ಅಡ್ವಾಣಿ ಬಳಿಕ ಮುರಳಿ ಮನೋಹರ್​ ಜೋಷಿಗೆ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಸೂಚಿಸಿದ ಪಕ್ಷ

ಹಿರಿಯ ನಾಯಕ ಅಡ್ವಾಣಿ ಬಳಿಕ ಈಗ ಮುರುಳಿ ಮನೋಹರ್​ ಜೋಷಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಡಿ ಎಂದು ಪಕ್ಷವೇ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಾನ್ಪರ್​ ಕ್ಷೇತ್ರದ ಮತದಾರರಿಗೆ ತಾವು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಮುರುಳಿ ಮನೋಹರ್​ ಜೋಷಿ ಸ್ಪಷ್ಟಪಡಿಸಿದ್ದಾರೆ.

Seema.R | news18
Updated:March 28, 2019, 6:40 PM IST
ಅಡ್ವಾಣಿ ಬಳಿಕ ಮುರಳಿ ಮನೋಹರ್​ ಜೋಷಿಗೆ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಸೂಚಿಸಿದ ಪಕ್ಷ
ಮುರಳಿ ಮನೋಹರ್​ ಜೋಷಿ- ಅಡ್ವಾಣಿ -
  • News18
  • Last Updated: March 28, 2019, 6:40 PM IST
  • Share this:
ನವದೆಹಲಿ (ಮಾ.26): ಹಿರಿಯ ನಾಯಕರನ್ನು ಬಿಜೆಪಿ ಕಡೆಗಣನೆ ಮಾಡುತ್ತಿದೆ ಎಂಬ ಆಪಾದನೆ ಕಳೆದ ನಾಲ್ಕೈದು ವರ್ಷಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ಹಿರಿಯ ನಾಯಕ ಮುರಳಿ ಮನೋಹರ ಜೋಷಿ (85) ಅವರನ್ನು ಈ ಬಾರಿ ಚುನಾವಣೆ ಸ್ಪರ್ಧಿಸಬೇಡಿ ಎಂದು ಪಕ್ಷ ಸೂಚನೆ ನೀಡಿದೆ.

ಹಿರಿಯ ನಾಯಕ ಅಡ್ವಾಣಿ ಬಳಿಕ ಈಗ ಮುರಳಿ ಮನೋಹರ್​ ಜೋಷಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಡಿ ಎಂದು ಪಕ್ಷವೇ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಾನ್ಪುರ್​ ಕ್ಷೇತ್ರದ ಮತದಾರರಿಗೆ ಪತ್ರ ಬರೆದಿರುವ ಮುರಳಿ ಮನೋಹರ್ ಜೋಷಿ, "ಆತ್ಮೀಯ ಮತದಾರರೇ, ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ರಾಮ್​ಲಾಲ್​ ಅವರು ನಾನು ಈ ಚುನಾವಣೆಯಲ್ಲಿ ಕಾನ್ಪುರದಿಂದಾಗಲಿ ಅಥವಾ ಬೇರೆ ಕಡೆಯಿಂದಾಗಲಿ ಸ್ಪರ್ಧಿಸದಂತೆ ಸೂಚನೆ ನೀಡಿದ್ದಾರೆ," ಎಂದು ಬರೆದಿದ್ದಾರೆ.

ಸಿಎನ್​ಎನ್​ ನ್ಯೂಸ್​ 18 ಜೊತೆ ಮಾತನಾಡಿದ ಜೋಷಿ, ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್​ಲಾಲ್​ ಚುನಾವಣೆ ಸ್ಪರ್ಧಿಸದಂತೆ ಕೇಳಿಕೊಂಡಿದ್ದರು. ಕಾನ್ಪುರದ ಮತದಾರರಿಗೂ ಸಾಮಾಜಿಕ ಮಾಧ್ಯಮ ಈ ಸಂದೇಶ ರವಾನೆಯಾಗುತ್ತಲೆ ಇದ್ದವು. ಅಲ್ಲದೇ ಚುನಾವಣಾ ಕಣದಿಂದ ಹೊರಗೆ ಉಳಿಯುವಂತೆ ಕೂಡ ಹೇಳಲಾಗಿತ್ತು ಎಂದಿದ್ದಾರೆ.

2014ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗಾಗಿ ವಾರಣಾಸಿ ಕ್ಷೇತ್ರವನ್ನು ಜೋಷಿ ಬಿಟ್ಟುಕೊಟ್ಟಿದ್ದರು. ಈ ಮೂಲಕ ಮೋದಿ ಅವರ ಗೆಲುವಿಗೆ ಸಹಾಯ ಮಾಡಿದ್ದರು.

ಈ ಸುದ್ದಿ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಸಿದ್ಧಾರ್ಥ್​ ನಾಥ್​ ಸಿಂಗ್​ , ನಮ್ಮ ಮಾರ್ಗದರ್ಶಕರೊಂದಿಗೆ ಈ ಬಗ್ಗೆ ನಾವು ಮಾತನಾಡಿದೆವು. ಪಕ್ಷವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ ಅವರ ಬಗ್ಗೆ ಯಾವಾಗಲೂ ಕೃತಜ್ಞತೆ ಭಾವ ನಮ್ಮಲ್ಲಿರುತ್ತದೆ. ಟಿಕೆಟ್​ ತಪ್ಪಿದ ಕಾರಣಕ್ಕೆ ಅಳುವ ಜನರು ಯಾಕೆ ಮುಲಾಯಂ ಸಿಂಗ್​ ಯಾದವ್​ ಅವರಿಗೆ ಟಿಕಟ್​ ನಿರಾಕರಿಸಲಾಗಿತ್ತು ಎಂಬುದನ್ನು ಕೇಳಬೇಕು ಎಂದರು.

ಇದನ್ನು ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್​​ಗೆ 1 ಕ್ಷೇತ್ರ ಮರಳಿಸಿದ್ದೇವೆ; ಉ.ಪ್ರ.ದಲ್ಲಿ ನನ್ನ ವಿರುದ್ಧ ಅಭ್ಯರ್ಥಿ ಹಾಕಬೇಡಿ: ರಾಹುಲ್​​ಗೆ ದೇವೇಗೌಡ ಆಪ್ತ ಮನವಿ

ಮೂಲಗಳ ಪ್ರಕಾರ ಈ ನಿರ್ಧಾರವನ್ನು ಜೋಷಿ ಅವರಿಗೆ ತಿಳಿಸಿರಲಿಲ್ಲ. ಪಕ್ಷದ ಮುಖ್ಯಸ್ಥ ಈ ಬಗ್ಗೆ ಜೋಷಿ ಅವರಿಗೆ ತಿಳಿಸಬಹುದಿತು ಎಂದು ಜೋಷಿ ತಿಳಿಸಿದ್ದಾರೆ ಎನ್ನಲಾಗಿದೆ.

ಕನ್ಪುರದ ಮತದಾರರಿಗೆ ಈ ಕುರಿತು ಪತ್ರ ಬರೆದಿರುವ ಅವರು, ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮಲಾಲ್​ ಕನ್ಪೂರ್​ ಅಥವಾ ಬೇರೆ ಎಲ್ಲಿಂದಲೂ ಸ್ಪರ್ಧಿಸದಂತೆ ತಿಳಿಸಿದ್ದಾರೆ.

First published:March 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading