ನವದೆಹಲಿ (ಜು. 3): ಸತತ 20 ವರ್ಷಗಳ ಬಳಿಕ ಆಮೆರಿಕ ತನ್ನ ಬಗ್ರಾಮ್ ವಾಯುನೆಲೆಯನ್ನು ಅಫಘಾನಿಸ್ತಾನಕ್ಕೆ ನೀಡಿದೆ. ಅಲ್ಲಿಯೇ ನೆಲೆನಿಂತಿದ್ದ ಅಮೆರಿಕ ಸೇನಾಪಡೆಯು ಹಂತ ಹಂತವಾಗಿ ಸ್ವದೇಶಕ್ಕೆ ವಾಪಾಸಾಗುತ್ತಿದೆ. ಅಮೆರಿಕವು ಬರ್ಗಾಮ್ ಅನ್ನು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ಸಂಘಟನೆಯನ್ನು ಹತ್ತಿಕ್ಕಲು ಅದನ್ನು ಹೋರಾಟದ ಕೇಂದ್ರವಾಗಿಸಿಕೊಂಡಿತ್ತು. ಅಲ್ಲದೇ 9/11 ದಾಳಿಯ ರೂವಾರಿ ಅಲ್ಖೈದಾನನ್ನು ಸದೆಬಡಿಯಲು ಸಹ ಅಮೆರಿಕ ಈ ವಯುನೆಲೆಯನ್ನು ಬಳಸಿಕೊಂಡಿತ್ತು.
ಹೆಸರು ಹೇಳಲು ಇಚ್ಛಿಸದ ಇಬ್ಬರು ಅಮೆರಿಕ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ವಾಯುನೆಲೆಯನ್ನು ಅಫ್ಘಾನ್ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಪಡೆಗೆ ಸಂಪೂರ್ಣವಾಗಿ ಹಸ್ತಾಂತರಿಸಲಾಗಿದೆ ಎಂದು ಖಚಿತತೆ ನೀಡಿದರು.
ಅಫ್ಘಾನಿಸ್ತಾನದ ಯುಎಸ್ ಉನ್ನತ ಕಮಾಂಡರ್ ಜನರಲ್ ಆಸ್ಟಿನ್ ಎಸ್ ಮಿಲ್ಲರ್ "ಪಡೆಗಳ ರಕ್ಷಣೆಗಾಗಿ ವಾಯುನೆಲೆಯನ್ನು ಬಳಸಿಕೊಳ್ಳುವ ಎಲ್ಲಾ ಸಾಮರ್ಥ್ಯಗಳನ್ನು ಮತ್ತು ಅಧಿಕಾರಿಗಳನ್ನು ಇನ್ನೂ ಉಳಿಸಿಕೊಂಡಿದ್ದಾರೆ" ಎಂದು ಹೇಳಿದರು.
ಯುಎಸ್ ಮಿಲಿಟರಿ ವಾಯುನೆಲೆದಿಂದ 2,500-3,500 ಯುಎಸ್ ಸೈನಿಕರು ಅಫ್ಘಾನಿಸ್ತಾನವನ್ನು ತೊರೆಯಲಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಸೆಪ್ಟೆಂಬರ್ 11 ರ ಸುಮಾರಿಗೆ ಅಮೆರಿಕದ ವಾಯುಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಹೇಳಿದ್ದರು. ಆದರೆ ಅದಕ್ಕೂ ಎರಡು ತಿಂಗಳು ಮುನ್ನವೇ ಜುಲೈ ತಿಂಗಳಲ್ಲೇ ವಾಯುಪಡೆಯನ್ನು ಕರೆಸಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಅಫ್ಘಾನ್ ರಾಜಧಾನಿ ಕಾಬೂಲ್ನಿಂದ ಉತ್ತರಕ್ಕೆ 50 ಕಿಲೋಮೀಟರ್ ದೂರದಲ್ಲಿರುವ ಬಾಗ್ರಾಮ್ ಏರ್ಫೀಲ್ಡ್ ಅಂತಿಮವಾಗಿ 2 ದಶಕಗಳಿಂದ ತನ್ನದೇ ಆದ ಒಂದು ಸಣ್ಣ ನಗರವಾಗಿ ಮಾರ್ಪಟ್ಟಿತು, ಜಿಮ್ಗಳು, ಅಂಗಡಿಗಳು, ಈಜುಕೊಳಗಳು, ಚಿತ್ರಮಂದಿರಗಳು ಮತ್ತು ಸ್ಪಾಗಳು ಸಾವಿರಾರು ಸೈನಿಕರಿಗೆ ಮತ್ತು ಗುತ್ತಿಗೆದಾರರಿಗೆ ಅಲ್ಲಿ ಕೆಲಸ ನೀಡಿದ್ದವು.
ಅಮೆರಿಕದ ಮಾಜಿ ಅಧ್ಯಕ್ಷರು - ಜಾರ್ಜ್ ಡಬ್ಲ್ಯು ಬುಷ್, ಬರಾಕ್ ಒಬಾಮಾ ಮತ್ತು ಡೊನಾಲ್ಡ್ ಟ್ರಂಪ್ ಅವರು ತಮ್ಮ ಬಿಡುವಿನ ಸಮಯದಲ್ಲಿ ಈ ವಾಯುನೆಲೆಗೆ ಭೇಟಿ ನೀಡಿದ್ದರು ಮತ್ತು ವಿಜಯದ ಭರವಸೆ ನೀಡಿದ್ದರು.
ಈ ವಾಯುನೆಲೆಯಲ್ಲಿ ಫೈಟರ್ ಜೆಟ್ಗಳು, ಸರಕು ವಿಮಾನಗಳು ಮತ್ತು ದಾಳಿ ಹೆಲಿಕಾಪ್ಟರ್ಗಳು ಇದ್ದವು. ಜೊತೆಗೆ ಸಾವಿರಾರು ತಾಲಿಬಾನ್ ಮತ್ತು ಜಿಹಾದಿ ಕೈದಿಗಳನ್ನು ಬಂಧಿಸಲು ಜೈಲನ್ನು ಸಹ ಹೊಂದಿತ್ತು.
1950ರ ದಶಕದಲ್ಲಿ ಶೀತಲ ಸಮರದ ಸಮಯದಲ್ಲಿ ಯುಎಸ್ ತನ್ನ ಅಫಘಾನ್ ಮಿತ್ರರಿಗಾಗಿ ಬಾಗ್ರಾಮ್ ಅನ್ನು ನಿರ್ಮಿಸಿತ್ತು. 1979 ರಲ್ಲಿ, ಸೋವಿಯತ್ ಒಕ್ಕೂಟವು ಅಫ್ಘಾನಿಸ್ತಾನವನ್ನು ಆಕ್ರಮಿಸಿದಾಗ ವಾಯುನೆಲೆಯನ್ನು ತನ್ನ ಮುಖ್ಯ ನೆಲೆಯನ್ನಾಗಿ ಪರಿವರ್ತಿಸಿತು. ಸೋವಿಯತ್ ಒಕ್ಕೂಟವು 1989 ರಲ್ಲಿ ಅದರ ವಾಪಸಾತಿಗೆ ಮಾತುಕತೆ ನಡೆಸಿತು.
ಇತ್ತೀಚೆಗೆ, ಇಸ್ಲಾಮಿಕ್ ಸ್ಟೇಟ್ ಬಾಗ್ರಾಮ್ ಮೇಲೆ ಹಲವಾರು ರಾಕೆಟ್ ದಾಳಿಗಳನ್ನು ನಡೆಸಿದೆ, ಭವಿಷ್ಯದ ಆಕ್ರಮಣಗಳಿಗೆ ಉಗ್ರರು ಗಮನಹರಿಸುತ್ತಿದ್ದಾರೆ ಎಂಬ ಆತಂಕವನ್ನು ಹುಟ್ಟುಹಾಕಿದೆ.
ಅಮೆರಿಕದ ಕೊನೆಯ ಸೈನಿಕ ಯಾವಾಗ ಬಗ್ರಾಮ್ ವಾಯುನೆಲೆಯಿಂದ ನಿರ್ಗಮಿಸುತ್ತಾನೆ ಎಂದು ಹೇಳಲು ನಿರಾಕರಿಸಿದೆ. ಆದರೆ ಕಾಬೂಲ್ನ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಕ್ಷಣೆಯ ಮಾತುಕತೆ ಇನ್ನೂ ಬಗೆಹರಿದಿಲ್ಲ. ಟರ್ಕಿಶ್ ಮತ್ತು ಯುಎಸ್ ಸೈನಿಕರು ವಿಮಾನ ನಿಲ್ದಾಣದ ರಕ್ಷಣೆಗೆ ನಿಂತಿದ್ದಾರೆ.
ರಾಜಧಾನಿಯಲ್ಲಿನ ರಾಯಭಾರ ಕಚೇರಿಯನ್ನು ರಕ್ಷಿಸಲು ಯುಎಸ್ ಅಫ್ಘಾನಿಸ್ತಾನದಲ್ಲಿ ಸುಮಾರು 650 ಸೈನಿಕರನ್ನು ಅಲ್ಲಿಯೇ ಉಳಿಸಲಿದೆ. ಅವರ ಉಪಸ್ಥಿತಿಯು ಅಫಘಾನ್ ಸರ್ಕಾರದೊಂದಿಗೆ ದ್ವಿಪಕ್ಷೀಯ ಒಪ್ಪಂದದಲ್ಲಿ ಬರುತ್ತದೆ ಎಂದು ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ