ನವದೆಹಲಿ (ಫೆ. 4): ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಲ್ಲಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ವಿವಾದವನ್ನು ಮೈ,ಮೇಲೆ ಎಳೆದುಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಬೆನ್ನಲ್ಲೇ ಅತಿ ಶೀಘ್ರದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಹನುಮಾನ್ ಚಾಲೀಸ ಪಠಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ದೆಹಲಿ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ
ಅರವಿಂದ್ ಕೇಜ್ರಿವಾಲ್ಗೆ 'ನೀವು ಹನುಮಂತನ ಭಕ್ತರೇ?' ಎಂದು ಪ್ರೇಕ್ಷಕರೊಬ್ಬರು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರವಾಗಿ ಹನುಮಾನ್ ಚಾಲೀಸ ಮಂತ್ರ ಪಠಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಯೋಗಿ ಆದಿತ್ಯನಾಥ್, ಈಗ ಕೇಜ್ರಿವಾಲ್ ಮಾತ್ರ ಹನುಮಾನ್ ಚಾಲೀಸ ಪಠಿಸಿದ್ದಾರೆ. ಮುಂದೇನಾಗುತ್ತದೆ ಎಂದು ಸ್ವಲ್ಪ ದಿನ ಕಾದು ನೋಡಿ. ಮುಂದೊಂದು ದಿನ ಓವೈಸಿ ಕೂಡ ಹನುಮಾನ್ ಚಾಲೀಸ ಪಠಿಸಿದರೆ ಅಚ್ಚರಿ ಪಡಬೇಕಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕೊರೋನಾ ವೈರಸ್ನಿಂದ ಆಸ್ಪತ್ರೆ ಸೇರಿದ ಅಪ್ಪ; ಹಸಿವಿನಿಂದ ಕುಳಿತಲ್ಲೇ ಶವವಾದ ಮಗ!
ಒಂದುಕಡೆ ಸಿಎಂ
ಕೇಜ್ರಿವಾಲ್ ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ಶಾಹೀನ್ ಬಾಗ್ನಲ್ಲಿ ಬಿರಿಯಾನಿ ಉಣಬಡಿಸುತ್ತಾರೆ. ಇನ್ನೊಂದು ಕಡೆ ಚಾನೆಲ್ ಆಫೀಸಿನಲ್ಲಿ ಕುಳಿತು ಹನುಮಾನ್ ಚಾಲೀಸ ಪಠಿಸುತ್ತಾರೆ. ಇವರೆಡರಲ್ಲಿ ಯಾವುದು ಅವರ ನಿಜವಾದ ನಿಲುವು ಮತ್ತು ವ್ಯಕ್ತಿತ್ವ ಎಂಬುದು ಸಾಬೀತಾಗಲಿ ಎಂದು
ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಇದೇ ರೀತಿ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಕೂಡ ಹೇಳಿಕೆ ನೀಡಿದ್ದರು. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಟ್ವಿಟ್ಟರ್ನಲ್ಲಿ ವಾಗ್ದಾಳಿ ನಡೆಸಿದ್ದ ಅವರು, 'ಅರವಿಂದ್ ಕೇಜ್ರಿವಾಲ್ ಈಗ ಹನುಮಾನ್ ಚಾಲೀಸಾ ಪಠಿಸಲು ಆರಂಭಿಸಿದ್ದು, ಕೆಲವೇ ದಿನಗಳಲ್ಲಿ ಅಸಾದುದ್ದೀನ್ ಓವೈಸಿ ಕೂಡ ಹನುಮಾನ್ ಚಾಲೀಸಾ ಪಠಿಸಲಿದ್ದಾರೆ. ಇದು ನಮ್ಮ ಒಗ್ಗಟ್ಟಿನ ಶಕ್ತಿ. ಹೀಗೆಯೇ ಒಗ್ಗಟ್ಟಾಗಿ ಮುಂದುವರೆಯೋಣ, ಒಗ್ಗಟ್ಟು ಪ್ರದರ್ಶಿಸೋಣ. ನಾವೆಲ್ಲರೂ ಒಂದಾಗಿ ಮತ ಚಲಾಯಿಸೋಣ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ