#FitnessChallenge ನಂತೆ #RoadSafetyChallenge ಆರಂಭಿಸಿದ ಉತ್ತರಪ್ರದೇಶ ಡಿಜಿಪಿ


Updated:May 27, 2018, 4:48 PM IST
#FitnessChallenge ನಂತೆ #RoadSafetyChallenge ಆರಂಭಿಸಿದ ಉತ್ತರಪ್ರದೇಶ ಡಿಜಿಪಿ

Updated: May 27, 2018, 4:48 PM IST
ನ್ಯೂಸ್ 18 ಕನ್ನಡ

ಲಕ್ನೋ(ಮೇ.27): ಕೇಂದ್ರೀಯ ಮಂತ್ರಿ ರಾಜವರ್ಧನ ಸಿಂಗ್ ರಾಠೋಡ್ #FitnessChallenge ಬಳಿಕ ಇದೀಗ ಉತ್ತರಪ್ರದೇಶದ ಡಿಜಿಪಿ ಒಪಿ ಸಿಂಗ್ ಇಂತಹುದೇ ಮತ್ತೊಂದು ಅಭಿಯಾನ ಆರಂಭಿಸಿದ್ದಾರೆ. ಟ್ರಾಫಿಕ್ ನಿಯಮಗಳ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಯುಪಿ ಡಿಜಿಪಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ.

ಇದಕ್ಕಾಗಿ ಅವರು ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡುವ ಮೂಲಕ ರೋಡ್ ಸೆಲ್ಫೀ ಚಾಲೆಂಜ್ ಆಹ್ವಾನಿಸಿದ್ದಾರೆ. ಫಿಟ್ನೆಸ್​ ಚಾಲೆಂಜ್​ನಂತೆ ಎಲ್ಲಾ ಅಧಿಕಾರಿಗಳು ಸೇರಿದಂತೆ ಎಲ್ಲಾ ಜನರಲ್ಲೂ ರೋಡ್​ ಸೆಲ್ಫೀಗೆ ಸಂಬಂಧಿಸಿದ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಲು ತಿಳಿಸಿದ್ದಾರೆ. ಅಲ್ಲದೇ ಇದನ್ನು ಐದು ಮಂದಿಗೆ ಟ್ಯಾಗ್​ ಮಾಡುವಂತೆ ತಿಳಿಸಿದ್ದಾರೆ.



ಟ್ವಿಟರ್​ನಲ್ಲಿ ವಿಡಿಯೋ ಶೇರ್ ಮಾಡಿರುವ ಡಿಜಿಪಿ ಓಪಿ ಸಿಂಗ್ #RoadSafetyChallenge ಅಭಿಯಾನವನ್ನು ಆರಂಭಿಸಿದ್ದಾರೆ. ಈ ವಿಡಿಯೋದಲ್ಲಿ ಜನರಿಗೆ ಸೀಟ್ ಬೆಲ್ಟ್​ ಹಾಗೂ ಹೆಲ್ಮೆಟ್​ ಕುರಿತಾದ ಜಾಗೃತಿ ಮೂಡಿಸಿದ್ದಾರೆ.



ಈ ಚಾಲೆಂಜ್ ಎಲ್ಲಕ್ಕೂ ಮೊದಲು ಸ್ವೀಕರಿಸಿದವರ ಪಟ್ಟಿಯಲ್ಲಿ ಗೌತಮಬುದ್ಧನಗರದ SSP ಯ ಹೆಸರಿದೆ. SSP ಅಜಯ್​ ಪಾಲ್ ಶರ್ಮಾ ವಿಡಿಯೋ ಅಪ್ಲೋಡ್ ಮಾಡಿ ತಮ್ಮ ಸಹೋದಸ್ಯೋಗಿಗಳಿಗೆ ಸಂಚಾರಿ ನಿಯಮಗಳನ್ನು ಮತ್ತಷ್ಟು ಸುರಕ್ಷಿತ ಮಾಡುವಂತೆ ತಿಳಿಸಿದ್ದಾರೆ.



#RoadSafetyChallenge ಅಭಿಯಾನವನ್ನು ಬಹಳಷ್ಟು ಅಧಿಕಾರಿಗಳು ಮುಂದುವರೆಸಿದ್ದಾರೆ.
First published:May 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ