HOME » NEWS » National-international » AFTER EXPLOSION IN KARACHI 3 KILLED AND MORE THAN 15 INJURED RMD

ಪಾಕಿಸ್ತಾದಲ್ಲಿ ಭಾರೀ ಸ್ಫೋಟ; ಮೂರು ಸಾವು, 15ಕ್ಕೂ ಅಧಿಕ ಮಂದಿಗೆ ಗಾಯ

ಇಲ್ಲಿರುವ ಕಟ್ಟಡದ ಎರಡನೇ ಮಹಡಿಯಲ್ಲಿ ಈ ಸ್ಫೋಟ ನಡೆದಿದೆ. ಕಿಟಕಿ ಹಾಗೂ ಕಟ್ಟಡದ ಕೆಳಗೆ ನಿಲ್ಲಿಸಿದ್ದ ವಾಹನಗಳು ಹಾನಿಗೊಳಗಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

news18-kannada
Updated:October 21, 2020, 12:26 PM IST
ಪಾಕಿಸ್ತಾದಲ್ಲಿ ಭಾರೀ ಸ್ಫೋಟ; ಮೂರು ಸಾವು, 15ಕ್ಕೂ ಅಧಿಕ ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ
  • Share this:
ಕರಾಚಿಯ ಗುಲ್ಶನ್​-ಇ-ಇಕ್ಬಾಲ್​ ಮಸ್ಕನ್ ಚೌರಂಗಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂರು ಜನರು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ. ಸ್ಫೋಟದ ಹಿಂದೆ ಕೆಲ ಉಗ್ರ ಸಂಘಟನೆಗಳ ಕೈವಾಡ ಇದೆ ಎನ್ನುವ ಮಾತು ಕೇಳಿ ಬಂದಿದೆ. ಆದರೆ, ಇದೊಂದು ಸಿಲಿಂಡರ್​ ಬ್ಲಾಸ್ಟ್ ಎಂದಷ್ಟೇ ಪೊಲೀಸರು ಹೇಳಿದ್ದಾರೆ. ತನಿಖೆ ನಂತರವಷ್ಟೇ ಈ ಬಗೆಗಿನ ಅಸಲಿ ವಿಚಾರ ತಿಳಿದು ಬರಬೇಕಿದೆ.

ಇಲ್ಲಿರುವ ಕಟ್ಟಡದ ಎರಡನೇ ಮಹಡಿಯಲ್ಲಿ ಈ ಸ್ಫೋಟ ನಡೆದಿದೆ. ಕಿಟಕಿ ಹಾಗೂ ಕಟ್ಟಡದ ಕೆಳಗೆ ನಿಲ್ಲಿಸಿದ್ದ ವಾಹನಗಳು ಹಾನಿಗೊಳಗಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಬಾಂಬ್​ ನಿಷ್ಕ್ರಿಯ ದಳದ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಅಲ್ಲದೆ, ಅಗ್ನಿಶಾಮಕ ದಳ ಕೂಡ ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ. 15 ಜನ ಗಾಯಾಳುಗಳನ್ನು ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

Youtube Video

ಶೆರಿನ್ ಜಿನ್ನಾ ಕಾಲೋನಿಯಲ್ಲಿರುವ ಬಸ್​ ಸ್ಟ್ಯಾಂಡ್​ನಲ್ಲಿ ನಿನ್ನೆ ಬಾಂಬ್​ ಸ್ಫೋಟ ಸಂಭವಿಸಿತ್ತು. ಈ ವೇಳೆ ಐದು ಜನರು ಗಾಯಗೊಂಡಿದ್ದರು.
Published by: Rajesh Duggumane
First published: October 21, 2020, 12:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories