿ ನರೇಂದ್ರ ಮೋದಿ ಅವರದ್ದು 56 ಇಂಚಿನ ಎದೆ ಎಂದು ಈ ಮೊದಲಿನಿಂದಲೂ ಬಿಜೆಪಿ ಬೆಂಬಲಿಗರು ಹೇಳುತ್ತಾ ಬರುತ್ತಿದ್ದಾರೆ. ಈ ದಾಳಿ ನಂತರದಲ್ಲಿ ಅದು ಮತ್ತೊಮ್ಮೆ ಸಾಬೀತಾಗಿದೆ ಎಂದು ಬಿಜೆಪಿ ಹೇಳಿದೆ. ಟ್ವಿಟ್ಟರ್​ನಲ್ಲಿ ಸರ್ಜಿಕಲ್​​ ಸ್ಟ್ರೈಕ್​ 2 ತುಂಬಾನೇ ಟ್ರೆಂಡ್​ ಆಗಿದೆ.

ರಫೇಲ್ ಜೆಟ್

ರಫೇಲ್ ಜೆಟ್

  • News18
  • Last Updated :
  • Share this:
ನವದೆಹಲಿ (ಫೆ.26): ಪುಲ್ವಾಮಾ ದಾಳಿ ನಡೆದು ಕೇವಲ 10 ದಿನಗಳಲ್ಲಿ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂಥ ಉತ್ತರ ನೀಡಿದೆ. ಭಾರತೀಯ ಯುದ್ಧ ವಿಮಾನಗಳು ಪಾಕ್​ ಗಡಿ ಪ್ರವೇಶಿಸಿ ಜೈಶ್​-ಇ-ಮೊಹ್ಮದ್​​ ಉಗ್ರ ಸಂಘಟನೆಯ ಅಡಗು ತಾಣಗಳನ್ನು ರಾತ್ರಿ ಬೆಳಗಾಗುವದರೊಳಗೆ ನಾಶ ಮಾಡಿ ಹಾಕಿದೆ. ಈ ಆಘಾತಕ್ಕೆ ಪಾಕ್​ ತತ್ತರಿಸಿದೆ. ಟ್ವಿಟ್ಟರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ದಿಟ್ಟ ನಿರ್ಧಾರಕ್ಕೆ ಹಿಂಬಾಲಕರು ಉಘೇ ಉಘೇ ಎನ್ನುತ್ತಿದ್ದಾರೆ.

ಕೇವಲ 30 ನಿಮಿಷಗಳ ಕಾಲ ನಡೆದ ಈ ದಾಳಿಯಲ್ಲಿ ಸುಮಾರು 200-300 ಉಗ್ರರು ಸತ್ತಿದ್ದಾರೆ ಎನ್ನಲಾಗಿದೆ. ಭಾರೀ ಪ್ರಮಾಣದ ಸ್ಫೋಟಕಗಳನ್ನು ಉಗ್ರರ ಅಡುಗು ತಾಣಗಳ ಮೇಲೆ ಹಾಕಲಾಗಿದೆಯಂತೆ. ಈ ಬಗ್ಗೆ ಟ್ವಿಟ್ಟರ್​ನಲ್ಲಿ ಮೋದಿಗೆ ಜಯಕಾರ ಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರದ್ದು 56 ಇಂಚಿನ ಎದೆ ಎಂದು ಈ ಮೊದಲಿನಿಂದಲೂ ಬಿಜೆಪಿ ಬೆಂಬಲಿಗರು ಹೇಳುತ್ತಾ ಬರುತ್ತಿದ್ದಾರೆ. ಈ ದಾಳಿ ನಂತರದಲ್ಲಿ ಅದು ಮತ್ತೊಮ್ಮೆ ಸಾಬೀತಾಗಿದೆ ಎಂದು ಬಿಜೆಪಿ ಹೇಳಿದೆ. ಟ್ವಿಟ್ಟರ್​ನಲ್ಲಿ ಸರ್ಜಿಕಲ್​​ ಸ್ಟ್ರೈಕ್​ 2 ತುಂಬಾನೇ ಟ್ರೆಂಡ್​ ಆಗಿದೆ.

ಇದನ್ನೂ ಓದಿ: ಪುಲ್ವಾಮಾ ದಾಳಿಗೆ ಪ್ರತೀಕಾರ: ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ದಾಳಿ ನಡೆಸಿದ ಭಾರತೀಯ ಯುದ್ಧ ವಿಮಾನಗಳು?

ಪಾಕಿಸ್ತಾನಕ್ಕೆ ಭಾರತ ತಕ್ಕ ಉತ್ತರ ನೀಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಗ್ಗೆ ಅನೇಕರು ಮೀಮ್​ಗಳನ್ನು ಮಾಡುವ ಮೂಲಕ ಭಾರತೀಯ ಸೇನೆಗೆ ಜೈಕಾರ ಹಾಕಿದ್ದಾರೆ.ರಾಜಕೀಯ ನಾಯಕರು ಭಾರತೀಯ ವಾಯು ಸೇನೆ ಕೆಲಸವನ್ನು ಶ್ಲಾಘಿಸಿದ್ದಾರೆ.


First published: