Mehul Choksi: ಮೆಹುಲ್ ಚೋಕ್ಸಿ ಅರೆಸ್ಟ್ ಆದ್ಮೇಲೆ ಎಲ್ರೂ ಹುಡುಕುತ್ತಿರೋ ಡೊಮಿನಿಕಾ ದೇಶ ಎಲ್ಲಿದೆ ಗೊತ್ತಾ?

ಪೂರ್ವ ಕೆರಿಬಿಯನ್ ಸಮುದ್ರದ ಒಂದು ದ್ವೀಪ ಡೊಮಿನಿಕಾ. ಲೆಸ್ಸರ್ ಆಂಟಿಲಿಸ್ ಗ್ರೂಪ್ ಆಫ್ ಐಲ್ಯಾಂಡ್ಸ್​ ಗೆ ಸೇರಿದ ಒಂದು ದ್ವೀಪ ಇದು. ಸುಂದರ ಬೀಚ್​ಗಳು, ಹಚ್ಚಹಸಿರಿನ ಸಸ್ಯರಾಶಿ, ಎತ್ತ ನೋಡಿರೂ ನೀಲಿ ನೀರು.. ಭೂಲೋಕದ ಸ್ವರ್ಗದಂತೆ ಕಾಣುವ ಪುಟ್ಟ ದೇಶ ಡೊಮಿನಿಕಾ.

ಮೆಹುಲ್ ಚೋಕ್ಸಿ

ಮೆಹುಲ್ ಚೋಕ್ಸಿ

  • Share this:
Mehul Choksi: ಪಂಜಾಬ್ ನ್ಯಾಷನಲ್ ಬ್ಯಾಂಕ್​ ಹಗರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಷಿ ಡೊಮಿನಿಕಾ ರಿಪಬ್ಲಿಕ್​ನಲ್ಲಿ ಸೆರೆಯಾಗಿರೋದು ಗೊತ್ತಿರೋ ವಿಚಾರ. ಆದ್ರೆ ಡೊಮಿನಿಕಾ ಅನ್ನೋ ದೇಶದ ಬಗ್ಗೆ ಅನೇಕರಿಗೆ ಹೆಚ್ಚೇನೂ ಗೊತ್ತಿಲ್ಲ. ಇಂಥದ್ದೊಂದು ದೇಶ ಇದೆಯಾ? ಅಲ್ಲಿ ಏನೇನಿದೆ? ನೋಡೋಕೆ ಹೇಗಿದೆ? ಲಾಕ್​ಡೌನ್ ಮುಗಿದ್ಮೇಲೆ ಅಲ್ಲಿಗೆ ಟ್ರಿಪ್ ಹೋಗ್ಬಹುದಾ ಅಂತೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಜನ ಸಿಕ್ಕಾಪಟ್ಟೆ ಚರ್ಚೆ ಮಾಡ್ತಾ ಇದ್ದಾರೆ. ಹಾಗಾದ್ರೆ ಎಲ್ಲಿದೆ ಡೊಮಿನಿಕಾ? ಅದೇ ರೀತಿ ಆಂಟಿಗುವಾ ಮತ್ತು ಬರ್ಬುಡಾ ಕೂಡಾ ಎಲ್ಲಿದೆ? ಈ ಎಲ್ಲದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಪೂರ್ವ ಕೆರಿಬಿಯನ್ ಸಮುದ್ರದ ಒಂದು ದ್ವೀಪ ಡೊಮಿನಿಕಾ. ಲೆಸ್ಸರ್ ಆಂಟಿಲಿಸ್ ಗ್ರೂಪ್ ಆಫ್ ಐಲ್ಯಾಂಡ್ಸ್​ ಗೆ ಸೇರಿದ ಒಂದು ದ್ವೀಪ ಇದು. ಸರಳವಾಗಿ ಹೇಳಬೇಕೆಂದರೆ ಲೆಸ್ಸರ್ ಆಂಟಿಲಿಸ್, ಗ್ರೇಟರ್ ಆಂಟಿಲಿಸ್ ಮತ್ತು ಲುಕಾಯನ್ ಆರ್ಕಿಪೆಲಾಗೊ ಸೇರಿದರೆ ವೆಸ್ಟ್​ ಇಂಡೀಸ್ ಆಗುತ್ತದೆ. ಫ್ರಾನ್ಸ್​ಗೆ ಸೇರಿದ ಗುಡೆಲೊಪ್ ದ್ವೀಪ್ ಡೊಮಿನಿಕಾದ ಉತ್ತರದಲ್ಲಿದೆ. ಸುಂದರ ಬೀಚ್​ಗಳು, ಸಸ್ಯರಾಶಿಯಿಂದ ನೋಡೋಕೆ ಅದ್ಭುತ ಎನಿಸುವಂತಿದೆ.

ಇದನ್ನೂ ಓದಿ: Mehul Choksi: PNB ಹಗರಣ; ಡೊಮಿನಿಕಾದಿಂದ ಮೆಹುಲ್ ಚೋಕ್ಸಿ ಗಡಿಪಾರು ಸಾಧ್ಯತೆ; ದೆಹಲಿಯಿಂದ ವಿಮಾನ ರವಾನೆ

47 ಕಿಲೋಮೀಟರ್ ಉದ್ದ ಮತ್ತು 26 ಕಿಲೋಮೀಟರ್ ಅಗಲ ಇದೆ ಡೊಮಿನಿಕಾ. 2011ರ ಲೆಕ್ಕದಂತೆ ಈ ದೇಶದಲ್ಲಿ ಸುಮಾರು 70 ಸಾವಿರ ಜನ ವಾಸಿಸುತ್ತಿದ್ದಾರೆ. ಡೊಮಿನಿಕಾದ ರಾಜಧಾನಿ ರೊಸೆಯೂ ಅಲ್ಲಿನ ಪ್ರಮುಖ ಬಂದರು ಕೂಡಾ ಹೌದು. 1978ರಲ್ಲಿ ಸ್ವಾತಂತ್ರ್ಯ ಸಿಕ್ಕ ನಂತರದಿಂದ ಈ ದೇಶ ಕಾಮನ್​ವೆಲ್ತ್​ ರಾಷ್ಟ್ರಗಳ ಒಕ್ಕೂಟದಲ್ಲಿದೆ.

ಡೊಮಿನಿಕನ್ ರಿಪಬ್ಲಿಕ್ ಮತ್ತು ಡೊಮಿನಿಕಾ ಎರಡೂ ಒಂದೇ ಅಲ್ಲ. ಕೆರಿಬಿಯನ್ ಸಮುದ್ರದಲ್ಲೇ ಇರೋ ಈ ಎರಡೂ ದೇಶಗಳು ಬೇರೆ ಬೇರೆ. ಡೊಮಿನಿಕನ್ ರಿಪಬ್ಲಿಕ್ ನ ರಾಜಧಾನಿ ಸ್ಯಾಂಟೋ ಡೊಮಿಗೋ. ಇಡೀ ಕೆರಿಬಿಯನ್​​ನಲ್ಲಿ ಅತ್ಯಂತ ದೊಡ್ಡ ಆರ್ಥಿಕ ವ್ಯವಸ್ಥೆ ಡೊಮಿನಿಕನ್ ರಿಪಬ್ಲಿಕ್​ನದ್ದು. ಇಲ್ಲಿಗೆ ಸಾಕಷ್ಟು ಜನ ಭೇಟಿ ನೀಡುತ್ತಿರುತ್ತಾರೆ.

After arrest of Mehul Choksi everyone searching for Dominica where is it
ಡೊಮಿನಿಕಾ ನಕ್ಷೆ


ಕಳೆದ ಕೆಲ ವರ್ಷಗಳಿಂದ ಚೋಕ್ಸಿಯ ಮನೆಯಾಗಿದ್ದ ಆಂಟಿಗುವಾ ಮತ್ತು ಬರ್ಬುಡಾ ಕೂಡಾ ವೆಸ್ಟ್​​ ಇಂಡೀಸ್​ನ ಒಂದು ದೇಶ. ಇದು ಆಂಟಿಗುವಾ ಮತ್ತು ಬರ್ಬುಡಾ ಎನ್ನುವ ಎರಡು ದೊಡ್ಡ ದ್ವೀಪಗಳನ್ನು ಒಳಗೊಂಡಿದೆ. 97 ಸಾವಿರ ಜನಸಂಖ್ಯೆ ಇರುವ ಈ ದೇಶದ ರಾಜಧಾನಿ ಸೇಂಟ್ ಜಾನ್ಸ್.

ಮೆಹುಲ್ ಚೋಕ್ಸಿ ಯಾಕೆ ವಾಂಟೆಡ್ ?

ಮೆಹುಲ್ ಚೋಕ್ಸಿ ಮತ್ತು ಆತನ ಅಳಿಯ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 13,500 ಕೋಟಿ ರೂಪಾಯಿ ಸಾರ್ವಜನಿಕ ಹಣದ ಹಗರಣಕ್ಕಾಗಿ ಬೇಕಾಗಿದ್ದಾರೆ. ನೀರವ್ ಮೋದಿ ಸದ್ಯ ಲಂಡನ್ ಕಾರಾಗೃಹದಲ್ಲಿ ಇದ್ದಾರೆ. ಅನೇಕ ಬಾರಿ ಅವರ ಬೇಲ್ ಅರ್ಜಿ ತಿರಸ್ಕೃತವಾಗಿದೆ. ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಲಂಡನ್ ಕೋರ್ಟ್​ನಲ್ಲಿ ಪ್ರಕರಣ ನಡೆಯುತ್ತಿದೆ. ಇನ್ನು ಮೆಹುಲ್ ಚೋಕ್ಸಿ 2017ರಲ್ಲಿ ಹಣ ನೀಡಿ ಆಂಟಿಗುವಾ ಮತ್ತು ಬರ್ಬುಡಾದ ಪೌರತ್ವ ಪಡೆದಿದ್ದಾರೆ. 2018ರ ಜನವರಿಯಲ್ಲಿ ಭಾರತ ಬಿಟ್ಟು ಓಡಿಹೋದ ನಂತರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಬಯಲಿಗೆ ಬಂದಿತ್ತು. ಸದ್ಯ ಇವರಿಬ್ಬರನ್ನೂ ಸಿಬಿಐ ಹುಡುಕುತ್ತಿತ್ತು.

ಮೆಹುಲ್ ಚೋಕ್ಸಿ ಆಂಟಿಗುವಾ ಮತ್ತು ಬರ್ಬುಡಾದಲ್ಲೂ ಎರಡು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. 62 ವರ್ಷದ ಚೋಕ್ಸಿ, ಕೆರಿಬಿಯನ್ ದ್ವೀಪ ರಾಷ್ಟ್ರವಾದ ಆಂಟಿಗುವಾ ಮತ್ತು ಬಾರ್ಬಡೋಸ್‌ನಲ್ಲಿ ನೆಲೆಸಿದ್ದರು. ಸೋಮವಾರ ಸಂಜೆ ಊಟಕ್ಕಾಗಿ ಮನೆಯಿಂದ ಹೊರಗೆ ಹೋದವರು ವಾಪಾಸ್ ಬಂದಿರಲಿಲ್ಲ. ಆತ ಕ್ಯೂಬಾಕ್ಕೆ ಪರಾರಿಯಾಗಿರುವ ಅನುಮಾನಗಳು ವ್ಯಕ್ತವಾಗಿದ್ದವು. ಆಂಟಿಗುವಾದಿಂದ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡಿಸುವ ಸಂಬಂಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳು ಪ್ರಯತ್ನ ನಡೆಸಿರುವ ಸಂದರ್ಭದಲ್ಲಿಯೇ ಅವರು ಆಂಟಿಗುವಾದಿಂದಲೂ ಪಲಾಯನ ಮಾಡಲು ಯೋಜನೆ ರೂಪಿಸಿದ್ದರು.
Published by:Soumya KN
First published: