ಬೈರುತ್ ಸ್ಫೋಟದ ನಂತರ ಎಚ್ಚೆತ್ತ ಅಧಿಕಾರಿಗಳು; ಚೆನ್ನೈ ಬಂದರಿನಲ್ಲಿಟ್ಟಿದ್ದ 700 ಟನ್​ ಅಮೋನಿಯಂ ನೈಟ್ರೇಟ್​ ಸ್ಥಳಾಂತರ

ಬೈರೂತ್​ ಸ್ಫೋಟದ ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ಇಲ್ಲಿ ಕೂಡಿಟ್ಟ ಅಮೋನಿಯಂ ನೈಟ್ರೇಟ್ಅನ್ನು ಆನ್​ಲೈನ್​ ಮೂಲಕ ಹರಾಜು ಹಾಕಿದ್ದಾರೆ. ಹೈದರಾಬಾದ್​ ಮೂಲದ ಉದ್ಯಮಿಯೊಬ್ಬರು ಇದನ್ನು ಖರೀದಿಸಿದ್ದಾರೆ.

news18-kannada
Updated:August 10, 2020, 10:51 AM IST
ಬೈರುತ್ ಸ್ಫೋಟದ ನಂತರ ಎಚ್ಚೆತ್ತ ಅಧಿಕಾರಿಗಳು; ಚೆನ್ನೈ ಬಂದರಿನಲ್ಲಿಟ್ಟಿದ್ದ 700 ಟನ್​ ಅಮೋನಿಯಂ ನೈಟ್ರೇಟ್​ ಸ್ಥಳಾಂತರ
ಬೈರೂತ್​ ಸ್ಫೋಟ
  • Share this:
ಚೆನ್ನೈ (ಆಗಸ್ಟ್​ 10): ಲೆಬನಾನ್ ರಾಜಧಾನಿ ಬೈರುತ್ ನಗರದ ಬಂದರು ಪ್ರದೇಶದಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟಕ್ಕೆ ಇಡೀ ಜಗತ್ತು ಬೆಚ್ಚಿ ಬಿದ್ದಿತ್ತು. ಈ ಸ್ಫೋಟಕ್ಕೆ ಬಂದರಿನಲ್ಲಿ ಶೇಖರಿಸಿಟ್ಟ ಅಮೋನಿಯಂ ನೈಟ್ರೇಟ್​ ಕಾರಣ ಎನ್ನುವ ವಿಚಾರ ನಂತರ ತಿಳಿದು ಬಂದಿತ್ತು. ಈ ಘಟನೆ ಬೆನ್ನಲ್ಲೇ ಭಾರತ ಎಚ್ಚೆತ್ತುಕೊಂಡಿದ್ದು, ಚೆನ್ನೈ ಬಂದರಿನಲ್ಲಿ ಸೀಜ್​ ಮಾಡಲಾದ 697 ಟನ್​ ಅಮೋನಿಯಂ ನೈಟ್ರೇಟ್ಅನ್ನು ಈಗ ಹೈದರಾಬಾದ್​ಗೆ ಶಿಫ್ಟ್​ ಮಾಡಲಾಗಿದೆ.

2015ರಲ್ಲಿ ಚೆನ್ನೈ ಬಂದರಿಗೆ 697 ಟನ್​ ಅಮೋನಿಯಂ ನೈಟ್ರೇಟ್​ ಹಡಗಿನಲ್ಲಿ ತರಲಾಗಿತ್ತು. ಇದು ತಮಿಳುನಾಡು ಮೂಲದ ಕಂಪೆನಿಯೊಂದಕ್ಕೆ ಸೇರಿದ್ದಾಗಿತ್ತು. ಆದರೆ ಸೂಕ್ತ ಪರವಾನಗಿ ಇಲ್ಲದೆ ಅಮೋನಿಯಂ ನೈಟ್ರೇಟ್​ ತಂದಿದ್ದರಿಂದ ಅದನ್ನು ಸೀಜ್​ ಮಾಡಲಾಗಿತ್ತು. ಚೆನ್ನೈನಿಂದ 20 ಕಿ.ಮೀ ದೂರದಲ್ಲಿ ಇದನ್ನು ಸಂಗ್ರಹಿಸಿ ಇಡಲಾಗಿತ್ತು.

ಬೈರೂತ್​ ಸ್ಫೋಟದ ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ಇಲ್ಲಿ ಕೂಡಿಟ್ಟ ಅಮೋನಿಯಂ ನೈಟ್ರೇಟ್ಅನ್ನು ಆನ್​ಲೈನ್​ ಮೂಲಕ ಹರಾಜು ಹಾಕಿದ್ದಾರೆ. ಹೈದರಾಬಾದ್​ ಮೂಲದ ಉದ್ಯಮಿಯೊಬ್ಬರು ಇದನ್ನು ಖರೀದಿಸಿದ್ದಾರೆ. 12 ಕಂಟೇನರ್​ ಮೂಲಕ ಇವುಗಳನ್ನು ಹೈದರಾಬಾದ್​ಗೆ ರಫ್ತು ಮಾಡಲಾಗಿದೆ.

ಲೆಬನಾನ್ ರಾಜಧಾನಿ ಬೈರುತ್ ನಗರದ ಬಂದರು ಪ್ರದೇಶದಲ್ಲಿ ಆಗಸ್ಟ್​5ರಂದು ಮಧ್ಯಾಹ್ನ ಸಂಭವಿಸಿರುವ ಭಾರೀ ಸ್ಟೋಟದಿಂದ ಅಲ್ಲಿನ ಜನರ ಬದುಕು ನುಚ್ಚು ನೂರಾಗಿದೆ. 4 ಸಾವಿರ ಜನ ಗಾಯಗೊಂಡು ನೂರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್​ ಕಾರಣವಾಗಿತ್ತು. 2013-14 ಸಂದರ್ಭದಲ್ಲಿ ಹಡಗೊಂದರಿಂದ ಸುಮಾರು 2,750 ಟನ್​  ಅಮೋನಿಯಂ ನೈಟ್ರೇಟ್ ವಶಕ್ಕೆ ಪಡೆಯಲಾಗಿತ್ತು.  ಅದನ್ನು ಬೈರೂತ್​ ಬಂದರಿನಲ್ಲಿ ಶೇಖರಿಸಿಡಲಾಗಿತ್ತು. ಇದಕ್ಕೆ ಬೆಂಕಿ ತಾಗಿದ್ದೇ ಈ ಅವಾಂತರಕ್ಕೆ ಕಾರಣ ಎನ್ನುವ ಮಾತು ಕೇಳಿ ಬಂದಿದೆ.
Published by: Rajesh Duggumane
First published: August 10, 2020, 10:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading