• Home
 • »
 • News
 • »
 • national-international
 • »
 • ಕೊರೋನಾ ನಿಯಮ ಉಲ್ಲಂಘನೆ; 10 ಭಾರತೀಯರನ್ನು ಗಡೀಪಾರು ಮಾಡಿದ ಸಿಂಗಾಪುರ

ಕೊರೋನಾ ನಿಯಮ ಉಲ್ಲಂಘನೆ; 10 ಭಾರತೀಯರನ್ನು ಗಡೀಪಾರು ಮಾಡಿದ ಸಿಂಗಾಪುರ

ಸಿಂಗಾಪುರ ಪೊಲೀಸ್​

ಸಿಂಗಾಪುರ ಪೊಲೀಸ್​

ಸದ್ಯ 10 ಭಾರತೀಯರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಅವರನ್ನು ಭಾರತಕ್ಕೆ ಕಳುಹಿಸಲಾಗುತ್ತದೆ. ಅವರು ಮತ್ತೆ ಸಿಂಗಾಪುರಕ್ಕೆ ಬರುವಂತಿಲ್ಲ. ಅವರ ಪಾಸ್​ಗಳನ್ನು ಕ್ಯಾನ್ಸಲ್​ ಮಾಡಿದ್ದೇವೆ ಎಂದು ಸಿಂಗಾಪುರ​ ಅಧಿಕಾರಿಗಳು ತಿಳಿಸಿದ್ದಾರೆ.

 • Share this:

  ಎಲ್ಲ ರಾಷ್ಟ್ರಗಳಂತೆ ಭಾರತ ಕೂಡ ಕೊರೋನಾ ವೈರಸ್​ ನಿಯಂತ್ರಣ ಮಾಡಲು ಹರಸಾಹಸ ಪಡುತ್ತಿದೆ. ದುರಾದೃಷ್ಟವಶಾತ್ ಜನರನ್ನು ನಿಯಂತ್ರಣ ಮಾಡಬೇಕಿದ್ದ ಪೊಲೀಸರಿಗೆ ಕೊರೋನಾ ವೈರಸ್​ ಅಂಟಿದೆ. ಈ ಮಧ್ಯೆ ಕೊರೋನಾ ನಿಯಮಗಳನ್ನು ಉಲ್ಲಂಘನೆ ಮಾಡುವುದನ್ನು ತಡೆಯಲು ದಂಡ ಪ್ರಕ್ರಿಯೆ ಕೂಡ ಜಾರಿಗೆ ತಂದಿದೆ. ಆದರೆ, ಅದು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಆದರೆ, ಸಿಂಗಾಪುರದನಲ್ಲಿ ಈ ನಿಯಮಗಳನ್ನು ತುಂಬಾನೇ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಒಂದೊಮ್ಮೆ ನಿಯಮ ಉಲ್ಲಂಘನೆ ಮಾಡಿದರೆ ಭಾರೀ ದಂಡ ತೆತ್ತಬೇಕಾಗುತ್ತದೆ. ಇದೇ ರೀತಿ ನಿಯಮ ಉಲ್ಲಂಘನೆ ಮಾಡಿದ 10 ಭಾರತೀಯರನ್ನು ಸಿಂಗಾಪುರದಿಂಧ ಗಡೀಪಾರು ಮಾಡಲಾಗಿದೆ.


  ಕೊರೋನಾ ವೈರಸ್​ ನಿಯಂತ್ರಣಕ್ಕೆ ಸಿಂಗಾಪುರದಲ್ಲಿ ಏಪ್ರಿಲ್​-7ರಿಂದ ಜೂನ್​ 2 ವರೆಗೆ ಲಾಕ್​ಡೌನ್​ ಘೋಷಣೆ ಮಾಡಿತ್ತು. ಈ ಅವಧಿಯಲ್ಲಿ ಮನೆಯಿಂದ ಹೊರ ಬರುವುದರ ಮೇಲೆ ನಿಷೇಧ ಹೇರಲಾಗಿತ್ತು. ಆದಾಗ್ಯೂ, ಮೇ 5ರಂದು 10 ಭಾರತೀಯರು ಅಪಾರ್ಟ್​ಮೆಂಟ್​ ಒಂದರಲ್ಲಿ ಸೇರಿದ್ದರು ಎನ್ನಲಾಗಿದೆ. ಇದು ಅಲ್ಲಿನ ನಿಯಮ ಉಲ್ಲಂಘನೆ ಮಾಡಿದಂತಾಗಿದೆ. ಹೀಗಾಗಿ ಇವರನ್ನು ಗಡೀಪಾರು ಮಾಡಲಾಗಿದೆ. ಅಷ್ಟೇ ಅಲ್ಲ, ಸಿಂಗಾಪುರಕ್ಕೆ ಬರುವುದನ್ನು ಖಾಯಂ ಆಗಿ ನಿಷೇಧ ಮಾಡಲಾಗಿದೆ.


  ಕೊರೋನಾ ವೈರಸ್​ ನಿಯಂತ್ರಣಕ್ಕೆ ಜಾರಿಗೆ ತಂದ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಆರು ತಿಂಗಳು ಕಾಲ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇರುತ್ತದೆ. ಎರಡನೇ ಬಾರಿಗೆ ನಿಯಮ ಉಲ್ಲಂಘನೆ ಮಾಡಿದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.


  ಸದ್ಯ 10 ಭಾರತೀಯರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಅವರನ್ನು ಭಾರತಕ್ಕೆ ಕಳುಹಿಸಲಾಗುತ್ತದೆ. ಅವರು ಮತ್ತೆ ಸಿಂಗಾಪುರಕ್ಕೆ ಬರುವಂತಿಲ್ಲ. ಅವರ ಪಾಸ್​ಗಳನ್ನು ಕ್ಯಾನ್ಸಲ್​ ಮಾಡಿದ್ದೇವೆ ಎಂದು ಸಿಂಗಾಪುರ​ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಭಾರತೀಯರಲ್ಲದೆ, ಚೀನಾ ಸೇರಿ ಅನೇಕ ರಾಷ್ಟ್ರಗಳ ನಾಗರೀಕರಿಗೆ ಸಿಂಗಾಪುರ​ ಇದೇ ಮಾದರಿಯ ಕ್ರಮ ಕೈಗೊಂಡಿದೆ.


  ಸಿಂಗಾಪುರದಲ್ಲಿ ಈ ವರೆಗೆ 45 ಕೊರೋನಾ ಪ್ರಕರಣಗಳು ವರದಿಯಾಗಿವೆ. 26 ಜನರು ಕೊರೋನಾ ವೈರಸ್​ನಿಂದ ಮೃತಪಟ್ಟಿದ್ದಾರೆ. ಕೊರೋನಾ ಸೋಂಕು ಬಹುತೇಕ ನಿಯಂತ್ರಣಕ್ಕೆ ಬಂದಿದೆ.

  Published by:Rajesh Duggumane
  First published: