ಕೇಂದ್ರದ ಸೂಚನೆಯನ್ನು ಭಾಗಶಃ ಪಾಲಿಸಿದ ಟ್ವಿಟರ್; ಖಲಿಸ್ತಾನಿ ಬೆಂಬಲಿತ 500 ಖಾತೆಗಳಿಗೆ ನಿರ್ಬಂಧ!

ಜಗತ್ತಿನಾದ್ಯಂತ ಮುಕ್ತ ಇಂಟರ್ನೆಟ್ ಮತ್ತು ಮುಕ್ತ ಅಭಿವ್ಯಕ್ತಿಗೆ ಬೆಂಬಲ ನೀಡುವ ಮೌಲ್ಯಗಳು ಹೆಚ್ಚು ಅಪಾಯದಲ್ಲಿದೆ ಎಂದು ಟ್ವಿಟರ್​ ಅಭಿಪ್ರಾಯಪಟ್ಟಿದೆ.

ಟ್ವಿಟರ್​.

ಟ್ವಿಟರ್​.

 • Share this:
  ನವ ದೆಹಲಿ (ಫೆಬ್ರವರಿ 10); ಖಲಿಸ್ತಾನ ಅಥವಾ ಪಾಕಿಸ್ತಾನ ಬೆಂಬಲಿತ ಎಂದು ಭದ್ರತಾ ಸಂಸ್ಥೆಗಳಿಂದ ಗುರುತಿಸಲ್ಪಟ್ಟಿರುವ ಸುಮಾರು 1200 ಖಾತೆಗಳನ್ನು ನಿರ್ಬಧಿಸುವಂತೆ ಕೋರಿ ಕೇಂದ್ರ ಸರ್ಕಾರ ಕಳೆದ ಫೆಬ್ರವರಿ 4 ರಂದು ಟ್ವಿಟರ್​ಗೆ ಸೂಚನೆ ನೀಡಿತ್ತು. ಈ ಟ್ವಿಟರ್​ ಖಾತೆಗಳ ಮೂಲಕ ಭಾರತದಲ್ಲಿ ರೈತ ಹೋರಾಟದ ಕುರಿತು ತಪ್ಪಾದ ಮಾಹಿತಿಗಳನ್ನು, ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಆರೋಪಿಸಿತ್ತು. ಆದರೆ, ಕೇಂದ್ರ ಸರ್ಕಾರ ಪಟ್ಟಿ ಮಾಡಿದ್ದ ಬಹುತೇಕ ಸಂಖ್ಯೆಗಳು ರಾಜಕಾರಣಿ, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಸಂಖ್ಯೆಯಾಗಿತ್ತು. ಹೀಗಾಗಿ ಸರ್ಕಾರ ಸೂಚನೆಗೆ ಇಂದು ಉತ್ತರ ನೀಡಿರುವ ಟ್ವಿಟರ್​, "ಮಾಧ್ಯಮ, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕಾರಣಿಗಳ ವಿರುದ್ದ ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಅವರ ವಿರುದ್ದ ಕ್ರಮ ಕೈಗೊಂಡರೆ ಭಾರತೀಯ ಕಾನೂನಿನಡಿಯಲ್ಲಿ ಇರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ" ಎಂದು ​ಅಭಿಪ್ರಾಯಪಟ್ಟಿದೆ.

  ಆದರೆ, ರೈತರ ಪ್ರತಿಭಟನೆ ಮತ್ತು ಪ್ರಚೋದನಕಾರಿ ವಿಷಯಗಳ ಬಗ್ಗೆ ತಪ್ಪು ಮಾಹಿತಿ ಹರಡಿದ್ದಾರೆ ಎಂಬ ಆರೋಪದ ಮೇಲೆ ಕೇಂದ್ರದ ಸೂಚನೆಯಂತೆ 1200 ಖಾತೆಗಳ ಐಕಿ 500 ಖಾತೆಗಳನ್ನು ಇರ್ಬಂಧಿಸುವ ಮೂಲಕ ಟ್ವಿಟರ್​ ಕೇಂದ್ರ ಸರ್ಕಾರ ನೀಡಿದ್ದ ಆದೇಶವನ್ನು ಭಾಗಶಃ ಪಾಲಿಸಿದೆ. ಬುಧವಾರ (ಇಂದು) 500 ಖಾತೆಗಳನ್ನು ತಡೆಹಿಡಿದಿದ್ದು, ಈ ತಡೆಯು ಕೇವಲ ಭಾರತದೊಳಗೆ ಮಾತ್ರ ಎಂದು ಟ್ವಿಟರ್​ ಸ್ಪಷ್ಟಪಡಿಸಿದೆ.  ಜಗತ್ತಿನಾದ್ಯಂತ ಮುಕ್ತ ಇಂಟರ್ನೆಟ್ ಮತ್ತು ಮುಕ್ತ ಅಭಿವ್ಯಕ್ತಿಗೆ ಬೆಂಬಲ ನೀಡುವ ಮೌಲ್ಯಗಳು ಹೆಚ್ಚು ಅಪಾಯದಲ್ಲಿದೆ ಎಂದು ಹೇಳಿರುವ ಟ್ವಿಟರ್, ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಅಹಿತಕರ ಘಟನೆಯ ನಂತರ, "ಭಾರತದಲ್ಲಿ ‌‌‌ನಮ್ಮ ತತ್ವಗಳನ್ನು ರಕ್ಷಿಸುವ ಹಾಗೂ ನಿಯಮಗಳನ್ನು ಜಾರಿಗೊಳಿಸುವ ಪೂರ್ವಭಾವಿ ಪ್ರಯತ್ನವಾಗಿ ಸಣ್ಣ ಅಪ್‌ಡೇಟ್‌ ಒಂದನ್ನು ಹಂಚಿಕೊಳ್ಳಲು ಬಯಸಿದ್ದೇವೆ" ತಿಳಿಸಿದೆ.

  ಪಾಕಿಸ್ತಾನ ಮತ್ತು ಖಲಿಸ್ತಾನಿಗಳಿಗೆ ಸಂಬಂಧಿಸಿದ 1,178 ಹ್ಯಾಂಡಲ್‌ಗಳು ನವೆಂಬರ್‌ನಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದೆ ಎಂದು ಆರೋಪಿಸಿ ಅವುಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರವು ಟ್ವಿಟರ್‌ಗೆ ಸೂಚಿಸಿತ್ತು. ಈ ಬಗ್ಗೆ ತಾನು ಕೈಗೊಳ್ಳುವ ಕ್ರಮಗಳ ಬಗ್ಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಟ್ವಿಟರ್‌‌ ತಿಳಿಸಿದೆ.

  ಇದನ್ನೂ ಓದಿ: ಪಾಕಿಸ್ತಾನ-ಖಲಿಸ್ತಾನ ಹೋರಾಟಕ್ಕೆ ಬೆಂಬಲ; 1200 ಖಾತೆಗಳನ್ನು ನಿರ್ಬಂಧಿಸುವಂತೆ ಟ್ವಿಟರ್​ಗೆ ಕೇಂದ್ರ ಸೂಚನೆ

  ತಡೆಹಿಡಿಯುವಂತೆ ಆದೇಶಿಸಲಾದ ಭಾಗಶಃ ಖಾತೆಗಳನ್ನು ಭಾರತದೊಳಗೆ ಮಾತ್ರ ತಡೆಹಿಡಿದಿದ್ದೇವೆ. ಈ ಖಾತೆಗಳು ಭಾರತದ ಹೊರಗೆ ಲಭ್ಯವಾಗುತ್ತವೆ ಎಂದು ಹೇಳಿರುವ ಟ್ವಿಟರ್, "ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ನಮ್ಮ ತತ್ವಗಳಿಗೆ ಅನುಗುಣವಾಗಿ, ನಮಗೆ ನಿರ್ದೇಶಿಸಲಾದ ಕ್ರಮಗಳು ಭಾರತೀಯ ಕಾನೂನಿಗೆ ಅನುಗುಣವಾಗಿರುತ್ತವೆ ಎಂದು ನಾವು ನಂಬುವುದಿಲ್ಲ,

  ಆದ್ದರಿಂದ ಸುದ್ದಿ ಮಾಧ್ಯಮ ಘಟಕವನ್ನು ಒಳಗೊಂಡಂತೆ, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕಾರಣಿಗಳು ಖಾತೆಗಳ ಮೇಲೆ ನಾವು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗೆ ಮಾಡಿದರೆ, ಭಾರತೀಯ ಕಾನೂನಿನಡಿಯಲ್ಲಿ ಅವರ ಮುಕ್ತ ಅಭಿವ್ಯಕ್ತಿಯ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ" ಎಂದು ಟ್ವಿಟರ್ ಹೇಳಿದೆ.
  Published by:MAshok Kumar
  First published: