• Home
  • »
  • News
  • »
  • national-international
  • »
  • Azamgarh: ಶ್ರದ್ಧಾ ಮಾದರಿಯಂತೆ ಮತ್ತೊಂದು ಹತ್ಯೆ: ಮಹಿಳೆಯನ್ನು 8 ಪೀಸ್​ ಮಾಡಿದ ಪ್ರಿಯಕರ!

Azamgarh: ಶ್ರದ್ಧಾ ಮಾದರಿಯಂತೆ ಮತ್ತೊಂದು ಹತ್ಯೆ: ಮಹಿಳೆಯನ್ನು 8 ಪೀಸ್​ ಮಾಡಿದ ಪ್ರಿಯಕರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಜಂಗಢದಲ್ಲಿ ಶ್ರದ್ಧಾ ಮಾದರಿಯಲ್ಲೇ ನಡೆದ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಮಹಿಳೆಯನ್ನು ಎಂಟು ತುಂಡುಗಳಾಗಿ ಕತ್ತರಿಸಿದ ಮಾಜಿ ಪ್ರಿಯಕರನನ್ನು ಬಂಧಿಸಲಾಗಿದೆ. ಒಂದು ವಾರದ ಹಿಂದೆ ಕೊಳದಲ್ಲಿ ಶವ ಪತ್ತೆಯಾಗಿದೆ.

  • News18 Kannada
  • Last Updated :
  • Azamgarh, India
  • Share this:

ಅಜಂಗಢ(ನ.21): ಅಜಂಗಢದಲ್ಲಿ (Azamgarh) ಶ್ರದ್ಧಾ ಕೊಲೆ ಪ್ರಕರಣದಂತಹ ಮತ್ತೊಂದು ಕೇಸ್​ ವರದಿಯಾಗಿದೆ. ಮಹಿಳೆಯೊಬ್ಬಳನ್ನು ಎಂಟು ತುಂಡುಗಳಾಗಿ ಕತ್ತರಿಸಿದ ಮಾಜಿ ಪ್ರಿಯಕರನನ್ನು (Ex-Lover) ಬಂಧಿಸಲಾಗಿದೆ. ಒಂದು ವಾರದ ಹಿಂದೆ ಕೆರೆಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಈ ಮೂಲಕ ಶ್ರದ್ಧಾ ಹತ್ಯೆ ಪ್ರಕರಣದ (Shraddha Murder Case) ನಂತರ, ದೇಶದಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದ ನಂತರ ಪೊಲೀಸರು ಈ ಕೊಲೆ ವಿಚಾರವನ್ನು ಬಹಿರಂಗಪಡಿಸಿದ್ದಾರೆ.


ಈ ವಾರದ ಆರಂಭದಲ್ಲಿ ಬಾವಿಯಲ್ಲಿ ಮಹಿಳೆಯ ತಲೆಯಿಲ್ಲದ ಶವ ಪತ್ತೆಯಾಗಿದೆ ಎಂದು ಅಜಂಗಢ ಎಸ್ಪಿ ಅನುರಾಗ್ ಆರ್ಯ ಖಚಿತಪಡಿಸಿದ್ದಾರೆ. ಈ ಕೊಲೆಯಲ್ಲಿ 9 ಮಂದಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಪೈಕಿ ಪ್ರಮುಖ ಆರೋಪಿ ಪ್ರೈಸ್ ಯಾದವ್ ನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ಆರೋಪಿಯಾಗಿರುವ 8 ಜನರಿಗಾಗಿ ಶೋಧ ನಡೆಸುತ್ತಿದ್ದಾರೆ.


Deadly Murder: ಪ್ರಿಯತಮೆಯನ್ನು ಕೊಂದು 35 ಪೀಸ್ ಮಾಡಿ ಫ್ರಿಡ್ಜ್​ನಲ್ಲಿಟ್ಟ, ಆಮೇಲೆ ಮಾಡಿದ್ದು ಕೇಳಿದ್ರೆ ಮೈ  ಜುಂ ಎನ್ನುತ್ತೆ!


ಮೃತ ಮಹಿಳೆಯೊಂದಿಗೆ ಸಂಬಂಧ


ವಿಚಾರಣೆ ವೇಳೆ ಆರೋಪಿಯು ತಾನು ಮೃತ ಮಹಿಳೆಯೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದನೆಂದು ಬಹಿರಂಗಪಡಿಸಿದ್ದಾನೆ. ಆದರೆ ಮಹಿಳೆ ಬೇರೆಡೆ ಮದುವೆಯಾಗಿದ್ದಳು. ನಂತರ ಭೇಟಿಯಾಗುವ ನೆಪದಲ್ಲಿ ಮಹಿಳೆಗೆ ಕರೆ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನೋವಿನಿಂದ ಕೂಡಿದ ಶ್ರದ್ಧಾ ಕೊಲೆ ಪ್ರಕರಣವು ಕೆಲವು ದಿನಗಳ ಹಿಂದೆ ಬಹಿರಂಗವಾಗಿದ್ದು, ಇಲ್ಲಿಯವರೆಗೆ ದೆಹಲಿ ಪೊಲೀಸ್ ತಂಡಗಳು ಶ್ರದ್ಧಾ ಮೃತದೇಹದ ತುಂಡುಗಳನ್ನು ಹುಡುಕುವಲ್ಲಿ ನಿರತವಾಗಿವೆ.


ಕೊಲೆಗೀಡಾದ ಶ್ರದ್ಧಾ ವಾಕರ್ ಹಾಗೂ ಆರೋಪಿ ಅಫ್ತಾಬ್


ಫೆಬ್ರವರಿಯಲ್ಲಿ ಮಹಿಳೆ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದ ಮಹಿಳೆ


ಪ್ರೈಸ್​ ಯಾದವ್ ವಿದೇಶದಲ್ಲಿ ನೆಲೆಸಿದ್ದ. ಈ ನಡುವೆ ಇದೇ ವರ್ಷದ ಫೆಬ್ರವರಿಯಲ್ಲಿ ಮಹಿಳೆ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಎಂದು ಅಜಂಗಢ ಎಸ್ಪಿ ತಿಳಿಸಿದ್ದಾರೆ. ಯಾದವ್ ಭಾರತಕ್ಕೆ ಹಿಂದಿರುಗಿದಾಗ, ಅವರು ಮಹಿಳೆಯನ್ನು ಭೇಟಿಯಾಗಿದ್ದಾರೆ ಹಾಗೂ ಈ ಮದುವೆಯನ್ನು ಮುರಿಯಲು ಮನವೊಲಿಸಲು ಪ್ರಯತ್ನಿಸಿದರು. ಆಕೆ ಒಪ್ಪದಿದ್ದಾಗ ಯಾದವ್ ನವೆಂಬರ್ 10 ರಂದು ದೇವಸ್ಥಾನಕ್ಕೆ ಹೋಗುವ ನೆಪದಲ್ಲಿ ಮಹಿಳೆಯನ್ನು ಹೊರಗೆ ಕರೆದೊಯ್ದು ಗದ್ದೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.


ಇದನ್ನೂ ಓದಿ: Explainer: ಅನುಪಮಾ ಗುಲಾಟಿ ಪ್ರಕರಣದ ಕರಾಳತೆ ನೆನಪಿಸಿದ ಶ್ರದ್ಧಾ ಕೊಲೆ ಕೇಸ್​​: ಪತ್ನಿಯನ್ನು 72 ತುಂಡು ಮಾಡಿದ್ದ ಪತಿ!


ದೇಹವನ್ನು ಎಂಟು ತುಂಡು ಮಾಡಿ ಬಾವಿಗೆಸೆದ ದುರುಳ


ಬಳಿಕ ಮೃತನ ದೇಹವನ್ನು ಎಂಟು ತುಂಡು ಮಾಡಿ ಬಾವಿಗೆ ಎಸೆದಿದ್ದಾನೆ. ಮಹಿಳೆಯ ಬಟ್ಟೆಗಳನ್ನು ಬಾವಿಗೆ ಎಸೆದಿದ್ದಾನೆ, ಆದರೆ ಆಕೆಯ ತಲೆಯನ್ನು ಹತ್ತಿರದ ಕೊಳಕ್ಕೆ ಎಸೆದಿದ್ದಾನೆ. ಮೃತಳ ಬಟ್ಟೆಗಳು ಮತ್ತು ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅನುರಾಗ್ ಆರ್ಯ ಹೇಳಿದ್ದಾರೆ. ನವೆಂಬರ್ 15 ರಂದು ಅಜಂಗಢದ ಪಶ್ಚಿಮ ಗ್ರಾಮದ ಹೊರಗೆ ಇರುವ ಬಾವಿಯೊಳಗೆ ಶವ ಪತ್ತೆಯಾದ ಬಗ್ಗೆ ಕೆಲವು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿದುಬಂದಿದೆ. ಮೃತದೇಹವನ್ನು ತೆಗೆದು ಮಹಿಳೆಯನ್ನು ಗುರುತಿಸಲಾಗಿದೆ. ಅರೆನಗ್ನ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಎರಡರಿಂದ ಮೂರು ದಿನಗಳ ಹಳೆಯದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Published by:Precilla Olivia Dias
First published: