Kohinoor: ಬ್ರಿಟನ್ ರಾಣಿ ಮರಣದ ನಂತರ ಇವರ ಮುಡಿಗೇರಲಿದ್ಯಂತೆ ಕೊಹಿನೂರ್ ಕಿರೀಟ!

ರಾಣಿ ಎಲಿಜಬೆತ್ ಮರಣದ ಕಾರಣದಿಂದ ಕೊಹಿನೂರ್ ಕಿರೀಟ ಮತ್ತೆ ಸುದ್ದಿಯಲ್ಲಿದೆ. ಈಗ ರಾಣಿ ಎಲಿಜಬೆತ್‌ರ ಮಗ, ರಾಜಕುಮಾರ ಚಾರ್ಲ್ಸ್ ಅವರ ಪತ್ನಿ ಕ್ಯಾಮೆಲ್ಲಾ ಕೊಹಿನೂರ್ ಕಿರೀಟ ಭಾಗ್ಯ ದೊರೆತಿದೆ.

ಕೊಹಿನೂರ್ ಕಿರೀಟ

ಕೊಹಿನೂರ್ ಕಿರೀಟ

 • Share this:
  ಬ್ರಿಟನ್ ರಾಣಿ ಎಲಿಜಬೆತ್ II ರ (Britain Queen Elizabeth) ಮರಣದ (Death) ನಂತರ ಈಗ ರಾಜಮನೆತನದ (Royal Family) ಜವಾಬ್ದಾರಿ ರಾಣಿ ಎಲಿಜಬೆತ್ II ಅವರ ಮಗ ರಾಜಕುಮಾರ ಚಾರ್ಲ್ಸ್ ಹೆಗಲಿಗೆ ಬಿದ್ದಿದೆ. ಪ್ರಿವಿ ಕೌನ್ಸಿಲ್ ಸಭೆಯ ನಂತರ ರಾಣಿ ಎಲಿಜಬೆತ್ II ಅವರ ಮಗ ರಾಜಕುಮಾರ ಚಾರ್ಲ್ಸ್ ಅವರನ್ನು ಔಪಚಾರಿಕವಾಗಿ ಬ್ರಿಟನ್‌ನ ಹೊಸ ರಾಜ ಎಂದು ಘೋಷಣೆ ಮಾಡಲಾಗುತ್ತದೆ. ಇದರ ಜೊತೆಗೆ ರಾಜಕುಮಾರ ಚಾರ್ಲ್ಸ್ ಪತ್ನಿ, ಡಚೆಸ್ ಆಫ್ ಕಾರ್ನ್‌ವಾಲ್ ಕೆಮಿಲ್ಲಾ, ಕ್ವೀನ್ ಕನ್ಸಾರ್ಟ್ ಎಂಬ ಬಿರುದು ಪಡೆದಿದ್ದಾರೆ. ಅದರ ಅರ್ಥ ರಾಜಕುಮಾರ ಚಾರ್ಲ್ಸ್ ಅವರ ಪತ್ನಿ ಬ್ರಿಟನ್ನಿನ ರಾಣಿ ಆಗಿದ್ದಾರೆ. ಹಾಗೂ ಕೊಹಿನೂರ್ ಕಿರೀಟ ಮುಡಿಗೇರಲಿದೆ.   

  ರಾಜಕುಮಾರ ಚಾರ್ಲ್ಸ್ ಪತ್ನಿ ಕೆಮಿಲ್ಲಾ ಮುಡಿಗೇರಲಿದೆ ಕೊಹಿನೂರ್ ಕಿರೀಟ

  ವರದಿಗಳ ಪ್ರಕಾರ, ಬ್ರಿಟಿಷ್ ರಾಜಮನೆತನದ ಕೊಹಿನೂರ್ ವಜ್ರ ಕಿರೀಟವು ಈಗ ರಾಜಕುಮಾರ ಚಾರ್ಲ್ಸ್ ಅವರ ಪತ್ನಿ ಕೆಮಿಲ್ಲಾ ಮುಡಿಗೇರಲಿದೆ. ಇದರ ಜೊತೆ ಏಳು ದಶಕಗಳಿಗೂ ಹೆಚ್ಚು ಕಾಲದ ನಂತರ ಹೊಸ ಮಹಿಳೆ ಕೆಮಿಲ್ಲಾ ಸಾಮ್ರಾಜ್ಞೆ ಎಂದು ಕರೆಯೆಸಿಕೊಂಡಿದ್ದಾರೆ.

  ಬ್ರಿಟನ್‌ನಲ್ಲಿ ಹಲವು ವರ್ಷಗಳ ಕಾಲ ಈ ಬಗ್ಗೆ ಚರ್ಚೆಗಳು ನಡೆದಿದ್ದವು. ಈಗ ರಾಣಿ ಎಲಿಜಬೆತ್ II ರ ಮರಣದ ಕಾರಣದಿಂದ ಕೊಹಿನೂರ್ ಕಿರೀಟ ಮತ್ತೆ ಸುದ್ದಿಯಲ್ಲಿದೆ. ಈಗ ರಾಣಿ ಎಲಿಜಬೆತ್ II ರ ಮಗ ರಾಜಕುಮಾರ ಚಾರ್ಲ್ಸ್ ಅವರ ಪತ್ನಿ ಕ್ಯಾಮೆಲ್ಲಾ ಕೊಹಿನೂರ್ ಕಿರೀಟ ಭಾಗ್ಯ ದೊರೆತಿದೆ.

  1937ರಲ್ಲಿ ಬ್ರಿಟನ್ ರಾಣಿಯ ಕಿರೀಟದಲ್ಲಿ ಸ್ಥಾನ ಪಡೆದ ಕೊಹಿನೂರ್ ವಜ್ರ ಈಗ ರಾಣಿ ಎಲಿಜಬೆತ್-II ಅವರ ಮರಣದ ನಂತರ ರಾಜ ಚಾರ್ಲ್ಸ್‌ III ಅವರ ಪತ್ನಿ ರಾಣಿ ಕೆಮಿಲ್ಲಾ ಅವರ ಮುಡಿಗೇರಲಿದೆ. ರಾಜ ಚಾರ್ಲ್ಸ್‌ III ಅವರ ಪಟ್ಟಾಭಿಷೇಕದ ದಿನ ರಾಣಿ ಕೆಮಿಲ್ಲಾ ಕೊಹಿನೂರ್ ವಜ್ರದಿಂದ ತಯಾರಿಸಿದ ಕಿರೀಟ ಧರಿಸಲಿದ್ದಾರೆ.

  ಇದನ್ನೂ ಓದಿ: 70 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯ, ರಾಜನಾದ ಪ್ರಿನ್ಸ್ ಚಾರ್ಲ್ಸ್!

  ಬ್ರಿಟನ್‌ನ ದೀರ್ಘಾವಧಿಯ ಸಿಂಹಾಸನ, ರಾಣಿ ಎಲಿಜಬೆತ್ II ಗುರುವಾರ ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು. ಬ್ರಿಟಿಷ್ ರಾಜ ಸಂಪ್ರದಾಯದ ಪ್ರಕಾರ, ರಾಣಿಯ ಮರಣದ ನಂತರ ಅವರ ಹಿರಿಯ ಮಗ ಪ್ರಿನ್ಸ್ ಚಾರ್ಲ್ಸ್ ಅನ್ನು ಬ್ರಿಟನ್ ರಾಜ ಎಂದು ಘೋಷಣೆ ಮಾಡಲಾಗಿದೆ.

  ಆದರೆ ರಾಣಿ ಎಲಿಜಬೆತ್ II ರ ಕಿರೀಟದಲ್ಲಿ ಹುದುಗಿರುವ ಅಮೂಲ್ಯವಾದ ಕೊಹಿನೂರ್ ವಜ್ರ ಯಾರಿಗೆ ಸೇರಲಿದೆ ಎಂಬ ಬಗ್ಗೆ ಜನರು ಕುತೂಹಲದಿಂದ ನೋಡ್ತಿದ್ರು.

  ರಾಣಿ ಎಲಿಜಬೆತ್ II ಮರಣದ ನಂತರ ಕೊಹಿನೂರ್ ಟ್ರೆಂಡಿಂಗ್

  ರಾಣಿಯ ಮರಣದ ನಂತರ ಕೊಹಿನೂರ್ ವಜ್ರದ ಈ ಕುತೂಹಲದ ನಡುವೆಯೇ ಕೊಹಿನೂರ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ವರದಿಗಳ ಪ್ರಕಾರ, ರಾಣಿಯ ಮರಣದ ನಂತರ ಬ್ರಿಟನ್‌ನ ರಾಜನಾದ ಕಿಂಗ್ ಚಾರ್ಲ್ಸ್ III ರ ಪತ್ನಿ ಕಾರ್ನ್‌ವಾಲ್‌ನ ಡಚೆಸ್ ಅನ್ನು ಕೆಮಿಲ್ಲಾಗೆ ಹಸ್ತಾಂತರಿಸಲಾಗುವುದು.

  ಕಾರ್ನ್‌ವೆಲ್‌ನ ಡಚೆಸ್ ಅನ್ನು ಈಗ ಕ್ವೀನ್ ಕನ್ಸಾರ್ಟ್ ಎಂದು ಕರೆಯುತ್ತಾರೆ. ಆಕೆಗೆ ರಾಣಿ ತಾಯಿಯ ಕಿರೀಟವನ್ನು ಕೊಹಿನೂರ್‌ನೊಂದಿಗೆ ನೀಡಲಾಗುವುದು.

  ಇದನ್ನೂ ಓದಿ: ಬ್ರಿಟನ್ ರಾಣಿ ನಿಧನಕ್ಕೆ ಭಾರತದಲ್ಲೂ ಶೋಕಾಚರಣೆ; ಕೇಂದ್ರ ಘೋಷಣೆ

  ಕೊಹಿನೂರ್  

  ಕೊಹ್ನೂರ್ 105.6 ಕ್ಯಾರೆಟ್ ವಜ್ರವಾಗಿದೆ. ಇತಿಹಾಸದಲ್ಲಿ ಈ ವಜ್ರ ವಿಶೇಷ ಸ್ಥಾನ ಪಡೆದಿದೆ. ಈ ವಜ್ರವು 14 ನೇ ಶತಮಾನದಲ್ಲಿ ಭಾರತದಲ್ಲಿತ್ತು. ಮತ್ತು ಮುಂದಿನ ಹಲವು ಶತಮಾನಗಳವರೆಗೆ ವಿವಿಧ ಕುಟುಂಬಗಳು ಸಂಪರ್ಕ ಹೊಂದಿದ್ದವು. 1849ರಲ್ಲಿ ಪಂಜಾಬ್‌ನಲ್ಲಿ ಬ್ರಿಟಿಷರ ಆಳ್ವಿಕೆ ಸ್ಥಾಪಿಸಿದ ನಂತರ ವಜ್ರವನ್ನು ರಾಣಿ ವಿಕ್ಟೋರಿಯಾಗೆ ಹಸ್ತಾಂತರಿಸಲಾಯಿತು. ಅಂದಿನಿಂದ ಈ ವಜ್ರವು ಬ್ರಿಟನ್‌ನ ಕಿರೀಟದ ಭಾಗವಾಗಿದೆ.
  Published by:renukadariyannavar
  First published: