ಅಮೆರಿಕ ಪ್ರವೇಶಿಸುವ ಎಲ್ಲಾ ಪಾಕಿಸ್ತಾನ ವಿಮಾನಗಳಿಗೆ ನಿರ್ಬಂಧ ಹೇರಿದ ಟ್ರಂಪ್!

ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಅಮೆರಿಕದ ಸಾರಿಗೆ ಸಚಿವಾಲಯದ ಅಧಿಕಾರಿಗಳು, ಪ್ರಯಾಣಿಕರ ಹಿತದೃಷ್ಟಿಯಿಂದ ನಾವು ಈ ಕ್ರಮ ಕೈಗೊಂಡಿದ್ದೇವೆ. ಪಾಕಿಸ್ತಾನದಿಂದ ಬರುವ ವಿಮಾನಗಳಿಗೆ ನಿಷೇಧ ಹೇರಿದ್ದೇವೇ ಎಂದಿದ್ದಾರೆ. ಈ ವಿಚಾರವನ್ನು ಪಾಕಿಸ್ತಾನ ಕೂಡ ಖಚಿತಪಡಿಸಿದೆ.

news18-kannada
Updated:July 10, 2020, 8:49 AM IST
ಅಮೆರಿಕ ಪ್ರವೇಶಿಸುವ ಎಲ್ಲಾ ಪಾಕಿಸ್ತಾನ ವಿಮಾನಗಳಿಗೆ ನಿರ್ಬಂಧ ಹೇರಿದ ಟ್ರಂಪ್!
ಸಾಂದರ್ಭಿಕ ಚಿತ್ರ
  • Share this:
ವಾಷಿಂಗ್ಟನ್ (ಜು.10)​: ಪಾಕಿಸ್ತಾನದಲ್ಲಿ ನಕಲಿ ಪೈಲಟ್​ ಹರಗಣ ಬೆಳಕಿಗೆ ಬಂದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಮೆರಿಕ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಪಾಕಿಸ್ತಾನದ ವಿಮಾನಗಳಿಗೆ ನಿರ್ಬಂಧ ಹೇರಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದೇವೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಪಾಕಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೈಲಟ್‌ಗಳಲ್ಲಿ ಮೂರನೇ ಒಂದು ಭಾಗದಷ್ಟು ಜನರು ಸುಳ್ಳು ದಾಖಲೆ ಸೃಷ್ಟಿಸಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅನೇಕರು ತಪ್ಪೊಪ್ಪೊಕೊಂಡಿದ್ದಾರೆ. ಹೀಗಾಗಿ, ಸಂಶಯಾಸ್ಪದ ಪೈಲಟ್​ಗಳನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು.

ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಅಮೆರಿಕದ ಸಾರಿಗೆ ಸಚಿವಾಲಯದ ಅಧಿಕಾರಿಗಳು, ಪ್ರಯಾಣಿಕರ ಹಿತದೃಷ್ಟಿಯಿಂದ ನಾವು ಈ ಕ್ರಮ ಕೈಗೊಂಡಿದ್ದೇವೆ. ಪಾಕಿಸ್ತಾನದಿಂದ ಬರುವ ವಿಮಾನಗಳಿಗೆ ನಿಷೇಧ ಹೇರಿದ್ದೇವೇ ಎಂದಿದ್ದಾರೆ. ಈ ವಿಚಾರವನ್ನು ಪಾಕಿಸ್ತಾನ ಕೂಡ ಖಚಿತಪಡಿಸಿದೆ.

ಇದನ್ನೂ ಓದಿ: ಕಾರು ಅಪಘಾತದಲ್ಲಿ ಎಸ್ಕೇಪ್ ಆಗಲು ಪ್ರಯತ್ನಿಸಿದ ಗ್ಯಾಂಗ್​ಸ್ಟರ್ ವಿಕಾಸ್ ದುಬೆ ಪೊಲೀಸರ ಗುಂಡೇಟಿಗೆ ಬಲಿ

ಇನ್ನು, ಯುರೋಪ್​ ಒಕ್ಕೂಟ ರಾಷ್ಟ್ರಗಳು ಕೂಡ ಇದೇ ಮಾದರಿಯ ನಿರ್ಧಾರ ತೆಗೆದುಕೊಂಡಿದ್ದು, ಆರು ತಿಂಗಳ ಕಾಲ ಪಾಕಿಸ್ತಾನ ವಿಮಾನಗಳಿಗೆ ನಿಷೇಧ ಹೇರಿವೆ.

ಪಾಕಿಸ್ತಾನದಲ್ಲಿ ಮೇ ತಿಂಗಳಂದು ವಿಮಾನ ಅಪಘಾತವಾಗಿತ್ತು. ಈ ವೇಳೆ 97 ಜನರು ಮೃತಪಟ್ಟಿದ್ದರು. ದೇಶದ 860  ಪೈಲಟ್​ಗಳಲ್ಲಿ 262 ಜನ ಪರೀಕ್ಷೆಯನ್ನೇ ಎದುರಿಸಿಲ್ಲ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿತ್ತು. ಇದರಲ್ಲಿ  54  ಪೈಲಟ್ ಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಈಗಾಗಲೇ 9 ಜನ ತಪ್ಪೊಪ್ಪಿಕೊಂಡಿದ್ದಾರೆ.
Published by: Rajesh Duggumane
First published: July 10, 2020, 8:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading