ನವದೆಹಲಿ(ಅ.06): ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾದಲ್ಲಿ, ಭಾರತೀಯ ಫಾರ್ಮಾಸ್ಯುಟಿಕಲ್ ಕಂಪನಿಯು (Maiden Pharmaceuticals Cough Syrup) ತಯಾರಿಸಿದ ಡಿಕೊಂಜೆಸ್ಟೆಂಟ್ ಮತ್ತು ಕೆಮ್ಮಿನ ಸಿರಪ್ ಕುಡಿದು 66 ಮಕ್ಕಳು ಸಾವನ್ನಪ್ಪಿದ್ದಾರೆ. ಈ ಹೇಳಿಕೆಯ ಜೊತೆಗೆ, ವಿಶ್ವ ಆರೋಗ್ಯ ಸಂಸ್ಥೆ (WHO) ಈ ಸಿರಪ್ಗಳನ್ನು ಬಳಸದಂತೆ ಎಚ್ಚರಿಕೆಯನ್ನು ನೀಡಿದೆ. ಅಲ್ಲದೇ ದೆಹಲಿಯಲ್ಲಿರುವ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಹೌದು ಈ ಕೆಮ್ಮು ಸಿರಪ್ಗಳನ್ನು ಹರಿಯಾಣದ (Haryana) ಕಂಪನಿಯೊಂದರಲ್ಲಿ ತಯಾರಿಸಲಾಗುತ್ತದೆ. ಇದನ್ನು ಸೇವಿಸಿದ ಪರಿಣಾಮ ಭಾರೀ ಪ್ರಮಾಣದಲ್ಲಿ ಮಕ್ಕಳು ಸಾವನ್ನಪ್ಪಿದ್ದಾರೆ. ಬುಧವಾರ ಡಬ್ಲ್ಯುಎಚ್ಒ (World Health Organisation) ಬಿಡುಗಡೆ ಮಾಡಿದ ವರದಿಯಲ್ಲಿ ಕೆಮ್ಮಿನ ಔಷಧಿ ಡೈಥಿಲೀನ್ ಗ್ಲೈಕಾಲ್ ಮತ್ತು ಎಥಿಲೀನ್ ಗ್ಲೈಕಾಲ್ ಮನುಷ್ಯರ ಜೀವಕ್ಕೆ ವಿಷದ ಸಮಾನ ಎಂದಿದೆ. ಮಕ್ಕಳ ಸಾವು ನಾಲ್ಕು ಔಷಧಗಳಿಗೆ ಸಂಬಂಧಿಸಿದೆ ಎಂದು WHO ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸ್ ಹೇಳಿದ್ದಾರೆ. ಈ ಸಿರಪ್ ಸೇವನೆಯಿಂದ ಅವರ ಕಿಡ್ನಿ ಹಾಳಾಗಿತ್ತು.
ಈ ಎರಡನೇ ದರ್ಜೆಯ ಉತ್ಪನ್ನಗಳು ಅಸುರಕ್ಷಿತ
WHO ಈ ಮೆಡಿಸಿನ್ ಬಗ್ಗೆ ಔಷಧೀಯ ಕಂಪನಿ ಮತ್ತು ಭಾರತ ಸರ್ಕಾರದ ನಿಯಂತ್ರಣ ಪ್ರಾಧಿಕಾರಗಳೊಂದಿಗೆ ತನಿಖೆ ನಡೆಸುತ್ತಿದೆ. ಇಲ್ಲಿಯವರೆಗೆ, ನಾಲ್ಕು ಕೆಮ್ಮು ಔಷಧಿಗಳು ಸಾವಿಗೆ ಕಾರಣವೆಂದು ಗುರುತಿಸಲಾಗಿದೆ. ಇದಕ್ಕಾಗಿ ವಿಶ್ವದ ಇತರ ದೇಶಗಳಿಗೂ ಎಚ್ಚರಿಕೆ ನೀಡಲಾಗಿದೆ. ಈ ಎರಡನೇ ದರ್ಜೆಯ ಉತ್ಪನ್ನಗಳು ಅಸುರಕ್ಷಿತವಾಗಿವೆ ಮತ್ತು ವಿಶೇಷವಾಗಿ ಮಕ್ಕಳಲ್ಲಿ ಸಾವಿಗೆ ಕಾರಣವಾಗಬಹುದು.
ಇದನ್ನೂ ಓದಿ: Paan Benefits: ಊಟ ಆದ್ಮೇಲೆ ವೀಳ್ಯದೆಲೆ ತಿನ್ನಿ, ಸಾವಿರ ರೋಗಕ್ಕೆ ಹೇಳಿ ಟಾಟಾ ಬೈ ಬೈ
ಈ ಔಷಧಿಗಳನ್ನು ಮಾರುಕಟ್ಟೆಯಿಂದ ತೆಗೆದುಹಾಕುವಂತೆ WHO ಎಲ್ಲಾ ದೇಶಗಳಿಗೆ ಎಚ್ಚರಿಕೆ ನೀಡಿದೆ. ಈ ದೇಶಗಳು ಮತ್ತು ಆಯಾ ಪ್ರದೇಶದ ಪೂರೈಕೆ ಸರಪಳಿಯ ಮೇಲೆ ನಿಗಾ ಇಡಲು ಅವರೇ ಹೇಳಿದ್ದಾರೆ. ಡಬ್ಲ್ಯುಎಚ್ಒ ಎಚ್ಚರಿಕೆಯ ನಂತರ, ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ತಕ್ಷಣದ ತನಿಖೆಗೆ ಆದೇಶ ನೀಡಿದೆ.
"WHO has today issued a medical product alert for four contaminated medicines identified in #Gambia that have been potentially linked with acute kidney injuries and 66 deaths among children. The loss of these young lives is beyond heartbreaking for their families"-@DrTedros
— World Health Organization (WHO) (@WHO) October 5, 2022
ಇದನ್ನೂ ಓದಿ: Pineapple: ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಅನಾನಸ್ ಪಾತ್ರ, ಒಮ್ಮೆ ತಿಂದು ನೋಡಿ
ಸಿರಪ್ನ ವಿಷಕಾರಿ ಪರಿಣಾಮಗಳಾಗಿವೆ
ಇಂತಹ ಕೆಮ್ಮು ಸಿರಪ್ಗಳ ವಿಷಕಾರಿ ಪರಿಣಾಮಗಳೆಂದರೆ ಹೊಟ್ಟೆ ನೋವು, ತಲೆನೋವು, ವಾಂತಿ, ಅತಿಸಾರ, ಮೂತ್ರ ವಿಸರ್ಜನೆಯ ತೊಂದರೆ, ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ ಮತ್ತು ತೀವ್ರ ಮೂತ್ರಪಿಂಡ ಹಾನಿ. ಇವು ಸಾವಿಗೆ ಕಾರಣವಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ