news18-kannada Updated:November 29, 2020, 10:11 AM IST
ಚರ್ಚ್
ಮುಂಬೈ(ನ.29): ಮಹಾಮಾರಿ ಕೊರೋನಾ ವೈರಸ್ನಿಂದಾಗಿ ಮುಂಬೈನಲ್ಲಿ ಮಾರ್ಚ್ ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ಚರ್ಚ್ಗಳು ಇಂದು ಬಾಗಿಲು ತೆರೆಯಲಿದ್ದು, ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ. ಅದುವೇ ಕಡ್ಡಾಯವಾಗಿ ಕೊರೋನಾ ನಿಯಮಗಳ ಪಾಲನೆ ಜೊತೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲೇಬೇಕಾಗಿದೆ. ಮಹಾರಾಷ್ಟ್ರ ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿದೆ. ನವೆಂಬರ್ 16ರಿಂದಲೇ ರಾಜ್ಯದ ಎಲ್ಲಾ ಧಾರ್ಮಿಕ ಸ್ಥಳಗಳ ಪುನರ್ ಆರಂಭಕ್ಕೆ ಸರ್ಕಾರ ಅನುಮತಿ ನೀಡಿತ್ತು. ಆದರೂ ಸಹ ಚರ್ಚ್ಗಳು ಬಾಗಿಲು ತೆರೆದಿರಲಿಲ್ಲ. ಕೇವಲ ವೈಯಕ್ತಿಕ ಪ್ರಾರ್ಥನೆಗೆ ಮಾತ್ರ ಅವಕಾಶ ಇತ್ತು. ಆದರೆ ಈಗ ರಾಜ್ಯಾದ್ಯಂತ ಎಲ್ಲಾ ಚರ್ಚ್ಗಳು ಮತ್ತೆ ಬಾಗಿಲು ತೆರೆದಿದ್ದು, ಜನರು ಕೋವಿಡ್ ನಿಯಮಗಳನ್ನು ಅನುಸರಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಕೊರೋನಾ ವೈರಸ್ ಹರಡುವಿಕೆ ಹೆಚ್ಚಾದ ಹಿನ್ನೆಲೆ ಕೇಂದ್ರ ಸರ್ಕಾರವು ಮಾರ್ಚ್ 25ರಿಂದ ದೇಶಾದ್ಯಂತ ಲಾಕ್ಡೌನ್ ಜಾರಿ ಮಾಡಿತ್ತು. ಹೀಗಾಗಿ ಎಲ್ಲಾ ಧಾರ್ಮಿಕ ಕ್ಷೇತ್ರಗಳನ್ನು ಮುಚ್ಚಲಾಗಿತ್ತು. ಸಾರ್ವಜನಿಕ ಪ್ರದೇಶಗಳಲ್ಲಿ ಜನರು ಒಟ್ಟಾಗಿ ಸೇರುವುದಕ್ಕೂ ನಿರ್ಬಂಧ ಹೇರಲಾಗಿತ್ತು.
ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಶೀಘ್ರದಲ್ಲಿಯೇ ಅರ್ಜಿ; ಸೆರಾಂ ಸಂಸ್ಥೆ
ಭಕ್ತರು ಅನುಸರಿಬೇಕಾದ ನಿಯಮಗಳೇನು?
ಸರ್ಕಾರದ ಮಾರ್ಗಸೂಚಿ ಪ್ರಕಾರ, ಚರ್ಚ್ಗೆ ಬರುವ ಎಲ್ಲರೂ ಸಹ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ 10 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಚರ್ಚ್ ಒಳಗೆ ಪ್ರವೇಶ ಇಲ್ಲ. ಜೊತೆಗೆ ಕೆಮ್ಮು, ನೆಗಡಿ, ಜ್ವರದಂತಹ ಲಕ್ಷಣ ಹೊಂದಿದವರಿಗೂ ಚರ್ಚ್ ಆವರಣದೊಳಗೆ ಪ್ರವೇಶ ನಿರ್ಬಂಧ ಇದೆ.
ಯಾರು ಚರ್ಚ್ಗೆ ಬರಲು ಸಾಧ್ಯವಿಲ್ಲವೋ ಅವರಿಗೆ ಆನ್ಲೈನ್ ಪ್ರಾರ್ಥನೆಯ ಸೌಲಭ್ಯವನ್ನು ಮುಂದುವರೆಸಲಾಗುವುದು ಎಂದು ಬಾಂಬೆ ಆರ್ಚ್ ಬಿಷಪ್ ಹೇಳಿದೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಮಾರ್ಕ್ ಮಾಡಿರುವ ಸ್ಥಳದಲ್ಲೇ ಭಕ್ತರು ಕೂರಬೇಕಾಗಿದೆ. ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಂಡು ಚರ್ಚ್ ಒಳಗೆ ಪ್ರವೇಶಿಸಬೇಕು. ಕೈಗಳಿಗೆ ಸ್ಯಾನಿಟೈಸ್ ಮಾಡಿಕೊಳ್ಳಬೇಕು.
Published by:
Latha CG
First published:
November 29, 2020, 10:11 AM IST