Nitin Gadkari: ಕಾರಿನ ಹಿಂಬದಿ ಸವಾರರಿಗೂ ಈಗ ಸೀಟ್​ಬೆಲ್ಟ್​ ಕಡ್ಡಾಯ, ತಪ್ಪಿದ್ರೆ ಬೀಳುತ್ತೆ ಭಾರೀ ದಂಡ!

ಇನ್ನು ಮೂರು ದಿನಗಳಲ್ಲಿ ಕೇಂದ್ರ ಸರ್ಕಾರದ ಸಾರಿಗೆ ಸಚಿವಾಲಯದಿಂದ ಆದೇಶ ಹೊರಬೀಳಲಿದೆ. ಈ ನಿಯಮಗಳು ಎಲ್ಲಾ ಕಾರುಗಳಿಗೆ ಅನ್ವಯಿಸುತ್ತವೆ. ಇದನ್ನು ರಾಜ್ಯ ಸರ್ಕಾರಗಳು ಜಾರಿಗೆ ತರಬೇಕು ಎಂದು ಗಡ್ಕರಿ ತಿಳಿಸಿದ್ದಾರೆ.

ನಿತಿನ್ ಗಡ್ಕರಿ

ನಿತಿನ್ ಗಡ್ಕರಿ

  • Share this:
ನವದೆಹಲಿ(ಸೆ.07): ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಸೀಟ್ ಬೆಲ್ಟ್ (Seat Belt) ಧರಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿಗೆ ಮುಂದಾಗಿದೆ. ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುವುದು ಈಗಾಗಲೇ ಕಡ್ಡಾಯವಾಗಿದೆ ಆದರೀಗ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ. ಕಾರಿನ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಸೀಟ್‌ಬೆಲ್ಟ್ ಧರಿಸುವ ಕಡ್ಡಾಯ ನೀತಿಯನ್ನು (Seatbelts Mandatory)  ಶೀಘ್ರದಲ್ಲೇ ಪ್ರಾರಂಭಿಸಬಹುದು. ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Minister Nitin Gadkari) ಮಂಗಳವಾರ ಈ ವಿಷಯ ತಿಳಿಸಿದ್ದಾರೆ. ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಭಾನುವಾರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದು, ಈ ಅಪಘಾತದ ಬಳಿಕ ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ಸೀಟ್ ಬೆಲ್ಟ್ ಅಲರ್ಟ್ ವ್ಯವಸ್ಥೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ.


ಕಾರಿನಲ್ಲಿ ಕುಳಿತುಕೊಳ್ಳುವ ಎಲ್ಲರೂ ಈಗ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವವರು ಸಾಮಾನ್ಯವಾಗಿ ಸೀಟ್ ಬೆಲ್ಟ್ ಧರಿಸುವುದಿಲ್ಲ, ಆದರೆ ಹೆಚ್ಚುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಕಾರಿನಲ್ಲಿರುವ ಎಲ್ಲಾ ಜನರು ಸೀಟ್ ಧರಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ. ಕೇಂದ್ರ ಸಚಿವ ಗಡ್ಕರಿ ಅವರು ಕಾರ್ಯಕ್ರಮವೊಂದರಲ್ಲಿ ಸೈರಸ್ ಮಿಸ್ತ್ರಿ ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: ಕಾರುಗಳಿಗೆ ಸ್ಟಾರ್ ರೇಟಿಂಗ್! ಪ್ರಯಾಣಿಕರ ಸುರಕ್ಷತೆ, ಆತ್ಮನಿರ್ಭರ ಭಾರತವೇ ಉದ್ದೇಶ

ಕಾರು ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸಬೇಕು ಎಂದು ಗಡ್ಕರಿ ಈ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಇದರೊಂದಿಗೆ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತವರು ಸೀಟ್ ಬೆಲ್ಟ್ ಹಾಕದಿದ್ದರೆ ದಂಡ ತೆರಬೇಕಾಗುತ್ತದೆ. ಇನ್ನು ಮೂರು ದಿನಗಳಲ್ಲಿ ಕೇಂದ್ರ ಸರ್ಕಾರದ ಸಾರಿಗೆ ಸಚಿವಾಲಯದಿಂದ ಆದೇಶ ಹೊರಬೀಳಲಿದೆ. ಈ ನಿಯಮಗಳು ಎಲ್ಲಾ ಕಾರುಗಳಿಗೆ ಅನ್ವಯಿಸುತ್ತವೆ. ಇದನ್ನು ರಾಜ್ಯ ಸರ್ಕಾರಗಳು ಜಾರಿಗೆ ತರಬೇಕು ಎಂದೂ ಸೂಚಿಸಿದ್ದಾರೆ.



ಇದನ್ನು 2002 ರಲ್ಲೇ ಕಡ್ಡಾಯಗೊಳಿಸಲಾಗಿತ್ತು

ಸೈರಸ್ ಮಿಸ್ತ್ರಿ ಹಿಂದಿನ ಸೀಟಿನಲ್ಲಿ ಕುಳಿತಿದ್ದು, ಸೀಟ್ ಬೆಲ್ಟ್ ಧರಿಸಿರಲಿಲ್ಲ. ಮಿಸ್ತ್ರಿ ಅವರೊಂದಿಗಿನ ಅಪಘಾತವು ದೇಶದ ರಸ್ತೆಗಳ ದುಃಸ್ಥಿತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಅದೇ ಹೊತ್ತಿಗೆ ಹಿಂಬದಿ ಸೀಟಿನಲ್ಲಿ ಕುಳಿತವರು ಬೆಲ್ಟ್ ಹಾಕಿಕೊಳ್ಳದಿರುವುದು ಎಷ್ಟು ಅಪಾಯಕಾರಿ ಎಂಬುದೂ ಒಮ್ಮೆ ಸಾಬೀತಾಗಿದೆ. ಚಾಲಕ ಮತ್ತು ಮುಂಭಾಗದ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುವುದನ್ನು 1993 ರಲ್ಲಿ ಕಡ್ಡಾಯಗೊಳಿಸಲಾಯಿತು. ಅಕ್ಟೋಬರ್ 2002 ರಲ್ಲಿ, ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿತು. ಆದರೆ ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ. 2019 ರಲ್ಲಿ, ಸರ್ಕಾರವು ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ದಂಡವನ್ನು 1000 ರೂ.ಗೆ ಹೆಚ್ಚಿಸಿತು, ಆದರೆ ಇದು ಪರಿಸ್ಥಿತಿಯನ್ನು ಸುಧಾರಿಸಲಿಲ್ಲ.

ಇದನ್ನೂ ಓದಿ: ಸಂಸತ್​ಗೆ ಹೈಡ್ರೋಜನ್ ಕಾರ್​ನಲ್ಲಿ ಸುಯ್​ ಎಂದು ಬಂದಿಳಿದ ಕೇಂದ್ರ ಸಚಿವ ನಿತಿನ್ ಗಡ್ಕರಿ!

ವಿಶ್ವಬ್ಯಾಂಕ್ ಪ್ರಕಾರ, ವಿಶ್ವದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತ ಭಾರತದಲ್ಲಿ ಸಂಭವಿಸುತ್ತದೆ. ಕೊರೋನಾ ಹರಡುವ ಮುನ್ನ ದೇಶದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಭೀಕರ ರಸ್ತೆ ಅಪಘಾತ ಸಂಭವಿಸುತ್ತಿತ್ತು. ಭಾರತವು ವಿಶ್ವದ ವಾಹನಗಳಲ್ಲಿ ಕೇವಲ ಒಂದು ಪ್ರತಿಶತವನ್ನು ಹೊಂದಿದೆ ಆದರೆ ರಸ್ತೆ ಅಪಘಾತಗಳು ಪ್ರಪಂಚದ ಒಟ್ಟು ಸಾವಿನಲ್ಲಿ 11 ಪ್ರತಿಶತವನ್ನು ಹೊಂದಿವೆ. ಭಾರತವು ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವನ್ನು ಹೊಂದಿದೆ. ಇದರ ಉದ್ದ 58.9 ಲಕ್ಷ ಕಿ.ಮೀ. ಆದರೆ ಕಳಪೆ ಕಾಮಗಾರಿ ಹಾಗೂ ಕಳಪೆ ನಿರ್ವಹಣೆಯಿಂದಾಗಿ ಬಹುತೇಕ ರಸ್ತೆಗಳು ಹದಗೆಟ್ಟಿವೆ ಎಂಬುವುದು ಉಲ್ಲೇಖನೀಯ.
Published by:Precilla Olivia Dias
First published: