ಎಮ್ಮೆ, ಪುಸ್ತಕಗಳಾಯ್ತು, ಈಗ ಮೇಕೆಗಳ ಕಳ್ಳತನ: ಎಸ್​ಪಿ ಸಂಸದ ಆಜಮ್ ಖಾನ್ ವಿರುದ್ಧ ಎಫ್ಐಆರ್

ರಾಮಪುರ್​ನ ಸಂಸದ ಆಜಮ್ ಖಾನ್ ವಿರುದ್ಧ 82 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಬಹುತೇಕ ಭೂ ಕಬಳಿಕೆ ಪ್ರಕರಣಗಳೇ ಹೆಚ್ಚು. ಪುಸ್ತಕ, ಎಮ್ಮೆ ಇತ್ಯಾದಿಗಳನ್ನು ಕದ್ದಿರುವ ಆರೋಪಗಳೂ ಅವರ ಮೇಲಿವೆ. 8 ವರ್ಷದ ಹಿಂದಿನ ಪ್ರಕರಣವೊಂದರಲ್ಲೂ ಅವರು ಬಂಧನ ಭೀತಿ ಎದುರಿಸುತ್ತಿದ್ದಾರೆ.

Vijayasarthy SN | news18
Updated:September 13, 2019, 11:58 AM IST
ಎಮ್ಮೆ, ಪುಸ್ತಕಗಳಾಯ್ತು, ಈಗ ಮೇಕೆಗಳ ಕಳ್ಳತನ: ಎಸ್​ಪಿ ಸಂಸದ ಆಜಮ್ ಖಾನ್ ವಿರುದ್ಧ ಎಫ್ಐಆರ್
ಅಜಮ್ ಖಾನ್
  • News18
  • Last Updated: September 13, 2019, 11:58 AM IST
  • Share this:
ರಾಮಪುರ್, ಉ.ಪ್ರ.(ಸೆ. 13): ತಿಂಗಳ ಹಿಂದೆ ಪುಸ್ತಕಗಳನ್ನು ಮತ್ತು ಎಮ್ಮೆಗಳನ್ನು ಕದ್ದ ಆರೋಪ ಎದುರಿಸಿದ್ದ ಸಮಾಜವಾದಿ ಪಕ್ಷದ ಸಂಸದ ಆಜಮ್ ಖಾನ್ ಈಗ ಮೇಕೆಗಳನ್ನು ಕದ್ದ ಆರೋಪ ಎದುರಿಸುತ್ತಿದ್ದಾರೆ. ನಸೀಮಾ ಖಾಟೂನ್ ಎಂಬಾಕೆ ನೀಡಿದ ದೂರಿನ ಮೇರೆಗೆ ಆಜಮ್ ಖಾನ್ ಹಾಗೂ ಸಂಗಡಿಗರ ವಿರುದ್ಧ ರಾಮಪುರ ಠಾಣೆ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಆದರೆ, ಮೂರು ವರ್ಷದ ಹಿಂದೆ ನಡೆದ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಆಜಮ್ ಖಾನ್ ಹಾಗೂ ಅವರ 7 ಸಹಚರರು ಮತ್ತು ಸುಮಾರು 25 ಇತರ ಅಪರಿಚಿತ ವ್ಯಕ್ತಿಗಳು 2016ರ ಅಕ್ಟೋಬರ್ 15ರಂದು ನನ್ನ ಮನೆಗೆ ನುಗ್ಗಿ ದಾಂಧಲೆ ನಡೆಸಿದರು. ನನ್ನ ಮನೆಯಲ್ಲಿದ್ದ ಆಭರಣಗಳು, 3 ಎಮ್ಮೆಗಳು, 1 ಹಸು ಹಾಗೂ 4 ಮೇಕೆಗಳನ್ನು ಕದ್ದೊಯ್ದರು ಎಂದು ನಸೀಮಾ ಖಟೂನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Highest Traffic Fine: ಸಂಚಾರ ನಿಯಮ ಉಲ್ಲಂಘನೆಗೆ 2 ಲಕ್ಷ ರೂ. ದಂಡ ವಿಧಿಸಿದ ದೆಹಲಿ ಪೊಲೀಸ್

50 ವರ್ಷದ ನಸೀಮಾ ಖಟೂನ್ ಅವರು ವಕ್ಫ್ ಮಂಡಳಿಗೆ ಸೇರಿದ ಆಸ್ತಿಯಲ್ಲಿ ಬಾಡಿಗೆದಾರಳಾಗಿ ಕಳೆದೆರಡು ದಶಕಗಳಿಂದ ವಾಸಿಸುತ್ತಿದ್ದಾರೆ. ಅಧಿಕೃತವಾಗಿ ಬಾಡಿಗೆ ಕಟ್ಟಿಕೊಂಡು ಹೋಗುತ್ತಿದ್ದರೂ ಸ್ಥಳವನ್ನು ಖಾಲಿ ಮಾಡಿಸುವಂತೆ ಆಜಮ್ ಖಾನ್ ಹಾಗೂ ಸಂಗಡಿಗರು ಒತ್ತಾಯಿಸುತ್ತಿದ್ದರೆನ್ನಲಾಗಿದೆ. ಈ ಜಾಗದಲ್ಲಿ ಶಾಲೆ ನಿರ್ಮಾಣ ಮಾಡಬೇಕು ಎಂದು ಕಾರಣವೊಡ್ಡಿ ನಸೀಮಾರ ಮನೆಯನ್ನು ತೆರವುಗೊಳಿಸಲು ಅಜಮ್ ಖಾನ್ ಪ್ರಯತ್ನಿಸುತ್ತಿದ್ದುದು ಈ ದೂರಿನಿಂದ ತಿಳಿದುಬರುತ್ತದೆ.

ರಾಮಪುರ್ ಸಂಸದ ಆಜಮ್ ಖಾನ್ ವಿರುದ್ಧ ದಾಖಲಾಗಿರುವ ಪ್ರಕರಣಗಳ ಪಟ್ಟಿಗೆ ಹೊಸ ಸೇರ್ಪಡೆಯಾದಂತಾಗಿದೆ. ಅವರ ವಿರುದ್ಧ ಈವರೆಗೆ ಬರೋಬ್ಬರಿ 82 ಪ್ರಕರಣಗಳು ರಿಜಿಸ್ಟರ್ ಆಗಿದೆ. ಇದರಲ್ಲಿ 50 ಪ್ರಕರಣಗಳು ಜಮೀನು ಕಬಳಿಕೆಗೆ ಸಂಬಂಧಿಸಿದ್ದಾಗಿದೆ. ಆಲಿಯಾಗಂಜ್ ಪ್ರದೇಶದ ವಿವಿಧ ರೈತರು ನೀಡಿದ ದೂರಿನ ಮೇರೆಗೆ 28 ಪ್ರಕರಣಗಳು ಅಜಮ್ ಖಾನ್ ವಿರುದ್ಧ ಇವೆ. ಉತ್ತರ ಪ್ರದೇಶ ಸರ್ಕಾರವು ಈಗಾಗಲೇ ಅಜಮ್ ಖಾನ್ ಅವರನ್ನು ಭೂ ಮಾಫಿಯಾ ಎಂದು ಘೋಷಿಸಿಯಾಗಿದೆ. ಆಜಮ್ ಖಾನ್ ಪತ್ನಿ ತಾಂಜೂನ್ ಫಾತೀಮಾ ವಿರುದ್ಧವೂ ಎಫ್​ಐಆರ್ ದಾಖಲಾಗಿದೆ. ತಮ್ಮ ಪತಿಯಂತೆ ತಾಂಜೂನ್ ಕೂಡ ಸಮಾಜವಾದಿ ಪಕ್ಷದ ಸಂಸದೆಯಾಗಿದ್ಧಾರೆ. ವಿದ್ಯುತ್ ಕಳ್ಳತನ ಮಾಡಿದ ಆರೋಪ ಅವರ ಮೇಲಿದೆ.

ಇದನ್ನೂ ಓದಿ: ಮಧ್ಯಪ್ರದೇಶದ ಪ್ರವಾಹಕ್ಕೆ ಮೃತಪಟ್ಟವರ ಸಂಖ್ಯೆ 200ಕ್ಕೂ ಹೆಚ್ಚು; ಇಂದೂ ಸಹ ವರುಣನ ಆರ್ಭಟ

ಆಜಮ್ ಖಾನ್ ಬಂಧನ ಸಾಧ್ಯತೆ:ಇದೇ ವೇಳೆ, 2010ರಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಸಂಬಂಧ ಆಜಮ್ ಖಾನ್ ಬಂಧನ ಭೀತಿಯಲ್ಲಿದ್ದಾರೆ. ಚುನಾವಣೆಯ ವೇಳೆ ಸುಳ್ಳು ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಲು ಎಸಿಜೆಎಂ ಕೋರ್ಟ್​​ನಲ್ಲಿ ಹಾಜರಾಗಲು ವಿಫಲರಾದ ಹಿನ್ನೆಲೆಯಲ್ಲಿ ಅವರ ಬಂಧನಕ್ಕೆ ಅರೆಸ್ಟ್ ವಾರೆಂಟ್ ನೀಡಲಾಗಿದೆ. ಈ ಬಂಧನದಿಂದ ತಪ್ಪಿಸಿಕೊಳ್ಳಲು ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸ್ಥಳೀಯ ಕೋರ್ಟ್ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಆಜಮ್ ಖಾನ್ ಅವರು ಬಂಧಿತರಾಗುವ ಸಾಧ್ಯತೆ ಹೆಚ್ಚಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading