• Home
 • »
 • News
 • »
 • national-international
 • »
 • Boy Death: ಬಿಸಿ ಸಾಂಬಾರ್‌ ಪಾತ್ರೆಯಲ್ಲಿ ಬಿದ್ದು 5 ವರ್ಷದ ಬಾಲಕ ಸಾವು! ಸಮಾರಂಭ ನಡೆಯುತ್ತಿದ್ದ ಮನೆಯಲ್ಲಿ ಸೂತಕ

Boy Death: ಬಿಸಿ ಸಾಂಬಾರ್‌ ಪಾತ್ರೆಯಲ್ಲಿ ಬಿದ್ದು 5 ವರ್ಷದ ಬಾಲಕ ಸಾವು! ಸಮಾರಂಭ ನಡೆಯುತ್ತಿದ್ದ ಮನೆಯಲ್ಲಿ ಸೂತಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಐದು ವರ್ಷದ ಬಾಲಕನ ಮನೆಯಲ್ಲಿ ಸಮಾರಂಭವಿತ್ತು. ಈ ವೇಳೆ ಬಾಲಕ ಆಟವಾಡುತ್ತಾ ಬಂದು ಆಕಸ್ಮಿಕವಾಗಿ ಬಿಸಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದಿದ್ದಾನೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದಾನೆ!

 • News18 Kannada
 • Last Updated :
 • Uttar Pradesh, India
 • Share this:

  ಬಿಜ್ನೋರ್: ಉತ್ತರ ಪ್ರದೇಶದ (Uttar Pradesh) ಅಮ್ರೋಹಾ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು (Incident) ನಡೆದಿದೆ. ಬಿಸಿ ದಾಲ್ (Hot Dal) ಇಡಲಾಗಿದ್ದ ಪಾತ್ರೆಗೆ ಬಿದ್ದು ಐದು ವರ್ಷದ ಬಾಲಕ ಮೃತಪಟ್ಟ (Boy Death) ದಾರುಣ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ ಅಮ್ರೋಹಾದ ಕರನ್‌ ಪುರ್ ಸುತಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ ಮುಂಡನ ಕಾರ್ಯಕ್ರಮದಲ್ಲಿ ಹುಡುಗ ಆಟವಾಡುತ್ತಾ ಓಡಾಡಿಕೊಂಡಿದ್ದ. ಆದರೆ ಕೆಲವೇ ಗಂಟೆಗಳಲ್ಲಿ ಬಾಲಕ ಶವವಾಗಿದ್ದಾನೆ. ಸುತ್ತಲೂ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಮಗ್ನರಾಗಿದ್ದವರಿಗೆ ಬಾಲಕನ ಸಾವು ಶೋಕದಲ್ಲಿ ಮುಳುಗಿಸಿದೆ. ಆಟವಾಡುತ್ತಾ ಬಂದಿದ್ದ ಬಾಲಕ ಆಕಸ್ಮಿಕವಾಗಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆ.  


  ಮುಂಡನ ಕಾರ್ಯಕ್ರಮದಲ್ಲಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದು ಬಾಲಕ ಸಾವು


  ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಕರಣ್‌ ಪುರ ಸುತಾರಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಮುಂಡನ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಸಂಭ್ರಮದ ಮನೆ, ಸೂತಕದಲ್ಲಿ ಮುಳುಗುವಂತಾಗಿದೆ.  ಐದು ವರ್ಷದ ಬಾಲಕನ ಮುಂಡನ ಸಮಾರಂಭ ಅಂದರೆ ಮೊದಲ ಬಾರಿಗೆ ಮಗುವಿನ ಕೂದಲು ತೆಗೆಯುವ ಕಾರ್ಯಕ್ರಮ. ಈ ವೇಳೆ ಬಾಲಕ ಆಟವಾಡುತ್ತಾ ಬಂದು ಆಕಸ್ಮಿಕವಾಗಿ ಬಿಸಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದಿದ್ದಾನೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದಾನೆ. ಮಗು ಪ್ರಶಾಂತ್ ನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೂ ಆತ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


  ಇದನ್ನೂ ಓದಿ: Instagram Reels: 24 ಗಂಟೆ ರೀಲ್ಸ್‌ನಲ್ಲೇ ಕಾಲ ಕಳಿತಾಳೆ ಅಂತ ಹೆಂಡ್ತಿಗೆ ಹೊಡೆದ ಗಂಡ! ರೀಲ್ ಅಲ್ಲ ರಿಯಲ್ ಆಗೇ ನಡೀತು ಮರ್ಡರ್!


  ಮೃತ ಬಾಲಕ ರೈತನ ಮಗ


  ಮೃತ ಬಾಲಕನನ್ನು ಪ್ರಶಾಂತ್ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವನು ದಾರಿಯಲ್ಲಿ ಸಾವನ್ನಪ್ಪಿದ್ದ ಎಂದು ತಿಳಿದು ಬಂದಿದೆ. ಹೀಗೆ ಮೃತಪಟ್ಟ ಬಾಲಕ ರೈತನ ಮಗ. ಬಿಸಿ ಬೇಳೆ ಪಾತ್ರೆ ಇಟ್ಟಿರುವ ಕೋಣೆಯೊಳಗೆ ಬಾಲಕ ಪ್ರಶಾಂತ್ ಆಟವಾಡುತ್ತಿದ್ದ. ಮೃತ ಪ್ರಶಾಂತ್ ನ ಮುಂಡನ ಅಂದ್ರೆ ಕೂದಲು ಕತ್ತರಿಸುವ ಸಮಾರಂಭಕ್ಕೆ ಆಹಾರ ಬೇಯಿಸಲಾಯಿತು.


  ಹುಡುಗ ಆಟವಾಡುತ್ತಾ ಕೋಣೆಯೊಳಗೆ ಹೋಗಿದ್ದಾನೆ. ಇದನ್ನು ದೊಡ್ಡವರು ಯಾರೂ ಗಮನಿಸಿಲ್ಲ. ಬಾಲಕ ಬಿಸಿ ಬೇಳೆ ದಾಲ್ ಪಾತ್ರೆ ಇಟ್ಟಿರುವ ಕೋಣೆಗೆ ಹೋದಾಗ ತಾವು ಅತಿಥಿಗಳನ್ನು ನೋಡಿಕೊಳ್ಳುತ್ತಿದ್ದೆವು ಎಂದು ಮೃತ ಬಾಲಕನ ತಂದೆ ಹೇಳಿದ್ದಾರೆ.


  ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಸಾವು


  ಬಾಲಕ ಕೋಣೆಯಲ್ಲಿನ ಹಾಸಿಗೆ ಮೇಲೆ ಜಿಗಿದಿದ್ದಾನೆ. ನಂತರ ಆಕಸ್ಮಿಕವಾಗಿ ಬಿಸಿ ಬೇಳೆ ಪಾತ್ರೆಯಲ್ಲಿ ಬಿದ್ದಿದ್ದಾನೆ. ಕೂಡಲೇ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಅಲ್ಲಿಂದ ಅವನನ್ನು ಮೀರತ್ ನ ದೊಡ್ಡ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ವೈದ್ಯರು ಹೇಳಿದ್ರು. ಹೀಗಾಗಿ ಮೀರತ್ ಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಬಾಲಕ ಪ್ರಶಾಂತ್ ಮೃತಪಟ್ಟಿದ್ದಾನೆ ಎಂದು ಮಗುವಿನ ತಂದೆ ಹೇಳಿದರು.


  ಇನ್ನು ಸಂತ್ರಸ್ತ ಕುಟುಂಬದವರಿಂದ ಇದುವರೆಗೆ ಯಾವುದೇ ದೂರು ಬಂದಿಲ್ಲ. ಬಾಲಕನ ಸಾವಿನ ಬಗ್ಗೆ ಯಾವುದೇ ಕೇಸ್ ದಾಖಲು ಮಾಡಿಲ್ಲ. ಇನ್ನು ಮೃತ ಬಾಲಕನ ಶವಸಂಸ್ಕಾರ ಮತ್ತು ಅಂತಿಮ ವಿಧಿ ವಿಧಾನಗಳನ್ನು ಮಂಗಳವಾರವೇ ಮಾಡಲಾಗಿದೆ ಎಂದು ಅಮ್ರೋಹಾ ಎಸ್ಪಿ ಆದಿತ್ಯ ಲಾಂಗೆಹ್ ತಿಳಿಸಿದ್ದಾರೆ.


  ಇದನ್ನೂ ಓದಿ:  Suicide for Hair Loss: ಕೂದಲು ಉದುರಿದ್ದಕ್ಕೆ ನೊಂದು ಯುವಕ ಆತ್ಮಹತ್ಯೆ, ಡೆತ್‌ ನೋಟ್‌ನಲ್ಲಿತ್ತು ಡಾಕ್ಟರ್ ಹೆಸರು!


  ಇನ್ನು ಸಮಾರಂಭಕ್ಕೆಂದು ಬಂದಿದ್ದ ಸಂಬಂಧಿಗಳು ಮತ್ತು ಕುಟುಂಬಸ್ಥರು ಬಾಲಕನ ಸಾವಿಗೆ ಕಂಬನಿ ಮಿಡಿದಿದ್ದಾರೆ. ಇತ್ತ ಮೃತ ಬಾಲಕ ಪ್ರಶಾಂತ್ ಸಾವು ತಂದೆ- ತಾಯಿಯಲ್ಲಿ ದು:ಖ ಮಡುಗಟ್ಟುವಂತೆ ಮಾಡಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಶೋಕದ ವಾತಾವರಣವಾಗಿ ಮಾರ್ಪಟ್ಟಿದೆ. ಬಾಳಿ ಬದುಕಬೇಕಿದ್ದ ಕಂದಮ್ಮನ ಸಾವಿಗೆ ಜನರು ಕಂಬನಿ ಮಿಡಿದಿದ್ದಾರೆ.

  Published by:renukadariyannavar
  First published: