TikTok Ban: ಭಾರತದಲ್ಲಿ ಸಂಪೂರ್ಣವಾಗಿ ಕಾರ್ಯ ಸ್ಥಗಿತ ಮಾಡಿದ ಟಿಕ್​ ಟಾಕ್​

ಭದ್ರತಾ ದೃಷ್ಟಿಯಿಂದ ಚೀನಾದ ಆ್ಯಪ್​ಗಳನ್ನು ಬ್ಯಾನ್​ ಮಾಡಿರುವುದಾಗಿ ಸರ್ಕಾರ ತಿಳಿಸಿತ್ತು. ಇದಾದ ಬೆನ್ನಲ್ಲೇ ಪ್ಲೇ ಸ್ಟೋರ್​ನಿಂದ ಟಿಕ್​ ಟಾಕ್​ ಆ್ಯಪ್ ಡಿಲೀಟ್​ ಮಾಡಲಾಗಿತ್ತು. ಆದಾಗ್ಯೂ ಈ ಆ್ಯಪ್ ಕಾರ್ಯನಿರ್ವಹಿಸುತ್ತಿತ್ತು.

news18-kannada
Updated:July 1, 2020, 8:48 AM IST
TikTok Ban: ಭಾರತದಲ್ಲಿ ಸಂಪೂರ್ಣವಾಗಿ ಕಾರ್ಯ ಸ್ಥಗಿತ ಮಾಡಿದ ಟಿಕ್​ ಟಾಕ್​
ಟಿಕ್​ ಟಾಕ್​
  • Share this:
ಚೀನಾದ 59 ಆ್ಯಪ್​ಗಳನ್ನು ಬ್ಯಾನ್​ ಮಾಡಿ ಕೇಂದ್ರ ಸರ್ಕಾರ ಸೋಮವಾರ ಸಂಜೆ ಆದೇಶ ಹೊರಡಿಸಿತ್ತು.  ಭದ್ರಯಾ ದೃಷ್ಟಿಯಿಂದ ಈ ಆ್ಯಪ್​ಗಳನ್ನು ಬ್ಯಾನ್​ ಮಾಡಿರುವುದಾಗಿ ಸರ್ಕಾರ ತಿಳಿಸಿತ್ತು. ಈಗ ಈ ಆ್ಯಪ್ ಭಾರತದಲ್ಲಿ ಕಾರ್ಯ ನಿರ್ವಹಿಸುವುದನ್ನು ಸಂಪೂರ್ಣವಾಗಿ ಸ್ಥಗಿತ ಮಾಡಿದೆ.

ಭದ್ರತಾ ದೃಷ್ಟಿಯಿಂದ ಚೀನಾದ ಆ್ಯಪ್​ಗಳನ್ನು ಬ್ಯಾನ್​ ಮಾಡಿರುವುದಾಗಿ ಸರ್ಕಾರ ತಿಳಿಸಿತ್ತು. ಇದಾದ ಬೆನ್ನಲ್ಲೇ ಪ್ಲೇ ಸ್ಟೋರ್​ನಿಂದ ಟಿಕ್​ ಟಾಕ್​ ಆ್ಯಪ್ ಡಿಲೀಟ್​ ಮಾಡಲಾಗಿತ್ತು. ಆದಾಗ್ಯೂ ಈ ಆ್ಯಪ್ ಕಾರ್ಯನಿರ್ವಹಿಸುತ್ತಿತ್ತು. ಇದನ್ನು ನೋಡಿದ ಅನೇಕರು ಸಂತಸ ವ್ಯಕ್ತವಪಡಿಸಿದ್ದರು. ಆದರೆ, ಸೋಮವಾರ ಸಂಜೆ ವೇಳೆಗೆ ಆ್ಯಪ್ ಕಾರ್ಯವನ್ನು ಸ್ಥಗಿತಗೊಳಿಸಿದೆ.



ಇದನ್ನೂ ಓದಿ: ಬಳಕೆದಾರರ ಮಾಹಿತಿಯನ್ನು ಚೀನಾಗೆ ಮಾರುವುದಿಲ್ಲ, ಎಲ್ಲಾ ನಿಯಮಗಳನ್ನು ಪಾಲಿಸುತ್ತೇವೆ; ಸ್ಪಷ್ಟನೆ ನೀಡಿದ ಟಿಕ್​ ಟಾಕ್​

ಟಿಕ್​ ಟಾಕ್​ ಆ್ಯಪ್ ಓಪನ್​ ಮಾಡಿದ ವೇಳೆ ನೆಟ್ವರ್ಕ್​ ಎರರ್​ ತೋರಿಸುತ್ತಿದೆ. ಅಲ್ಲದೆ ಒಂದು ವಿಶೇಷ ಪತ್ರ ಕೂಡ ಬರೆಯಲಾಗಿದೆ. "ಭಾರತದ ಕಾನೂನಿನ ಅಡಿಯಲ್ಲಿ ಡಾಟಾ ಖಾಸಗಿತನಕ್ಕೆ ಸಂಬಂಧಿಸಿದಂತೆ ಯಾವೆಲ್ಲ ನಿಯಮಗಳಿವೆಯೋ ಅದನ್ನು ನಾವು ಪಾಲಿಸುತ್ತೇವೆ. ಟಿಕ್​ ಟಾಕ್​ನ ಮಾಹಿತಿಯನ್ನು ಚೀನಾ ಸೇರಿದಂತೆ ಯಾವ ಸರ್ಕಾರದ ಜೊತೆಗೂ ನಾವು ಹಂಚಿಕೊಳ್ಳುವುದಿಲ್ಲ. ನಮ್ಮ ಬಳಕೆದಾರರ ಮಾಹಿತಿಯನ್ನು ಗೌಪ್ಯವಾಗಿಡುವುದು ನಮ್ಮ ಮೊದಲ ಆದ್ಯತೆ,"ಎಂದು ಟಿಕ್​ ಟಾಕ್​ನಲ್ಲಿ ಬರೆದುಕೊಳ್ಳಲಾಗಿದೆ.
First published:July 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading