• Home
  • »
  • News
  • »
  • national-international
  • »
  • Jignesh Mevani: ಜಾಮೀನಿನ ಮೇಲೆ ಹೊರ ಬರುತ್ತಿದ್ದಂತೆ 'ಪುಷ್ಪ' ಸಿನಿಮಾ​ ಡೈಲಾಗ್​ ಹೊಡೆದ ಗುಜರಾತ್​ ಶಾಸಕ

Jignesh Mevani: ಜಾಮೀನಿನ ಮೇಲೆ ಹೊರ ಬರುತ್ತಿದ್ದಂತೆ 'ಪುಷ್ಪ' ಸಿನಿಮಾ​ ಡೈಲಾಗ್​ ಹೊಡೆದ ಗುಜರಾತ್​ ಶಾಸಕ

ಜಿಗ್ನೇಶ್​ ಮೇವಾನಿ

ಜಿಗ್ನೇಶ್​ ಮೇವಾನಿ

ಅಲ್ಲು ಅರ್ಜುನ್'​ ಗಡ್ಡವನ್ನು ಸವರುತ್ತಾ 'ಬಗ್ಗುವ ಮಾತೇ ಇಲ್ಲ' ಎಂಬ ಡೈಲಾಗ್​ ಬಹಳಷ್ಟು ಜನಪ್ರಿಯತೆ ಪಡೆದಿತ್ತು. ಅದನ್ನೇ ಬಳಸಿಕೊಂಡಿರುವ ಯುವ ಶಾಸಕ ತಮ್ಮ ವಿರುದ್ಧ ಏನೇ ಷಡ್ಯಂತ್ರ ನಡೆದರೂ ಬಗ್ಗುವುದಿಲ್ಲ ಎಂದು ಥೇಟ್​ 'ಅಲ್ಲು ಅರ್ಜುನ್​' ಶೈಲಿಯಲ್ಲಿ ಹೇಳಿ ಗಮನ ಸೆಳೆದಿದ್ದಾರೆ.

ಮುಂದೆ ಓದಿ ...
  • Share this:

    ಮಹಿಳಾ ಪೊಲೀಸ್​ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಗುಜರಾತ್​​ನ ವಡ್ಗಾಮ್ ​ ಶಾಸಕ ಜಿಗ್ನೇಶ್​ ಮೇವಾನಿಗೆ (Jignesh Mevani)  ಅಸ್ಸಾಂ ನ್ಯಾಯಾಲಯ (Assam Court)  ಜಾಮೀನು (Bail) ನೀಡಿದೆ. ಜಾಮೀನು ಮಂಜೂರಾಗಿ ಜೈಲಿನಿಂದ ಹೊರ ಬಂದ ಬಳಿಕ ಮಾತನಾಡಿದ ಜಿಗ್ನೇಶ್​ ಮೇವಾನಿ ತಮ್ಮ ವಿರುದ್ಧ ಪ್ರಕರಣ ರೂಪಿಸಲು ಮಹಿಳೆಯರನ್ನು ಬಳಸಿಕೊಳ್ಳುವ ಮೂಲಕ ಬಿಜೆಪಿ ಹೇಡಿತನದ ಕೆಲಸ ಮಾಡಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ, ಇದನ್ನು ತೆಲುಗು ಜನಪ್ರಿಯ ಚಿತ್ರ 'ಪುಷ್ಪ' (Pushpa) ಡೈಲಾಗ್ ಹೊಡೆಯುವ ಮೂಲಕ ತಿಳಿಸಿದ್ದಾರೆ.


    ಬಗ್ಗೋ ಮಾತೇ ಇಲ್ಲ ಎಂದ ವಡ್ಗಾಮ್​ ಶಾಸಕ


    ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪದಲ್ಲಿ ನಟ ಅಲ್ಲು ಅರ್ಜುನ್'​ ಗಡ್ಡವನ್ನು ಸವರುತ್ತಾ 'ಬಗ್ಗುವ ಮಾತೇ ಇಲ್ಲ' ಎಂಬ ಡೈಲಾಗ್​ ಬಹಳಷ್ಟು ಜನಪ್ರಿಯತೆ ಪಡೆದಿತ್ತು. ಅದನ್ನೇ ಬಳಸಿಕೊಂಡಿರುವ ಯುವ ಶಾಸಕ ತಮ್ಮ ವಿರುದ್ಧ ಏನೇ ಷಡ್ಯಂತ್ರ ನಡೆದರೂ ಬಗ್ಗುವುದಿಲ್ಲ ಎಂದು ಥೇಟ್​ 'ಅಲ್ಲು ಅರ್ಜುನ್​' ಶೈಲಿಯಲ್ಲಿ ಹೇಳಿ ಗಮನ ಸೆಳೆದಿದ್ದಾರೆ.


    ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್​


    ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಲವು ಆಕ್ಷೇಪಾರ್ಹ ಟ್ವೀಟ್ ಗೆ ಸಂಬಂಧಿಸಿದಂತೆ ವಡ್ಗಾಮ್ ಶಾಸಕ ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ಮೊದಲು ಬಂಧಿಸಿದ್ದರು. ತದನಂತರ ಮಹಿಳಾ ಪೊಲೀಸ್ ಪೇದೆ ಮೇಲೆ ಹಲ್ಲೆ ಸೇರಿದಂತೆ ವಿವಿಧ ಆರೋಪಗಳ ಮೇಲೆ ಏಪ್ರಿಲ್ 25 ರಂದು ಅಸ್ಸಾಂ ಪೊಲೀಸರು ಗುಜರಾತ್ ಶಾಸಕರನ್ನು ಮತ್ತೆ ಬಂಧಿಸಲಾಗಿತ್ತು.
    ಈ ಪ್ರಕರಣ ಸಂಬಂಧ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದ ಬಾರ್ಪೇಟಾ ಸೆಷನ್ಸ್ ಕೋರ್ಟ್ ಅವರ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಸೆಷನ್ಸ್ ಕೋರ್ಟ್, 1 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಿದೆ.


    ಇನ್ನು ತಮ್ಮ ಬಂಧನ ಕುರಿತು ಮಾತನಾಡಿದ ಅವರು, ನನ್ನ ಬಂಧನ ಅಷ್ಟು ಸುಲಭದ ಮಾತಲ್ಲ. ಪ್ರಧಾನ ಮಂತ್ರಿ ಕಚೇರಿಯ ರಾಜಕೀಯ ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಇದನ್ನು ಮಾಡಿರಬೇಕು ಎಂದು ಆರೋಪಿಸಿದ್ದಾರೆ.


    ಇದನ್ನು ಓದಿ: Thrissur ನಲ್ಲಿ ಪ್ರಾಣಭಯದಿಂದ ಓಡಿದ ಕುದುರೆಗಳು: ಸರಣಿ ಅಪಘಾತ, ಒಂದು ಕುದುರೆಯ ಸಾವು


    ಶಾಸಕನಾಗಿ ನನ್ನ ಕರ್ತವ್ಯ ಮಾಡಿದ್ದೇನೆ
    ನಾನು ಮಾಡಿದ ಟ್ವೀಟ್ ಬಗ್ಗೆ ನನಗೆ ಈಗಲೂ ಹೆಮ್ಮೆ ಇದೆ. ಟ್ವೀಟ್‌ನಲ್ಲಿ, ನಾನು ಕೋಮು ವರ್ಗಗಳು ಸಂಭವಿಸಿದ ಗಲಭೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಪ್ರಧಾನ ಮಂತ್ರಿಯನ್ನು ಕೇಳಿಕೊಂಡಿದ್ದೇನೆ. ಭಾರತದ ಪ್ರಜೆಯಾಗಿ ಇದನ್ನು ಕೇಳುವ ಹಕ್ಕು ನನಗಿದೆ. ಒಬ್ಬ ಶಾಸಕನಾಗಿ ನಮ್ಮ ಕರ್ತವ್ಯವೇನು? ಶಾಂತಿ ಕಾಪಾಡಲು ಜನರನ್ನು ಒತ್ತಾಯಿಸುವುದು, ಹಾಗಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ ಎಂದು ತಮ್ಮ ಟ್ವೀಟ್ ಸಮರ್ಥಿಸಿಕೊಂಡಿದ್ದಾರೆ.


    ಇದನ್ನು ಓದಿ: Patiala ಎರಡು ಗುಂಪುಗಳ ನಡುವೆ ಘರ್ಷಣೆ; ಕಲ್ಲು ತೂರಾಟ, ಜಳಪಿಸಿದ ಕತ್ತಿಗಳು


    ಚುನಾವಣೆ ಹಿನ್ನಲೆ ಈ ಕೃತ್ಯ
    ಮಹಿಳಾ ಪೊಲೀಸ್​ ಮೇಲಿನ ಹಲ್ಲೆಯ ಎರಡನೆಯ ಪ್ರಕರಣದ ಕುರಿತು ಮಾತನಾಡಿದ ಅವರು, ಮಹಿಳೆಯನ್ನು ಬಳಸಿಕೊಂಡು ಪ್ರಕರಣವನ್ನು ರೂಪಿಸಲು ಕಥೆ ನಿರ್ಮಾಣ ಮಾಡಿದ್ದಾರೆ. ನನ್ನ ವಿರುದ್ಧ ಮಹಿಳೆಯನ್ನು ಬಳಸಿಕೊಂಡ ಸರ್ಕಾರ ಎಷ್ಟು ಹೇಡಿಯಾಗಿದೆ. ಇದು ಹೇಡಿತನದ ಕೃತ್ಯವಾಗಿದೆ. ಗುಜರಾತ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇದೆಲ್ಲವನ್ನೂ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.


    ಇದೊಂದು ಷಡ್ಯಂತ್ರವಾಗಿದ್ದು, ಸುಳ್ಳು ಪ್ರಕರಣವಾಗಿದೆ. ಚುನಾವಣೆ ಹಿನ್ನಲೆ ನನ್ನನ್ನು ಗುರಿಯಾಗಿಸಿಕೊಂಡು ಈ ರೀತಿ ಸಂಚು ರೂಪಿಸುತ್ತಿದ್ದಾರೆ. ಗುಜರಾತ್​ ಜನರು ನೋಡುತ್ತಿದ್ದಾರೆ. ನಾನು ಬಿಜೆಪಿ ಮತ್ತು ಆರ್​ಎಸ್​ಎಸ್​ ವಿರುದ್ಧ ಕೊನೆ ಯವರೆಗೂ ಹೋರಾಡುತ್ತೇನೆ ಎಂದು ಇದೇ ವೇಳೆ ತಿಳಿಸಿದರು

    Published by:Seema R
    First published: