ಲೋಕಸಭಾ ಚುನಾವಣೆ; ಮುರಳಿ ಮನೋಹರ್ ಜೋಷಿ, ಅಡ್ವಾನಿ ಸಾಲಿಗೆ ಸೇರಿದ ಸ್ಪೀಕರ್ ಸುಮಿತ್ರಾ ಮಹಾಜನ್

ಸುಮಿತ್ರಾ ಮಹಾಜನ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಶಂಕರ್  ಲಾಲ್ವಾನಿ ಅವರಿಗೆ ಈ ಬಾರಿ ಇಂದೋರ್​ನಿಂದ ಟಿಕೆಟ್​ ನೀಡಿರುವುದಾಗಿ ಬಿಜೆಪಿ ಘೋಷಿಸಿದೆ. ತಮಗೆ ಟಿಕೆಟ್​ ಸಿಗುವುದಿಲ್ಲ ಎಂದು ಗೊತ್ತಾದ ಬಳಿಕ ಸುಮಿತ್ರಾ ಅವರೇ ಲಾಲ್ವಾನಿ ಹೆಸರನ್ನು ಬಿಜೆಪಿ ಹೈಕಮಾಂಡ್​ಗೆ ಶಿಫಾರಸು ಮಾಡಿದ್ದರು.

Sushma Chakre | news18
Updated:April 21, 2019, 10:22 PM IST
ಲೋಕಸಭಾ ಚುನಾವಣೆ; ಮುರಳಿ ಮನೋಹರ್ ಜೋಷಿ, ಅಡ್ವಾನಿ ಸಾಲಿಗೆ ಸೇರಿದ ಸ್ಪೀಕರ್ ಸುಮಿತ್ರಾ ಮಹಾಜನ್
ಸುಮಿತ್ರಾ ಮಹಾಜನ್
  • News18
  • Last Updated: April 21, 2019, 10:22 PM IST
  • Share this:
ಇಂದೋರ್ (ಏ. 21): ಬಿಜೆಪಿ ಹಿರಿಯ ನಾಯಕರಾದ ಎಲ್​.ಕೆ. ಅಡ್ವಾನಿ, ಮುರಳಿ ಮನೋಹರ್ ಜೋಷಿ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್​ ನೀಡದೆ ಮೂಲೆಗುಂಪು ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಲೇ ಇದೆ. ಇದೀಗ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಕೂಡ ಇದೇ ಸಾಲಿಗೆ ಸೇರಿದ್ದು, ನಿವೃತ್ತಿ ಜೀವನ ಕಳೆಯಲು ಸಮಯ ಕೂಡಿಬಂದಿದೆ.

ಸ್ಪೀಕರ್​ ಸುಮಿತ್ರಾ ಮಹಾಜನ್​ ಅವರ ಸಂಸದೀಯ ಕೆರಿಯರ್​ ಇಲ್ಲಿಗೇ ಮುಕ್ತಾಯವಾಗಿದ್ದು, ಅವರ ಬದಲಾಗಿ ಇಂದೋರ್​ನಿಂದ ಈ ಬಾರಿ ಶಂಕರ್​ ಲಾಲ್ವಾನಿ ಅವರನ್ನು ಲೋಕಸಭಾ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿದೆ. ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿಯ ಹಿರಿಯ ನಾಯಕರಿಗೆ ಚುನಾವಣೆಯಲ್ಲಿ ಟಿಕೆಟ್​ ನೀಡದ ಬಗ್ಗೆ ನಿರ್ಧಾರ ಮಾಡಲಾಗಿತ್ತು. ಅದರಂತೆ ಈ ಬಾರಿ ಕೂಡ ಅನೇಕ ಹಿರಿಯ ನಾಯಕರು ಟಿಕೆಟ್ ವಂಚಿತರಾಗಿದ್ದಾರೆ. ಎಲ್​.ಕೆ. ಅಡ್ವಾನಿ, ಮುರಳಿ ಮನೋಹರ್​ ಜೋಷಿ ಅವರಂತೆ 76 ವರ್ಷದ ಸುಮಿತ್ರಾ ಮಹಾಜನ್​ ಕೂಡ ತೆರೆಮರೆಗೆ ಸರಿದಿದ್ದಾರೆ.

ಅಣ್ಣ ಒಪ್ಪಿದರೆ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸಲು ನಾನು ಸಿದ್ಧ; ಪ್ರಿಯಾಂಕಾ ಗಾಂಧಿ

ಸುಮಿತ್ರಾ ಮಹಾಜನ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಶಂಕರ್  ಲಾಲ್ವಾನಿ ಅವರಿಗೆ ಈ ಬಾರಿ ಇಂದೋರ್​ನಿಂದ ಟಿಕೆಟ್​ ನೀಡಿರುವುದಾಗಿ ಬಿಜೆಪಿ ಘೋಷಿಸಿದೆ. ತಮಗೆ ಟಿಕೆಟ್​ ಸಿಗುವುದಿಲ್ಲ ಎಂದು ಗೊತ್ತಾದ ಬಳಿಕ ಖುದ್ದು ಸುಮಿತ್ರಾ ಅವರೇ ಲಾಲ್ವಾನಿ ಹೆಸರನ್ನು ಬಿಜೆಪಿ ಹೈಕಮಾಂಡ್​ಗೆ ಶಿಫಾರಸು ಮಾಡಿದ್ದರು. ಆದರೆ, ಲಾಲ್ವಾನಿ ವಿರುದ್ಧ ಅನೇಕ ನಾಯಕರ ಅಪಸ್ವರಗಳು ಕೇಳಿಬಂದಿದ್ದರಿಂದ ಆ ಬಗ್ಗೆ ಇದುವರೆಗೂ ಘೋಷಿಸಿರಲಿಲ್ಲ. ಅಲ್ಲದೆ, ಇಂದೋರ್​ನ ಇನ್ನೊಂದು ಬಣ ಕೈಲಾಶ್ ವಿಜಯ್​​ವರ್ಗಿಯ ಮತ್ತು ಅವರ ಆಪ್ತ ಇಂದೋರ್​ನ ಶಾಸಕ ರಮೇಶ್​ ಮೆಂಡೋಲ ಅವರ ಹೆಸರನ್ನು ಮುಂದಿಟ್ಟಿತ್ತು. ಇದೀಗ ಲಾಲ್ವಾನಿ ಅವರ ಹೆಸರನ್ನೇ ಅಂತಿಮಗೊಳಿಸಿ ಪಟ್ಟಿ ಹೊರಡಿಸಲಾಗಿದೆ.

ಅಮೇಥಿ, ವಯನಾಡ್​​​ನಲ್ಲಿ ಸೋತ ಮೇಲೆ ರಾಹುಲ್ ಗೆಲ್ಲಲು​​ ಬೇರೆ ದೇಶಕ್ಕೆ ಹೋಗಬೇಕಾಗುತ್ತದೆ; ಬಿಜೆಪಿ

ಲಾಲ್ವಾನಿ ಇದುವರೆಗೂ ಯಾವುದೇ ಮಹತ್ವದ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಆದರೆ, ಬಿಜೆಪಿ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿರುವುದರಿಂದ ಈ ಬಾರಿ ಬಿಜೆಪಿ ಆತನಿಗೆ ಮಣೆ ಹಾಕಿದೆ ಎನ್ನಲಾಗುತ್ತಿದೆ. ಈ ಮೊದಲು ವಿಧಾನಸಭಾ ಟಿಕೆಟ್​ಗೆ ಲಾಲ್ವಾನಿ ಪ್ರಯತ್ನಿಸಿದ್ದರು. ಆದರೆ, ಅವರನ್ನು ಇಂದೋರ್​ ವಿಧಾನಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಬಿಜೆಪಿ ಮನಸು ಮಾಡಿರಲಿಲ್ಲ. ಸಿಂಧಿ ಸಮುದಾಯಕ್ಕೆ ಸೇರಿದ ಲಾಲ್ವಾನಿ ಕಣಕ್ಕಿಳಿದರೆ ಆ ಸಮುದಾಯದ ಮತಗಳನ್ನು ಸೆಳೆಯುವುದು ಸುಲಭ ಎಂಬುದು ಕೂಡ ಬಿಜೆಪಿಯ ಲೆಕ್ಕಾಚಾರ ಎಂಬ ಮಾತುಗಳು ಕೇಳಿಬರುತ್ತಿವೆ.

 
First published:April 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ