Viral News: ಮದ್ವೆಯಾಗಿ 8 ವರ್ಷದ ಮೇಲೆ ಗೊತ್ತಾಯ್ತು, ಆಕೆ ಮದ್ವೆಯಾಗಿದ್ದು ಗಂಡಸನ್ನಲ್ಲ ಹೆಂಗಸನ್ನ ಅಂತ!

ಮಹಿಳೆಯೊಬ್ಬಳಿಗೆ ಮದುವೆಯಾಗಿ ಬರೋಬ್ಬರಿ 8 ವರ್ಷ ಆದಮೇಲೆ ಆಕೆ ಗಂಡನ ಬಗ್ಗೆ ಗೊತ್ತಾಗಿದೆಯಂತೆ. ಆತ ಯಾರು? ಏನು? ಎತ್ತ ಎನ್ನುವುದು ತಿಳಿದಿದೆಯಂತೆ. ಆದರೆ 8 ವರ್ಷಗಳ ಬಳಿಕ ಆಕೆಗೆ ತಾನು ಮದುವೆಯಾಗಿರುವ ವ್ಯಕ್ತಿ ಗಂಡಸಲ್ಲ, ತನ್ನಂತೆ ಹೆಂಗಸೇ ಎನ್ನುವುದು ಗೊತ್ತಾಗಿ ಆಘಾತ ಆಗಿದ್ಯಂತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಡೋದರಾ, ಗುಜರಾತ್: ಹಿಂದಿನ ಕಾಲದಲ್ಲಿ ವಧು (Bride) ಹಾಗೂ ವರ (Groom) ಇಬ್ಬರೂ ಮದುವೆ (Marriage) ಆಗುವವರೆಗೂ ಒಬ್ಬರಿಗೊಬ್ಬರು ಮುಖ ನೋಡುತ್ತಿರಲಿಲ್ಲ. ಆದರೆ ಈಗೆಲ್ಲ ಕಾಲ ಬದಲಾಗಿದೆ. ಮದುವೆಗೆ ಮುನ್ನವೇ ಹುಡುಗ (Boy) ಹಾಗೂ ಹುಡುಗಿ (Girl) ಚಾಟಿಂಗ್ (Chatting), ಮೀಟಿಂಗ್ (Meeting), ಡೇಟಿಂಗ್ (Dating) ಎಲ್ಲ ಮುಗಿಸಿರುತ್ತಾರೆ. ಆದರೆ ಇಂಥ ಕಾಲದಲ್ಲೂ ಮಹಿಳೆಯೊಬ್ಬಳಿಗೆ (Women) ಮದುವೆಯಾಗಿ ಬರೋಬ್ಬರಿ 8 ವರ್ಷ ಆದಮೇಲೆ ಆಕೆ ಗಂಡನ (Husband) ಬಗ್ಗೆ ಗೊತ್ತಾಗಿದೆಯಂತೆ. ಆತ ಯಾರು? ಏನು? ಎತ್ತ ಎನ್ನುವುದು ತಿಳಿದಿದೆಯಂತೆ. ಆದರೆ 8 ವರ್ಷಗಳ ಬಳಿಕ ಆಕೆಗೆ ತಾನು ಮದುವೆಯಾಗಿರುವ ವ್ಯಕ್ತಿ ಗಂಡಸಲ್ಲ, ತನ್ನಂತೆ ಹೆಂಗಸೇ ಎನ್ನುವುದು ಗೊತ್ತಾಗಿ ಆಘಾತ ಆಗಿದ್ಯಂತೆ.

ನನ್ನ ಗಂಡ ಗಂಡಸಲ್ಲ ಮಹಿಳೆ ಅಂತ ಠಾಣೆಗೆ ದೂರು!

ನೀವು ನಂಬಿದ್ರೆ ನಂಬಿ, ಬಿಟ್ರೆ ಬಿಡಿ… ಇಂಥದ್ದೊಂದು ಘಟನೆ ನಡೆದಿದ್ದು ಗುಜರಾತ್ ರಾಜ್ಯದ ವಡೋದರಾದಲ್ಲಿ. ತಾನು ಮದುವೆಯಾದ ಗಂಡ, ಗಂಡಸೇ ಅಲ್ಲ, ಆತ ಹೆಂಗಸು. 8 ವರ್ಷಗಳ ಕಾಲ ಆ ವ್ಯಕ್ತಿ ಸತ್ಯ ಮರೆಮಾಚಿ ಮೋಸ ಮಾಡಿದ್ದಾನೆ ಅಂತ 40 ವರ್ಷದ ಮಹಿಳೆಯೊಬ್ಬರು ಕೋರ್ಟ್ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಚೈತಾ ಆಗಿದ್ದವಳು ವಿರಾಜ್ ವರ್ಧನ್ ಆಗಿದ್ದರಾ?

40 ವರ್ಷದ ಮಹಿಳೆಯೊಬ್ಬರು 2014 ರಲ್ಲಿ ಮದುವೆಯಾದ ವ್ಯಕ್ತಿ ತನ್ನಿಂದ ಆ ಸತ್ಯವನ್ನು ಮರೆಮಾಡಿದ್ದಾನೆ ಅಂತ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯನ್ನು ಶೀತಲ್ ಹಾಗೂ ಆಕೆಯ ಗಂಡ ಎಂದ ವ್ಯಕ್ತಿಯ ಹೆಸರನ್ನು ಡಾ. ವಿರಾಜ್ ವರ್ಧನ್ ಎನ್ನಲಾಗಿದೆ. ವಿರಾಜ್ ವರ್ಧನ್ ಹೆಂಗಸೇ ಆಗಿದ್ದು, ಶಸ್ತ್ರ ಚಿಕಿತ್ಸೆ ಮೂಲಕ ಗಂಡಾಗಿ ಬದಲಾಗಿದ್ದಾನೆ. ಮೂಲದಲ್ಲಿ ಆತನ ಹೆಸರು ವಿಚೈತಾ ಎಂದಿತ್ತು ಅಂತ ಶೀತಲ್ ಆರೋಪಿಸಿದ್ದಾರೆ.

ಇದನ್ನೂ ಓದಿ: Fire Video: ನೋಡ ನೋಡ್ತಿದ್ದಂತೇ ಹೊತ್ತಿ ಉರಿದ 42 ಮಹಡಿಗಳ ಕಟ್ಟಡ! ಭಯಾನಕ ವಿಡಿಯೋ ಇಲ್ಲಿದೆ

ಗಂಡ ಹಾಗೂ ಕುಟುಂಬಸ್ಥರ ವಿರುದ್ಧ ಮಹಿಳೆ ದೂರು

ಶೀತಲ್ ಅವರು ಗೋತ್ರಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ತನ್ನ ಪತಿ ವಿರಾಜ್ ವರ್ಧನ್ ಮೇಲೆ ದಾಂಪತ್ಯ ದ್ರೋಹ ಮತ್ತು ಅನುಚಿತ ಲೈಂಗಿಕತೆಯ ಆರೋಪ ಮಾಡಿದ್ದಾರೆ. ಎಫ್‌ಐಆರ್‌ನಲ್ಲಿ ಆತನ ಕುಟುಂಬದ ಸದಸ್ಯರನ್ನೂ ಪಟ್ಟಿ ಮಾಡಿದ್ದಾಳೆ.

2014ರಲ್ಲಿ ಶೀತಲ್, ವಿರಾಜ್ ವರ್ಧನ್ ಮದುವೆ

ಶೀತಲ್‌ಗೆ ಈ ಮೊದಲೇ ಮದುವೆಯಾಗಿದ್ದು, 14 ವರ್ಷದ ಮಗಳು ಇದ್ದಾಳೆ. ಶೀತಲ್ ಪತಿ 2011ರಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದಾದ ಬಳಿಕ 2914ರಲ್ಲಿ ದೆಹಲಿ ನಿವಾಸಿ ವಿರಾಜ್ ಅವರನ್ನು 8 ವರ್ಷಗಳ ಹಿಂದೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಭೇಟಿಯಾಗಿದ್ದರು. ಬಳಿಕ ಪರಸ್ಪರ ಒಪ್ಪಿ ವಿವಾಹವಾಗಿದ್ದರು.

ಲೈಂಗಿಕ ಸಾಮರ್ಥ್ಯ ಕಳೆದುಕೊಂಡಿದ್ದಾಗಿ ಸಬೂಬು

ಫೆಬ್ರವರಿ 2014 ರಲ್ಲಿ ಕುಟುಂಬದ ಉಪಸ್ಥಿತಿಯಲ್ಲಿ ಔಪಚಾರಿಕವಾಗಿ ವಿವಾಹವಾದರು ಮತ್ತು ಕಾಶ್ಮೀರಕ್ಕೆ ಮಧುಚಂದ್ರಕ್ಕೆ ತೆರಳಿದರು. ಆದರೆ ಆ ವ್ಯಕ್ತಿ ಹನಿಮೂನ್ ಪೂರೈಸಲಿಲ್ಲವಂತೆ. ಹೀಗೆ ಹಲವಾರು ದಿನಗಳವರೆಗೆ ಹೆಂಡತಿಯಿಂದ ದೈಹಿಕ ಅಂತರ ಕಾಯ್ದುಕೊಂಡಿದ್ದಾರೆ. ಆಕೆ ಆತನ ಮೇಲೆ ಒತ್ತಡ ಹೇರಿದಾಗ, ವರ್ಷಗಳ ಹಿಂದೆ ರಷ್ಯಾದಲ್ಲಿ ಸಂಭವಿಸಿದ ಅಪಘಾತದಿಂದಾಗಿ ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥನಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಹೀಗಾಗಿ ಆರೋಪಿಯು ಪತ್ನಿಗೆ ತಾನು ಸಂಪೂರ್ಣವಾಗಿ ಚೇತರಿಸಿಕೊಳ್ಳುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Ladies Fight Video: ಟೋಲ್‌ನಲ್ಲಿ ಮಹಿಳೆಯರ ಡಿಶ್ಯುಂ ಡಿಶ್ಯುಂ! ಕೆರಳಿದ ನಾರಿಯರ ಜಡೆಜಗಳದಿಂದ ಟ್ರಾಫಿಕ್ ಜಾಮ್!

ಸತ್ಯಾಂಶ ಗೊತ್ತಾದಾಗ ಹೆಂಡತಿಗೆ ಬೆದರಿಕೆ

ಇನ್ನು ಸ್ಥೂಲಕಾಯ ಚಿಕಿತ್ಸೆಗೆ ಹೋಗಬೇಕು ಅಂತ ಕೋಲ್ಕತ್ತಾಗೆ ಹೋಗಿದ್ದಾಗ ಆತ ಗಂಡಲ್ಲ, ಹೆಣ್ಣು ಎನ್ನುವುದು ತಿಳಿಯಿತಂತೆ. ಈ ವೇಳೆ ಈ ಸತ್ಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ ಅಂತ ಶೀತಲ್ ದೂರಿನಲ್ಲಿ ತಿಳಿಸಿದ್ದಾನೆ.
Published by:Annappa Achari
First published: