ಪ್ರೀತಿಸಿ ಓಡಿ ಹೋದ ಮಗಳಿಗೆ ತಿಥಿ ಮಾಡಿ ಪಿಂಡ ಬಿಟ್ಟ ತಂದೆ!

ಇನ್ನು ಕೆಲವರು ಮಗಳು ಪ್ರೀತಿ ಮಾಡಿದ ತಪ್ಪಿಗೆ ಆಕೆಯನ್ನು ಕೂಡಿ ಹಾಕಿ, ಹಿಂಸೆ ನೀಡುವುದರ ಮೂಲಕ ಮನಸ್ಥಿತಿ ಬದಲಾಯಿಸಲು ಪ್ರಯತ್ನಿಸುತ್ತಾರೆ. ಆದರೆ ಮಧ್ಯ ಪ್ರದೇಶದಲ್ಲಿ ತಂದೆಯೊಬ್ಬ ತನ್ನ ಮಗಳು ಪ್ರಿಯಕರನೊಂದಿಗೆ ಓಡಿ ಹೋಗಿದ್ದಕ್ಕೆ, ಜೀವಂತವಾಗಿರುವಾಗಲೇ ಆಕೆಯ ತಿಥಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

Harshith AS | news18
Updated:August 4, 2019, 7:30 PM IST
ಪ್ರೀತಿಸಿ ಓಡಿ ಹೋದ ಮಗಳಿಗೆ ತಿಥಿ ಮಾಡಿ ಪಿಂಡ ಬಿಟ್ಟ ತಂದೆ!
.
Harshith AS | news18
Updated: August 4, 2019, 7:30 PM IST
ಇಂದಿನ ದಿನಗಳಲ್ಲಿ ಲವ್​ ಮ್ಯಾರೇಜ್​ ಕಾಮನ್​​ ಆಗಿದೆ. ಪೋಷಕರಿಗಂತೂ ತಮ್ಮ ಮಗಳು ಲವ್​ ಮಡುತ್ತಿದ್ದಾಳೆ ಎಂದು ತಿಳಿದರೆ ಆಕೆಯ ಇಷ್ಟದ ಹುಡುಗನೊಂದಿಗೆ ಮದುವೆ ಮಾಡಿ ಕೊಡುತ್ತಾರೆ. ಮಗಳಿಗೆ ಒತ್ತಡ ಹೇರಿ  ಬೇರೆ ಹುಡುಗನೊಂದಿಗೆ ಮದುವೆ ಮಾಡಿ ಕೊಟ್ಟರೆ ಅವಳ ಜೀವನ ಹಾಳಾಗಬಹುದು ಎಂಬ ಕಾರಣಕ್ಕೆ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸುತ್ತಾರೆ.

ಇನ್ನು ಕೆಲವರು ಮಗಳು ಪ್ರೀತಿ ಮಾಡಿದ ತಪ್ಪಿಗೆ ಆಕೆಯನ್ನು ಕೂಡಿ ಹಾಕಿ, ಹಿಂಸೆ ನೀಡುವುದರ ಮೂಲಕ ಮನಸ್ಥಿತಿ ಬದಲಾಯಿಸಲು ಪ್ರಯತ್ನಿಸುತ್ತಾರೆ. ಆದರೆ ಮಧ್ಯ ಪ್ರದೇಶದಲ್ಲಿ ತಂದೆಯೊಬ್ಬ ತನ್ನ ಮಗಳು ಪ್ರಿಯಕರನೊಂದಿಗೆ ಓಡಿ ಹೋಗಿದ್ದಕ್ಕೆ, ಜೀವಂತವಾಗಿರುವಾಗಲೇ ಆಕೆಯ ತಿಥಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: VIDEO: ಫ್ರೆಂಡ್​ಶಿಪ್ ಡೇ ಗೆಳೆಯರೊಂದಿಗೆ ಪವರ್ ​ಸ್ಟಾರ್ ಪುನೀತ್ ಜಾಲಿ ಟ್ರಿಪ್..!

ಮಧ್ಯಪ್ರದೇಶದ ಕುರ್ಚೋಡುನಲ್ಲಿ ಈ ಘಟನೆ ನಡೆದಿದ್ದು, ತಂದೆ ಗೋಪಾಲ್​ ಮಂಡೋದರ ಎಂಬವರು ತಮ್ಮ 19 ವರ್ಷದ ಮಗಳು ಪ್ರಿಯಕರನೊಂದಿಗೆ ಓಡಿ ಹೋಗಿದ್ದಕ್ಕಾಗಿ ತಿಥಿ ಮಾಡಿಸಿ ಪಿಂಡ ಬಿಟ್ಟಿದ್ದಾರೆ. ಗೋಪಾಲ್​ ಅವರ ಪುತ್ರಿ ಶಾರದಾ ಯುವಕನೊರ್ವನನ್ನು ಪ್ರೀತಿಸುತ್ತಿದ್ದಳು. ಆದರೆ ಆಕೆಯ ಪ್ರೀತಿಗೆ ಮನೆಯವರ ಸಮ್ಮತಿ ಇರಲಿಲ್ಲ. ಅದಕ್ಕಾಗಿ ಜು.25 ರಂದು ತಾನು ಪ್ರೀತಿಸಿದ ಹುಡುಗನೊಂದಿಗೆ ಓಡಿ ಹೋಗಿದ್ದಾಳೆ. ಇದರಿಂದ ಕೋಪಗೊಂಡ ತಂದೆ ನಮ್ಮ ಪಾಲಿಗೆ ಮಗಳು ಸತ್ತು ಹೋಗಿದ್ದಾಳೆ ಎಂದು ತಿಥಿ ಮಾಡಿದ್ದಾರೆ. ಮಾತ್ರವಲ್ಲದೆ ತಿಥಿ ಕಾರ್ಯಕ್ಕೆ ಇನ್​​ವಿಟೇಷನ್​ ಕಾರ್ಡ್​ ಪ್ರಿಂಟ್​ ಮಾಡಿ ಸಂಭಂದಿಕರಿಗೆ ಹಂಚಿದ್ದಾರೆ.
First published:August 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...