ಒಂದೇ ಒಂದು ಟ್ವೀಟ್‌ನಿಂದ ವೇಗ ಹೆಚ್ಚಿಸಿದ ವಾರಾಣಸಿ ರೈಲು; ಏನಿತ್ತು ಆ ಟ್ವೀಟ್​​ನಲ್ಲಿ?

ರೈಲು ಹೆಚ್ಚು ವಿಳಂಬವಾಗಿದ್ದರೆ ವಾರಾಣಸಿಯ ವಲ್ಲಭ ವಿದ್ಯಾಪೀಠ ಬಾಲಕಿಯರ ಅಂತರ ಕಾಲೇಜಿನಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿರುವ DElEd ಪರೀಕ್ಷೆಯನ್ನು ತನ್ನ ಸಹೋದರಿ ತಪ್ಪಿಸಿಕೊಳ್ಳಬಹುದು ಎಂದು ಪ್ರಯಾಣಿಕರ ಸಹೋದರ ಅನ್ವರ್ ಜಮಾಲ್ ಟ್ವಿಟ್ಟರ್‌ನಲ್ಲಿ 'ಇಂಡಿಯನ್ ರೈಲ್ವೆ ಸೇವಾ'ಕ್ಕೆ ತಿಳಿಸಿದ ನಂತರ ರೈಲು ವೇಗ ಹೆಚ್ಚಿಸಿಕೊಂಡಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ವಾರಣಾಸಿ(ಫೆ.05): ಭಾರತದ ರೈಲುಗಳು ಗಂಟೆಗಟ್ಟಲೆ ತಡವಾಗಿ ಹೋಗುವುದು ಸಾಮಾನ್ಯವೇ ಆಗಿದೆ. ಆದರೆ, ಒಂದೇ ಒಂದು ಟ್ವೀಟ್‌ನಿಂದ ವಾರಾಣಸಿಗೆ ಹೊರಟಿದ್ದ ರೈಲೊಂದು ತನ್ನ ವೇಗವನ್ನು ಹೆಚ್ಚಿಸಿಕೊಂಡಿರುವ ವಿಶಿಷ್ಟ ಘಟನೆ ನಡೆದಿದೆ. ವಿದ್ಯಾರ್ಥಿನಿಯೊಬ್ಬರು ಪರೀಕ್ಷೆ ಬರೆಯಲು ತಡವಾಗಬಹುದೆಂದು ಸಹೋದರ ಮಾಡಿದ ಟ್ವೀಟ್‌ನಿಂದ ರೈಲು ತನ್ನ ವೇಗವನ್ನು ಹೆಚ್ಚಿಸಿಕೊಂಡಿದೆ. ವಾರಾಣಸಿಗೆ ಎರಡು ಗಂಟೆ ಇಪ್ಪತ್ತೇಳು ನಿಮಿಷ ತಡವಾಗಿ ಹೋಗುತ್ತಿದ್ದ ರೈಲೊಂದು ಒಂದು ಟ್ವೀಟ್‌ನಿಂದ ತನ್ನ ವೇಗವನ್ನು ಹೆಚ್ಚಿಸಿಕೊಂಡಿದೆ. ವಿದ್ಯಾರ್ಥಿನಿಯ ಸಹೋದರನ ಟ್ವೀಟ್‌ನ ನಂತರ ವೇಗವನ್ನು ಹೆಚ್ಚಿಸಿಕೊಂಡ ರೈಲು ಆಕೆಗೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರವನ್ನು ತಲುಪಲು ಸಹಾಯ ಮಾಡಿದೆ.

  ರೈಲು ಹೆಚ್ಚು ವಿಳಂಬವಾಗಿದ್ದರೆ ವಾರಾಣಸಿಯ ವಲ್ಲಭ ವಿದ್ಯಾಪೀಠ ಬಾಲಕಿಯರ ಅಂತರ ಕಾಲೇಜಿನಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿರುವ DElEd ಪರೀಕ್ಷೆಯನ್ನು ತನ್ನ ಸಹೋದರಿ ತಪ್ಪಿಸಿಕೊಳ್ಳಬಹುದು ಎಂದು ಪ್ರಯಾಣಿಕರ ಸಹೋದರ ಅನ್ವರ್ ಜಮಾಲ್ ಟ್ವಿಟ್ಟರ್‌ನಲ್ಲಿ 'ಇಂಡಿಯನ್ ರೈಲ್ವೆ ಸೇವಾ'ಕ್ಕೆ ತಿಳಿಸಿದ ನಂತರ ರೈಲು ವೇಗ ಹೆಚ್ಚಿಸಿಕೊಂಡಿದೆ.

  Udupi: ಭಿಕ್ಷೆ ಬೇಡಿದ ಲಕ್ಷಗಟ್ಟಲೇ ಹಣವನ್ನು ದೇವಾಲಯಗಳಿಗೆ ದಾನ ನೀಡಿದ ವೃದ್ಧೆ

  ಟ್ವೀಟ್‌ ಅನ್ನು ಅರಿತುಕೊಂಡ ಅಧಿಕಾರಿಗಳು, ಪ್ರಯಾಣಿಕರ ಸಹೋದರ ಟ್ವಿಟ್ಟರ್‌ನಲ್ಲಿ ಒದಗಿಸಿದ ಮಾಹಿತಿಯನ್ನು ಪರಿಶೀಲಿಸಿದರು. ಸಹೋದರನ ಕಾಳಜಿ ನಿಜವೆಂದು ಅರಿತ ರೈಲ್ವೆ ಇಲಾಖೆ ಛಾಪ್ರಾ ವಾರಾಣಸಿ ಎಕ್ಸ್‌ಪ್ರೆಸ್‌ ರೈಲಿನ ಚಾಲಕನಿಗೆ ವೇಗ ಹೆಚ್ಚಿಸಿಕೊಳ್ಳಲು ಮತ್ತು ವಿಳಂಬವನ್ನು ಕಡಿಮೆ ಮಾಡಲು ಕೇಳಿಕೊಂಡಿದೆ ಎಂದು ದೈನಿಕ್ ಜಾಗ್ರನ್ ವರದಿ ತಿಳಿಸಿದೆ.

  ನಂತರ, ಕೇವಲ ಎರಡು ಗಂಟೆಗಳ ವಿಳಂಬದೊಂದಿಗೆ ರೈಲು ಬೆಳಗ್ಗೆ 11 ಗಂಟೆಗೆ ವಾರಾಣಸಿ ತಲುಪಿತು. ಅನ್ವರ್ ಮತ್ತು ಅವರ ಸಹೋದರಿ ನಾಝಿಯಾ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರವನ್ನು ತಲುಪಿದರು. ಮುಂದಿನ ಟ್ವೀಟ್‌ನಲ್ಲಿ, ರೈಲ್ವೆ ಅಧಿಕಾರಿಗಳಿಗೆ ಸಹೋದರ ಧನ್ಯವಾದ ಅರ್ಪಿಸಿದರು.

  ಇಂಡಿಯನ್ ರೈಲ್ವೆ ಸೇವಾದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಅನೇಕ ಬಾರಿ ಇದೇ ರೀತಿ ಪ್ರಯಾಣಿಕರ ನೆರವಿಗೆ ಬಂದಿದೆ.
  Published by:Latha CG
  First published: