ಕೋಲ್ಕತ್ತಾ: ಚಿನ್ನ (Gold), ಬೆಳ್ಳಿ, ಹಸುಗಳನ್ನು ಕಳ್ಳ ಸಾಗಣೆ (Smuggling) ಮಾಡಿರುವುದನ್ನು ನೋಡಿದ್ದೇವೆ. ಆದರೆ ಮೀನಿನ ಮೊಟ್ಟೆಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದರೆ ನೀವು ನಂಬುತ್ತೀರಾ? ಈ ಸುದ್ದಿ ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಬಿಎಸ್ಎಫ್ ತಂಡ (BSF) ಸುಮಾರು ಎರಡು ಬಾರಿ ಕಳ್ಳಸಾಗಣಿಕೆಗಾರರ ಮೇಲೆ ದಾಳಿ ಮಾಡಿ ಒಮ್ಮೆ 5 ಲಕ್ಷ 75 ಸಾವಿರ ಮೌಲ್ಯ ಮೀನಿನ ಮೊಟ್ಟೆಗಳು (Fish Eggs) ಹಾಗೂ ಎರಡನೇ ಬಾರಿಯೂ ಸುಮಾರು 2 ಲಕ್ಷ 85 ಸಾವಿರ ಮೌಲ್ಯದ ಮೀನಿನ ಮೊಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಚಿನ್ನ-ಬೆಳ್ಳಿ, ದನ ಕಳ್ಳಸಾಗಣೆ ಆರೋಪಗಳಿದ್ದವು. ಜೊತೆಗೆ, ಗಡಿಯಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಕರಣಗಳು ಸಹ ಕೇಳಿ ಬಂದಿವೆ. ಈ ಆರೋಪದ ಮೇಲೆ ಹಲವು ಕಳ್ಳಸಾಗಾಣಿಕೆದಾರರನ್ನು ಗಡಿ ಕಾವಲು ಪಡೆ ಬಂಧಿಸಿದೆ.
ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಅಕ್ರಮ
ಮೀನಿನ ಮೊಟ್ಟೆ ಕಳ್ಳಸಾಗಣೆ ಆರೋಪದ ಮೇಲೆ ಹಲವು ಕಳ್ಳಸಾಗಾಣಿಕೆದಾರರನ್ನು ಗಡಿ ಕಾವಲು ಪಡೆ (ಬಿಎಸ್ಎಫ್) ಬಂಧಿಸಿದೆ. ಬಾರ್ಡರ್ ಗಾರ್ಡ್ ಪ್ರಕಾರ, ದಕ್ಷಿಣ ಬಂಗಾಳದ ಗಡಿಯಲ್ಲಿರುವ ರಾಣಾಘಾಟ್ ಪ್ರದೇಶದಲ್ಲಿ 68 ನೇ ಬೆಟಾಲಿಯನ್ ಜವಾನರು ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೇಳೆ ಕೆಲವು ಕಳ್ಳಸಾಗಣೆದಾರರು ಭಾರತದಿಂದ ಬಾಂಗ್ಲಾದೇಶಕ್ಕೆ ಅನುಮಾನಸ್ಪದವಾಗಿ ಏನನ್ನೋ ಕಳ್ಳತನವಾಗಿ ಸಾಗಣೆ ಮಾಡಲು ಪ್ರಯತ್ನಿಸುತ್ತಿರುವುದು ಪತ್ತೆಯಾಗಿದೆ.
10-12 ಕಳ್ಳಸಾಗಾಣಿಕೆದಾರರು ಪ್ಲಾಸ್ಟಿಕ್ ಕವರ್ಗಳೊಂದಿಗೆ ಗಡಿಯತ್ತ ಸಾಗುತ್ತಿರುವುದನ್ನು ಕಂಡು, ಕರ್ತವ್ಯದಲ್ಲಿದ್ದ ಯೋಧರು ರೇಡಿಯೊ ಸೆಟ್ ಮೂಲಕ ಉಸ್ತುವಾರಿ ಅಧಿಕಾರಿಗೆ ಎಚ್ಚರಿಕೆ ನೀಡಿದ್ದಾರೆ. ಸ್ವಲ್ಪ ಸಮಯದ ನಂತರ, ಯೋಧರು ಅವರನ್ನು ಬೆನ್ನಟ್ಟಿದಾಗ, ಹೆದರಿದ ಕಳ್ಳಸಾಗಾಣಿಕೆದಾರರು ಭಯಭೀತರಾಗಿ ತಮ್ಮ ಹೆಗಲ ಮೇಲಿದ್ದ ಚೀಲಗಳನ್ನು ಕೆಳಗೆ ಇಳಿಸಿ ದಟ್ಟವಾದ ಪೊದೆಯಲ್ಲಿ ನುಗ್ಗಿ ಗಡಿಗ್ರಾಮದೊಳಗೆ ಪರಾರಿಯಾಗಿದ್ದಾರೆ.
ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ
ಭದ್ರತಾ ಸಿಬ್ಬಂದಿ ಇಡೀ ಪ್ರದೇಶವನ್ನು ಶೋಧಿಸಿದ ನಂತರ, ಯೋಧರು ಘಟನಾ ಸ್ಥಳದಲ್ಲಿ ಮೀನಿನ ಮೊಟ್ಟೆಗಳು ತುಂಬಿದ್ದ ಹಲವು ಕವರ್ಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 19 ಪ್ಲಾಸ್ಟಿಕ್ ಬ್ಯಾಗ್ಗಳಲ್ಲಿ ಈ ಮೊಟ್ಟೆಗಳನ್ನು ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಇದರ ಅಂದಾಜು ಬೆಲೆ ಸುಮಾರು 85 ಸಾವಿರ ರೂಪಾಯಿ ಎಂದು ತಿಳಿದುಬಂದಿದೆ. ಈ ಮೀನಿನ ಮೊಟ್ಟೆಯ ಪ್ಯಾಕೆಟ್ಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೇ ಮೊದಲೇನಲ್ಲ
ಇದಕ್ಕೂ ಮುನ್ನ ಕೆಲವು ದಿನಗಳ ಹಿಂದೆ ಬೋಲ್ಟೋಲಾದ ಗಡಿ ಪ್ರದೇಶದಿಂದ ಇದೇ ರೀತಿಯ ಮೀನಿನ ಮೊಟ್ಟೆಗಳನ್ನು ತುಂಬಿದ ಚೀಲವನ್ನು ವಶಪಡಿಸಿಕೊಳ್ಳಲಾಯಿತು. ತಡರಾತ್ರಿ, ಕೆಲವು ಕಳ್ಳರು ವ್ಯಾಪಾರಿಗಳು ಮೊಟ್ಟೆಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ಕಂಡುಬಂದಿದೆ. ಹೆಗಲ ಮೇಲೆ ಗೋಣಿಚೀಲ ಹಿಡಿದು ಗಡಿಯತ್ತ ವೇಗವಾಗಿ ಸಾಗುತ್ತಿದ್ದರು. ಬೋಲ್ಟೋಲಾ ಗಡಿ ಪೋಸ್ಟ್‌ನಲ್ಲಿ ನಿಯೋಜಿಸಲಾದ 118ನೇ ಗಡಿ ಕಾವಲು ಪಡೆಯ ಸೈನಿಕರು ಅವರನ್ನು ಬೆನ್ನಟ್ಟಿ ನಿಲ್ಲಲು ಹೇಳಿದ್ದಾರೆ. ಆದರೆ ಸೈನಿಕರನ್ನು ಕಂಡ ಕಳ್ಳಸಾಗಣೆದಾರರು ಭಯಗೊಂಡು. ಬ್ಯಾಗ್ ಬಿಟ್ಟು ಓಡಿ ಹೋಗಿದ್ದರು ಎಂದು ವರದಿಯಾಗಿದೆ.
ಬಳಿಕ ರಾತ್ರಿ ಎಲ್ಲಾ ಆ ಪ್ರದೇಶದಲ್ಲಿ ಶೋಧ ನಡೆಸಲಾಗಿದ್ದು, ಮೊದಲಿಗೆ ಮೀನಿನ ಮೊಟ್ಟೆ ತುಂಬಿದ್ದ 21 ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದಲ್ಲದೆ, ಘೋಜದಂಗ ಬಾರ್ಡರ್ ಔಟ್‌ಪೋಸ್ಟ್, 153 ನೇ ಬಾರ್ಡರ್ ಗಾರ್ಡ್ ಮತ್ತು 118ನೇ ಬಾರ್ಡರ್ ಗಾರ್ಡ್‌ನ ಜವಾನರು ತಮ್ಮ ಪ್ರದೇಶಗಳಿಂದ ಪ್ಲಾಸ್ಟಿಕ್ ಚೀಲಗಳಲ್ಲಿ 20 ಮೀನಿನ ಮೊಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ